ಅಂತರಾಷ್ಟ್ರೀಯ ಮಕ್ಕಳ ಚಿತ್ರಕಲೆ ಸ್ಪರ್ಧೆ 2018
ಕ್ಲಿಂಟ್ ಸ್ಮರಣಾರ್ಥವಾಗಿ
Picture of Edmund Thomas Clint

ಎಡ್ಮಂಡ್ ಥಾಮಸ್ ಕ್ಲಿಂಟ್


ಎಡ್ಮಂಡ್ ಥಾಮಸ್ ಕ್ಲಿಂಟ್ ಕೇರಳದ ಕೊಚ್ಚಿಯ ಶ್ರೀಯುತ ಎಂ. ಟಿ. ಜೋಸೆಫ್ ಮತ್ತು ಚಿನ್ನಮ್ಮ ಜೋಸೆಫ್ ಇವರ ಏಕಮಾತ್ರ ಪುತ್ರನಾಗಿದ್ದನು. ಅವನ ಮೂತ್ರಪಿಂಡ ವೈಫಲ್ಯದ ಪರಿಣಾಮದಿಂದ ಉಂಟಾದ ದೀರ್ಘಕಾಲದ ಕಾಯಿಲೆಯಿಂದಾಗಿ ಅವನ ಜೀವಿತಾವಧಿಯು 2522 ದಿನಗಳಷ್ಟು ಚಿಕ್ಕದಾಗಿತ್ತು. ಆದರೆ ಅವನು ತನ್ನ ಚಿಕ್ಕ ವಯಸ್ಸಿನಲ್ಲೇ ಚಿತ್ರಕಲೆ ಮತ್ತು ಪೈಂಟಿಂಗ್‌ಗಳಲ್ಲಿ ಅಸಾಧಾರಣ ಕೌಶಲ್ಯಗಳನ್ನು ತೋರಿಸಿದನು.

ಕ್ಲಿಂಟ್ ಎಲ್ಲಾ ಮಾಧ್ಯಮಗಳನ್ನು ಬಳಕೆ ಮಾಡುತ್ತಾನೆ: ಸೀಮೇಸುಣ್ಣ, ಕ್ರೇಯಾನ್ಸ್, ತೈಲ ವರ್ಣ ಚಿತ್ರಕಲೆ ಮತ್ತು ವಾಟರ್ ಕಲರ್‌ಗಳನ್ನು ತಾನು ನೋಡಿದ ಪ್ರಪಂಚವನ್ನು ಚಿತ್ರಿಸಲು ಡ್ರಾಯಿಂಗ್ ಮತ್ತು ಪೈಂಟಿಂಗ್ ಮಾಡಲು ಉಪಯೋಗಿಸುತ್ತಿದ್ದನು. ಅವನ ಪ್ರಬುದ್ಧತೆಯಿಂದ ಕೂಡಿದ ಚಿತ್ರಕಲಾ ಸಂಗ್ರಹದಿಂದ ಕಲಾಭಿಮಾನಿಗಳು ಮತ್ತು ವಿಮರ್ಶಕರನ್ನು ದಿಗ್ಭ್ರಮೆಗೊಳಿಸಿತು ಮತ್ತು ಅವನ ಕಲಾತ್ಮಕ ಪ್ರತಿಭೆಯನ್ನು ಮನವರಿಕೆ ಮಾಡಿಕೊಂಡರು.

ಕ್ಲಿಂಟ್ ತನ್ನ ಏಳನೇ ಹುಟ್ಟುಹಬ್ಬಕ್ಕೆ ಒಂದು ತಿಂಗಳು ಬಾಕಿ ಇರುವಾಗ ಕಲಾ ಕೌಶಲ್ಯದ ನಿಧಿಯನ್ನು ಬಿಟ್ಟು ಇಹಲೋಕವನ್ನು ತ್ಯಜಿಸಿದರು. ಅವನು ಜನರು ಹೇಗೆ ಭಾವಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವ ಅನನ್ಯ ಸಾಮರ್ಥ್ಯವನ್ನು ಹೊಂದಿದ್ದನು ಮತ್ತು ಈ ಪ್ರಭಾವಶಾಲಿ ಭಾವನೆಗಳ ಮೂಲಕ ಸ್ಫೂರ್ತಿ ಪಡೆದನು. ಚಿಕ್ಕ ವಯಸ್ಸಿನ ಹೊರತಾಗಿಯೂ, ಸಾವು, ಏಕಾಂತತೆ ಮತ್ತು ಪ್ರೀತಿ ಮುಂತಾದ ಗಹನವಾದ ವಿಷಯಗಳನ್ನು ಚಿತ್ರಿಸುವ ಕಲಾಕೃತಿಗಳನ್ನು ಕ್ಲಿಂಟ್ ರಚಿಸಿದ. ಒಬ್ಬ ಕಲಾವಿದನಲ್ಲದೆ, ಕ್ಲಿಂಟ್ ಒಬ್ಬ ಆಶಾದಾಯಕ ಓದುಗನಾಗಿದ್ದನು. ಅವನು ಮಹಾಭಾರತ ಮತ್ತು ರಾಮಾಯಣದಂತಹ ಮಹಾಕಾವ್ಯಗಳ ನಾಟಕಕ್ಕೆ ಚಿತ್ರಗಳನ್ನು ಬರೆದಿದ್ದಾನೆ ಮತ್ತು ಅವನು ರಾಬಿನ್ಸನ್ ಕ್ರುಸೊ ನಂತಹ ಸಾಹಸ ಕಥೆಗಳನ್ನು ಆಲಿಸುತ್ತಿದ್ದನು. ಅವನ ಮನಸ್ಸು ಈ ಕಥೆಗಳಲ್ಲಿ ವಿವರಿಸಿದ ಪ್ರತಿಯೊಂದು ವಿವರವನ್ನು ಗ್ರಹಿಸಿತು ಮತ್ತು ನಂತರ ಅವನು ಅದನ್ನು ತನ್ನ ಕಲೆಯ ಮೂಲಕ ವ್ಯಕ್ತಪಡಿಸಿದನು.

Girls picking flowers
Kathakali
Raavanan
Pooram
Snake Boat
Theyyam
Sunset
Kavadi Festival
Village Temple Festival

ಕ್ಲಿಂಟ್ ತಂದೆ ಸುಪ್ರಸಿದ್ಧ ಹಾಲಿವುಡ್ ನಟ , ಕ್ಲಿಂಟ್ ಈಸ್ಟ್‌ ವುಡ್‌ನ , ಅಪ್ಪಟ ಅಭಿಮಾನಿಯಾಗಿದ್ದು ಅವರ ಮಗನಿಗೆ ಆ ನಟನ ಹೆಸರನ್ನು ಇಟ್ಟರು. ಕ್ಲಿಂಟ್ ಜೀವನ ಅಂತ್ಯಗೊಂಡ ನಂತರ, ಭಾರತದ ಹೆಸರಾಂತ ಸಾಕ್ಷ್ಯಚಿತ್ರ ತಯಾರಕರಾದ ಶಿವಕುಮಾರ್ ರವರು ಈ ಯುವ ಕಲಾವಿದನ ಜೀವನ ಮತ್ತು ಸಾಧನೆಯ ಬಗ್ಗೆ ಒಂದು ಸಾಕ್ಷ್ಯಚಿತ್ರವನ್ನು ಮಾಡಿದರು. ಈ ಸಾಕ್ಷ್ಯಚಿತ್ರವನ್ನು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು ಮತ್ತು ಕ್ಲಿಂಟ್ ಈಸ್ಟ್‌ ವುಡ್ ಈ ಸಾಕ್ಷ್ಯಚಿತ್ರವನ್ನು ಬ್ರೆಜಿಲ್‌ನಲ್ಲಿ ವೀಕ್ಷಿಸಿದರು. ಕ್ಲಿಂಟ್‌ನ ಕಥೆಯು ಈ ನಟನ ಮನವನ್ನು ಕರಗಿಸಿತು, ಇದರಿಂದ ಪ್ರೇರಿತರಾಗಿ ಅವರು ಕ್ಲಿಂಟ್‌ನ ಪೋಷಕರಿಗೆ ವಿಷಾದದ ಸಂದೇಶವನ್ನು ಕಳುಹಿಸುತ್ತಾರೆ ಮತ್ತು ಮಗುವಿನ ಅಕಾಲಿಕ ಮರಣಕ್ಕೆ ಶೋಕ ವ್ಯಕ್ತಪಡಿಸುತ್ತಾರೆ.