ಪದೇಪದೆ ಕೇಳಲಾಗುವ ಪ್ರಶ್ನೆಗಳು

ಯಾರು ಭಾಗವಹಿಸಬಹುದು?

4 ಮತ್ತು 16 ವರ್ಷಗಳ ನಡುವಿನ (01.01.2007ರಂದು/ನಂತರ ಮತ್ತು 01.01.2019 ರಂದು/ಮೊದಲು ಜನಿಸಿದವರಾಗಿರಬೇಕು) ಜಗತ್ತಿನ ಯಾವುದೇ ಮೂಲೆಯ ಯಾವುದೇ ಮಗು ಇದರಲ್ಲಿ ಭಾಗವಹಿಸಬಹುದು.


ವಯಸ್ಕರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದೇ?

ನೀವು 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಕರಾಗಿದ್ದರೆ ನೀವು ನಿಮ್ಮನ್ನು ಪ್ರಚಾರಕರನ್ನಾಗಿ ನೋಂದಾಯಿಸಿಕೊಳ್ಳಬಹುದು. ನಿಮ್ಮ ಶಿಫಾರಸಿನ ಆಧಾರದಲ್ಲಿ ಸ್ಪರ್ಧೆಗೆ ಪ್ರವೇಶ ಪಡೆದಿರುವ ಯಾವುದೇ ಮಗುವು ನಿಮ್ಮ ಕ್ರೆಡಿಟ್‍ಗೆ ಸೇರ್ಪಡೆಯಾಗುತ್ತಾರೆ ಮತ್ತು ಹೆಚ್ಚು ಪ್ರವೇಶಗಳಿಗೆ ಉತ್ತೇಜಿಸುವ ಪ್ರಚಾರಕರು ಕೇರಳಕ್ಕೆ ಬೇಟಿ ಮಾಡಲು ಪೂರಕ ಪ್ರವಾಸಿ ಪ್ಯಾಕೇಜ್‌ಗಳನ್ನು ಪಡೆಯುತ್ತಾರೆ.


ಪ್ರಚಾರಕ ಎಂದರೆ ಯಾರು?

18 ವರ್ಷ ತುಂಬಿದ ಯಾವುದೇ ವ್ಯಕ್ತಿ ಸ್ಪರ್ಧೆಯ ಪ್ರಚಾರಕರಾಗಿ ನೋಂದಣಿ ಮಾಡಿಕೊಳ್ಳಬಹುದು. ಈ ಪ್ರಕ್ರಿಯೆಯು ಸ್ವಯಂ ಪ್ರೇರಿತವಾಗಿರುತ್ತದೆ ಮತ್ತು ಪ್ರಚಾರಕರಿಗೆ ಯಾವುದೇ ರೀತಿಯ ಸಂಭಾವನೆಯನ್ನು ಕೊಡಲಾಗುವುದಿಲ್ಲ.

ಈ ಸ್ಪರ್ಧೆಗೆ ಯಾವುದೇ ಪ್ರವೇಶ ಧನ ಇದೆಯೇ?

ಇಲ್ಲ, ಈ ಸ್ಪರ್ಧೆಗೆ ಪ್ರವೇಶ ಉಚಿತವಾಗಿರುತ್ತದೆ!


ಸಲ್ಲಿಸಬೇಕಾದ ವಿಧಾನ ಯಾವುದು?

ಸ್ಪರ್ಧಿಯು ಕ್ರೇಯಾನ್ಸ್, ಬಣ್ಣದ ಪೆನ್ಸಿಲ್‌ಗಳು ಅಥವಾ ಪೈಂಟ್ ಮತ್ತು ಬ್ರಶ್ ಅಥವಾ ಸ್ಕೆಚ್ ಪೆನ್‌ಗಳನ್ನು ಉಪಯೋಗಿಸಿ ಕಾಗದ ಮೇಲೆ ಚಿತ್ರವನ್ನು ಬಿಡಿಸುವುದನ್ನು ನಿರೀಕ್ಷಿಸಲಾಗುತ್ತದೆ. ಡಿಜಿಟಲ್, ಇಲೆಕ್ಟ್ರಾನಿಕ್ ಅಥವಾ ಮೆಕ್ಯಾನಿಕಲ್ ಉಪಕರಣಗಳಿಂದ ರಚಿಸಲಾದ ಚಿತ್ರಗಳನ್ನು ಈ ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. ಚಿತ್ರವನ್ನು ಯಾವುದೇ ವಿಧಾನದ ಮೂಲಕ ಡಿಜಿಟಲೀಕರಣಗೊಳಿಸಲಾಗುತ್ತದೆ ಮತ್ತು ಅದನ್ನು ಕೇರಳ ಪ್ರವಾಸೋದ್ಯಮ ಸ್ಪರ್ಧೆಯ ಪುಟಕ್ಕೆ ಅಪ್‌ಲೋಡ್ ಮಾಡಲಾಗುತ್ತದೆ (ಫೈಲ್ ಗಾತ್ರ 5 MB ಗಿಂತ ಹೆಚ್ಚಾಗಿರಬಾರದು).ಚಿತ್ರದ ಆಯಾಮವು ಕನಿಷ್ಠ A4 ಗಾತ್ರದಲ್ಲಿರಬೇಕು.


ಪ್ರವೇಶಗಳ ಸಂಖ್ಯೆಯ ಮೇಲೆ ಯಾವುದಾದರೂ ನಿರ್ಬಂಧಗಳಿವೆಯೇ?

ಪ್ರವೇಶಾರ್ಥಿಯು ಒಮ್ಮೆ ಮಾತ್ರ ನೋಂದಾಯಿಸಬಹುದು ಆದರೆ ಆಕೆ/ಆತ ಇಚ್ಛಿಸಿದರೆ, ಅವಳು/ಅವನು ಐದು ಪ್ರವೇಶಗಳ ವರೆಗೆ ಸಲ್ಲಿಸಬಹುದು.


ಏನನ್ನು ಚಿತ್ರಿಸಬೇಕು, ಸ್ಪರ್ಧೆಗೆ ಯಾವುದಾದರೂ ನಿರ್ದಿಷ್ಟ ವಿಷಯ ಇದೆಯೇ?

ಸ್ಪರ್ಧೆಯ ವಿಷಯ ಕೇರಳದ ಗ್ರಾಮೀಣ ಜೀವನ ಆಗಿದೆ! ಪೈಂಟಿಂಗ್ ಕೇರಳದ ಗ್ರಾಮಗಳಿಗೆ ಸಂಬಂಧಿಸಿದ ಯಾವುದೇ ವಿಷಯವನ್ನು ಹೊಂದಿರಬಹುದು. ನಿಮ್ಮ ಉಲ್ಲೇಖಕ್ಕಾಗಿ, ನಾವು ಸುಂದರವಾದ ಚಿತ್ರಗಳು ಮತ್ತು ವೀಡಿಯೋಗಳೊಂದಿಗೆ ವೆಬ್‍ಪೇಜ್, ವೀಡಿಯೋಗಳು ಮತ್ತು ಇ-ಬ್ರೌಚರ್‌ಗಳನ್ನು ರಚಿಸಿದ್ದೇವೆ. ಇಲ್ಲಿ ನಿಮಗೆ ಅಗತ್ಯವಾದುದೆಲ್ಲವನ್ನು ನೀವು ಪಡೆಯುವಿರಿ.

Landscape Drawing