ಕೇರಳ ವಸ್ತುತಃ ಪ್ರವಾಸ

ನಿಮ್ಮ ನೆಚ್ಚಿನ ಸ್ಥಳಗಳಿಗೆ ಮತ ನೀಡಿ
ದೇವರ ಸ್ವಂತ ನಾಡಿನಲ್ಲಿ 4-ರಾತ್ರಿ ತಂಗುವ ಅವಕಾಶ ಗೆಲ್ಲಿರಿ
ಕೂಡಲೇ ನೋಂದಾಯಿಸಿ

ವಸ್ತುತಃವಾಗಿ ಕೇರಳದ ಅನುಭವ ಪಡೆಯಿರಿ

ಕೇರಳ ಪ್ರವಾಸೋದ್ಯಮವು ಒಂದು ವಿಶಿಷ್ಟ ಉಪಕ್ರಮದಲ್ಲಿ, ರಾಜ್ಯದ ಪ್ರಮುಖ ತಾಣಗಳನ್ನು ವಸ್ತುತಃವಾಗಿ ಅನ್ವೇಷಿಸಲು ನಿಮಗೆ ಅವಕಾಶ ನೀಡುತ್ತದೆ.
ಏಳು ಅದೃಷ್ಟ ವಿಜೇತರಿಗೆ ದೇವರ ಸ್ವಂತ ನಾಡಿನ ಕೆಟಿಡಿಸಿಯ ಪ್ರೀಮಿಯಂ ಸ್ವತ್ತಿನಲ್ಲಿ 4-ರಾತ್ರಿ ತಂಗುವ ಅವಕಾಶ

ಸಮ್ಮೋಹಕ ಸೂರ್ಯಾಸ್ತ, ಮನಸ್ಸನ್ನು ಹಿತಗೊಳಿಸುವ ಹಸಿರು, ಪ್ರಶಾಂತವಾದ ಹಿನ್ನೀರು, ರೋಮಾಂಚಕ ಸಂಸ್ಕೃತಿ... ಹೌದು, ಕೇರಳ ನಿಜಕ್ಕೂ ಮಾಂತ್ರಿಕವಾಗಿದೆ ಆದರೆ ದೇವರ ಸ್ವಂತ ನಾಡು ಜಗತ್ತಿನಾದ್ಯಂತ ನೆಲೆಸಿರುವ ಪ್ರವಾಸಿಗರಿಲ್ಲದೆ ಎಂದಿಗೂ ಪೂರ್ಣಗೊಳ್ಳುವುದಿಲ್ಲ. 2020 ನಮ್ಮೆಲ್ಲರನ್ನೂ ಪರೀಕ್ಷೆಗೆ ಒಳಪಡಿಸಿದ್ದರಿಂದ ನಮಗೆ ನಿಮ್ಮ ಅನುಪಸ್ಥಿತಿ ತುಂಬಾ ಕಾಡಿದೆ. ಅದಾಗ್ಯೂ, ನಮ್ಮಿಂದ ನಿಮಗೆ ಆತಿಥ್ಯ ನೀಡುವ ಅವಕಾಶವನ್ನು ಯಾವುದರಿಂದಲು ತಡೆಯಲಾಗುವುದಿಲ್ಲ. ಕೇರಳ ಪ್ರವಾಸೋದ್ಯಮವು ಒಂದು ವಿಶಿಷ್ಟ ಪ್ರಯತ್ನದಲ್ಲಿ, ರಾಜ್ಯದ ಉನ್ನತ ಸ್ಥಳಗಳನ್ನು ವಸ್ತುತಃವಾಗಿ ಅನ್ವೇಷಿಸಲು ನಿಮಗೆ ಅವಕಾಶ ನೀಡುತ್ತದೆ. ಕಡಲತೀರಗಳಿಂದ ಪ್ರಾರಂಭಿಸಿ, ಪ್ರತಿ ತಿಂಗಳು ಕೇರಳ ಪ್ರವಾಸೋದ್ಯಮವು ವಿವಿಧ ವಿಭಾಗಗಳ ಅಡಿಯಲ್ಲಿ ರಾಜ್ಯದ ಪ್ರಮುಖ ಆಕರ್ಷಣೀಯ ಸ್ಥಳಗಳನ್ನು ಪ್ರಸ್ತುತ ಪಡಿಸುತ್ತದೆ. ಗಿರಿಧಾಮಗಳು, ಹಿನ್ನೀರು, ಹಳ್ಳಿಯ ಜೀವನದ ಅನುಭವಗಳು, ಜಲಪಾತಗಳು ಮತ್ತು ಸಂಸ್ಕೃತಿ ಇದರಲ್ಲಿ ಪ್ರಕಟವಾಗುತ್ತವೆ. ಈಗಲೇ ನೋಂದಾಯಿಸಿ ಮತ್ತು ನಿಮ್ಮ ನೆಚ್ಚಿನ ಸ್ಥಳಕ್ಕೆ/ಗಮ್ಯಸ್ಥಾನಕ್ಕೆ ಮತ ನೀಡಿ. ಮತದಾನ ಮುಗಿದ ನಂತರ ಕೇರಳ ಪ್ರವಾಸೋದ್ಯಮವು ಉನ್ನತ ಮಟ್ಟದ ಸ್ಥಳದ/ಗಮ್ಯಸ್ಥಾನದ ಪ್ರವಾಸಕ್ಕೆ ನಿಮ್ಮನ್ನು ವೀಡಿಯೊ ಮೂಲಕ ಕರೆದೊಯ್ಯುತ್ತದೆ. ಆದ್ದರಿಂದ, ಬನ್ನಿ ಸುತ್ತಾಡೋಣ.

ಕೆರಳ ವಸ್ತುತಃ ಪ್ರವಾಸ, ಮಾಸಿಕ/ ಮೆಗಾ ಲಕ್ಕಿ ಡ್ರಾ

ಏಳು ಅದೃಷ್ಟ ವಿಜೇತರಿಗೆ ದೇವರ ಸ್ವಂತ ನಾಡಿನಲ್ಲಿ 4-ರಾತ್ರಿ ತಂಗುವ ಅವಕಾಶ

ಪ್ರತಿ ತಿಂಗಳು, ಮತದಾನ ಮುಗಿದ ನಂತರ, ಕೇರಳ ವಸ್ತುತಃ ಪ್ರವಾಸದ ನೋಂದಣಿದಾರರಿಗೆ ಮಾಸಿಕ ಲಕ್ಕಿ ಡ್ರಾ ನಡೆಯಲಿದೆ. ಅಭಿಯಾನದ ಕೊನೆಯಲ್ಲಿ ಮೆಗಾ ಲಕ್ಕಿ ಡ್ರಾ ಇರುತ್ತದೆ. 2020 ರ ಡಿಸೆಂಬರ್ 28 ರಿಂದ 2021 ರ ಜೂನ್ 27 ರ ಪ್ರಚಾರದ ಅವಧಿಯಲ್ಲಿ ಕೇರಳ ವಸ್ತುತಃ ಪ್ರವಾಸದ ಅಭಿಯಾನಕ್ಕೆ ನೋಂದಾಯಿಸಿಕೊಂಡವರು ಮತ್ತು ಮತ ಚಲಾಯಿಸಿದವರು ಮಾತ್ರ ಭಾಗವಹಿಸಲು ಅರ್ಹರಾಗಿರುತ್ತಾರೆ. ಮಾಸಿಕ ಲಕ್ಕಿ ಡ್ರಾ ವಿಜೇತರಿಗೆ ಕೆಟಿಡಿಸಿ (ಕೇರಳ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ) ದ ಪ್ರೀಮಿಯಂ ಸ್ವತ್ತಿನಲ್ಲಿ ಪೂರಕ ಉಪಹಾರ ಮತ್ತು ರಾತ್ರಿ ಭೋಜನದೊಂದಿಗೆ ಉನ್ನತ ಮಟ್ಟದ ಕೋಣೆಯಲ್ಲಿ ನಾಲ್ಕು ರಾತ್ರಿ ವಾಸ್ತವ್ಯ ನೀಡಲಾಗುವುದು. ವಾಸ್ತವ್ಯವನ್ನು ಇಬ್ಬರು ಅತಿಥಿಗಳಿಗೆ ನೀಡಲಾಗುತ್ತದೆ - ವಿಜೇತ + ಒಬ್ಬ ಅತಿಥಿ (ಕುಟುಂಬ ಸದಸ್ಯ / ಸ್ನೇಹಿತ). ಮೆಗಾ ಲಕ್ಕಿ ಡ್ರಾ ವಿಜೇತರಿಗೆ ಕೆಟಿಡಿಸಿ (ಕೇರಳ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ) ದ ಪ್ರೀಮಿಯಂ ಸ್ವತ್ತಿನಲ್ಲಿ ಪೂರಕ ಉಪಹಾರ ಮತ್ತು ರಾತ್ರಿ ಭೋಜನದೊಂದಿಗೆ ಉನ್ನತ ಮಟ್ಟದ ಕೋಣೆಯಲ್ಲಿ ನಾಲ್ಕು ರಾತ್ರಿ ವಾಸ್ತವ್ಯ ನೀಡುವುದರ ಜೊತೆಗೆ ಪ್ರವಾಸಕ್ಕೆ ಬರಲು ಮತ್ತು ಹೋಗಲು ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಲಾಗುವುದು.

ನೋಂದಾಯಿಸಿ, ಮತ ಚಲಾಯಿಸಿ ಮತ್ತು ಕೇರಳದಲ್ಲಿ ನಾಲ್ಕು ರಾತ್ರಿ ತಂಗುವ ಅವಕಾಶ ಗೆಲ್ಲಿರಿ

ಕೂಡಲೇ ನೋಂದಾಯಿಸಿ