ಕೇರಳದಲ್ಲಿ, ಕಯಾಕಿಂಗ್ ಮತ್ತು ಕ್ಯಾನೋಯಿಂಗ್‌ನ ಆನಂದವು ಕ್ರಮಿಸುವ ದೂರದಲ್ಲಿಲ್ಲ, ಬದಲಾಗಿ ನೀವು ನೀರಿನ ಮೂಲಕ ಚಲಿಸುವ ರೀತಿಯಲ್ಲಿ ಇರುತ್ತದೆ. ಅಂತಹ ಪ್ರಯಾಣದಲ್ಲಿ, ಸಮಯದ ವೇಗ ನಿಧಾನವಾಗುತ್ತದೆ.ಕಾಲುವೆಗಳು, ನದಿಗಳು, ಮ್ಯಾಂಗ್ರೋವ್‌ಗಳು ಮತ್ತು ಹಿನ್ನೀರುಗಳು ನಿಮ್ಮ ಸುತ್ತಲೂ ಪ್ರಶಾಂತ, ಅಡೆತಡೆಯಿಲ್ಲದ ಪರಿಸರವು ಅನುಕ್ರಮವಾಗಿ ತೆರೆದುಕೊಳ್ಳುತ್ತವೆ.


ಒಂದು ಸಣ್ಣ ದೋಣಿಯಲ್ಲಿ, ನೀವು ದೈನಂದಿನ ಜೀವನವು ತೆರೆದುಕೊಳ್ಳುವ ದಡಗಳಲ್ಲಿ ಸಾಗುತ್ತೀರಿ. ಹಳ್ಳಿಯ ಜೀವನದ ದೃಶ್ಯಗಳು, ವೈವಿಧ್ಯಮಯ ಪಕ್ಷಿಗಳು ಮತ್ತು ಮೀನುಗಾರಿಕೆ ಚಟುವಟಿಕೆಗಳು ಸ್ವಾಭಾವಿಕವಾಗಿ ತಮ್ಮನ್ನು ತಾವು ಬಹಿರಂಗಪಡಿಸುತ್ತವೆ, ಪ್ರಯಾಣವನ್ನು ಕೇವಲ ಪ್ರವಾಸಕ್ಕಿಂತ ಹೆಚ್ಚಿನದಾಗಿ ಪರಿವರ್ತಿಸುತ್ತವೆ ಮತ್ತು ಈ ಮೂಲಕ ಇದು ನಿಮ್ಮ ಸುತ್ತಲಿನ ಪ್ರಪಂಚವನ್ನು ಗಮನಿಸುವ ಮತ್ತು ಅರ್ಥಮಾಡಿಕೊಳ್ಳುವ ಅನುಭವವಾಗುತ್ತದೆ.


ದಕ್ಷಿಣದ ಕೋವಳಂ ಮತ್ತು ವರ್ಕಲದಿಂದ ಆರಂಭಗೊಂಡು ಕೊಲ್ಲಂನ ಮ್ಯಾಂಗ್ರೋವ್ ಪ್ರದೇಶಗಳು, ಕೊಚ್ಚಿ ಮತ್ತು ಚೆರಾಯಿ ಬಳಿಯ ಹಿನ್ನೀರು ಮತ್ತು ಕೋಯಿಕ್ಕೋಡ್, ವಯನಾಡ್ ಮತ್ತು ಕಾಸರಗೋಡು ನದಿಗಳವರೆಗೆ, ಸರ್ಟಿಫೈಯ್ಡ್ ಆಪರೇಟರ್‌ಗಳು ಮಾರ್ಗದರ್ಶನದಿಂದ ಕೂಡಿದ ಕಯಾಕ್ ಮತ್ತು ಕ್ಯಾನೋ (ನಿರ್ದಿಷ್ಟ ರೀತಿಯ ಸಣ್ಣ ದೋಣಿಗಳು)ಪ್ರವಾಸಗಳನ್ನು ನಡೆಸುವ ಹಲವಾರು ಸ್ಥಳಗಳಿವೆ. ಈ ಆಪರೇಟರ್‌ಗಳು ಅನೇಕರು ಸೂರ್ಯೋದಯ ಅಥವಾ ಸೂರ್ಯಾಸ್ತದ ವಿಹಾರಗಳನ್ನು ಜೊತೆಗೆಪಕ್ಷಿ ವೀಕ್ಷಣೆ ಮತ್ತು ಸಣ್ಣ ಹಳ್ಳಿ ನಡಿಗೆಗಳ ಕಾರ್ಯಕ್ರಮಗಳನ್ನು ಸಂಯೋಜಿಸುತ್ತಾರೆ.


ಸಾಮಾನ್ಯವಾಗಿ, ಅಕ್ಟೋಬರ್‌ನಿಂದ ಮಾರ್ಚ್ ತಿಂಗಳ ತನಕದ ಅವಧಿಯು ಉತ್ತಮ ಸಮಯ, ಏಕೆಂದರೆ ತಾಪಮಾನವು ತುಂಬಾ ಬಿಸಿಯಾಗಿರುವುದಿಲ್ಲ ಮತ್ತು ನೀರು ಶಾಂತವಾಗಿರುತ್ತದೆ, ಇದು ವಿಶೇಷವಾಗಿ ಆರಂಭಿಕರಿಗಾಗಿ ಸೂಕ್ತವಾಗಿದೆ.


ಉಳಿದ ತಿಂಗಳುಗಳಲ್ಲಿ ಕೆಲವು ಮಾರ್ಗಗಳಲ್ಲಿ ಸೇವೆಗಳು ಕಾರ್ಯನಿರ್ವಹಿಸಬಹುದು, ಆದರೂ ಭಾರೀ ಮಳೆ ಅಥವಾ ಬಲವಾದ ಗಾಳಿಯಿಂದ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರಬಹುದು. ಹೆಚ್ಚಿನ ಪ್ರವಾಸಗಳು ಚಿಕ್ಕದಾಗಿರುತ್ತವೆ ಮತ್ತು ತರಬೇತಿ ಪಡೆದ ಗುಂಪುಗಳಿಂದ ನಡೆಸಲ್ಪಡುತ್ತವೆ ಮತ್ತುಈ ಗುಂಪುಗಳು ಲೈಫ್ ಜಾಕೆಟ್‌ಗಳು ಮತ್ತು ಅಗತ್ಯ ಮಾಹಿತಿಯನ್ನು ಒದಗಿಸುತ್ತವೆ ಮತ್ತು ಅವುಗಳ ಮಾರ್ಗಗಳನ್ನು ಮೊದಲೇ ಯೋಜಿಸಲಾಗಿರುತ್ತದೆ.


ಸಲಹೆಗಳು

ನಿಮ್ಮ ಮಟ್ಟಕ್ಕೆ ತಕ್ಕುದನ್ನು ಆಯ್ಕೆಮಾಡಿ

ನೀವು ಸಂಪೂರ್ಣವಾಗಿ ಆರಂಭಿಕರಾಗಿದ್ದರೆ, ಶಾಂತವಾದ, ಆಳವಿಲ್ಲದ ನೀರಿನಲ್ಲಿ ಅಭ್ಯಾಸ ಮಾಡುವುದು ಉತ್ತಮ; ನೀವು ಅಗತ್ಯ ಕೌಶಲ್ಯಗಳನ್ನು ಪಡೆದ ನಂತರವೇ ದೀರ್ಘ ಪ್ರಯಾಣಗಳನ್ನು ಕೈಗೊಳ್ಳಬೇಕು ಅಥವಾ ನದಿಗಳು ಅಥವಾ ಸಮುದ್ರದಲ್ಲಿ ಕಯಾಕಿಂಗ್‌ಗೆ ಹೋಗಬೇಕು.

ಮುಂಚಿತವಾಗಿ ಯೋಜನೆ ಹಾಕಿಕೊಳ್ಳಿ

ನೀವು ವರ್ಕಲ, ಕೋವಳಂ ಮತ್ತು ಕೊಲ್ಲಂನಂತಹ ಜನಪ್ರಿಯ ಸ್ಥಳಗಳಲ್ಲಿ ಕಯಾಕಿಂಗ್ ಅಥವಾ ಕ್ಯಾನೋಯಿಂಗ್ ಮಾಡಲು ಯೋಜಿಸುತ್ತಿದ್ದರೆ, ಬೆಳಿಗ್ಗೆ ಮತ್ತು ಸಂಜೆ ಸೆಷನ್‌ಗಳು ಬೇಗನೆ ಭರ್ತಿಯಾಗುತ್ತವೆ ಎಂಬುದನ್ನು ನೆನಪಿನಲ್ಲಿಡಿ. ಮುಂಚಿತವಾಗಿ ಬುಕ್ ಮಾಡುವುದು ಮತ್ತು ನಿಮ್ಮ ಸಮಯವನ್ನು ಖಚಿತಪಡಿಸಲು ಒಂದು ದಿನ ಮುಂಚಿತವಾಗಿ ಆರಂಭಿಕ ಸ್ಥಳಕ್ಕೆ ಭೇಟಿ ನೀಡುವುದು ಉತ್ತಮ.

ಸುರಕ್ಷತೆಗೆ ಮೊದಲ ಆದ್ಯತೆ

ಚಟುವಟಿಕೆಯ ನಂತರವೂ ನಿಮ್ಮ ಲೈಫ್ ಜಾಕೆಟ್ ಅನ್ನು ಇರಿಸಿ, ಮಾರ್ಗದರ್ಶಿಯ ಸೂಚನೆಗಳನ್ನು ಅನುಸರಿಸಿ, ಮತ್ತು ನೀವು ಕಯಾಕ್ ಅಥವಾ ಕ್ಯಾನೋ ದೋಣಿಯಲ್ಲಿದ್ದರೆ, ಎದ್ದು ನಿಲ್ಲುವುದನ್ನು ಅಥವಾ ಹಠಾತ್ ಚಲನೆಯನ್ನು ಮಾಡುವುದನ್ನು ತಪ್ಪಿಸಿ.

ಹಗುರವಾಗಿ ಪ್ಯಾಕ್ ಮಾಡಿಕೊಳ್ಳಿ

ನೀರು, ಲಘು ತಿಂಡಿ, ಟೋಪಿ, ಸನ್‌ಸ್ಕ್ರೀನ್ ಮತ್ತು ಬಹುಶಃ ವಾಟರ್‌ಪ್ರೂಫ್ ಪೌಚ್‌ನಲ್ಲಿ ಫೋನ್‌ನಂತಹ ಸರಳ ವಸ್ತುಗಳನ್ನು ಮಾತ್ರ ಸಣ್ಣ ಒಣ ಚೀಲದಲ್ಲಿ ಪ್ಯಾಕ್ ಮಾಡಿ.