Trade Media
     

ಮುಜಪಿಲಾಂಗಡ್


ಸ್ಥಳ: ಕಣ್ಣೂರಿನಿಂದ ಸುಮಾರು ೧೫ ಕಿ.ಮೀ ಮತ್ತು ತಲಸೆರಿಯಿಂದ ೮ ಕಿ.ಮೀ, ಕಣ್ಣೂರು ಜಿಲ್ಲೆ, ಉತ್ತರ ಕೇರಳ.

ನಾಲ್ಕು ಕಿಲೋಮೀಟರ್ ಉದ್ದಕ್ಕೂ ವ್ಯಾಪಿಸಿರುವ ಮುಜಪಿಲಾಂಗಡ್ ಕಡಲತಡಿಯು ಒಂದು ಡ್ರೈ-ಇನ್ ಕಡಲತಡಿಯಾಗಿದ್ದು ಇದರುದ್ದಕ್ಕೂ ವಾಹನವನ್ನು ಚಲಾಯಿಸಬಹುದು. ನಿರ್ಮಲ ಮತ್ತು ಪ್ರಶಾಂತವಾದ ಈ ಸ್ಥಳವು ಹೆಚ್ಚು ಜನಜಂಗುಳಿಯಿರದ ಏಕಾಂತ ಪ್ರದೇಶವಾಗಿದೆ. ಬೃಹದಾಕಾರದ ಬಂಡೆಗಳು ಈ ದೀರ್ಘವಾದ ಕಡಲತಡಿಯನ್ನು ಆಳವಾದ ಪ್ರವಾಹಗಳಿಂದ ರಕ್ಷಿಸಿ ಆಳವಿಲ್ಲದ ಶಾಂತವಾದ ಈಜುಗರ ಸ್ವರ್ಗವನ್ನು ಸೃಷ್ಟಿಸಿದೆ. ಈ ಕಡಲತಡಿಯ ಅಂಚನ್ನು ಸುತ್ತುವರೆದಿರುವ ತಾಳೆಮರಗಳ ಗುಂಪು ಉಷ್ಣವಲಯದ ಸೂರ್ಯನಿಂದ ರಕ್ಷಣೆಯನ್ನು ಕೊಡುತ್ತದೆ.

ಅಲ್ಲಿಗೆ ತಲಪುವ ರೀತಿ: ಮುಜಪಿಲಾಂಗಡ್ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17 ರ ಪಶ್ಚಿಮಕ್ಕೆ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದೆ.

  • ಸಮೀಪದ ರೈಲು ನಿಲ್ದಾಣ: ದಕ್ಷಿಣ ರೈಲ್ವೆಯ ತುತ್ತತುದಿಯಾದ ಕಣ್ಣೂರು.
  • ಸಮೀಪದ ವಿಮಾನ ನಿಲ್ದಾಣ:ಕಣ್ಣೂರಿನಿಂದ ಸುಮಾರು 93 ಕಿ.ಮೀ ದೂರದಲ್ಲಿರುವ ಕೋಯಿಕ್ಕೋಡ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ.


 
 
Photos
Photos
information
Souvenirs
 
     
Department of Tourism, Government of Kerala,
Park View, Thiruvananthapuram, Kerala, India - 695 033
Phone: +91-471-2321132 Fax: +91-471-2322279.

Tourist Information toll free No:1-800-425-4747
Tourist Alert Service No:9846300100
Email: info@keralatourism.org, deptour@keralatourism.org

All rights reserved © Kerala Tourism 1998. Copyright Terms of Use
Designed by Stark Communications, Hari & Das Design.
Developed & Maintained by Invis Multimedia