Trade Media
     

ಫೋರ್ಟ್ ಕೊಚ್ಚಿ


ಚಾರಿತ್ರಿಕ ಪಟ್ಟಣ ಫೋರ್ಟ್ ಕೊಚ್ಚಿಯನ್ನು ಅನ್ವೇಷಿಸಲು ಕಾಲುನಡಿಗೆಯೇ ಉತ್ತಮ ದಾರಿ. ವಿರಾಮವಾಗಿ ಹತ್ತಿಬಟ್ಟ್ಯನ್ನು ಧರಿಸಿ,ಮದುವಾದ ಪಾದರಕ್ಷೆ ಮತ್ತು ಹುಲ್ಲಿನ ಪರಂಗಿ ಟೋಪಿಯನ್ನು ಧರಿಸಿ. ಈ ದ್ವೀಪದ ಪ್ರತಿಯೊಂದು ಸಂದಿಗೊಂದಿಯೂ ಚರಿತ್ರೆಯಲ್ಲಿ ಅದ್ದಿ ಮುಳುಗಿದೆ, ನಿಮ್ಮನ್ನು ವಿನೋದಗೊಳಿಸುವ ವಿಚಾರವು ಕಾದಿರುತ್ತದೆ. ಇದು  ಕಳೆದು ಹೋದ ಶಕೆಯ ಪಳೆಯುಳಿಕೆಗಳನ್ನು ಉಳಿಸಿಕೊಂಡ, ಕಳೆದುಹೋದ ದಿನಗಳ ಬಗ್ಗೆ ಇನ್ನೂ ಹೆಮ್ಮೆಯನ್ನುಳಿಸಿಕೊಂಡ ತನ್ನದೇ ಆದ ವಿಶ್ವವಾಗಿದೆ. ನಿಮಗೆ ಭೂತಕಾಲದ ವಾಸನೆಯನ್ನು ಹಿಡಿಯಲು ಆಗುವಂತಿದ್ದರೆ, ಈ ರಸ್ತೆಗಳ ಮೂಲಕ ನಡೆದಾಡುವುದನ್ನು ತಪ್ಪಿಸಲು ಯಾವುದರಿಂದಲೂ ಸಾಧ್ಯವಿಲ್ಲ.

ಕೆ.ಜೆ.ಮಾರ್ಷಲ್ ರಸ್ತೆಯ ಮೂಲಕ ನೇರವಾಗಿ ನಡೆದು ಎಡಕ್ಕೆ ತಿರುಗಿದರೆ ನಿಮಗೆ ಇಮ್ಮ್ಯಾನುಯಲ್ ಕೋಟೆಯ ಕ್ಷಣಿಕದರ್ಶನವಾಗುತ್ತದೆ. ಈ ಸುಬಧ್ರ ನೆಲೆಯು ಒಮ್ಮೆ ಪೋರ್ಚುಗೀಸರಿಗೆ ಸೇರಿತ್ತು ಮತ್ತು ಕೊಚ್ಚಿಯ ಮಹಾರಾಜ ಮತ್ತು ಪೋರ್ಚುಗಲ್ಲಿನ ದೊರೆಯ ನಡುವಿನ ಯುದ್ಧತಂತ್ರದ ಒಕ್ಕೂಟದ ಸಂಕೇತವಾಗಿದೆ ಮತ್ತು ಇದಕ್ಕೆ ಪೋರ್ಚುಗಲ್ಲಿನ ದೊರೆಯ ಹೆಸರಿಡಲಾಗಿದೆ. ಈ ಕೋಟೆಯನ್ನು 1503 ರಲ್ಲಿ ಕಟ್ಟಿ 1538 ರಲ್ಲಿ ಬಲವರ್ಧಿಸಲಾಯಿತು. ಇನ್ನೂ ಸ್ವಲ್ಪ ಮುಂದೆ ನಡೆದರೆ ನಿಮಗೆ ಡಚ್ಚರ ಸಮಾಧಿಯು ಸಿಕ್ಕುತ್ತದೆ. 1724 ರಲ್ಲಿ ಪ್ರತಿಷ್ಟಾಪಿಸಿ ಚರ್ಚ್ ಆಫ್ ಸೌಥ್ ಇಂಡಿಯಾದವರಿಂದ ನಿರ್ವಹಿಸಲ್ಪಡುತ್ತಿರುವ ಇಲ್ಲಿರುವ ಸಮಾಧಿ ಶಿಲೆಗಳು ಪ್ರವಾಸಿಗರಿಗೆ ವಸಾಹತುಗಳ ಸಾಮ್ರಾಜ್ಯವನ್ನು ಕಟ್ಟಲು ತಮ್ಮ ತಾಯಿನಾಡನ್ನು ಬಿಟ್ಟ ಯೂರೋಪಿಯನ್ನರ ನೆನಪನ್ನು ಕೊಡುತ್ತದೆ.

ನೀವು ನೋಡಬೇಕಾದ ಮುಂದಿನ ತಾಣವು ವಸಾಹತುಶಾಹಿಯ ಕಾಂಕ್ರೀಟ್ ಮಾದರಿಯಾಗಿ ನೆಟ್ಟಗೆ ನಿಂತಿರುವ ಪುರಾತನ ಠಾಕೂರ್ ನಿವಾಸ. ಈ ಕಟ್ಟಡದ ಸೌಣ್ದರ್ಯವನ್ನು ಶಬ್ಧಗಳಲ್ಲಿ ಹೇಳಲಾಗುವುದಿಲ್ಲ. ಮೊದಲಿಗೆ ಇದು ಕುನಾಲ್ ಅಥವಾ ಹಿಲ್‌ಬಂಗಲೋ ಅಂದು ಕರೆಯಲ್ಪಟ್ಟಿತ್ತು ಮತ್ತು ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಇದು ನ್ಯಾಶನಲ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕರ ನಿವಾಸವಾಗಿತ್ತು. ಈಗ ಇದು ಪ್ರಸಿದ್ಧ ಟೀ ವಹಿವಾಟು ನಡೆಸುವ ಟಾಕೂರ್ ಮತ್ತು ಕಂಪನಿಗೆ ಸೇರಿರುತ್ತದೆ.

ಹಾಗೆಯೇ ಮುಂದೆ ನಡೆದಾಗ ಇನ್ನೊಂದು ವಸಾಹತುಶಾಹಿಯ ರಚನೆ – ಡೇವಿಡ್ ಹಾಲ್- ನಿಮ್ಮನ್ನು ಪ್ರತೀಕ್ಷಿಸುತ್ತಿರುತ್ತದೆ. ಇದನ್ನು 1695 ರಲ್ಲಿ ಡಚ್ ಈಸ್ಟ್ ಇಂಡಿಯಾ ಕಂಪನಿಯು ಕಟ್ಟಿತು. ಈ ಕಟ್ಟಡವನ್ನು  ತನ್ನ ಹೊರ್ಟಸ್ ಮಲಬಾರಿಕಸ್ ಹೆಸರಿನ ಕೇರಳದ ಪ್ರಾಣಿ ಮತ್ತು ಸಸ್ಯಸಂಕುಲದ ಕುರಿತಾಗಿ ಬರೆದಿರುವ ಪುಸ್ತಕದಿಂದ ಪ್ರಖ್ಯಾತನಾದ ಖ್ಯಾತ ಡಚ್ ಸೇನಾನಿ ಹೆಂಡ್ರಿಕ್ ಅಡ್ರಿಯಾನ್ ವಾನ್ ರೀಡ್ ಡ್ರೇಕ್ಸ್ಟನ್ನನೊಂದಿಗೆ ತಳಕು ಹಾಕಲಾಗಿದೆ. ಆದಾಗ್ಯೂ ಡೇವಿಡ್ ಹಾಲಿಗೆ ಅದರ ನಂತರದ ಸ್ವಾಮ್ಯಸಾಧಕ ಡೇವಿಡ್ ಕೊಡ್ಲರನ ಹೆಸರು ಇಡಲಾಗಿದೆ.

ಪೋರ್ಚುಗೀಸರು, ಡಚ್ಚರು ಮತ್ತು ಬ್ರಿಟಿಷರು ಒಮ್ಮೆ ಸೈನಿಕ ಮೆರವಣಿಗೆಗಳನ್ನು ನಡೆಸುತ್ತಿದ್ದ ನಾಲ್ಕೆಕರೆ ವಿಸ್ತೀರ್ಣದ ಪೆರೇಡ್ ಮೈದಾನದವನ್ನು ದಾಟಿ ಮುಂದೆ ಹೋದರೆ, ನೀವು ಭಾರತದ ಅತಿ ಪುರಾತನ ಯೂರೋಪಿನ ಇಗರ್ಜಿಯಾದ ಸೈಂಟ್ ಫ್ರಾನ್ಸಿಸನ ಇಗರ್ಜಿಯನ್ನು ತಲಪುತ್ತೀರಿ. ಇದು ಪೋರ್ಚುಗೀಸರು 1503 ನಿರ್ಮಿಸಿದ ನಂತರ ಹಲವಾರು ಘಟ್ಟಗಳನ್ನು ಹಾದುಹೋಗಿದೆ. ಈಗ ಈ ಇಗರ್ಜಿಯು ಚರ್ಚ್ ಆಫ್ ಸೌಥ್ ಇಂಡಿಯಾ ಅಧೀನದಲ್ಲಿದೆ. ಈ ಚರ್ಚಿನಲ್ಲಿ ವಾಸ್ಕೋಡಗಾಮನನ್ನುಸಮಾಧಿ ಮಾಡಲಾಗಿದೆ ಮತ್ತು ಅವನ ಈ ಸಮಾಧಿ ಕಂಬವನ್ನು ಇನ್ನೂ ನೋಡಬಹುದು.

ಅರಬ್ಬಿ ಸಮುದ್ರದ ತಂಗಾಳಿಯು ನಿಮ್ಮನ್ನು ನೇವರಿಸುತ್ತಿರುವಂತೆಯೇ ಚರ್ಚ್ ರಸ್ತೆಯಲ್ಲಿ ನಡೆದುಕೊಂಡು ಹೋಗುವುದು ಅಹ್ಲಾದಕರವಾಗಿರುತ್ತದೆ. ಸಮುದ್ರಕ್ಕೆ ಹತ್ತಿರವಾಗಿ ನಡೆದುಕೊಂಡು ಹೋದರೆ  ನಿಮಗೆ ಭಾವಪ್ರಚೋದಕ ಗ್ರಂಥಾಲಯ ಮತ್ತು ಕ್ರೀಡಾ ಪಾರಿತೋಷಕಗಳ ಸಂಗ್ರಹವನ್ನು ಹೊಂದಿರುವ ಕೊಚ್ಚಿನ್ ಸ್ಪೋರ್ಟ್ಸ್ ಕ್ಲಬ್ ಎದುರಾಗುತ್ತದೆ. ಒಂದು ಭೂಚಿತ್ರವಿನ್ಯಾಸದಲ್ಲಿ ಅಳವಡಿಸಲಾಗಿರುವ ಕ್ಲಬ್ ಇನ್ನೂ ಬ್ರಿಟಿಷರ ಪರಿಸರವನ್ನು ಉಳಿಸಿಕೊಂಡಿದೆ.

ಚರ್ಚ್ ರಸ್ತೆಗೆ ಹಿಂತಿರುಗಿ ಬಂದರೆ ನಿಮ್ಮ ಎಡಬದಿಯಲ್ಲಿ ನೀವು ಇನ್ನೊಂದು ಭವ್ಯ ಬಂಗಲೆಯಾದ ಬ್ಯಾಸಿಟನ್ ಬಂಗಲೆಗೆ ಎದುರಾಗುತ್ತೀರಿ. ಈ ಅದ್ಭುತ ಇಂಡೋ-ಯೂರೋಪಿಯನ್ ಶೈಲಿಯ ಕಟ್ಟಡವನ್ನು 1667 ರಲ್ಲಿ ನಿರ್ಮಿಸಿ ಅದನ್ನು ಹಳೆಯ ಡಚ್ ಕೋಟೆಯ ಸ್ಟ್ರಾಂಬರ್ಗ್ ಬ್ಯಾಸಿಟನ್ನಿನ ಜಾಗದ ಹೆಸರಿಡಲಾಯಿತು. ಈಗ ಇದು ಸಬ್ ಕಲೆಕ್ಟರ್ ಅವರ ಅಧಿಕೃತ ನಿವಾಸವಾಗಿದೆ.

ವಾಸ್ಕೋಡಗಾಮ ಚೌಕವು ಹತ್ತಿರದಲ್ಲಿಯೇ ಇದೆ. ಈ ಒಂದು ಕಿರಿದಾದ ಕಾಲುಹಾದಿಯು ವಿರಮಿಸಲು ಪ್ರಶಸ್ತವಾದ ಸ್ಥಳವಾಗಿದೆ. ಸ್ವಾದಿಷ್ಟ ಸಮುದ್ರದ ಉತ್ಪನ್ನಗಳ ಆಹಾರ ಮತ್ತು ಎಳನೀರುಗಳು ಮನಸೆಳೆಯುತ್ತವೆ. ಆಹಾರವನ್ನು ಆಸ್ವಾದಿಸಿ ಚೀನೀ ಮೀನುಬಲೆಗಳನ್ನು ಏರಿಳಿಸುವುದನ್ನು ನೋಡಿ ಆನಂದಿಸಿ. ಈ ಬಲೆಗಳನ್ನು ಕ್ರಿ.ಶ 1350 ರಿಂದ ಕ್ರಿ.ಶ 1450ರ ನಡುವೆ ಕುಬ್ಲಾಯಿಖಾನನ ಆಸ್ಥಾನದ ವರ್ತಕರಿಂದ ಸ್ಥಾಪಿಸಲ್ಪಟ್ಟಿತು.

ದಣಿವಾರಿಸಿಕೊಂಡು, ನೀವು ಈಗ ಹಿಂದಿನ ಕಾಲದ ಕಾಫಿ ವರ್ತಕ ಸಂಸ್ಥೆ ಪಿಯರ್ಸ್ ಲೆಸ್ಲಿ ಮತ್ತು ಕಂಪನಿಯ ಕಛೇರಿಯಾಗಿದ್ದ  ಮನೋಹರವಾದ ಬಂಗಲೆ ಪಿಯರ್ಸ್ ಲೆಸ್ಲಿ ಬಂಗಲೆಯ ಕಡೆ ನಡೆಯಿರಿ. ಈ ಬಂಗಲೆಯು ಪೋರ್ಚುಗೀಸ್, ಡಚ್ ಮತ್ತು ಸ್ಥಳೀಯ ಪ್ರಭಾವಗಳನ್ನು ಬಿಂಬಿಸುತ್ತದೆ. ಜಲದ್ವಾರದ ವರಾಂಡಗಳು ಹೆಚ್ಚಿನ ಆಕರ್ಷಣೆಯಾಗಿವೆ. ಇಲ್ಲಿ ಬಲಕ್ಕೆ ತಿರುಗಿ ನೀವು ಹೆಸರಾಂತ ಟೀದಳ್ಳಾಳಿ ಕ್ಯಾರಿಯೆಟ್ ಮೋರಾನ್ ಮತ್ತು ಕಂಪನಿಯವ್ರು ಕಟ್ಟಿ ಒಡೆತನವನ್ನು ಹೊಂದಿದ್ದಹಳೆಯ ಬಂದರು ಮನೆಯ ಹತ್ತಿರ ಬಂದಿರುತ್ತೀರಿ. ಹತ್ತಿರದಲ್ಲಿಯೇ 1808 ರಲ್ಲಿ ಕೊಚ್ಚಿನ್ ಎಲೆಕ್ಟ್ರಿಕ್ ಕಂಪನಿಯ ಸ್ಯಾಮ್ಯುಯೆಲ್ ಎಸ್.ಕೊಡೇರನಿಂದ ನಿರ್ಮಿತವಾದ ಭವ್ಯ ಕೊಡೇರ್ ಹೌಸ್ ಇದೆ. ಈ ಕಟ್ಟಡವು ವಸಾಹತುಶಾಹಿ ವಾಸ್ತು ಶೈಲಿಯಿಂದ ಇಂಡೋ-ಯೂರೋಪಿಯನ್ ವಾಸ್ತುಶೈಲಿಗೆ ಸಂಕ್ರಮಣವಾಗಿರುವುದನ್ನು ಕಾಣಬಹುದು.

ಇಲ್ಲಿಂದ ಇನ್ನೂ ಬಲಕ್ಕೆ ತಿರುಗಿ ನೀವು ಪ್ರಿನ್ಸೆಸ್ ರಸ್ತೆಯನ್ನು ತಲಪಬಹುದು. ಇಲ್ಲಿರುವ ಹಲವಾರು ಅಂಗಡಿಗಳಿಂದ ತಾಜಾ ಹೂಗಳನ್ನು ಖರೀದಿಸಿ. ಈ ಪ್ರದೇಶದ ಪ್ರಾರಂಭದಲ್ಲಿನ ರಸ್ತೆಗಳಲ್ಲೊಂದಾದ ಇದು ಎರಡೂ ಪಕ್ಕಗಳಲ್ಲಿ ಯೂರೋಪಿಯನ್ ಮಾದರಿಯ ಮನೆಗಳನ್ನು ಹೊಂದಿದೆ. ಕೊಚ್ಚಿನ್ನಿನ ವಿನೋದಾಕಾಂಕ್ಷಿ ಜನಗಳು ಪದೇಪದೇ ಭೇಟಿಕೊಡುವ ’ಲೋಫರ್ಸ್ ಕಾರ್ನರ್’ ಇಲ್ಲಿದೆ.

ಲೋಫರ್ಸ್ ಕಾರ್ನರ್‌ನಿಂದ ಉತ್ತರಕ್ಕೆ ನಡೆದುಕೊಂಡು ಹೋದರೆ ನಿಮಗೆ ಪೋರ್ಚುಗೀಸರಿಂದ ನಿರ್ಮಿಸಲ್ಪಟ್ಟು 1558 ರಲ್ಲಿನಾಲ್ಕನೆಯ ಪೋಪ್ ಪಾಲ್‌ನಿಂದ ಮುಖ್ಯ ಚರ್ಚಾಗಿ ಬಡತಿ ಹೊಂದಿದ ಸಾಂತಾ ಕ್ರುಜ್ ಬ್ಯಾಸಿಲಿಕ ಸಿಗುತ್ತದೆ. 1984 ರಲ್ಲಿಎರಡನೆಯಪೋಪ್ ಜಾನ್ ಪಾಲನಿಂದ ಅದು ಬ್ಯಾಸಿಲಿಕವೆಂದು ಘೋಷಿಸಲ್ಪಟ್ಟಿತು. ಬರ್ಘರ್ ರಸ್ತೆ ಮತ್ತು  1808 ರಲ್ಲಿ ನಿರ್ಮಾಣಗೊಂಡು ಈಗ ಒಂದು ಪ್ರೌಢಶಾಲೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಪಾರಂಪರಿಕ ಕಟ್ಟಡ ಡೆಲ್ಟ ಸ್ಟಡಿಗಳ ಕಡೆಗೆ ಒಂದು ಕ್ಷಿಪ್ರ ನೋಟವನ್ನು ಹರಿಸಿ, ಕೆಳಗೆ ಪುನಃ ಪ್ರಿನ್ಸೆಸ್ ರಸ್ತೆಯ ಕಡೆಗೆ ನಡೆದುಕೊಂಡು ಹೋಗಿ ನಂತರ ರೋಸ್ ರಸ್ತೆಗೆ ಬನ್ನಿ. ಅಲ್ಲಿ ನೀವು ವಾಸ್ಕೋಡಗಾಮನ ಮನೆಯೆಂದು ನಂಬಲಾದ ವಾಸ್ಕೋ ಮನೆಯನ್ನು ನೋಡುವಿರಿ. ಈ ಸಾಂಪ್ರದಾಯಿಕ ಮಾದರಿ ಯೂರೋಪಿಯನ್ ಮನೆಯು ಕೊಚ್ಚಿಯಲ್ಲಿರುವ ಅತ್ಯಂತ ಹಳೆಯದಾದ ವಾಸದ ಮನೆಗಳಲ್ಲಿ ಒಂದಾಗಿದೆ.

ಎಡಕ್ಕೆ ತಿರುಗಿ ರಿಡ್ಸ್‌ಡೇಲ್ ರಸ್ತೆಯ ಕಡೆಗೆ ನಡೆದುಕೊಂಡು ಹೋದರೆ ನಿಮಗೆ ಪೆರೇಡ್ ಮೈದಾನಕ್ಕೆ ಎದುರಾಗಿರುವ ಮರದ ದೊಡ್ಡ VOC ದ್ವಾರವು ಸಿಕ್ಕುತ್ತದೆ. 1740 ರಲ್ಲಿ ನಿರ್ಮಿತವಾದ ಈ ದ್ವಾರಕ್ಕೆ ಅದರ ಹೆಸರು ಡಚ್ ಈಸ್ಟ್ ಇಂಡಿಯಾ ಕಂಪನಿಯ ಸಂಯುಕ್ತಾಕ್ಷರಗಳಿಂದ (VOC) ಬಂದಿದೆ. ಇಲ್ಲಿಗೆ ಅತಿ ಸಮೀಪದಲ್ಲಿಯೇ ಕೊಚ್ಚಿಯಲ್ಲಿದ ಬ್ರಿಟಿಷರ ನಾಲ್ಕು ಕ್ಲಬ್‌ಗಳಲ್ಲಿ ಒಂದಾಗಿದ್ದ ಯೂನೈಟೆಡ್ ಕ್ಲಬ್ ಇದೆ. ಈಗ ಅದು ಹತ್ತಿರದ ಸಂತ ಫ್ರಾನ್ಸಿಸ್ ಪ್ರಾಥಮಿಕ ಶಾಲೆಯ ತರಗತಿಯ ಕೊಠಡಿಯನ್ನಾಗಿ ಉಪಯೋಗಿಸಲಾಗುತ್ತಿದೆ.

ಇಲ್ಲಿಂದ ನೇರವಾಗಿ ನಡೆದು, 1506 ರಲ್ಲಿ ನಿರ್ಮಿಸಲಾಗಿರುವ ರಸ್ತೆಯ ಕೊನೆಯಲ್ಲಿರುವ ಬಿಶಪ್ ಮನೆಯನ್ನು ತಲಪುವಿರಿ. ಇದು ಪೆರೇಡ್ ಮೈದಾನದ ಹತ್ತಿರವಿರುವ ಸಣ್ಣ ಗುಡ್ಡದ ಮೇಲಿದ್ದು ಪೋರ್ಚುಗೀಸರ ರಾಜ್ಯಪಾಲನ ನಿವಾಸವಾಗಿತ್ತು. ಮನೆಯ ಮುಂಭಾಗವು ದೊಡ್ಡ ಗಾಥಿಕ್ ಕಮಾನುಗಳನ್ನು ಹೊಂದಿದ್ದು, ಇದನ್ನು ಭಾರತವಲ್ಲದೇ  ಬರ್ಮ, ಮಲಯ ಮತ್ತು ಸಿಲೋನುಗಳವರೆಗೂ ಅಧಿಕಾರವ್ಯಾಪ್ತಿಯಿದ್ದ ಕೊಚ್ಚಿನ್ನಿನ ಡಯೊಸಿಸ್‌ನ 27 ನೆಯ ಬಿಷಪ್ ಡಾಮ್ ಗೋಮ್ಸ್ ಫೆರೇರನಿಂದ ಸ್ವಾಧೀನಪಡಿಸಿಕೊಳ್ಳಲ್ಪಟ್ಟಿತು.

ಹೌದು, ಈಗ ನಿಮ್ಮ ನಡಿಗೆಯನ್ನು ಕೊನೆಗೊಳಿಸುವ ಸಮಯ ಬಂದಿದೆ. ಕಳೆದುಹೋದ ದಿನಗಳ ಪ್ರಭಾವವು ಇನ್ನೂ ನಿಮ್ಮ ಮನಸ್ಸಿನಲ್ಲಿ ಹೊರಳಾಡುತ್ತಿರುವಾಗಲೇ, ಸಮ್ಮೋಹಕ ದೃಶ್ಯಗಳು ನಿಮ್ಮ ಕಣ್ಣಿನಲ್ಲಿರುವಾಗಲೇ ಮತ್ತು ನಿಮ್ಮ ರಸನ ಗ್ರಂಥಿಗಳು ರಸಭಕ್ಷ್ಯಗಳಿಗೆ ಹಾತೊರೆತವು ತಪ್ಪೇನಲ್ಲ , ಮನಸ್ಸಿದ್ದರೆ ಇನ್ನೊಮ್ಮೆ ನಡೆಯಿರಿ!


 
 
Photos
Photos
information
Souvenirs
 
     
Department of Tourism, Government of Kerala,
Park View, Thiruvananthapuram, Kerala, India - 695 033
Phone: +91-471-2321132 Fax: +91-471-2322279.

Tourist Information toll free No:1-800-425-4747
Tourist Alert Service No:9846300100
Email: info@keralatourism.org, deptour@keralatourism.org

All rights reserved © Kerala Tourism 1998. Copyright Terms of Use
Designed by Stark Communications, Hari & Das Design.
Developed & Maintained by Invis Multimedia