Trade Media
     

ಕುಮಾರಕೋಮ್


ಸ್ಥಳ: ಮಧ್ಯ ಕೇರಳದ ಕೊಟ್ಟಾಯಂ ನಗರದಿಂದ 16 ಕಿಮೀ

ಕುಮಾರಕೋಮ್ ಗ್ರಾಮವು ವೆಂಬನಾಡು ಸರೋವರದ ಸಣ್ಣ ದ್ವೀಪಗಳ ಗುಚ್ಛವಾಗಿದ್ದು, ಇದು ಕುಟ್ಟನಾಡಿನ ಭಾಗವಾಗಿದೆ. ಇಲ್ಲಿನ ಪಕ್ಷಿ ಉದ್ಯಾನವನವು 14 ಎಕರೆ ಹರಡಿದ್ದು, ಇದು ವಲಸೆ ಹಕ್ಕಿಗಳಿಗೆ ಸೂಕ್ತ ಸ್ಥಾನ ಮತ್ತು ಪಕ್ಷಿಶಾಸ್ತ್ರಜ್ಞರಿಗೆ ಸ್ವರ್ಗವಾಗಿದೆ. ಎಗ್ರೆಟ್ಸ್, ಡಾರ್ಟರ್, ಹೆರಾನ್, ಟೀಲ್ಸ್, ವಾಟರ್ ಫೌಲ್, ಕುಕ್ಕೂ, ವೈಲ್ಡ್ ಡಕ್, ಮತ್ತು ಸೈಬೀರಿಯನ್ ಸ್ಟಾರ್ಕ್ ನಂತಹ ವಲಸೆ ಹಕ್ಕಿಗಳು ಗುಂಪಾಗಿ ಇಲ್ಲಿ ಬರುತ್ತವೆ, ಇದು ಪ್ರವಾಸಿಗರಿಗೆ ಸುಂದರ ನೋಟವನ್ನು ನೀಡುತ್ತದೆ. ಕುಮಾರಕೋಮ್ ನ ಪಕ್ಷಿಗಳನ್ನು ವೀಕ್ಷಿಸುವ ಉತ್ತಮ ವಿಧಾನವೆಂದರೆ ದ್ವೀಪದ ಸುತ್ತಲಿನ ದೋಣಿ ಸುತ್ತು.

ಅತ್ಯದ್ಭುತ ಹಿನ್ನೀರಿನ ತಾಣವಾದ ಕುಮಾರಕೋಮ್ ಪ್ರವಾಸಿಗರಿಗೆ ಇತರ ಬಿಡುವಿನ ಆಯ್ಕೆಗಳನ್ನೂ ನೀಡುತ್ತದೆ. ದೋಣಿವಿಹಾರ ಮತ್ತು ಮೀನುಗಾರಿಕೆ ಸೌಲಭ್ಯವನ್ನು ತಾಜ್ ಗಾರ್ಡನ್ ರೆಟ್ರೀಟ್ ಎನ್ನುವ ರೆಸಾರ್ಟ್ ಆಗಿ ಬದಲಾದ ಅತ್ಯಂತ ಪುರಾತನ ಬಂಗಲೆಯು ನೀಡುತ್ತದೆ.

ಕೇರಳ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಪೋರೇಷನ್ ನ ನೀರಿನ ದೃಶ್ಯಕ್ಕಾಗಿ ಹಿನ್ನೀರಿನ ರೆಸಾರ್ಟ್ ಗಳನ್ನು ಆರಂಭಿಸಿದ್ದು, ಇದು ಸ್ವತಂತ್ರ ಕಾಟೇಜ್ ಅನ್ನು ತೆಂಗಿನ ತೋಟದ ಮಧ್ಯೆ ನಿರ್ಮಿಸಿದೆ, ಇದು ಹಿನ್ನೀರಿನ ಮನಮೋಹಕ ನೋಟವನ್ನು ನೀಡುತ್ತದೆ. ರಜಾದಿನಗಳ ಪ್ಯಾಕೇಜ್ ದೋಣಿವಿಹಾರ, ಸಾಂಪ್ರದಾಯಿಕ ಕೆಟ್ಟುವಲ್ಲಮ್ (ಅಕ್ಕಿಯ ಕಣಜ) ಗಳನ್ನು ಒಳಗೊಂಡಿದ್ದು, ಇದು ಅದ್ಭುತ ಅನುಭವ ನೀಡುತ್ತದೆ.

ಅಲ್ಲಿಗೆ ತಲುಪುವುದು:
  • ಸಮೀಪದ ರೈಲ್ವೇ ನಿಲ್ದಾಣ: ಕೊಟ್ಟಾಯಂ, 16 ಕಿಮೀ ದೂರ
  • ಸಮೀಪದ ವಿಮಾನ ನಿಲ್ದಾಣ: ಕೊಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕೊಟ್ಟಾಯಂ ನಿಂದ 76 ಕಿಮೀ.


 
 
Photos
Photos
information
Souvenirs
 
     
Department of Tourism, Government of Kerala,
Park View, Thiruvananthapuram, Kerala, India - 695 033
Phone: +91-471-2321132 Fax: +91-471-2322279.

Tourist Information toll free No:1-800-425-4747
Tourist Alert Service No:9846300100
Email: info@keralatourism.org, deptour@keralatourism.org

All rights reserved © Kerala Tourism 1998. Copyright Terms of Use
Designed by Stark Communications, Hari & Das Design.
Developed & Maintained by Invis Multimedia