ಅಂತರಾಷ್ಟ್ರೀಯ ಮಕ್ಕಳ ಚಿತ್ರಕಲೆ ಸ್ಪರ್ಧೆ 2018
ಕ್ಲಿಂಟ್ ಸ್ಮರಣಾರ್ಥವಾಗಿ
Picture of Edmund Thomas Clint

ಅತ್ಯದ್ಭುತವಾದ ಬಹುಮಾನಗಳು ನಿಮಗಾಗಿ ಕಾಯುತ್ತಿವೆ!


ನಿಮ್ಮ ಚಿಕ್ಕ ಮಕ್ಕಳು ಗೆದ್ದಿರುವ ರಜೆಯ ಪ್ರವಾಸಕ್ಕೆ ಹೋಗುವುದರ ಬಗ್ಗೆ ನಿಮಗೆ ಏನು ಅನ್ನಿಸುತ್ತದೆ?

ಕೇಳಲು ಎಷ್ಟು ಅದ್ಭುತವಾಗಿದೆ! ಹೌದು ತಾನೆ? ನಿಮ್ಮ ಮಗುವಿಗೆ ಬಣ್ಣ ಹಚ್ಚಲು ಅವಕಾಶ ನೀಡುವ ಮೂಲಕ ನಿಮ್ಮ ಅತ್ಯಂತ ಅಚ್ಚುಮೆಚ್ಚಿನ ತಾಣಾವಾಗಿರುವ ದೇವರ ಸ್ವಂತ ನಾಡು – ಕೇರಳಕ್ಕೆ ಐದು ರಾತ್ರಿಗಳ ಪ್ರವಾಸವನ್ನು ಗೆಲ್ಲುವ ಸದವಕಾಶ ಇದೋ ಇಲ್ಲಿದೆ.  

ಕ್ಲಿಂಟ್ ಸ್ಮರಣಾರ್ಥ ಅಂತರಾಷ್ಟ್ರೀಯ ಮಕ್ಕಳ ಚಿತ್ರಕಲೆ ಸ್ಪರ್ಧೆಯು ಎಲ್ಲಾ ಅದೃಷ್ಟವಂತ ವಿಜೇತರಿಗೆ ಅದ್ಭುತವಾದ ಬಹುಮಾನಗಳನ್ನು ನೀಡುತ್ತಿದೆ..

ಬಹುಮಾನಗಳನ್ನು ಐದು ವಿಭಾಗಗಳಲ್ಲಿ ವರ್ಗೀಕರಿಸಲಾಗಿದೆ:

ವಿಶ್ವದ ಯಾವುದೇ ಭಾಗದಿಂದ ಕೇರಳಕ್ಕೆ ಪ್ರವಾಸ!

10 ವಿಜೇತರು

ವಿಶ್ವದಾದ್ಯಂತ, ಭಾರತದ ಹೊರಭಾಗದಲ್ಲಿ ಇರುವ 10 ವಿಜೇತರು ಕೇರಳಕ್ಕೆ ಕುಟುಂಬ ಪ್ರವಾಸವನ್ನು ಗೆಲ್ಲುವ ಅವಕಾಶವನ್ನು ಹೊಂದಿದ್ದಾರೆ. ವಿಜೇತರು ಇಬ್ಬರು ಸದಸ್ಯರೊಂದಿಗೆ ಸೇರಿ ಪ್ರವಾಸವನ್ನು ಆನಂದಿಸಬಹುದು.

ಪ್ರಶಾಂತತೆಯಿಂದ ಕೂಡಿರುವ ಪ್ರದೇಶಕ್ಕೆ ಮೋಜಿಭರಿತ ಕುಟುಂಬ ಪ್ರವಾಸಕ್ಕೆ ಸಿದ್ಧರಾಗಿರಿ!

20 ವಿಜೇತರು

ಮುಂದಿನ 20 ವಿದೇಶಿ ವಿಜೇತರಿಗೆ ಸ್ಮರಣಿಕೆಗಳನ್ನು ನೀಡಲಾಗುತ್ತದೆ.

ಭಾರತದ ಯಾವುದೇ ಭಾಗದಿಂದ ಕೇರಳಕ್ಕೆ ಪ್ರವಾಸ!

5 ವಿಜೇತರು

ಭಾರತದ 5 ವಿಜೇತರು ಐದು ರಾತ್ರಿಗಳ ಕೇರಳದ ಕುಟುಂಬ ಪ್ರವಾಸವನ್ನು ಗೆಲ್ಲುವ ಅವಕಾಶವನ್ನು ಹೊಂದಿದ್ದಾರೆ. ವಿಜೇತರು ಇಬ್ಬರು ಸದಸ್ಯರೊಂದಿಗೆ ಸೇರಿ ಪ್ರವಾಸವನ್ನು ಆನಂದಿಸಬಹುದು.

ದೇಶದ ಅತ್ಯಂತ ಸುಂದರವಾದ ರಾಜ್ಯಗಳ ಪೈಕಿ ಒಂದಾಗಿರುವ ಇಲ್ಲಿ ಕೆಲವು ದಿನಗಳ ಕಾಲ ನಿಮ್ಮ ಕುಟುಂಬದೊಂದಿಗೆ ಸಮಯ ಕಳೆಯುವುದಕ್ಕಿಂತ ಅತ್ಯಾಕರ್ಷಕ ವಿಷಯ ಯಾವುದೂ ಇರಲು ಸಾಧ್ಯವಿಲ್ಲ!

25 ವಿಜೇತರು

ಭಾರತದಿಂದ ವಿಜೇತರಾದ ಮುಂದಿನ 20 ವಿಜೇತರಿಗೆ ಪ್ರತಿಯೊಬ್ಬರಿಗೂ ರೂ. 10,000/- ದ ನಗದು ಬಹುಮಾನವನ್ನು ನೀಡಲಾಗುತ್ತದೆ.

ಕೇರಳದಿಂದ ಭಾಗವಹಿಸಿದವರಿಗೆ ಅದ್ಭುತ ಬಹುಮಾನಗಳು!

40 ವಿಜೇತರು

ಕೇರಳದಿಂದ ಭಾಗವಹಿಸಿದವರಿಗೆ ವಿಶೇಷ ನಗದು ಬಹುಮಾನಗಳು ಕಾದಿವೆ!

ಕೇರಳದಿಂದ ವಿಜೇತರಾದ 40 ಜನರಿಗೆ ಪ್ರತಿಯೊಬ್ಬರಿಗೂ ತಲಾ ರೂ. 10,000/- ದ ನಗದು ಬಹುಮಾನವನ್ನು ನೀಡಲಾಗುತ್ತದೆ.

ಭಾರತದ ಹೊರಭಾಗದಿಂದ ಬರುವ ಪ್ರಚಾರಕರು

5 ವಿಜೇತರು

ಸ್ಪರ್ಧೆಗೆ ಗರಿಷ್ಠ ಸಂಖ್ಯೆಯಲ್ಲಿ ಪ್ರವೇಶಾರ್ಥಿಗಳನ್ನು ತಂದ ಭಾರತದಿಂದ ಹೊರಗಿರುವ ಐದು ಪ್ರಚಾರಕರು ಕೇರಳದಲ್ಲಿನ ಪ್ರದೇಶಗಳಿಗೆ ಐದು ದಿನದ ಪ್ರವಾಸದ ಪ್ರವಾಸದ ಪ್ಯಾಕೇಜ್ ಅನ್ನು ಪಡೆಯುವರು.

ಭಾರತದ (ಕೇರಳದ ಹೊರಭಾಗ) ಪ್ರಚಾರಕರು

5 ವಿಜೇತರು

ಸ್ಪರ್ಧೆಗೆ ಗರಿಷ್ಠ ಸಂಖ್ಯೆಯಲ್ಲಿ ಪ್ರವೇಶಾರ್ಥಿಗಳನ್ನು ತಂದ ಭಾರತದೊಳಗಿನ ಆದರೆ ಕೇರಳದಿಂದ ಹೊರಗಿರುವ ಐದು ಪ್ರಚಾರಕರು ಕೇರಳದಲ್ಲಿನ ಪ್ರದೇಶಗಳಿಗೆ ಸಂದರ್ಶಿಸುವ ಐದು ದಿನದ ಪ್ರವಾಸದ ಪ್ರವಾಸದ ಪ್ಯಾಕೇಜ್ ಅನ್ನು ಪಡೆಯುವರು.ಒಟ್ಟು 110 ವಿಜೇತರಿರುತ್ತಾರೆ!!!

15 ವಿಜೇತರು ಕೇರಳಕ್ಕೆ ಕುಟುಂಬ ಪ್ರವಾಸಗಳನ್ನು ಗೆಲ್ಲುವ ಅವಕಾಶ ಹೊಂದಿರುತ್ತಾರೆ!

10 ವಿಜೇತರಿಗೆ ಸೋಲೋ ಪ್ರವಾಸಗಳು!


ನೋಂದಾಯಿಸಿ ಬೃಹತ್ ಆನ್‌ಲೈನ್ ಚಿತ್ರಕಲಾ ಸ್ಪರ್ಧೆಗೆ ಇಂದೇ.