Trade Media
     

ಕೋವಲಂ


ಕೋವಲಂ ಒಂದು ಅಂತರರಾಷ್ಟ್ರೀಯ ಖ್ಯಾತಿಯ ಕಡಲತಡಿಯಾಗಿದ್ದು ಮೂರು ಅರ್ಧಚಂದ್ರಾಕೃತಿಯ ತಡಲತಡಿಗಳನ್ನು ಹೊಂದಿದೆ. ಇದು 1930 ರಿಂದಲೂ ಪ್ರವಾಸಿಗರ, ವಿಶೇಷವಾಗಿ ಯೂರೊಪಿಯನ್ನರ ಮೆಚ್ಚಿನ ತಾಣವಾಗಿದೆ. ಕಡಲತಡಿಯಲ್ಲಿರುವ ಒಂದು ಬೃಹದಾಕಾರದ ಬಂಡೆಗಲ್ಲಿನ ಭೂಶಿರವು ಸಮುದ್ರಸ್ನಾನಕ್ಕೆ ಪ್ರಶಸ್ತವಾದ ಶಾಂತ ನೀರಿನ ಕೊಲ್ಲಿಯನ್ನು ಸೃಷ್ಟಿಸಿದೆ.

ಈ ಕಡಲತಡಿಯ ವಿರಾಮದ ಆಯ್ಕೆಗಳು ಸಮೃದ್ಧಿಯಾಗಿದ್ದು ವೈವಿಧ್ಯತೆಯಿಂದ ಕೂಡಿವೆ. ಸೂರ್ಯಸ್ನಾನ, ಈಜು, ಶರೀರದ ಧಾರ್ಡ್ಯವನ್ನುಹೆಚ್ಚಿಸುವ ಮೂಲಿಕಾ ಮಾಲೀಸುಗಳು, ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಟಮಾರನ್ ವಿಹಾರಯಾನಗಳು ಅವುಗಳಲ್ಲಿ ಕೆಲವು. ಉಷ್ಣವಲಯದ ಸೂರ್ಯನು ಕೆಲವೇ ನಿಮಿಷಗಳಲ್ಲಿ ಚರ್ಮವನ್ನು ತಾಮ್ರವರ್ಣಕ್ಕೆ ತಿರುಗಿಸುವುದನ್ನು ನೋಡಬಹುದು. ಕಡಲತಡಿಯ ಜೀವನವು ಹಗಲಿನಲ್ಲಿ ತಡವಾಗಿ ಪ್ರಾರಂಭವಾಗಿ ಸರಿರಾತ್ರಿಯವರೆಗೂ ವಿಸ್ತರಿಸುತ್ತದೆ. ಕಡಲತಡಿಯ ಸಂಕೀರ್ಣವು ಅಗ್ಗದ ಕುಟೀರಗಳ ಸರಣಿ, ಆಯುರ್ವೇದದ ಆರೋಗ್ಯಧಾಮಗಳು, ಸಮಾರಂಭದ ಸೌಲಭ್ಯಗಳು, ವ್ಯಾಪಾರ ವಿಹಾರದ ವಲಯಗಳು, ಈಜುಕೊಳಗಳು, ಯೋಗ ಮತ್ತು ಮಸಾಜು ಕೇಂದ್ರಗಳನ್ನು ಒಳಗೊಂಡಿರುತ್ತದೆ.

ಕೇರಳದ ರಾಜಧಾನಿಯಾದ ತಿರುವನಂತಪುರವು ಕೋವಲಂನಿಂದ ಕೇವಲ 16 ಕಿಲೋಮೀಟರುಗಳಷ್ಟು ದೂರವಿದ್ದು ಅದನ್ನು ತಲಪುವುದಕ್ಕೆ ಯಾವ ವಿಧದ ಕಷ್ಟವೂ ಇರುವುದಿಲ್ಲ. ಆದರೆ ನೀವು ರಜೆಯ ಪ್ರವಾಸಕ್ಕೆ ಬಂದಿದ್ದರೆ ಕೋವಲಂನಲ್ಲಿಯೇ ಉಳಿದುಕೊಂಡು ನಗರಕ್ಕೆ ಭೇಟಿ ಕೊಡುವುದು ಒಳ್ಳೆಯದು.

ತಿರುವನಂತಪುರಂ ನಗರವು ನೇಪಿಯರ್ ವಸ್ತುಸಂಗ್ರಹಾಲಯ, ಶ್ರೀ ಚಿತ್ರ ಆರ್ಟ್ ಗ್ಯಾಲರಿ, ಪದ್ಮನಾಭಸ್ವಾಮಿ ದೇವಾಲಯ, ಪೊನ್ಮುಡಿ ಗಿರಿಧಾಮ ಇತ್ಯಾದಿಗಳಂತಹ ನೋಡುವ ಸ್ಥಳಗಳನ್ನು ಹೊಂದಿದೆ. ಜನಾಂಗೀಯ ಅಪರೂಪದ ವಸ್ತುಗಳು ಮತ್ತುಇತರ ವಸ್ತುಗಳನ್ನು ಕೊಳ್ಳಲು ರಾಜ್ಯಸರ್ಕಾರದ ಸ್ವಾಮ್ಯದ ಕರಕುಶಲ ವಸ್ತುಗಳ ಎಂಪೋರಿಯಂ  SMSM ಇನ್ಸ್ಟಿಟ್ಯೂಟ್ ಸೂಕ್ತವಾದ ಸ್ಥಳ.

ಭೇಟಿ ಕೊಡಲು ಅತ್ಯಂತ ಸೂಕ್ತವಾದ ಸಮಯ: ವರ್ಷಪೂರ್ತಿ ಭೇಟಿಕೊಡಬಹುದಾದ ತಾಣವಾದರೂ, ಸೆಪ್ಟೆಂಬರಿನಿಂದ ಮಾರ್ಚಿನವರೆಗಿನ ಸಮಯವು ಅತ್ಯಂತ ಪ್ರಶಸ್ತವಾಗಿರುತ್ತದೆ.

ಸ್ಥಳ: ದಕ್ಷಿಣ ಕೇರಳದ ತಿರುವನಂತಪುರಂ ನಗರದಿಂದ ಕೇವಲ 16  ಕಿ.ಮೀ.

ಅಲ್ಲಿಗೆ ತಲಪುವ ರೀತಿ:
  • ಸಮೀಪದ ರೈಲು ನಿಲ್ದಾಣ: ಸುಮಾರು  16 ಕಿ.ಮೀ ದೂರವಿರುವ ತಿರುವನಂತಪುರಂ ಸೆಂಟ್ರಲ್
  • ಸಮೀಪದ ವಿಮಾನ ನಿಲ್ದಾಣ: ಸುಮಾರು  10 ಕಿ.ಮೀ ದೂರವಿರುವ ತಿರುವನಂತಪುರಂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ.


 
 
Photos
Photos
information
Souvenirs
 
     
Department of Tourism, Government of Kerala,
Park View, Thiruvananthapuram, Kerala, India - 695 033
Phone: +91-471-2321132 Fax: +91-471-2322279.

Tourist Information toll free No:1-800-425-4747
Tourist Alert Service No:9846300100
Email: info@keralatourism.org, deptour@keralatourism.org

All rights reserved © Kerala Tourism 1998. Copyright Terms of Use
Designed by Stark Communications, Hari & Das Design.
Developed & Maintained by Invis Multimedia