Trade Media
     

ಅಲಪ್ಪುಜ


ತಾಣ: ಅಲಪ್ಪುಜ ಕಡಲತೀರ, ಅಲಪ್ಪುಜ ಪಟ್ಟಣದ ಹತ್ತಿರ, ದಕ್ಷಿಣ ಕೇರಳ.

ಪೂರ್ವದ ವೆನಿಸ್ ಎಂದು ಉಲ್ಲೇಖಿಸಲಾಗುವ ಅಲಪ್ಪುಜವು ಕಡಲತಡಿಯ ಚರಿತ್ರೆಯಲ್ಲಿ ಯವಾಗಲೂ ಒಂದು ಪ್ರಮುಖ ಸ್ಥಾನವನ್ನು ಹೊಂದಿರುತ್ತದೆ. ಇಂದು ಅದು ದೋಣಿ ಪಂದ್ಯ, ಹಿನ್ನೀರಿನ ಹಬ್ಬ, ಕಡಲ ತೀರಗಳು, ಸಾಗರದ ಉತ್ಪನ್ನಗಳು ಮತ್ತು ನಾರಿನ ಉದ್ದಿಮೆಗೆ ಪ್ರಖ್ಯಾತವಾಗಿದೆ. ಅಲಪ್ಪುಜ ಕಡಲತೀರವು ಒಂದು ಜನಪ್ರಿಯ ವಿಹಾರಪ್ರವಾಸದ ತಾಣವಾಗಿದೆ. ಸಮುದ್ರಕ್ಕೆ ಚಾಚಿಕೊಂಡಿರುವ ಹಡಗುಕಟ್ಟೆಯ ನಿರ್ಮಾಣವಾಗಿ 137 ವರ್ಷಕ್ಕಿಂತಲೂ ಹೆಚ್ಚು ಸಮಯವಾಗಿದೆ. ವಿಜಯ ಕಡಲತಟದ ಉದ್ಯಾನವನದಲ್ಲಿರುವ ಮನರಂಜನಾ ಸೌಲಭ್ಯಗಳು ಕಡಲತಟದ ಆಕರ್ಷಣೆಯನ್ನು ಹೆಚ್ಚಿಸಿದೆ. ಇಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಅತ್ಯಂತ ಹಳೆಯದಾದ ದೀಪದ ಮನೆಯಿದೆ.

ದೋಣಿಮನೆಯ ವಿಹಾರವು ಅಲಪ್ಪುಜವು ಮತ್ತೊಂದು ಆನಂದದಾಯಕ ಅನುಭವವಾಗಿರುತ್ತದೆ. ಅಲಪ್ಪುಜದ ಹಿನ್ನೀರಿನಲ್ಲಿ ನೀವು ಕಾಣುವುದು ಹಿಂದಿನ ಕಾಲದ ಕೆಟ್ಟುವಲ್ಲಂಗಳ  ಪರಿವರ್ತಿತ ರೂಪವನ್ನೇ. ಮೂಲ ಕೆಟ್ಟುವಲ್ಲಂಗಳು  ಅಥವಾ ಅಕ್ಕಿದೋಣಿಗಳನ್ನು ಟನ್‌ಗಟ್ಟಲೆ ಅಕ್ಕಿ ಮತ್ತು ಸಾಂಬಾರ ಪದಾರ್ಥಗಳನ್ನು ಸಾಗಿಸಲು ಉಪಯೋಗಿಸಲಾಗುತ್ತಿತ್ತು. ಸಂಪೂರ್ಣ ದೋಣಿಯನ್ನು ಕೇವಲ ನಾರಿನ ಗಂಟುಗಳು ಹಿಡಿದಿಟ್ಟುಕೊಳ್ಳುತ್ತಿದ್ದುರರಿಂದ ಕೆಟ್ಟುವಲ್ಲಂಗಳನ್ನು’ಗಂಟುಗಳಿರುವ ದೋಣಿ’ಯೆಂದು ಕರೆಯಲಾಗುತ್ತಿತ್ತು.

ಇತ್ತೀಚೆಗೆ ದೋಣಿಮನೆಗಳು ಒಂದು ವಸತಿಗೃಹದಂತೆ ಮಲಗುವಮನೆ, ಆಧುನಿಕ ಶೌಚಾಲಯ, ಸ್ನೇಹಪೂರ್ವಕ ವಾಸದ ಕೋಣೆ, ಅಡುಗೆ ಮನೆ ಮತ್ತು ಮೊಗಸಾಲೆಗಳನ್ನೂ ಒಳಗೊಂಡಂತೆ ಎಲ್ಲಾ ಸೌಲಭ್ಯಗಳಿಂದ ಸುಸಜ್ಜಿತವಾಗಿರುತ್ತವೆ. ಮತ್ತು ದೋಣಿಮನೆಯಲ್ಲಿರುವಾಗ  ಹಿನ್ನೀರಿನ ಜೀವಿಗಳ ಜೀವನವನ್ನು ಅಡೆತಡೆಯಿಲ್ಲದೆ ವೀಕ್ಶಿಸಿ ಆನಂದಿಸಬಹುದು.

ಅಲ್ಲಿಗೆ ತಲಪುವ ರೀತಿ:
  • ಸಮೀಪದ ರೈಲು ನಿಲ್ದಾಣ: ಸಮುದ್ರತೀರದಿಂದ ಸುಮಾರು 5 ಕಿ.ಮೀ ದೂರವಿರುವ ಅಲಪ್ಪುಜ.
  • ಸಮೀಪದ ವಿಮಾನ ನಿಲ್ದಾಣ: ಅಲಪ್ಪುಜ ಪಟ್ಟಣದಿಂದ ಸುಮಾರು 85 ಕಿ.ಮೀ ದೂರವಿರುವ ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ.


 
 
Photos
Photos
information
Souvenirs
 
     
Department of Tourism, Government of Kerala,
Park View, Thiruvananthapuram, Kerala, India - 695 033
Phone: +91-471-2321132 Fax: +91-471-2322279.

Tourist Information toll free No:1-800-425-4747
Tourist Alert Service No:9846300100
Email: info@keralatourism.org, deptour@keralatourism.org

All rights reserved © Kerala Tourism 1998. Copyright Terms of Use
Designed by Stark Communications, Hari & Das Design.
Developed & Maintained by Invis Multimedia