Trade Media
     

ಕೇರಳದ ಸ್ಮರಣಿಕೆಗಳು

 

ಸ್ಮರಣಿಕೆಗಳು ವ್ಯಕ್ತಿಯ ಜೀವನದಲ್ಲಿ ಅನುಭವಗಳನ್ನು ಮೆಲುಕುಹಾಕಿ ಸಂತೋಷಿಸುವುದಾಗಿದೆ. ಈ ಅನುಭವಗಳು ಯಾವುದೇ ಆಗಿರಬಹುದು. ಪ್ರವಾಸದ ವಿಷಯಕ್ಕೆ ಬಂದರೆ, ಸ್ಮರಣಿಕೆಗಳುವಿಶೇಷವಾಗಿ ಕೇರಳದಂತಹ ಅದ್ಭುತ ಸ್ಥಳಕ್ಕೆ ಭೇಟಿನೀಡುವ ಪ್ರವಾಸಿಗರಿಗೆ ಆಳವಾದ ಮೌಲ್ಯವನ್ನು ತಿಳಿಸುತ್ತವೆ.

ಕೇರಳದಲ್ಲಿ, ಪ್ರವಾಸಿಗರು ಅದರ ಸಂಸ್ಕೃತಿ, ಇತಿಹಾಸ, ಕಲೆ ಮತ್ತು ಸಾಮಾಜಿಕ-ಧಾರ್ಮಿಕ ಅಂಶಗಳನ್ನು ಪ್ರತಿಬಿಂಬಿಸುವ ವಿವಿಧ ಸ್ಮರಣಿಕೆಗಳನ್ನು ನೋಡುತ್ತಾರೆ.

ಕೇರಳ ಸ್ಮರಣಿಕೆಗಳು ಆಕರ್ಷಕ ಮತ್ತು ವಿಶಿಷ್ಟ ಕರಕುಶಲ ವಸ್ತುಗಳ ವಿಶಾಲ ಶ್ರೇಣಿಯನ್ನು  ಹೊಂದಿದೆ. ಅವುಗಳಲ್ಲಿ ಜನಪ್ರಿಯವಾದುದೆಂದರೆ ಅರಣ್ಮುಲ ಕನ್ನಡಿ (ಲೋಹದ ಕನ್ನಡಿ); ಕರಕುಶಲ ವಸ್ತುಗಳನ್ನು ತೆಂಗಿನಚಿಪ್ಪು, ಮರ, ಮಣ್ಣು ಮತ್ತು ಬೆತ್ತಗಳಿಂದ ತಯಾರಿಸುತ್ತಾರೆ; ಭಿತ್ತಿ ಚಿತ್ರಗಳು ಮತ್ತು ಹ್ಯಾಂಡ್ ಲೂಂ ಉತ್ಪನ್ನಗಳಾದ ಕಸವು ಸೀರೆ (ಚಿನ್ನದ ಬ್ರೊಕೇಡ್ ಇರುವ ಸೀರೆ) ಪ್ರಸಿದ್ಧವಾಗಿದೆ.

ಕೇರಳದಲ್ಲಿ, ಪ್ರವಾಸಿಗರು ಕೇರಳ ಸರ್ಕಾರದಿಂದ ಕೇರಳ ಸ್ಮರಣಿಕೆಗಳನ್ನು ಅಭಿವೃದ್ಧಿಪಡಿಸಲು ಅಧಿಕೃತ ಏಜೆನ್ಸಿಯ ಕಲ್ಚರ್ ಶಾಪಿಯಿಂದ ಪಕ್ಕಾ ಕೇರಳ ಸ್ಮರಣಿಕೆಗಳನ್ನು ಕೊಳ್ಳುತ್ತಾರೆ. ಕಲ್ಚರ್ ಶಾಪಿಯಲ್ಲಿ, ಪ್ರವಾಸಿಗರು ಉರುಲಿ (ವೊಕ್), ಪರ (ಸಾಂಪ್ರದಾಯಿಕ ಅಳತೆಯ ಪಾತ್ರೆಯಾದ ಕಂಚಿನ ಸಣ್ಣ ಮಾದರಿ), ಕೆಟ್ಟುವಲ್ಲಮ್ (ಅಕ್ಕಿಯ ಜರಡಿ), ಅರಣ್ಮುಲ ಕನ್ನಡಿ (ಲೋಹದ ಕನ್ನಡಿ), ನೆಟ್ಟಿಪಟ್ಟಮ್ (ಆನೆಗಳ ಹೊದಿಕೆ), ನೆಟ್ಟೂರ್ ಪೆಟ್ಟಿ (ಸಾಂಪ್ರದಾಯಿಕ ಒಡವೆ ಪೆಟ್ಟಿಗೆ) ಇತ್ಯಾದಿಗಳನ್ನು ಹೆಚ್ಚಾಗಿ ಕೊಳ್ಳುತ್ತಾರೆ.

ಸ್ಮರಣಿಕೆಗಳು ಕಲ್ಚರ್ ಶಾಪಿ ಮಳಿಗೆಗಳಲ್ಲಿ ಮಸ್ಕಟ್ ಹೋಟೆಲ್, ತಿರುವನಂತಪುರಂ – 695033, ಕೇರಳ ದಲ್ಲಿ ದೊರೆಯುತ್ತವೆ.
ಇ-ಮೇಲ್: info@cultureshoppe.com, www.cultureshoppe.com

 
 
 
Photos
Photos
information
Souvenirs
 
     
Department of Tourism, Government of Kerala,
Park View, Thiruvananthapuram, Kerala, India - 695 033
Phone: +91-471-2321132 Fax: +91-471-2322279.

Tourist Information toll free No:1-800-425-4747
Tourist Alert Service No:9846300100
Email: info@keralatourism.org, deptour@keralatourism.org

All rights reserved © Kerala Tourism 1998. Copyright Terms of Use
Designed by Stark Communications, Hari & Das Design.
Developed & Maintained by Invis Multimedia