Trade Media
     

ವರ್ಕಲ


ವರ್ಕಾಲವು ತಿರುವನಂತಪುರಂ ಜಿಲ್ಲೆಯ ಹೊರವಲಯದಲ್ಲಿರುವ ಪ್ರಶಾಂತ ಹಳ್ಳಿಯಾಗಿದೆ. ಇದು ಸುಂದರವಾದ ಕಡಲತಡಿ, ಒಂದು 2000 ವರ್ಷ ಹಳೆಯದಾದ ವಿಷ್ಣುವಿನ ದೇವಸ್ಥಾನ ಮತ್ತು ಕಡಲತಡಿಯಿಂದ ಸ್ವಲ್ಪವೇ ದೂರವಿರುವ ಶಿವಗಿರಿಮಠ ಆಶ್ರಮಗಳಂತಹ ಪ್ರವಾಸಿ ಆಕರ್ಷಣೆಗಳನ್ನು ಹೊಂದಿದೆ.

ವರ್ಕಾಲ ಕಡಲತಡಿಯಲ್ಲಿ ಒಂದು ಖನಿಜ ನೀರಿನಿಂದ ಸಮೃದ್ಧವಾಗಿರುವ ಪ್ರಶಾಂತ ಸಮುದ್ರಧಾಮವಿದೆ. ಈ ಕಡಲತಡಿಯ ಪವಿತ್ರ ನೀರಿನಲ್ಲಿ ಮುಳುಗುವುದರಿಂದ ಶರೀರದ ಕಶ್ಮಲಗಳು ಮತ್ತು ಆತ್ಮದ ಪಾಪಗಳೆಲ್ಲವೂ ಪರಿಹಾರವಾಗುತ್ತದೆಯೆಂಬ ಪ್ರತೀತಿ ಇರುವುದರಿಂದ ಇದಕ್ಕೆ ’ಪಾಪನಾಶಿನಿ ಕಡಲತಡಿ’ಯೆಂದು ಹೆಸರು ಬಂದಿದೆ.

ಸ್ವಲ್ಪ ದೂರದಲ್ಲಿಯೇ ಈ ಕಡಲತಡಿಯ ಮೇಲಿರುವ ಕಡಿಗಲ್ಲು ಬಂಡೆಗಳ ಮೇಲೆ ಎರಡು ಸಾವಿರ ವರ್ಷಗಳಷ್ಟು ಪುರಾತನವಾದ ಜನಾರ್ದನಸ್ವಾಮಿಯ ದೇವಸ್ಥಾನವಿದೆ. ವಿಖ್ಯಾತ ಹಿಂದು ಸುಧಾರಕ ಮತ್ತು ತತ್ವಜ್ಞಾನಿ ನಾರಾಯಣ ಗುರು (1856-1928) ಸ್ಥಾಪಿಸಿದ ಶಿವಗಿರಿ ಮಠವೂ ಹತ್ತಿರದಲ್ಲಿಯೇ ಇದೆ. ಇಲ್ಲಿರುವ ಗುರುವಿನ ಸಮಾಧಿಗೆ ಸಾವಿರಾರು ಭಕ್ತರು ಡಿಸಂಬರ್ 30 ರಿಂದ ಜನವರಿ 1 ರವರೆ ನಡೆಯುವ ಶಿವಗಿರಿ ಯಾತ್ರೆಗೆ ಬಂದು ಸೇರುತ್ತಾರೆ. ಶ್ರೀ ನಾರಾಯಣ ಗುರು ಜಾತಿ ಮತಗಳ ವ್ಯವಸ್ಥೆಯ ನಿರ್ಭಂರ್ಬಂಧಗಳಿಂದ ಛಿದ್ರವಾಗಿದ್ದ ಸಮಾಜದಲ್ಲಿ “ಒಂದು ಜಾತಿ, ಒಂದು ಧರ್ಮ ಮತ್ತು ಒಬ್ಬ ದೇವರು” ಎಂಬ ತತ್ವವನ್ನು ಪ್ರತಿಪಾದಿಸಿದರು.

ವರ್ಕಾಲವು ಪ್ರವಾಸಿಗರಿಗೆ ಅತ್ಯುತ್ತಮ ವಸತಿ ಸೌಕರ್ಯಗಳನ್ನುಒದಗಿಸುತ್ತಿದೆ ಮತ್ತು ಹಲವಾರು ಆಯುರ್ವೇದ ಮಸಾಜು ಕೇಂದ್ರಗಳಿಂದ ಜನಪ್ರಿಯ ಆರೋಗ್ಯಧಾಮವಾಗುತ್ತಿದೆ

ಆಕರ್ಷಣೆಗಳು: ಕಡಲತಡಿ, ಖನಿಜನೀರಿನ ಬುಗ್ಗೆ, ಶಿವಗಿರಿ ಮಠ ಮತ್ತು 2000 ವರ್ಷ ಪುರಾತನವಾದ ವಿಷ್ಣುವಿನ ದೇವಸ್ಥಾನ.

ನೆಲೆ: ತಿರುವನಂತಪುರಂ ನಗರದಿಂದ ಉತ್ತರಕ್ಕೆ 51 ಕಿ.ಮೀ ಮತ್ತು ಕೊಲ್ಲಂಗೆ ದಕ್ಷಿಣಕ್ಕೆ 37 ಕಿ.ಮೀ, ತಿರುವನಂತಪುರಂ ಜಿಲ್ಲೆ, ದಕ್ಷಿಣ ಕೇರಳ.

ಅಲ್ಲಿಗೆ ತಲಪುವ ರೀತಿ:
  • ಸಮೀಪದ ರೈಲು ನಿಲ್ದಾಣ: 3 ಕಿ.ಮೀ ದೂರದಲ್ಲಿರುವ ವರ್ಕಲ
  • ಸಮೀಪದ ವಿಮಾನ ನಿಲ್ದಾಣ: ಸುಮಾರು 57 ಕಿ.ಮೀ ದೂರದಲ್ಲಿರುವ ತಿರುವನಂತಪುರಂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ.


 
 
Photos
Photos
information
Souvenirs
 
     
Department of Tourism, Government of Kerala,
Park View, Thiruvananthapuram, Kerala, India - 695 033
Phone: +91-471-2321132 Fax: +91-471-2322279.

Tourist Information toll free No:1-800-425-4747
Tourist Alert Service No:9846300100
Email: info@keralatourism.org, deptour@keralatourism.org

All rights reserved © Kerala Tourism 1998. Copyright Terms of Use
Designed by Stark Communications, Hari & Das Design.
Developed & Maintained by Invis Multimedia