ಕೇರಳ ಪ್ರವಾಸೋದ್ಯಮದ ಆಕರ್ಷಣೀಯ ಚಟುವಟಿಕೆಯಾಗಿರುವ ಪ್ಯಾರಾಸೈಲಿಂಗ್ ಮತ್ತು ಸ್ಕೂಬಾ ಡೈವಿಂಗ್ ಬಗ್ಗೆ ಪದೇ ಪದೇ ಕೇಳಲಾಗುವ ಕೆಲವು ಪ್ರಶ್ನೆಗಳ ಪ್ರಕಾರ, ಕೋವಳಂ ಮತ್ತು ವರ್ಕಲ ಜೊತೆಗೆ ಇಂತಹ ಸಂಘಟಿತ ಸಾಹಸ ಚಟುವಟಿಕೆಗಳು ಲಭ್ಯವಿರುವ ಪ್ರಮುಖ ಸ್ಥಳಗಳಲ್ಲಿ ಕೊಚ್ಚಿಯ ಚೆರಾಯಿಬೀಚ್ ಒಂದಾಗಿದೆ.ಅಲ್ಲಿ ಪ್ಯಾರಾಸೈಲಿಂಗ್ ಸಾಮಾನ್ಯವಾಗಿ ಕಡಲತೀರದ ಕೊನೆಯಲ್ಲಿ ನಡೆಯುತ್ತದೆ, ಅಲ್ಲಿ ಒಂದು ಬದಿಯಲ್ಲಿ ಹಿನ್ನೀರು ಮತ್ತು ಇನ್ನೊಂದು ಬದಿಯಲ್ಲಿ ಸಮುದ್ರವಿದ್ದು, ಇದು ವಿಶಾಲವಾದ ಕರಾವಳಿ ನೋಟವನ್ನು ನೀಡುತ್ತದೆ.


ತ್ವರಿತ ಮಾಹಿತಿ

ಸಲಹೆಗಳು

ನೀವು ಕೊಚ್ಚಿಯಲ್ಲಿ ತಂಗಿದ್ದರೆ ಅತ್ಯುತ್ತಮ ಅರ್ಧ ದಿನದ ಬೀಚ್ ಪ್ರವಾಸ ಮತ್ತು ಸಾಹಸ ಕಾರ್ಯವನ್ನು ಕೈಗೊಳ್ಳಬಹುದು.

ನೀವು ಹೊರಡುವುದಕ್ಕೂ ಮೊದಲು ಸಮುದ್ರ ಮತ್ತು ಗಾಳಿಯ ಪರಿಸ್ಥಿತಿಗಳ ಕುರಿತು ಆಪರೇಟರ್‌ರಿಂದ ಕೇಳಿ ತಿಳಿದುಕೊಳ್ಳಿ.

ಸೂರ್ಯಾಸ್ತದ ನಡಿಗೆಯನ್ನಾಗಲೀ ಅಥವಾ ಹತ್ತಿರದ ಹಿನ್ನೀರಿನಲ್ಲಿ ದೋಣಿ ಸವಾರಿಯನ್ನಾಗಲೀಮಾಡಿ ಆನಂದಿಸಿ.

ಕಠಿಣತೆಯ ಮಟ್ಟ

ಸುಲಭದಿಂದ ಮಧ್ಯಮಕ್ಕೆ

ಋತು

ಸಮುದ್ರ ಮತ್ತು ಗಾಳಿಯ ಪರಿಸ್ಥಿತಿಗಳಿಗೆ ಒಳಪಟ್ಟು ಅಕ್ಟೋಬರ್‌ನಿಂದ ಮಾರ್ಚ್ ತಿಂಗಳ ತನಕ.

ಅಂದಾಜು ವೆಚ್ಚ

ಪ್ಯಾಕೇಜ್ ಅನ್ನು ಅವಲಂಬಿಸಿ ಕೇರಳದ ಇತರ ಬೀಚ್ ಹಬ್‌ಗಳಂತೆಯೇ, ಕೆಲವೊಮ್ಮೆ ಸುಮಾರು ರೂ.1,500- ರೂ.2,500 (ನಿಖರವಾದ ದರಗಳು ಪ್ರತಿ ಆಪರೇಟಪ್ ಪ್ರಕಾರ ಬದಲಾಗುತ್ತವೆ)

ಸಮಯ ಮತ್ತು ಅವಧಿ

ವಿಮಾನ ಸಮಯ: ಸುಮಾರು3-5ನಿಮಿಷಗಳು ಒಟ್ಟು ಚಟುವಟಿಕೆಯ ಸಮಯ: ಸುಮಾರು 20-25 ನಿಮಿಷಗಳು

ತಲುಪುವುದು ಹೇಗೆ

ಬಸ್ ಮೂಲಕ: ಕೊಚ್ಚಿ ನಗರದಿಂದ ಸುಮಾರು 25-30 ಕಿಮೀ ದೂರವಿರುವ ಚೆರಾಯ್‌ಗೆ ನಾರ್ತ್ ಪರವೂರ್(ಉತ್ತರ ಪರವೂರ್) ಮೂಲಕ ಸಾಕಷ್ಟು ಬಸ್‌ಗಳ ಸೌಲಭ್ಯವಿದೆ

ವಿಮಾನದ ಮೂಲಕ:ಕೊಚ್ಚಿನ್ (ಕೊಚ್ಚಿ) ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ನೆಡುಂಬಾಶ್ಶೇರಿ), ಸುಮಾರು 25-30 ಕಿಮೀ ದೂರದಲ್ಲಿದೆ

ರೈಲಿನ ಮೂಲಕ:ಆಲುವ ಅಥವಾ ಎರಣಾಕುಳಂಟೌನ್/ಜಂಕ್ಷನ್, ಮತ್ತು ನಂತರ ರಸ್ತೆಯ ಮೂಲಕ ಚೆರಾಯ್‌ಗೆ