ಅಂತರಾಷ್ಟ್ರೀಯ ಮಕ್ಕಳ ಚಿತ್ರಕಲೆ ಸ್ಪರ್ಧೆ 2018
ಕ್ಲಿಂಟ್ ಸ್ಮರಣಾರ್ಥವಾಗಿ
Picture of Edmund Thomas Clint

ಭಾಗವಹಿಸುವುದು ಹೇಗೆ


 1. ಜಗತ್ತಿನ ಯಾವುದೇ ಮೂಲೆಯಲ್ಲಿರುವ ಯಾವುದೆ ಮಗು (01.09.2002 ರಂದು/ನಂತರ ಮತ್ತು 01.09.2014 ರಂದು/ನಂತರ ಜನಿಸಿದ) ಈ ಸ್ಪರ್ಧೆಯಲ್ಲಿ ಸೇರಿಕೊಳ್ಳಬಹುದು. .
 2. ಈ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಯಾವುದೇ ಶುಲ್ಕ ಇರುವುದಿಲ್ಲ.
 3. ಮಕ್ಕಳು (4-16 ವರ್ಷಗಳು) ಅಪ್ರಾಪ್ತರಾಗಿರುವುದರಿಂದ, ಅವರ ಪರವಾಗಿ ಪೋಷಕರು ಅಥವಾ ಪಾಲಕರು ನೋಂದಣಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ..
 4. ನೋಂದಣಿ ಸಮಯದಲ್ಲಿ, ನೋಂದಾಯಿಸಿದವರು ಇಮೇಲ್ ಪರಿಶೀಲನೆಯ ಕೋಡ್ ಅನ್ನು ಪಡೆಯುತ್ತಾರೆ..
 5. ನೋಂದಾಯಿಸಿದವರು ಆ ಪರಿಶೀಲನೆಯ ಕೋಡ್ ಅನ್ನು ಕ್ಲಿಕ್ ಮಾಡಿದಾಗ ನೋಂದಣಿಯು ಪೂರ್ಣಗೊಳ್ಳುತ್ತದೆ.
 6. ಚಿತ್ರಕಲೆಯ ಥೀಮ್ ಆಗಿರುತ್ತದೆ 'ಕೇರಳ'. ಸ್ಪರ್ಧಿಗಳು ಕೇರಳದ ಯಾವುದೇ ಒಂದು ವಿಚಾರವನ್ನು ಚಿತ್ರಿಸಬಹುದು..
 7. ಚಿತ್ರಕಲೆಯನ್ನು ಬ್ರಶ್ ಅಥವಾ ಪೈಂಟ್‌ನಿಂದ ಮ್ಯಾನುವಲ್ ಆಗಿ ಕಾಗದದ ಮೇಲೆ ಚಿತ್ರಿಸಬೇಕು. ಸ್ಪರ್ಧಿಯು ತನಗೆ ಬೇಕಾದ ಯಾವುದೇ ಬಣ್ಣದ ವಸ್ತುಗಳನ್ನು ಉಪಯೋಗಿಸಬಹುದು. (ವಾಟರ್ ಕಲರ್, ಕ್ರೇಯಾನ್ಸ್ ಇತ್ಯಾದಿ).
 8. ಚಿತ್ರಕಲೆಯು ಪೂರ್ಣಗೊಂಡ ನಂತರ, ಪೋಷಕರು ಅಥವಾ ಪಾಲಕರು ಕೇರಳ ಪ್ರವಾಸೋದ್ಯಮ ವೆಬ್‌ಸೈಟ್‌ನ ಸ್ಪರ್ಧೆಯ ಪುಟಕ್ಕೆ ಲಾಗಿನ್ ಮಾಡಬೇಕು ಮತ್ತು ಸ್ಕ್ಯಾನ್ ಮಾಡಿರುವ ನಿಮ್ಮ ಚಿತ್ರಕಲೆಯ ಇಮೇಜ್ ಅನ್ನು ಸಲ್ಲಿಸಬೇಕು. ಚಿತ್ರಕಲೆಯ ಫೈಲ್‌ನ ಗಾತ್ರವು 5 MB ಗಿಂತಲೂ ಹೆಚ್ಚಾಗಿರಬಾರದು.
 9. ಪ್ರವೇಶಗಳನ್ನು ಸಲ್ಲಿಸಲು, ಕೊನೆಯ ದಿನಾಂಕವಾಗಿರುತ್ತದೆ 31 ಜನವರಿ 2019.
 10. ಪ್ರವೇಶಾರ್ಥಿಯು ಒಮ್ಮೆ ಮಾತ್ರ ನೋಂದಣಿ ಮಾಡಿಕೊಳ್ಳಬಹುದು, ಆದರೆ ಅವನು/ಅವಳು ಒಂದಕ್ಕಿಂತ ಹೆಚ್ಚು ಪ್ರವೇಶಗಳನ್ನು ಸಲ್ಲಿಸಬಹುದಾಗಿದೆ. ಅವನು/ಅವಳು ಇಚ್ಛಿಸಿದ್ದಲ್ಲಿ, ಗರಿಷ್ಟ ಐದು ಪ್ರವೇಶಗಳನ್ನು ಸಲ್ಲಿಸಬಹುದು. ಆದಾಗ್ಯೂ, ಒಬ್ಬ ಪ್ರವೇಶಾರ್ಥಿಯ ಎಲ್ಲಾ ಪ್ರವೇಶಗಳನ್ನು ಒಂದೇ ಲಾಗಿನ್ ಐಡಿ ಮೂಲಕವೇ ಸಲ್ಲಿಸಬೇಕು.
 11. ಪಾಲಕರು ಅಥವಾ ಪೋಷಕರು ಒಬ್ಬರಿಗಿಂತ ಹೆಚ್ಚು ಪ್ರವೇಶಾರ್ಥಿಗಳನ್ನು ನೋಂದಾಯಿಸಲು ಬಯಸಿದರೆ, ಅವರು ಬೇರೆ ಬೇರೆ ಇಮೇಲ್ ಐಡಿಗಳ ಮುಖಾಂತರ ನೋಂದಣಿ ಮಾಡಿಕೊಳ್ಳಬೇಕು. ಅಂದರೆ ಒಂದು ಇಮೇಲ್ ಐಡಿಯೊಂದಿಗೆ ಕೇವಲ ಒಬ್ಬ ಪ್ರವೇಶಾರ್ಥಿಯನ್ನು ಮಾತ್ರ ನೋಂದಾಯಿಸಬಹುದು.

ಈಗಲೇ ನೋಂದಾಯಿಸಿ