ಅಂತರಾಷ್ಟ್ರೀಯ ಮಕ್ಕಳ ಚಿತ್ರಕಲೆ ಸ್ಪರ್ಧೆ 2018
ಕ್ಲಿಂಟ್ ಸ್ಮರಣಾರ್ಥವಾಗಿ
Picture of Edmund Thomas Clint

ಪದೇಪದೆ ಕೇಳಲಾಗುವ ಪ್ರಶ್ನೆಗಳು


4 ಮತ್ತು 12 ವರ್ಷಗಳ ನಡುವಿನ (01.09.2002ರ ನಂತರ ಮತ್ತು 01.09.2014 ರ ಒಳಗೆ ಜನಿಸಿದವರಾಗಿರಬೇಕು) ಜಗತ್ತಿನ ಯಾವುದೇ ಮೂಲೆಯ ಯಾವುದೇ ಮಗು ಇದರಲ್ಲಿ ಭಾಗವಹಿಸಬಹುದು.
ನೀವು ನಿಮ್ಮನ್ನು ಪ್ರಚಾರಕರನ್ನಾಗಿ ನೋಂದಾಯಿಸಬಹುದು, ನಿಮ್ಮ ಶಿಫಾರಸ್ಸಿನ ಮೇರೆಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಸೇರಿಕೊಂಡಿರುವ ಯಾವುದೇ ಮಗುವನ್ನು ನಿಮ್ಮ ಕ್ರೆಡಿಟ್‌ಗೆ ಸೇರಿಸಲಾಗುತ್ತದೆ ಮತ್ತು ಗರಿಷ್ಟ ಪ್ರವೇಶಗಳನ್ನು ನೀಡುವಂತಹ ಪ್ರಚಾರಕರು ಕೇರಳವನ್ನು ಸಂದರ್ಶಿಸಲು ಪ್ರವಾಸದ ಪ್ಯಾಕೇಜ್‌ಗಳನ್ನು ಪಡೆದುಕೊಳ್ಳುತ್ತಾರೆ.
18 ವರ್ಷ ತುಂಬಿದ ಯಾವುದೇ ವ್ಯಕ್ತಿ ಸ್ಪರ್ಧೆಯ ಪ್ರಚಾರಕರಾಗಿ ನೋಂದಣಿ ಮಾಡಿಕೊಳ್ಳಬಹುದು. ಈ ಪ್ರಕ್ರಿಯೆಯು ಸ್ವಯಂ ಪ್ರೇರಿತವಾಗಿರುತ್ತದೆ ಮತ್ತು ಪ್ರಚಾರಕರಿಗೆ ಯಾವುದೇ ರೀತಿಯ ಸಂಭಾವನೆಯನ್ನು ಕೊಡಲಾಗುವುದಿಲ್ಲ.
ಇಲ್ಲ, ಈ ಸ್ಪರ್ಧೆಗೆ ಪ್ರವೇಶ ಉಚಿತವಾಗಿರುತ್ತದೆ!
ಸ್ಪರ್ಧಿಯು ಕ್ರೇಯಾನ್ಸ್, ಬಣ್ಣದ ಪೆನ್ಸಿಲ್‌ಗಳು ಅಥವಾ ಪೈಂಟ್ ಮತ್ತು ಬ್ರಶ್ ಅಥವಾ ಸ್ಕೆಚ್ ಪೆನ್‌ಗಳನ್ನು ಉಪಯೋಗಿಸಿ ಕಾಗದ ಮೇಲೆ ಚಿತ್ರವನ್ನು ಬಿಡಿಸುವುದನ್ನು ನಿರೀಕ್ಷಿಸಲಾಗುತ್ತದೆ. ಡಿಜಿಟಲ್, ಇಲೆಕ್ಟ್ರಾನಿಕ್ ಅಥವಾ ಮೆಕ್ಯಾನಿಕಲ್ ಉಪಕರಣಗಳಿಂದ ರಚಿಸಲಾದ ಚಿತ್ರಗಳನ್ನು ಈ ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. ಚಿತ್ರವನ್ನು ಯಾವುದೇ ವಿಧಾನದ ಮೂಲಕ ಡಿಜಿಟಲೀಕರಣಗೊಳಿಸಲಾಗುತ್ತದೆ ಮತ್ತು ಅದನ್ನು ಕೇರಳ ಪ್ರವಾಸೋದ್ಯಮ ಸ್ಪರ್ಧೆಯ ಪುಟಕ್ಕೆ ಅಪ್‌ಲೋಡ್ ಮಾಡಲಾಗುತ್ತದೆ (ಫೈಲ್ ಗಾತ್ರ 5 MB ಗಿಂತ ಹೆಚ್ಚಾಗಿರಬಾರದು).
ಪ್ರವೇಶಾರ್ಥಿಯು ಒಮ್ಮೆ ಮಾತ್ರ ನೋಂದಾಯಿಸಬಹುದು ಆದರೆ ಆಕೆ/ಆತ ಇಚ್ಛಿಸಿದರೆ, ಅವಳು/ಅವನು ಐದು ಪ್ರವೇಶಗಳ ವರೆಗೆ ಸಲ್ಲಿಸಬಹುದು.
ಈ ಸ್ಪರ್ಧೆಯ ಥೀಮ್ ಕೇರಳ! ಪೈಂಟಿಂಗ್ ಕೇರಳಕ್ಕೆ ಸಂಬಂಧಿಸಿದ ಯಾವುದೇ ವಿಷಯವಾಗಿರಬಹುದು. ನಿಮ್ಮ ಉಲ್ಲೇಖಕ್ಕಾಗಿ, ನಾವು ಸುಂದರವಾದ ಚಿತ್ರಗಳು ಮತ್ತು ವಿಡಿಯೋಗಳೊಂದಿಗೆ ವಿಡಿಯೋ ಮತ್ತು ಫೋಟೋ ಬ್ರೌಶರ್‌ಗಳನ್ನು ರಚಿಸಿದ್ದೇವೆ. ಇಲ್ಲಿ ನೀವು ನಿಮಗೆ ಬೇಕಾದ ಎಲ್ಲವನ್ನು ಪಡೆಯುತ್ತೀರಿ.