ಕೇರಳದಲ್ಲಿ ಬಿದಿರಿನ ರಾಫ್ಟಿಂಗ್‌ನ ಒಂದು ವಿಶಿಷ್ಟ ಲಕ್ಷಣವೆಂದರೆ ಅದು ಜೀವನದ ವೇಗವನ್ನು ನಿಧಾನಗೊಳಿಸುತ್ತದೆ. ಗದ್ದಲದ ಮೋಟಾರ್‌ಬೋಟ್‌ಗಳ ಬದಲಿಗೆ, ಪ್ರಶಾಂತ ಬಿದಿರಿನ ರಾಫ್ಟ್‌ಗಳು ನಿಮ್ಮನ್ನು ಅರಣ್ಯ ಸರೋವರಗಳು ಮತ್ತು ಜಲಾಶಯಗಳ ಮೂಲಕ ಕೆಲವೊಮ್ಮೆ ಹೆಚ್ಚಾಗಿ ಸಂರಕ್ಷಿತ ಪ್ರದೇಶಗಳಲ್ಲಿ ಕರೆದೊಯ್ಯುತ್ತವೆ. ಇಲ್ಲಿನ ಅನುಭವವು ಆಲಿಸುವ ಮೂಲಕ ಸ್ವೀಕರಿಸುವುದಲ್ಲಆದರೆ ಪ್ರಕೃತಿಯ ನಡುವೆ ನಿಧಾನವಾಗಿ ಚಲಿಸುವುದು, ಶಬ್ದಗಳನ್ನು ಆಲಿಸುವುದು ಮತ್ತು ದೃಶ್ಯಗಳನ್ನು ನೋಡುವುದಾಗಿದೆ.
ಪಶ್ಚಿಮ ಘಟ್ಟಗಳು ಮತ್ತು ಪ್ರಮುಖ ವನ್ಯಜೀವಿ ವಲಯಗಳಲ್ಲಿ ಬಿದಿರಿನ ರಾಫ್ಟಿಂಗ್ ಒಂದು ಪ್ರಮುಖ ವೈವಿಧ್ಯಮಯ ಚಟುವಟಿಕೆಯಾಗಿದೆ. ಪೆರಿಯಾರ್ ಟೈಗರ್ ರಿಸರ್ವ್ (ತೇಕ್ಕಡಿ), ಪರಂಬಿಕುಳಂಟೈಗರ್ ರಿಸರ್ವ್ (ಪಾಲಕ್ಕಾಡ್), ವಯನಾಡಿನ ಕರ್ಳಾಡ್ ಸರೋವರ ಮತ್ತು ತಿರುವನಂತಪುರಂ ಬಳಿಯ ಕೋಟ್ಟೂರ್-ನೆಯ್ಯಾರ್‌ನಂತಹ ಸ್ಥಳಗಳಲ್ಲಿ ನೀವು ಇದನ್ನು ಅನುಭವಿಸಬಹುದು, ಅಲ್ಲಿ ಸ್ಥಳೀಯ ಸಮುದಾಯಗಳು ಇದನ್ನು ಹೆಚ್ಚಾಗಿ ಲಘು ಚಾರಣ ಅಥವಾ ಪ್ರಕೃತಿ ನಡಿಗೆಗಳ ಜೊತೆಗೆ ಆಯೋಜಿಸುತ್ತವೆ. ನೀವು ಬೆಳಿಗ್ಗೆ ತೇವಾಂಶವುಳ್ಳ ಉದುರೆಲೆ ಕಾಡಿನಲ್ಲಿ ಟ್ರೆಕ್ಕಿಂಗ್‌ಗೆ ಹೋಗಬಹುದು ಮತ್ತು ಉಪಾಹಾರ ಅಥವಾ ಊಟದ ನಂತರ, ಪ್ರಯಾಣದ ಒಂದು ಭಾಗವಾಗಿ ರಾಫ್ಟ್ ಸವಾರಿಯನ್ನು ಆನಂದಿಸಬಹುದು.
ಈ ಪ್ರದೇಶಗಳು ಭೂಮಿಯ ಮೇಲಿನ ಅತ್ಯಂತ ಜೀವವೈವಿಧ್ಯತೆಯನ್ನು ಹೊಂದಿವೆ.ಆದ್ದರಿಂದ ನಿಮ್ಮನ್ನು ಕೇವಲ ಪ್ರವಾಸಕ್ಕೆ ಕರೆದೊಯ್ಯುತ್ತಿಲ್ಲ.ಆನೆಗಳು, ಗೌರ್, ಸಾಂಬಾರ್, ನೀರುನಾಯಿಗಳು, ಜಲಪಕ್ಷಿಗಳು ಮತ್ತು ಬೇಟೆಯಾಡುವ ಪಕ್ಷಿಗಳು ಸೇರಿದಂತೆ ಪ್ರಾಣಿಗಳು ಮತ್ತು ಪಕ್ಷಿಗಳನ್ನು ನೀವು ನೀರಿನ ಅಂಚಿನಲ್ಲಿ ಮತ್ತು ಕಾಡಿನಲ್ಲಿ ಗಮನಿಸುತ್ತೀರಿ, ಆದರೆ ನಿಮ್ಮ ಗೈಡ್ ಅವುಗಳ ಕರೆಗಳು, ಹೆಜ್ಜೆಗುರುತುಗಳು ಮತ್ತು ಸುತ್ತಮುತ್ತಲಿನ ಸಸ್ಯವರ್ಗವನ್ನು ತೋರಿಸುತ್ತಾರೆ. ವಯನಾಡಿನಲ್ಲಿನ ಕರ್ಳಾಡ್ ಸರೋವರ ಮತ್ತು ಕುರುವದ್ವೀಪ್‌ನಲ್ಲಿ, ಬಿದಿರಿನ ದೋಣಿ ಸವಾರಿಗಳು ಕಡಿಮೆ ಮತ್ತು ಹೆಚ್ಚು ಶಾಂತವಾಗಿರುತ್ತವೆ; ಇಲ್ಲಿ, ಗಮನವು ವನ್ಯಜೀವಿಗಳನ್ನು ನೋಡುವುದರಿಂದ ತಾಜಾ ಗಾಳಿ ಮತ್ತು ಪ್ರಶಾಂತ ಹಿನ್ನೀರನ್ನು ಆನಂದಿಸುವತ್ತ ಬದಲಾಗುತ್ತದೆ.
ಸಾಮಾನ್ಯವಾಗಿ, ಮಳೆಗಾಲವು ಮುಗಿದಿರುವಅಕ್ಟೋಬರ್‌ನಿಂದ ಮಾರ್ಚ್ ತಿಂಗಳವರೆಗಿನ ಅವಧಿಯು ಭೇಟಿ ನೀಡಲು ಸೂಕ್ತವಾಗಿದೆ. ಈ ಸಮಯದಲ್ಲಿ, ರಸ್ತೆಗಳು ಸುರಕ್ಷಿತವಾಗಿರುತ್ತವೆ ಮತ್ತು ಹವಾಮಾನವು ತಂಪಾಗಿರುತ್ತದೆ, ಸರೋವರಗಳು ಮತ್ತು ಜಲಮೂಲಗಳ ಸ್ಪಷ್ಟ ನೋಟಗಳನ್ನು ನೀಡುತ್ತದೆ. ಕೆಲವು ಹುಲಿ ಅಭಯಾರಣ್ಯಗಳು ಮತ್ತು ಪರಿಸರ ಪ್ರವಾಸೋದ್ಯಮ ಕೇಂದ್ರಗಳು ಕಡ್ಡಾಯವಾಗಿ ಗೈಡ್‌ಗಳು ಮತ್ತು ಸೀಮಿತ ಗುಂಪಿನ ಗಾತ್ರದೊಂದಿಗೆ ನಿರ್ದಿಷ್ಟ ಭೇಟಿ ವೇಳಾಪಟ್ಟಿಗಳನ್ನು ಹೊಂದಿವೆ (ಬೆಳಿಗ್ಗೆ/ಪೂರ್ಣ ದಿನ/ಅರ್ಧ-ದಿನ), ಆದ್ದರಿಂದ, ಮುಂಚಿತವಾಗಿ ಕಾಯ್ದಿರಿಸುವಿಕೆಯನ್ನು ಮಾಡುವುದು ಸೂಕ್ತವಾಗಿದೆ.
ಈ ಹೆಚ್ಚಿನ ಸ್ಥಳಗಳು ಕಾಡುಗಳೊಳಗೆ ನೆಲೆಗೊಂಡಿವೆ, ಅಲ್ಲಿ ಅರಣ್ಯ/ ವನ್ಯಜೀವಿ ಇಲಾಖೆ ಅಥವಾ ಅವುಗಳ ಎಕೋಟೂರಿಸಂ ವಿಭಾಗಗಳು ಮುಖ್ಯವಾಗಿ ಈ ಕಾರ್ಯಕ್ರಮಗಳನ್ನು ನಡೆಸುತ್ತವೆ, ಆಗಾಗ್ಗೆ ಸ್ಥಳೀಯ ಬುಡಕಟ್ಟು ಸಮುದಾಯಗಳ ಸಹಯೋಗದೊಂದಿಗೆ. ಗುಂಪಿನ ಗಾತ್ರ, ವರದಿ ಮಾಡುವ ಸಮಯ, ಉಡುಗೆ ತೊಡುಗೆಗಳು ಮತ್ತು ನಡವಳಿಕೆಗೆ ಸಂಬಂಧಿಸಿದ ನಿಯಮಗಳು ಸಾಕಷ್ಟು ಕಟ್ಟುನಿಟ್ಟಾಗಿದ್ದರೂ, ಅವು ಸಂದರ್ಶಕರು, ವನ್ಯಜೀವಿಗಳು ಮತ್ತು ಪರಿಸರದ ಸುರಕ್ಷತೆಯನ್ನು ಖಾತ್ರಿಪಡಿಸುತ್ತವೆ.
ನೀವು ಮಕ್ಕಳು ಅಥವಾ ವೃದ್ಧರೊಂದಿಗೆ ಪ್ರಯಾಣಿಸುತ್ತಿದ್ದರೆ, ಸರೋವರ ಅಥವಾ ಜಲಾಶಯದಲ್ಲಿ ಅಲ್ಪಾವಧಿಯ ದೋಣಿ ವಿಹಾರಗಳನ್ನು ಆರಿಸಿಕೊಳ್ಳಿ. ಪ್ರತಿಯೊಬ್ಬರೂ ದೀರ್ಘಾವಧಿಯ ನಡಿಗೆ ಮಾಡಲು ಮತ್ತು ಇಡೀ ದಿನವನ್ನು ಹೊರಾಂಗಣದಲ್ಲಿ ಕಳೆಯಲು ತೊಂದರೆಯಿಲ್ಲದಿದ್ದರೆ, ನೀವು ಪೆರಿಯಾರ್ ಅಥವಾ ಪರಂಬಿಕುಳಂನಲ್ಲಿ ಪೂರ್ಣ ದಿನದ ಕಾರ್ಯಕ್ರಮಗಳನ್ನು ಆಯ್ಕೆ ಮಾಡಬಹುದು.
ಪೆರಿಯಾರ್, ಪರಂಬಿಕುಳಂ ಮತ್ತು ನೆಯ್ಯಾರ್-ಕೋಟ್ಟೂರಿನಲ್ಲಿ ರಾಫ್ಟಿಂಗ್‌ಗಾಗಿ, ಸಾಮಾನ್ಯವಾಗಿ ಅಧಿಕೃತ ಪರಿಸರ-ಪ್ರವಾಸೋದ್ಯಮ ಕೇಂದ್ರಗಳು ಅಥವಾ ಆನ್‌ಲೈನ್ ಪೋರ್ಟಲ್‌ಗಳ ಮೂಲಕ ಮುಂಗಡ ಬುಕಿಂಗ್ ಮಾಡಲಾಗುತ್ತದೆ. ಇದಕ್ಕಾಗಿ ಬರುವವರು ಗೊತ್ತುಪಡಿಸಿದ ವರದಿ ಮಾಡಿಕೊಳ್ಳುವ ಸಮಯ ಸಾಮಾನ್ಯವಾಗಿ ದಿನದ ಆರಂಭದಲ್ಲಿರುತ್ತದೆ.
ಮಾರ್ಗದರ್ಶಿಗಳಿಂದ ಸೂಚನೆಗಳನ್ನು ತೆಗೆದುಕೊಳ್ಳಿ, ಲೈಫ್ ಜಾಕೆಟ್‌ಗಳನ್ನು ಸರಿಯಾಗಿ ಧರಿಸಿ ಮತ್ತು ರಾಫ್ಟ್‌ನ ಬದಿಗಳ ಮೇಲೆ ವಾಲಬೇಡಿ.ಮೌನವಾಗಿರುವುದು, ಕಸ ಎಸೆಯುವಿಕೆ ಮತ್ತು ಸಂಚಾರಕ್ಕೆ ಸಂಬಂಧಿಸಿದ ಅರಣ್ಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಹಗುರವಾದ, ಬೇಗನೆ ಒಣಗುವ ಬಟ್ಟೆ, ಟೋಪಿ ಮತ್ತು ಸನ್‌ಸ್ಕ್ರೀನ್ ಧರಿಸುವುದರ ಜೊತೆಗೆ ಉತ್ತಮ ಹಿಡಿತವನ್ನು ನೀಡುವ ವಾಕಿಂಗ್ ಶೂಗಳು ಅಥವಾ ಸ್ಯಾಂಡಲ್‌ಗಳನ್ನು ಧರಿಸುವುದು ತುಂಬಾ ಸಹಾಯಕವಾಗಬಹುದು, ಏಕೆಂದರೆ ಹೆಚ್ಚಿನ ಕಾರ್ಯಕ್ರಮಗಳು ಟ್ರೆಕ್ಕಿಂಗ್ ಮತ್ತು ರಾಫ್ಟಿಂಗ್‌ನ ಸಂಯೋಜನೆಯನ್ನು ಒಳಗೊಂಡಿರುತ್ತವೆ.