ಸೌಮ್ಯವಾದ ಅಲೆಗಳಏರಿಳಿತಗಳು ಕೇರಳದ ಕರಾವಳಿಯಲ್ಲಿ ಹೊಸತೇನಲ್ಲ.ಆದರೆ ಅದರ ಮೂಲಕ ಚಲಿಸುವ ಸರ್ಫರ್ ನಿಮ್ಮನ್ನು ಚಕಿತಗೊಳಿಸುತ್ತಾನೆ.ಇದು ಇತ್ತೀಚಿನದಾದರೂ, ನಿಧಾನವಾಗಿ ಪ್ರಸಿದ್ಧಿ ಪಡೆಯುತ್ತಿದೆ ಮತ್ತು ಕರಾವಳಿಯ ಭಾಗವಾಗುತ್ತಿದೆ.


ಜನಜಂಗುಣಿಯಿಂದ ಕೂಡಿದ ಸರ್ಫ್ ತಾಣಗಳಿಗಿಂತ ಭಿನ್ನವಾಗಿ, ಕೇರಳದ ಅನೇಕ ಬೀಚ್‌ಗಳು ಹೆಚ್ಚು ಪ್ರಶಾಂತವಾದ ವಾತಾವರಣವನ್ನು ನೀಡುತ್ತವೆ.ಇನ್ನೂ ಆರಂಭಿಕ ಹಂತದಲ್ಲಿರುವವರು ತಮ್ಮದೇ ವೇಗದಲ್ಲಿ ಕಲಿತುಕೊಳ್ಳಬಹುದು, ಆದರೆ ಅನುಭವಿ ಸರ್ಫರ್‌ಗಳು ದೀರ್ಘವಾದ, ಅಡತಡೆಗಳಿಲ್ಲದ ಸವಾರಿಗಳನ್ನು ಆನಂದಿಸಬಹುದು.ತೀರದ ಪ್ರದೇಶಗಳು ವೈವಿಧ್ಯಮಯವಾಗಿವೆ ಮತ್ತುಬಂಡೆಯ ಬದಿಯ ಕಡಲತೀರಗಳು ಮತ್ತು ಶಾಂತವಾದ ನದಿ ಮುಖಗಳೊಂದಿಗೆ ಮರಳಿನ ತಳಗಳು ವಿಶೇಷವಾಗಿ ಮಳೆಗಾಲದ ನಂತರದ ತಿಂಗಳುಗಳಲ್ಲಿನಯವಾದ, ಹೆಚ್ಚು ನಿಭಾಯಿಸಬಹುದಾದ ಅಲೆಗಳನ್ನು ಸೃಷ್ಟಿಸುತ್ತವೆ.


ಅರ್ಹ ಇನ್‌ಸ್ಟ್ರಕ್ಟರ್‌ಗಳು, ಫೋಮ್ ಬೋರ್ಡ್‌ಗಳು ಮತ್ತು ರಚನಾತ್ಮಕ ಪಾಠಗಳೊಂದಿಗೆ, ಮೊದಲ ಬಾರಿ ಪ್ರಯತ್ನಿಸುವವರು ಸಮತೋಲನವನ್ನು ತ್ವರಿತವಾಗಿ ಕಂಡುಕೊಳ್ಳಬಹುದು ಮತ್ತು ತಮ್ಮ ಮೊದಲ ಸವಾರಿಯ ಉತ್ಸಾಹವನ್ನು ಅನುಭವಿಸಬಹುದು.ಜೊತೆಗೆ ಈ ಕುರಿತಂತೆ ತರಬೇತಿಯನ್ನು ನೀಡಲು ರಾಜ್ಯದ ವಿವಿಧ ಭಾಗಗಳಲ್ಲಿ ಶಾಲೆಗಳನ್ನು ಕೂಡ ಸ್ಥಾಪಿಸಲಾಗುತ್ತಿದೆ.


ಬಹುಪಾಲು ಸರ್ಫಿಂಗ್ ಕುರಿತಾದ ಉದ್ಯಮಗಳುವರ್ಕಲ, ಕೋವಳಂ ಮತ್ತು ಉತ್ತರ ಕೇರಳದ ಕೆಲವು ಕಡಲತೀರಗಳಂತಹ ಸ್ಥಳಗಳಿಗೆ ಸೀಮಿತವಾಗಿವೆ.ಈ ಸ್ಥಳಗಳಲ್ಲಿ ಸರ್ಫರ್‌ಗಳಆರಾಮದಾಯಕತೆ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸಲಾಗಿದೆ, ಏಕೆಂದರೆ ಈ ಪ್ರದೇಶಗಳು ಸ್ಥಿರವಾದ ಅಲೆಗಳು, ಸುಲಭ ಪ್ರವೇಶ ಸ್ಥಳಗಳನ್ನು ಮತ್ತು ಉತ್ತಮ ಸಂಖ್ಯೆಯ ಸರ್ಫ್ ಶಾಲೆಗಳು ಮತ್ತು ಕೆಫೆಗಳನ್ನು ಹೊಂದಿವೆ, ಇಂತಹ ಸೌಕರ್ಯಗಳುಆರಾಮದಾಯಕವಾದ ಸರ್ಫ್-ಸೌಲಭ್ಯದ ಪಟ್ಟಣದ ಅನುಭವನ್ನುಉಂಟುಮಾಡುತ್ತವೆ.ಬೆಳಗಿನ ಮತ್ತು ಮಧ್ಯಾಹ್ನದ ಸಮಯವನ್ನು ಹೆಚ್ಚಾಗಿ ಸರ್ಫಿಂಗ್ ತರಬೇತಿಗಾಗಿ ಆಯ್ಕೆ ಮಾಡಲಾಗುತ್ತದೆ ಏಕೆಂದರೆ ಈ ಸಂದರ್ಭದಲ್ಲಿ ಗಾಳಿ ಸಾಮಾನ್ಯವಾಗಿ ಶಾಂತವಾಗಿರುತ್ತದೆ ಮತ್ತು ಪರಿಸ್ಥಿತಿಗಳು ಅನುಕೂಲಕರವಾಗಿರುತ್ತವೆ. ನೀವು ಅದನ್ನು ಒಮ್ಮೆ ಮಾಡುತ್ತಿರಲಿ ಅಥವಾ ಸರ್ಫ್ ಕ್ಯಾಂಪ್‌ಗೆ ಸೇರಿಕೊಳ್ಳುತ್ತಿರಲಿ, ಸುರಕ್ಷತೆ, ಕ್ರಮೇಣ ತರಬೇತಿ ಪಡೆಯುವಿಕೆ ಮತ್ತು ಸಮುದ್ರದ ಮೇಲಿರುವ ಪ್ರೀತಿ ಮಾತ್ರ ಮನಸ್ಸಿನಲ್ಲಿರುತ್ತದೆ.


ಕೇರಳದಲ್ಲಿ ಸರ್ಫಿಂಗ್‌ನ ಮುಖ್ಯ ಸೀಸನ್ ಅಕ್ಟೋಬರ್‌‌‌ನಿಂದ ಏಪ್ರಿಲ್ ತಿಂಗಳವರೆಗೆ, ಅಂದರೆ ನೈಋತ್ಯ ಮಾನ್ಸೂನ್ ಅವಧಿಯ ನಂತರ ಆಗಿದೆ.ಈ ಸಮಯದಲ್ಲಿ ಸಾಮಾನ್ಯವಾಗಿ ಸಮುದ್ರಶಾಂತವಾಗಿರುತ್ತದೆ ಮತ್ತು ಸರ್ಫಿಂಗ್‌ಗೆ ಸೂಕ್ತವಾಗಿರುತ್ತದೆ ಜೊತೆಗೆಅಲೆಗಳು ತುಂಬಾ ಹೆಚ್ಚಿರುವುದಿಲ್ಲ ಮತ್ತು ಗೋಚರತೆ ಉತ್ತಮವಾಗಿರುತ್ತದೆ.ಮಳೆಗಾಲದ ತಿಂಗಳುಗಳು ಸರ್ಫಿಂಗ್ ಪಾಠಗಳಿಗೆ ಒಳ್ಳೆಯದಲ್ಲ ಏಕೆಂದರೆ ಆ ಸಮಯದಲ್ಲಿ ಸಮುದ್ರಗಳು ಪ್ರಶಾಂತವಾಗಿರುವುದಿಲ್ಲ, ಬಲವಾದ ಪ್ರವಾಹಗಳಿರುತ್ತವೆ ಮತ್ತು ಹವಾಮಾನ ಅಸ್ಥಿರವಾಗಿರುತ್ತದೆ.ಹೆಸರು ಮಾಡಿರುವ ಸರ್ಫ್ ಶಾಲೆಗಳು ಪ್ರತಿ ಸೆಷನ್‌ಗೂ ಮೊದಲು ಪ್ರಮಾಣೀಕೃತ ಇನ್‌ಸ್ಟ್ರಕ್ಟರ್‌ಗಳು, ಸುರಕ್ಷತೆ ಕುರಿತಾದ ವಿವರಣೆಗಳು ಮತ್ತು ಸರಿಯಾದ ಸಲಕರಣೆಗಳ ತಪಾಸಣೆಯೊಂದಿಗೆ ಕಾರ್ಯನಿರ್ವಹಿಸುತ್ತವೆ, ಇದರಿಂದಾಗಿ ಈಜು ಬಾರದೇ ಇರುವವರೂ ಸಹ ಆಳವಿಲ್ಲದ, ಮೇಲ್ವಿಚಾರಣೆಯ ಪ್ರದೇಶಗಳಲ್ಲಿ ಅನುಭವವನ್ನು ಪಡೆಯಬಹುದು.


ಹೆಚ್ಚಿನ ಆಪರೇಟರ್‌ಗಳು ಆರಂಭಿಗರ ಹಂತದ 'ಸರ್ಫ್ ಮಾಡಲು ಕಲಿಯಿರಿ' ಸೆಷನ್‌ಗಳನ್ನು, ಬಹು-ದಿನದ ಕೋರ್ಸ್‌ಗಳನ್ನು ಮತ್ತು ಮಧ್ಯಂತರ ಸವಾರರಿಗೆ ಮಾರ್ಗದರ್ಶನದಿಂದ ಕೂಡಿದ ಸೆಷನ್‌ಗಳನ್ನು ಒದಗಿಸುತ್ತಾರೆ.ವಾರಾಂತ್ಯಗಳು, ರಜಾದಿನಗಳು ಮತ್ತು ಪೀಕ್ ಸೀಸನ್ ಸಮಯಗಳಲ್ಲಿ, ಮುಂಚಿತವಾಗಿ ಸ್ಥಳವನ್ನು ರಿಸರ್ವ್ ಮಾಡುವುದು ಉತ್ತಮ.ಅಲ್ಲದೆ, ದೀರ್ಘ ಸೆಷನ್‌ಗಳು ಅಥವಾ ಸರ್ಫ್ ಕ್ಯಾಂಪ್‌ಗಳ ಸಂದರ್ಭದಲ್ಲಿ, ಮೂಲಭೂತ ಫಿಟ್‌ನೆಸ್ ಮತ್ತು ವೈದ್ಯಕೀಯ ಪ್ರಮಾಣಪತ್ರವನ್ನು ತೋರಿಸುವಂತೆ ನಿಮ್ಮನ್ನು ಕೇಳಬಹುದು.ಸಮುದ್ರವನ್ನು ಸುರಕ್ಷಿತವಾಗಿದೆ ಎಂಬುದಾಗಿ ಇನ್‌ಸ್ಟ್ರಕ್ಟರ್‌ಗಳು ಪರಿಗಣಿಸಿದಾಗ ಮಾತ್ರ ಸರ್ಫಿಂಗ್ ನಡೆಯುತ್ತದೆಮತ್ತು ಇ ದರ ಸಮಯವು ಉಬ್ಬರವಿಳಿತ ಮತ್ತು ಗಾಳಿಯನ್ನು ಅವಲಂಬಿಸಿ ಬದಲಾಗಬಹುದು.


ಸಲಹೆಗಳು

ಸುರಕ್ಷತೆ

ಮೊದಲನೆಯದಾಗಿ, ನಿಮ್ಮ ಇನ್‌ಸ್ಟ್ರಕ್ಟರ್‌ಗಳುಫ್ಲ್ಯಾಗ್ ವ್ಯವಸ್ಥೆಗಳು, ರಿಪ್ ಕರೆಂಟ್‌ಗಳು ಮತ್ತು ಬೀಳುವ ಸುರಕ್ಷಿತ ಮಾರ್ಗಗಳ ಬಗ್ಗೆ ವಿವರಣೆಯನ್ನು ನೀಡುತ್ತಿರುವಾಗ ಅವರ ಮಾತನ್ನು ಎಚ್ಚರಿಕೆಯಿಂದಆಲಿಸುವುದು ಮತ್ತು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.

ಅನುಮೋದಿತ ಆಪರೇಟರ್‌ಗಳನ್ನು ಬಳಸಿ

ವೃತ್ತಿಪರವಾಗಿ ತರಬೇತಿ ಪಡೆದ ಇನ್‌ಸ್ಟ್ರಕ್ಟರ್‌ಗಳಿಂದ ತರಬೇತಿ ದೊರೆಯುತ್ತದೆಯೇ ಮತ್ತು ಉಪಕರಣಗಳು ಉತ್ತಮ ಗುಣಮಟ್ಟದ್ದಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು, ಕೇರಳ ಪ್ರವಾಸೋದ್ಯಮದಿಂದ ಅನುಮೋದಿಸಲ್ಪಟ್ಟ ಅಥವಾ ಮಾನ್ಯತೆ ಪಡೆದ ಸರ್ಫ್ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಿ.

ನಿಮ್ಮ ಮಟ್ಟಕ್ಕೆ ತಕ್ಕುದನ್ನು ಆಯ್ಕೆಮಾಡಿ

ನೀವು ನೀರಿನಲ್ಲಿ ಸಾಗುವ ಕುರಿತು ಎಷ್ಟು ವಿಶ್ವಾಸ ಹೊಂದಿದ್ದೀರಿ ಮತ್ತು ನಿಮ್ಮ ಹಿಂದಿನ ಸರ್ಫ್ ಅನುಭವ ಏನು ಎಂಬುದರ ಆಧಾರದಲ್ಲಿ ನೀವು ಆರಂಭಿಕರ ತರಬೇತಿ ಕ್ಲಾಸ್‌ಗಳು ಅಥವಾ ಮುಂದಿನ ಸೆಷನ್‌ಗಳಿಗೆ ಹಾಜರಾಗಲು ಆಯ್ಕೆ ಮಾಡಬಹುದು.

ಮುಂಚಿತವಾಗಿ ಯೋಜನೆ ಹಾಕಿಕೊಳ್ಳಿ

ವಾರಾಂತ್ಯಗಳಲ್ಲಿ ಮತ್ತು ಪೀಕ್ ಸೀಸನ್‌ನಲ್ಲಿ ಸ್ಥಳವನ್ನು ಹುಡುಕುವುದು ತುಂಬಾ ಕಷ್ಟವಾಗುತ್ತದೆ, ಇದೇ ಕಾರಣದಿಂದ, ನೀವು ನಿಮ್ಮ ಸ್ಥಳವನ್ನು ಮುಂಚಿತವಾಗಿ ಬುಕ್ ಮಾಡಬೇಕು ಮತ್ತು ಒಂದು ದಿನ ಮೊದಲು ನಿಮ್ಮ ಸಮಯವನ್ನು ಖಚಿತಪಡಿಸಿಕೊಳ್ಳಬೇಕು.