ಕೇರಳದಲ್ಲಿ ಪ್ಯಾರಾಸೈಲಿಂಗ್ ಮಾಡುವುದು ಒಂದು ಕನಸಿನ ಪ್ರವಾಸವಾಗಿದ್ದು, ಇದು ಸಮುದ್ರ, ಬಂಡೆಯ ಕಡಿದಾದ ಭಾಗಗಳು ಮತ್ತು ವಿಸ್ತಾರವಾದ ಮರಳಿನ ಕಡಲತೀರಗಳನ್ನು ಸಂಯೋಜಿಸುವ ಒಂದು ಅದ್ಭುತ ಸಾಹಸ ಕ್ರೀಡೆಯಾಗಿದೆ.ಕೇರಳವು ವಿಂಚ್ ಬೋಟ್‌ಗಳು ಮತ್ತು ಸರ್ಟಿಫೈಯ್ಡ್ ಸಾಧನಗಳನ್ನು ಬಳಸಿಕೊಂಡು ಕೋವಳಂನ ಹವಾ (ಹವ್ವ)ಬೀಚ್‌ನಲ್ಲಿ ತನ್ನ ಮೊದಲ ಅಧಿಕೃತ ಪ್ಯಾರಾಸೈಲಿಂಗ್ ಯೋಜನೆಯನ್ನು ಪ್ರಾರಂಭಿಸುವ ಮೂಲಕ ಪ್ರವಾಸಿಗರಿಗೆ ಅರೇಬಿಯನ್ ಸಮುದ್ರದ ಆಕರ್ಷಕ ನೋಟವನ್ನು ನೀಡುವಲ್ಲಿ ಮುಂಚೂಣಿಯಲ್ಲಿದೆ
ಇದೀಗ, ಕೇರಳ ಪ್ರವಾಸೋದ್ಯಮವು ಮಾನ್ಯತೆ ಪಡೆದ ಅಡ್ವೆಂಚರ್ ಆಪರೇಟರ್‌ಗಳ ಮೂಲಕ ಪ್ಯಾರಾಸೈಲಿಂಗ್ ಮತ್ತು ಸ್ಕೂಬಾ ಡೈವಿಂಗ್ ಅನ್ನು ಮಾಡಬಹುದಾದ ಪ್ರಮುಖ ಸ್ಥಳಗಳಾಗಿ ಕೋವಳಂ, ವರ್ಕಲ ಮತ್ತು ಚೆರಾಯಿಯಂತಹ ಕಡಲತೀರಗಳನ್ನು ಉತ್ತೇಜಿಸುತ್ತದೆ.
ಹೆಚ್ಚಿನದಾಗಿ, ಕೇರಳದ ಉತ್ತರದಲ್ಲಿರುವ ಕಡಲತೀರದ ಪಟ್ಟಣಗಳಾದ ಕಣ್ಣೂರಿನ ಮುಜಪ್ಪಿಲಂಗಾಡ್ (ಮುಯಪ್ಪಿಲಂಗಾಡ್) ಮತ್ತು ಪಯ್ಯಾಮ್ಬಲಂ (ಪಯ್ಯಾಂಬಲಂ)ಸ್ಥಳಗಳಿಗೂ ಸಹಸುಸ್ಥಾಪಿತ ಪ್ಯಾರಾಸೈಲಿಂಗ್ ಕೇಂದ್ರಗಳೆಂದು ಮಾನ್ಯತೆ ನೀಡಲಾಗಿದ್ದು, ಪ್ಯಾರಾಗ್ಲೈಡಿಂಗ್ ಮತ್ತು ಮೈಕ್ರೋಲೈಟ್ ವಿಮಾನಗಳು ಸೇರಿದಂತೆ ಇತರ ವೈಮಾನಿಕ ಚಟುವಟಿಕೆಗಳಿಗೆ ಸಹ ಗುರುತಿಸಲಾಗಿದೆ.
ಬೀಚ್ ಸ್ಥಳವನ್ನು ಅವಲಂಬಿಸಿ, ಪ್ಯಾರಾಸೈಲಿಂಗ್ ವಿಮಾನದ ಹಾರಾಟ ಕೆಲವೇ ನಿಮಿಷಗಳ ಕಾಲ ಇರುತ್ತದೆ, ಆದರೆ ಬ್ರೀಫಿಂಗ್ ಮತ್ತು ದೋಣಿ ಸವಾರಿ ಸೇರಿದಂತೆ ಚಟುವಟಿಕೆಯ ಒಟ್ಟು ಸಮಯ ಸುಮಾರು 20-30 ನಿಮಿಷಗಳಾಗಿರುತ್ತದೆ.ಕೇರಳದಲ್ಲಿ ಪ್ಯಾರಾಸೈಲಿಂಗ್ ಮಾಡಲು ಉತ್ತಮ ಸಮಯವು ಅಕ್ಟೋಬರ್‌ನಿಂದ ಮಾರ್ಚ್ ತಿಂಗಳ ತನಕ ಆಗಿರುತ್ತದೆ ಆದರೆ ನೀವು ಮಳೆಗಾಲದಲ್ಲಿ ಅಥವಾ ಬಲವಾದ ಗಾಳಿಯಿರುವದಿನಗಳಂದು ಬಂದರೆ, ವಿಶ್ರಾಂತಿ ಪಡೆಯುವಂತೆ ಅಥವಾ ನಿಮ್ಮ ಚಟುವಟಿಕೆಯನ್ನು ಮರುನಿಗದಿಪಡಿಸುವಂತೆ ನಾವು ನಿಮಗೆ ಸಲಹೆ ನೀಡುತ್ತೇವೆ ಏಕೆಂದರೆ ಸಮುದ್ರ ಪ್ರಕ್ಷುಬ್ಧವಾಗಿರುವಾಗ ಸಾಹಸ ಕ್ರೀಡೆಗಳನ್ನು ಮಾಡುವುದುಉತ್ತಮವಲ್ಲ.
ಪ್ಯಾರಾಸೈಲಿಂಗ್‌ನಲ್ಲಿ ನೀವು ಅನನುಭವಿಗಳಾಗಿದ್ದರೆ, ನೀವು ಟಾಂಡೆಮ್ಪ್ಯಾರಾಸೈಲಿಂಗ್ ಆಯ್ದುಕೊಳ್ಳುವುದು ನಿಮಗೆ ಉತ್ತಮವಾಗಿರುತ್ತದೆ; ಹೆಚ್ಚಿನದಾಗಿ, ನಿಮಗೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ, ಮುಂಚಿತವಾಗಿ ಆಪರೇಟರ್‌ಗೆನೀವು ತಿಳಿಸಬೇಕು.
ವಿಮಾನ ಹಾರಾಟಗಳು ಸಮುದ್ರ ಮತ್ತು ಗಾಳಿಯ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತವೆ.ಅಂತಿಮ ಕ್ಷಣದಲ್ಲಿ ವಿಮಾನಗಳು ರದ್ದುಗೊಳ್ಳಬಹುದು ಅಥವಾ ವಿಳಂಬವಾಗಬಹುದು ಎಂಬ ಅಂಶವನ್ನು ಯಾವಾಗಲೂ ನೀವು ಗಮನದಲ್ಲಿಟ್ಟುಕೊಳ್ಳಬೇಕು.
ನೀವು ಹಾರ್ನೆಸ್, ಟೇಕ್-ಆಫ್ ಮತ್ತು ಲ್ಯಾಂಡಿಂಗ್‌ನ ಸೂಚನೆಗಳನ್ನು ನಿಕಟವಾಗಿ ಅನುಸರಿಸಬೇಕು ಏಕೆಂದರೆ ನಿಮ್ಮ ಸುರಕ್ಷತೆ ಮತ್ತು ಆರಾಮಕ್ಕಾಗಿ ಈ ಹಂತಗಳನ್ನು ಸಿದ್ಧಪಡಿಸಲಾಗಿರುತ್ತದೆ.
ಬೇಗನೆ ಒಣಗುವಆರಾಮದಾಯಕ ಬಟ್ಟೆಗಳನ್ನು ಹಾಕಿಕೊಳ್ಳುವಂತೆ, ಉತ್ತಮ ಬೂಟುಗಳನ್ನು ಧರಿಸುವಂತೆ ಮತ್ತು ಸಡಿಲವಾದ ಭಾಗಗಳನ್ನು ಧರಿಸದೇ ಇರುವಂತೆ ಸಲಹೆ ನೀಡಲಾಗಿದೆ.ಆ ಸ್ಥಳದಲ್ಲಿ ನಿಮಗೆ ಲೈಫ್ ಜಾಕೆಟ್ ಮತ್ತು ಹಾರ್ನೆಸ್ ನೀಡಲಾಗುವುದು.
ಕೇರಳ ಪ್ರವಾಸೋದ್ಯಮದಿಂದ ಮಾನ್ಯತೆ ಪಡೆದ ಆದ್ಯತೆಯ ನಿರ್ವಾಹಕರನ್ನು ಆಯ್ಕೆ ಮಾಡಿ ಮತ್ತು ಅವರಲ್ಲಿ ಸರಿಯಾದ ಲೈಫ್ ಜಾಕೆಟ್‌ಗಳು, ವಿಂಚ್ ದೋಣಿಗಳು ಮತ್ತು ತರಬೇತಿ ಪಡೆದ ಸಿಬ್ಬಂದಿಗಳು ಲಭ್ಯವಿವೆ ಎಂದು ಖಚಿತಪಡಿಸಿಕೊಳ್ಳಿ.