picture

ಅಡುಗೆ ಮಾಡಿ, ದೃಶ್ಯವನ್ನು ಚಿತ್ರೀಕರಿಸಿ ಮತ್ತು ಅತ್ಯಾಕರ್ಷಕ ಬಹುಮಾನಗಳನ್ನೂ ಗೆಲ್ಲಿರಿ!

ದೇವರ ಸ್ವಂತ ನಾಡು ಎಂದು ಜಾಗತಿಕವಾಗಿ ಹೆಸರುವಾಸಿಯಾಗಿರುವ ಕೇರಳವು ಅದರ ಸಾರಸಂಗ್ರಹಿ ಮತ್ತು ವೈವಿಧ್ಯಮಯ ಪಾಕಪದ್ಧತಿ ಅನುಭವಗಳಿಗೆ ಹೆಸರುವಾಸಿಯಾಗಿದೆ. ಕೇರಳ ಪ್ರವಾಸೋದ್ಯಮವು ನಡೆಸುತ್ತಿರುವ ಅಂತರರಾಷ್ಟ್ರೀಯ ಆನ್‌ಲೈನ್ ಅಡುಗೆ ಸ್ಪರ್ಧೆಯಾದ, ಕೇರಳ ಪಾಕಪದ್ಧತಿ ಸ್ಪರ್ಧೆ 2020 (ಕೆಸಿಸಿ 2020-21), ಕೇರಳದ ರುಚಿಕರವಾದ ಭಕ್ಷ್ಯಗಳನ್ನು ಸವಿಯಲು ಜಗತ್ತಿನಾದ್ಯಂತದ ಪ್ರಯಾಣಿಕರನ್ನು ಆಹ್ವಾನಿಸುವ ಗುರಿಯನ್ನು ಹೊಂದಿದೆ. ಕೇರಳದ ಕೆಲವು ವಿಶೇಷವಾದ ಮತ್ತು ಸಾಂಪ್ರದಾಯಿಕ ಭಕ್ಷ್ಯಗಳು ಚಿತ್ರಶಾಲೆಯಲ್ಲಿ/ಗ್ಯಾಲರಿಯಲ್ಲಿ ಪ್ರಕಟಿತಗೊಂಡಿವೆ. ನೀವು ಮಾಡಬೇಕಾಗಿರುವುದು ಇಷ್ಟೇ, ಈ ಯಾವುದೇ ಭಕ್ಷ್ಯಗಳನ್ನು ಮನೆಯಲ್ಲಿಯೇ ತಯಾರಿಸಿ, ಅದನ್ನು ಚಿತ್ರೀಕರಿಸಿ ನಮ್ಮೊಂದಿಗೆ ಹಂಚಿಕೊಳ್ಳುವುದು. ಅತ್ಯಾಕರ್ಷಕ ಬಹುಮಾನಗಳು ನಿಮಗಾಗಿ ಕಾಯುತ್ತಿವೆ!

10 ಕುಟುಂಬಗಳಿಗೆ ಬಹುಮಾನ

ಗೆಲ್ಲಿರಿ! 7 ರಾತ್ರಿಯ ಕೇರಳ ಪ್ರವಾಸ

ಟಾಪ್ 10 ವಿಜೇತರಿಗೆ ಅವರ ಕುಟುಂಬದೊಂದಿಗೆ ಕೇರಳಕ್ಕೆ ರೋಮಾಂಚಕ ಏಳು ರಾತ್ರಿಯ ಪ್ರವಾಸ ಆಯೋಜಿಸಲಾಗುವುದು. ಬಹುಮಾನವು ವಿಜೇತ ಸೇರಿದಂತೆ ಕುಟುಂಬದ ನಾಲ್ಕು ಸದಸ್ಯರಿಗೆ ಅನ್ವಯಿಸುತ್ತದೆ. ಪ್ರವಾಸದ ಪ್ಯಾಕೇಜ್ - ಪ್ರಯಾಣ, ವಸತಿ ಮತ್ತು ಆಹಾರವನ್ನು ಒಳಗೊಂಡಿರುತ್ತದೆ. ಭಾಗವಹಿಸಿದ ಎಲ್ಲರೂ ವೆಬ್‌ಸೈಟ್‌ನಿಂದ ಭಾಗವಹಿಸುವಿಕೆಯ ಡಿಜಿಟಲ್ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಬಹುದು.

picture

ಯಾರು ಭಾಗವಹಿಸಬಹುದು?

ಕೇರಳೇತರರು ಜಾಗತಿಕವಾಗಿ ಭಾಗವಹಿಸಬಹುದು

ನೀವು ಜಗತ್ತಿನಲ್ಲಿ ಎಲ್ಲೇ ಇದ್ದರೂ ಸ್ಪರ್ಧೆಯು ಎಲ್ಲಾ ಕೇರಳೇತರರಿಗೆ ಮುಕ್ತವಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ವಯಸ್ಸಿನ ಮಿತಿಯಿಲ್ಲ

ಭಾಗವಹಿಸುವುದು ಹೇಗೆ?

  • ಕೇರಳ ಪಾಕಪದ್ಧತಿ ಸ್ಪರ್ಧೆ 2020-21 ಗೆ ನೋಂದಾಯಿಸಿಕೊಳ್ಳಿ
  • ಪಾಕವಿಧಾನದ ಚಿತ್ರಶಾಲೆಯ/ರೆಸಿಪಿ ಗ್ಯಾಲರಿಯನ್ನು ಪರಿಶೀಲಿಸಿ ಮತ್ತು ನಿಮ್ಮ ಆಯ್ಕೆಯ ಒಂದು ಖಾದ್ಯವನ್ನು ಆಯ್ಕೆ ಮಾಡಿಕೊಳ್ಳಿ
  • ನೀವೇ ಖಾದ್ಯವನ್ನು ಸಿದ್ಧಪಡಿಸುವ / ನಿಮ್ಮ ಮನೆಯವರು ಖಾದ್ಯವನ್ನು ಸಿದ್ಧಪಡಿಸುವ ಕಿರು ದೃಶ್ಯ ಪ್ರಸ್ತುತಿಯನ್ನು ಚಿತ್ರೀಕರಿಸಿ
  • ನಿಮ್ಮ ನಮೂದನ್ನು ಸಲ್ಲಿಸಲು ಲಾಗ್ ಇನ್ ಮಾಡಿ
  • ಚಿತ್ರೀಕರಿಸಿದ ದೃಶ್ಯವನ್ನು ಅಪ್‌ಲೋಡ್ ಮಾಡಲು, ಈ ಕೆಳಗಿನ ಯಾವುದೇ ಆಯ್ಕೆಗಳನ್ನು ಬಳಸಿ: ಸ್ಪರ್ಧೆಯ ಪುಟಕ್ಕೆ ನೇರವಾಗಿ ಅಪ್‌ಲೋಡ್ ಮಾಡಿ | ವೀಡಿಯೊಗಳು / ಲಿಂಕ್‌ಗಳನ್ನು ಇಮೇಲ್ ಮಾಡಿ | ಫೈಲ್ ವರ್ಗಾವಣೆ ಆಯ್ಕೆಗಳ ಮೂಲಕ ಹಂಚಿಕೊಳ್ಳಿ | ವಾಟ್ಸಾಪ್ ಮೂಲಕ ಲಿಂಕ್‌ಗಳನ್ನು ಹಂಚಿಕೊಳ್ಳಿ
  • ವೀಡಿಯೊಗಳು ಆಡಳಿತ ವರ್ಗ/ ಅಡ್ಮಿನ್ ರವರಿಂದ ಆರಂಭಿಕ ಪರಿಶೀಲನೆಗೆ ಒಳಗಾಗುತ್ತವೆ. ಅನುಮೋದನೆಯ ನಂತರ, ಸಾರ್ವಜನಿಕ ಬೆಂಬಲವನ್ನು ಪಡೆಯಲು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಬಹುದಾದ URL ಅನ್ನು ನೀವು ಪಡೆಯುತ್ತೀರಿ

ಈಗಲೆ ನೋಂದಣಿ ಮಾಡಿ!
 

ದಯವಿಟ್ಟು ಗಮನಿಸಿ!

  • ಈ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರವೇಶ ಶುಲ್ಕವಿಲ್ಲ.
  • ನೀವು ಗರಿಷ್ಠ ಐದು ವಿಭಿನ್ನ ಭಕ್ಷ್ಯಗಳನ್ನು ತಯಾರಿಸುವ ದೃಶ್ಯವನ್ನು ಚಿತ್ರೀಕರಿಸಬಹುದು.
  • ದೃಶ್ಯ/ವೀಡಿಯೊದಲ್ಲಿನ ಸಂವಹನ ಭಾಷೆಯು ನಿಮ್ಮ ವೈಯಕ್ತಿಕ ಆಯ್ಕೆಗೆ ಬಿಡಲಾಗಿದೆ.
  • ಸ್ಪರ್ಧೆಯ ನಿಯಮಗಳು ಮತ್ತು ಷರತ್ತುಗಳನ್ನು ಪೂರೈಸುವ ನಮೂದುಗಳಿಗೆ ಮಾತ್ರ ಅನುಮೋದನೆ ನೀಡಲಾಗುತ್ತದೆ.
  • ಸ್ಪರ್ಧೆಯ ನಿಯಮಗಳು ಮತ್ತು ಷರತ್ತುಗಳನ್ನು ಉಲ್ಲಂಘಿಸುವ ನಮೂದುಗಳನ್ನು ಸಂಕ್ಷಿಪ್ತವಾಗಿ ತಿರಸ್ಕರಿಸಲಾಗುತ್ತದೆ.

ವೀಡಿಯೊ ವಿಶೇಷಣಗಳು

  • ಚಿತ್ರೀಕರಿಸಿದ ದೃಶ್ಯ/ವೀಡಿಯೊದ ಕನಿಷ್ಠ ಅವಧಿ 3 ನಿಮಿಷಗಳು ಮತ್ತು ಗರಿಷ್ಠ 5 ನಿಮಿಷಗಳು. ಒಂದು ವೀಡಿಯೊದ ಫೈಲ್ ಗಾತ್ರವು 500 ಎಂ. ಬಿ ಮೀರಬಾರದು.

ಈಗಲೆ ನೋಂದಣಿ ಮಾಡಿ!
picture
picture

ತೀರ್ಪು ಸಮಿತಿ

ಕೇರಳ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಿಂದ ನೇಮಿಸಲ್ಪಟ್ಟ ತೀರ್ಪುಗಾರರ ಸಮಿತಿ – ಪಾಕಶಾಸ್ತ್ರದ ನಿಪುಣರು - ನಮೂದುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ವಿಜೇತರನ್ನು ಆಯ್ಕೆ ಮಾಡುತ್ತಾರೆ. ನಮೂದುಗಳ ಮೌಲ್ಯಮಾಪನವನ್ನು ಭಾಗವಹಿಸುವವರು ತಮ್ಮ ವೀಡಿಯೊ ಪ್ರಸ್ತುತಿಯಲ್ಲಿ ಕೇರಳದ ಸಾಂಪ್ರದಾಯಿಕ ಪಾಕಶಾಲೆಯ ಶೈಲಿಗಳ ಅಂಶಗಳನ್ನು ಉತ್ತಮವಾಗಿ ಹೇಗೆ ತಂದಿದ್ದಾರೆ ಎಂಬ ಆಧಾರದ ಮೇಲೆ ಮಾಡಲಾಗುತ್ತದೆ. ನಮೂದುಗಳನ್ನು ಮೌಲ್ಯಮಾಪನ ಮಾಡುವಾಗ ಪ್ರತಿ ಪ್ರವೇಶದ ಸಾಮಾಜಿಕ ಮಾಧ್ಯಮ ಚಾನೆಲ್‌ಗಳಲ್ಲಿನ ಜನಪ್ರಿಯತೆ / ಪ್ರೇಕ್ಷಕರ ಪ್ರತಿಕ್ರಿಯೆ, ಹಾಗೆಯೇ ಸ್ಪರ್ಧೆಯ ಮಾಹಿತಿ ವಿನಿಮಯವನ್ನೂ ಪರಿಗಣಿಸಲಾಗುತ್ತದೆ.

ಖಂಡಿತ, ಇದು ರುಚಿ ಅಥವಾ ಸುವಾಸನೆಯ ಬಗ್ಗೆ ಅಲ್ಲ ಆದರೆ ನಿಮ್ಮ ಅಡುಗೆಮನೆಯಲ್ಲಿ ಕೇರಳ ಪದ್ಧತಿಯ ತಿನಿಸುಗಳನ್ನು ಆಚರಿಸುವ ವಿಧಾನದ ಬಗ್ಗೆ. ವಿಷಯ - ‘ನಿಮ್ಮ ಅಡುಗೆಮನೆಯಲ್ಲಿ ಕೇರಳ ಶೈಲಿಯ ಪಾಕಪದ್ಧತಿಯನ್ನು ಅಪ್ಪಿಕೊಳ್ಳಿ’ - ಸೂಚಿಸುವಂತೆ, KCC 2020-21 ಮುಖ್ಯವಾಗಿ ನಿಮ್ಮ ವೀಡಿಯೊ ಪ್ರಸ್ತುತಿಗಳಲ್ಲಿ ದೇವರ ಸ್ವಂತ ನಾಡಿನ ಸಾಂಪ್ರದಾಯಿಕ ಪಾಕಶಾಲೆಯ ಶೈಲಿಗಳ ಅಂಶಗಳನ್ನು ನೀವು ಉತ್ತಮವಾಗಿ ಹೇಗೆ ತರಬಹುದು ಎಂಬುದರ ಕುರಿತು. ನೀವು ತರಕಾರಿಗಳು ಅಥವಾ ಮಾಂಸವನ್ನು ತುಂಡು ಮಾಡುವ ವಿಧಾನ, ನೀವು ಆಯ್ಕೆಮಾಡುವ ಪಾತ್ರೆಗಳು, ನೀವು ಬಡಿಸುವ ಬಗೆ, ಕುಟುಂಬ ಸದಸ್ಯರ ಉತ್ಸಾಹ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ನೀವು ಖಾದ್ಯವನ್ನು ಆನಂದಿಸಿದ ನಂತರ ಮನೆಯಲ್ಲಿ ಮೂಡುವ ಒಗ್ಗಟ್ಟಿನ ಮತ್ತು ಸೌಹಾರ್ದತೆಯ ಪ್ರಜ್ಞೆಯ ಕುರಿತಾಗಿದೆ.

ಈಗ, ನಿಮ್ಮ ನೆಚ್ಚಿನ ಭಕ್ಷ್ಯಗಳನ್ನು ಆಯ್ಕೆ ಮಾಡಿ, ಕ್ಯಾಮೆರಾವನ್ನು ಆವರಿಸಿ, ಅಡುಗೆ ಪ್ರಾರಂಭಿಸಿ!

ಈಗಲೆ ನೋಂದಣಿ ಮಾಡಿ!
picture