ಸೊಂಪಾದ ಹಸಿರು, ಪ್ರಶಾಂತ ಹಿನ್ನೀರು ಮತ್ತು ಮಂಜಿನ ಪರ್ವತಗಳ ನೆಲೆಯಾಗಿರುವ ಕೇರಳವು ಕೇವಲ ಕಣ್ಣುಗಳಿಗೆ ರಸದೌತಣ ನೀಡುವುದು ಮಾತ್ರವಲ್ಲದೆ ಸಾಹಸಾಕಾಂಕ್ಷಿಗಳಿಗೆ ರೋಮಾಂಚಕ ತಾಣವೂ ಆಗಿದೆ. ಭವ್ಯವಾದ ಪಶ್ಚಿಮ ಘಟ್ಟಗಳ ಮೂಲಕ ಚಾರಣ ಮಾಡುವುದರಿಂದ ಹಿಡಿದು ಭೋರ್ಗರೆಯುವ ನದಿಗಳಲ್ಲಿ ಬಿಳಿ ನೀರಿನಲ್ಲಿ ರಾಫ್ಟಿಂಗ್, ರಮಣೀಯ ಕಣಿವೆಗಳಲ್ಲಿ ಪ್ಯಾರಾಗ್ಲೈಡಿಂಗ್ ಮತ್ತು ವನಸಿರಿಯಲ್ಲಿ ಅಡಗಿರುವ ಜಲಪಾತಗಳನ್ನು ಅನ್ವೇಷಿಸುವುದು, ಹೀಗೆ ಕೇರಳ ರಾಜ್ಯವು ಎಲ್ಲ ಪ್ರಕಾರದ ಪ್ರವಾಸಿಗರಿಗೆ ಕೊನೆಯಿಲ್ಲದ ರೋಮಾಂಚಕತೆಯನ್ನು ನೀಡುತ್ತದೆ. ಹಿಂದೆಂದಿಗೂ ಅನುಭವಿಸದ ರೀತಿಯಲ್ಲಿ ಪ್ರಕೃತಿಯ ಜೊತೆಗಿನ ಅನುಭವ ಪಡೆಯಿರಿ, ಅದರ ಹೊಸತನದ ಉಸಿರನ್ನು ತೆಗೆದುಕೊಳ್ಳಿ, ಉತ್ಸಾಹಕ್ಕೆ ಒಡ್ಡಿಕೊಳ್ಳಿ ಮತ್ತು ನೀವು ಮಾಡಲು ಆಯ್ಕೆ ಮಾಡಿದ ಪ್ರತಿಯೊಂದು ಸಾಹಸದೊಂದಿಗೆ ಮರೆಯಲಾಗದ ನೆನಪುಗಳನ್ನು ಸೃಷ್ಟಿಸಿಕೊಳ್ಳಿ.
ಉತ್ಸಾಹಭರಿತವಾದ ಜಲ ವಿನೋದಕ್ಕಾಗಿ ಕೇರಳದ ಜಲಮಾರ್ಗಗಳು, ಕಡಲತೀರಗಳು ಮತ್ತು ಹಿನ್ನೀರಿನಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಶಾಂತವಾದ ಪ್ಯಾಡ್ಲಿಂಗ್ನಿಂದ ಹಿಡಿದು ಮೈ ನವಿರೇಳಿಸುವ ಸವಾರಿಗಳವರೆಗೆ, ನೀರಿನ ಕುರಿತಾಗಿ ಉತ್ಸಾಹ ಹೊಂದಿರುವ ಪ್ರತಿಯೊಬ್ಬರಿಗೂ ಏನಾದರೂ ಚಟುವಟಿಕೆಗಳಿವೆ.
ಆಕಾಶದಲ್ಲಿ ನಿಮ್ಮ ಸಾಹಸ ಚಟುವಟಿಕೆಗಳ ಮೂಲಕ ರೋಮಾಂಚಕ ಅನುಭವ ಪಡೆಯಿರಿ. ಕೇರಳದ ಬೆರಗುಗೊಳಿಸುವ ಭೂದೃಶ್ಯಗಳು ಮತ್ತು ತೀರ ಪ್ರದೇಶಗಳ ಮೇಲೆ ಹಾರಾಟ ಮಾಡಿ ಮತ್ತು ಉತ್ಸಾಹದಿಂದ ರೋಮಾಂಚಕ ದೃಶ್ಯಗಳನ್ನು ಆನಂದಿಸಿ.
ಹೆದ್ದಾರಿ ಸಹಾಯ ಸಂಖ್ಯೆ: 9846 100 100 (ಹೆದ್ದಾರಿಗಳಲ್ಲಿ ಪ್ರಯಾಣಿಸುವಾಗ ಸಹಾಯಕ್ಕಾಗಿ)
ರೈಲ್ವೆ ಸಹಾಯ ಸಂಖ್ಯೆ: 9846 200 100 (ರೈಲುಗಳಲ್ಲಿ ಪ್ರಯಾಣಿಸುವಾಗ ಸಹಾಯಕ್ಕಾಗಿ)
ಮಲಯಾಳಂ ಅಧಿಕೃತ ಭಾಷೆಯಾಗಿದ್ದರೂ, ಇಂಗ್ಲಿಷ್ ಭಾಷೆಯನ್ನು ವ್ಯಾಪಕವಾಗಿ ಮಾತನಾಡಲಾಗುತ್ತದೆ ಮತ್ತು ಸುಲಭವಾಗಿ ಅರ್ಥೈಸಿಕೊಳ್ಳಲಾಗುತ್ತದೆ, ವಿಶೇಷವಾಗಿ ಪ್ರವಾಸಿ ಪ್ರದೇಶಗಳಲ್ಲಿ.
ಪೊಲೀಸ್ ನಿಯಂತ್ರಣ ಕೊಠಡಿ: 100, 112
ಅಗ್ನಿಶಾಮಕ ಕೇಂದ್ರ: 101
ಆಂಬ್ಯುಲೆನ್ಸ್: 102, 108
ಜವಾಬ್ದಾರಿಯುತ ಪ್ರವಾಸೋದ್ಯಮ ಮತ್ತು ಸುಸ್ಥಿರ ಪ್ರಯಾಣಕ್ಕೆ ಕೇರಳ ರಾಜ್ಯವು ಬಲವಾದ ಉತ್ತೇಜನವನ್ನು ನೀಡುತ್ತದೆ. ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಿ, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಮತ್ತು ಹಿನ್ನೀರಿನ ದೋಣಿ ವಿಹಾರಗಳು ಮತ್ತು ಮಾರ್ಗದರ್ಶನದಿಂದ ಕೂಡಿದ ವನ್ಯಜೀವಿ ಪ್ರವಾಸಗಳಂತಹ ಪರಿಸರ ಸ್ನೇಹಿ ಅನುಭವಗಳನ್ನು ಆಯ್ಕೆ ಮಾಡುವ ಮೂಲಕ ಪರಿಸರ ಪ್ರಜ್ಞೆಯ ಕಾರ್ಯಗಳನ್ನು ಬೆಂಬಲಿಸಿ.
ವನ್ಯಜೀವಿ ಅಭಯಾರಣ್ಯಗಳಿಗೆ ಭೇಟಿ ನೀಡುವಂತಹ ಸಂದರ್ಭಗಳಲ್ಲಿ, ನಿಮ್ಮ ಸುರಕ್ಷತೆಯನ್ನು ಮತ್ತು ವನ್ಯಜೀವಿಗಳ ರಕ್ಷಣೆಯನ್ನು ಖಾತ್ರಿಪಡಿಸಿಕೊಳ್ಳಲು ಅಧಿಕಾರಿಗಳು ಒದಗಿಸಿದ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸಿ.
ವಿಮಾನ: ಕೊಚ್ಚಿ, ತಿರುವನಂತಪುರಂ, ಕ್ಯಾಲಿಕಟ್ (ಕೋಯಿಕ್ಕೋಡ್) ಮತ್ತು ಕಣ್ಣೂರಿನಲ್ಲಿ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ
ರೈಲು ಮತ್ತು ರಸ್ತೆ: ರೈಲು ಮತ್ತು ರಸ್ತೆಗಳ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ.
ಸ್ಥಳೀಯ: ಬಸ್ಗಳು, ಟ್ಯಾಕ್ಸಿಗಳು, ಆಟೋಗಳು ಮತ್ತು ಬಾಡಿಗೆಗಳ ಮೂಲಕ ಸುಲಭ ಪ್ರಯಾಣ ಮಾಡಬಹುದು.
ವೀಸಾ: ಭಾರತೀಯ ಇ-ವೀಸಾ ಅಗತ್ಯವಿದೆ.
ಪಾಸ್ಪೋರ್ಟ್: ಆಗಮನದ ನಂತರ 6 ತಿಂಗಳು ಮಾನ್ಯವಾಗಿರುತ್ತದೆ.
ಸೆಪ್ಟೆಂಬರ್-ಮಾರ್ಚ್: ಹೊರಾಂಗಣ ಸಾಹಸಗಳಿಗೆ ಸೂಕ್ತ ಹವಾಮಾನ.
ಜೂನ್-ಆಗಸ್ಟ್: ಸೊಂಪಾದ ಹಸಿರು ಮತ್ತು ಭೋರ್ಗರೆಯುವ ನೀರಿನಿಂದ ಕೂಡಿದ ಮಳೆಗಾಲ.