ಅಂತರಾಷ್ಟ್ರೀಯ ಮಕ್ಕಳ ಚಿತ್ರಕಲೆ ಸ್ಪರ್ಧೆ 2018
ಕ್ಲಿಂಟ್ ಸ್ಮರಣಾರ್ಥವಾಗಿ
Picture of Edmund Thomas Clint

ಷರತ್ತುಗಳು ಮತ್ತು ನಿಬಂಧನೆಗಳು


 1. ಆನ್‌ಲೈನ್ ಚಿತ್ರಕಲೆ ಸ್ಪರ್ಧೆಯು ಪ್ರಪಂಚದಾದ್ಯಂತವಿರುವ ಎಲ್ಲಾ ದೇಶಗಳ ಮಕ್ಕಳಿಗೆ ತೆರೆದಿರುತ್ತದೆ. ಈ ಸ್ಪರ್ಧೆಯು ನಾಲ್ಕು ಮತ್ತು ಹದಿನಾರು ವರ್ಷ ವಯಸ್ಸಿನ (01.09.2002 ರಂದು ಮತ್ತು / ನಂತರ ಹಾಗೂ 01.09.2014 ರಂದು / ಮೊದಲು ಜನಿಸಿರಬೇಕು) ಮಕ್ಕಳಿಗೆ ಇರುವುದರಿಂದ, ಅವರ ಪೋಷಕರು ಅಥವಾ ಕಾನೂನು ಪಾಲಕರು ಸ್ಪರ್ಧೆಯ ಷರತ್ತುಗಳು ಮತ್ತು ನಿಬಂಧನೆಗಳನ್ನು ಇಲ್ಲಿ ಪ್ರಕಟಿಸಲಾಗಿರುವಂತೆ ನೇರವಾಗಿ ಇಂಗ್ಲಿಷ್‌ನಲ್ಲಿ ಅಥವಾ ಅವರ ಆಯ್ಕೆಗೆ ಹೊಂದುವ ದುಬಾಷಿಯ ಬೆಂಬಲದ ಮೂಲಕ ಓದಬೇಕು, ಅರ್ಥಮಾಡಿಕೊಳ್ಳಬೇಕು ಮತ್ತು ಅದನ್ನು ಒಪ್ಪಿಕೊಳ್ಳಬೇಕು.
 2. ಭಾರತ ಗಣರಾಜ್ಯ ಎಲ್ಲಾ ಕಾನೂನುಗಳು ಈ ಸ್ಪರ್ಧೆಗೆ ಅನ್ವಯವಾಗುತ್ತವೆ.
 3. ಅರ್ಜಿಯನ್ನು ಸಲ್ಲಿಸುವ ಮೂಲಕ, ಪ್ರವೇಶಾರ್ಥಿ ಮತ್ತು ಅವನ / ಅವಳ ಪೋಷಕರು ಅಥವಾ ಕಾನೂನು ರಕ್ಷಕರು ಸ್ಪರ್ಧೆಯ ಎಲ್ಲ ನಿಯಮಗಳು ಮತ್ತು ನಿಬಂಧನೆಗಳನ್ನು ಒಪ್ಪಿಕೊಳ್ಳುತ್ತಾರೆ.
 4. ಯಾವುದೇ ನಿರ್ದಿಷ್ಟ ಕಾರಣವನ್ನು ನೀಡದೇ ಸ್ಪರ್ಧೆಯನ್ನು ಭಾಗಶಃ ಅಥವಾ ಸಂಪೂರ್ಣವಾಗಿ ರದ್ದು ಮಾಡುವ ಹಕ್ಕು ಅಥವಾ ಸ್ಪರ್ಧೆಯ ಷರತ್ತುಗಳನ್ನು ಮತ್ತು ನಿಬಂಧನೆಗಳನ್ನು ಬದಲಾಯಿಸುವ ಹಕ್ಕನ್ನು ಕೇರಳ ಪ್ರವಾಸೋದ್ಯಮವು ಹೊಂದಿರುತ್ತದೆ.
 5. ಕಾರ್ಯದರ್ಶಿ, ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ ಈ ತೀರ್ಮಾನಕ್ಕೆ ಸಂಬಂಧಿಸಿದಂತೆ ಅಥವಾ ಈ ಸ್ಪರ್ಧೆಗೆ ಸಂಬಂಧಿಸಿದಂತೆ ಉಂಟಾಗುವ ಯಾವುದೇ ವಿವಾದವನ್ನು ನಿರ್ಧರಿಸಲು ಮತ್ತು / ಅಥವಾ ತಿದ್ದುಪಡಿ ಮಾಡುವ ಅಂತಿಮ ಅಧಿಕಾರವನ್ನು ಕೇರಳ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಯವರು ಹೊಂದಿರುತ್ತಾರೆ ಮತ್ತು ಕಾರ್ಯದರ್ಶಿಯವರ ನಿರ್ಧಾರವೇ ಅಂತಿಮವಾಗಿರುತ್ತದೆ ಮತ್ತು ಇಂತಹ ವಿಷಯಗಳಲ್ಲಿ ಆಕ್ಷೇಪಣೆಗೆ ಅವಕಾಶ ಇರುವುದಿಲ್ಲ.
 6. ಈ ಸ್ಪರ್ಧೆಯ ಪ್ರವೇಶಾರ್ಥಿಯು ಕಾಗದದಲ್ಲಿ ಕೇರಳದ ಯಾವುದೇ ಒಂದು ವಿಷಯದ ಮೇಲೆ ಚಿತ್ರವನ್ನು ಚಿತ್ರಿಸಬೇಕು. ಉಲ್ಲೇಖಗಳಿಗಾಗಿ ಅವನು / ಅವಳು ಕೇರಳದಲ್ಲಿ ಲಭ್ಯವಿರುವ ಫೋಟೋಗಳನ್ನು ಮತ್ತು ವೀಡಿಯೊಗಳನ್ನು ಉಲ್ಲೇಖಿಸಬಹುದು. ಆನ್‌ಲೈನ್ ನಲ್ಲಿ ಸಲ್ಲಿಕೆ ವಿಧಾನವನ್ನು ಬಳಸಿಕೊಂಡು ಕೇರಳ ಪ್ರವಾಸೋದ್ಯಮ ವೆಬ್‌ಸೈಟ್‌ಗೆ ಚಿತ್ರಕಲೆಯ ಸ್ಕ್ಯಾನ್ ಮಾಡಲಾದ ಚಿತ್ರವನ್ನು ಕಳುಹಿಸಬೇಕು. ಕೇರಳ ಪ್ರವಾಸೋದ್ಯಮವು ಅಪೇಕ್ಷಿಸಿದ್ದಲ್ಲಿ ಪ್ರವೇಶಾರ್ಥಿಯು ಅವನ / ಅವಳ ವೆಚ್ಚದಲ್ಲಿ ಮೂಲ ವರ್ಣಚಿತ್ರವನ್ನು ಸಹ ಕಳುಹಿಸಬೇಕಾಗುತ್ತದೆ.
 7. ಪ್ರಚಾರ ಅಥವಾ ಪ್ರಚಾರದ ಚಟುವಟಿಕೆಗಳಿಗಾಗಿ ಸ್ಪರ್ಧೆಯಲ್ಲಿ ಸ್ವೀಕರಿಸಿದ ನಮೂದುಗಳನ್ನು ಬಳಸಲು ಕೇರಳ ಪ್ರವಾಸೋದ್ಯಮವು ವಿಶೇಷವಲ್ಲದ ಹಕ್ಕನ್ನು ಕಾಯ್ದಿರಿಸಿದೆ.
 8. ಸ್ಪರ್ಧೆಯ ಕುರಿತಂತೆ ಎಲ್ಲಾ ಸಂವಹನಗಳನ್ನು ಇಂಗ್ಲಿಷ್‌ ಭಾಷೆಯಲ್ಲಿಯೇ ಮಾಡತಕ್ಕದ್ದು.

ವಿವರವಾದ ಷರತ್ತುಗಳನ್ನು ಮತ್ತು ನಿಬಂಧನೆಗಳನ್ನು ವೀಕ್ಷಿಸಿರಿ

ಪ್ರಚಾರದ ವೇಳಾಪಟ್ಟಿ


 1. ಈ ಸ್ಪರ್ಧೆಯ ನೋಂದಣಿ ಸೆಪ್ಟೆಂಬರ್ 1, 2018 ರಂದು ಪ್ರಾರಂಭವಾಗುತ್ತದೆ. ನೋಂದಣಿ ಪರಿಶೀಲನೆ ಪೂರ್ಣಗೊಳಿಸಿದ ನಂತರ ತಕ್ಷಣವೇ ನಮೂದುಗಳನ್ನು ಸಲ್ಲಿಸಬಹುದು.
 2. ಜನವರಿ 31, 2019 ರ ವರೆಗೆ ಪ್ರವೇಶಗಳನ್ನು ಸಲ್ಲಿಸಬಹುದು.
 3. ಸಮಿತಿಯು ಅತ್ಯುತ್ತಮವಾದ 2000 ಚಿತ್ರಗಳನ್ನು ಆಯ್ಕೆ ಮಾಡುತ್ತದೆ ಮತ್ತು ಮಾರ್ಚ್ 31, 2019 ರಂದು ಪ್ರಕಟಿಸುತ್ತದೆ.
 4. ಮೇ 2, 2019 ರಂದು ವಿಜೇತರನ್ನು ಘೋಷಿಸಲಾಗುತ್ತದೆ.