ಕೇರಳದಲ್ಲಿ ಆರಂಭಿಕವಾಗಿ ಬೀಚ್ ಪ್ರವಾಸೋದ್ಯಮವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೋವಳಂ, ಇದೀಗ ರಾಜ್ಯದ ಸಕ್ರಿಯ ಸ್ಕೂಬಾ ಡೈವಿಂಗ್ ತಾಣಗಳಲ್ಲಿ ಒಂದಾಗಿದೆ. ಈ ಪಟ್ಟಣವು ಸುರಕ್ಷಿತ ಕೊಲ್ಲಿಗಳು, ಸ್ಪಷ್ಟವಾಗಿರುವ ನೀರು ಮತ್ತು ನೈಸರ್ಗಿಕ ಕಲ್ಲಿನ ರಚನೆಗಳಿಗೆ ಹೆಸರುವಾಸಿಯಾಗಿದೆ, ಇದು ಆರಂಭಿಕ ಮತ್ತು ಅನುಭವಿ ಡೈವರ್‌ಗಳಿಗೆ ಸೂಕ್ತವಾಗಿದೆ.


ಸ್ವಲ್ಪ ಇಳಿಜಾರಾದ ಸಮುದ್ರತಳವು ಆರಂಭಿಕರಿಗಾಗಿ ವಿಶೇಷವಾಗಿ ಸೂಕ್ತವಾಗಿದೆ. ಅದೇ ಸಮಯದಲ್ಲಿ, ಆಳವಾದ ಪ್ರದೇಶಗಳು ಮತ್ತು ನೀರೊಳಗಿನ ಶಿಲಾ ರಚನೆಗಳು ಅನುಭವಿ ಡೈವರ್‌ಗಳಿಗೆ ಇದನ್ನು ಇನ್ನಷ್ಟು ಆಕರ್ಷಕವಾಗಿಸುತ್ತವೆ. ನೀರು ಸ್ಪಷ್ಟವಾದಾಗ, ಗೋಚರತೆ ಸುಧಾರಿಸುತ್ತದೆ, ಆಗ ಹವಳದ ತೇಪೆಗಳು, ಪ್ಯಾರಟ್ ಫಿಶ್ ಒಳಗೊಂಡಂತೆವರ್ಣರಂಜಿತ ರೀಫ್ ಫಿಶ್, ಸಮುದ್ರ ಅರ್ಚಿನ್‌ಗಳು ಮತ್ತು ಕೆಲವೊಮ್ಮೆ ಆಕ್ಟೋಪಸ್‌ಗಳು ಸಹ ಕಂಡುಬರುತ್ತವೆ.


ನೀರೊಳಗಿನ ಪರಿಸರದ ಒಟ್ಟಾರೆ ಅನುಭವವು ಕೋವಳಂನಲ್ಲಿ ಸ್ಕೂಬಾ ಡೈವಿಂಗ್ ಅನ್ನು ವಿಶೇಷವಾಗಿಸುತ್ತದೆ. ಪ್ರತಿಯೊಂದು ಡೈವ್ ಒಂದು ವಿಶಿಷ್ಟ ನೋಟವನ್ನು ಬಹಿರಂಗಪಡಿಸುತ್ತದೆ, ಇದು ಅನ್ವೇಷಣೆಯ ರೋಮಾಂಚನ ಮತ್ತು ಪ್ರಕೃತಿಯೊಂದಿಗೆ ಆಳವಾದ ಸಂಪರ್ಕವನ್ನು ನೀಡುತ್ತದೆ.


PADI ನಂತಹ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಸಂಸ್ಥೆಗಳೊಂದಿಗೆ ಸೇರಿಕೊಂಡವರನ್ನು ಒಳಗೊಂಡಂತೆ ಸೇರಿದಂತೆ ಸರ್ಟಿಫೈಯ್ಡ್ ಆಪರೇಟರ್‌ಗಳು ಪ್ರತಿ ಅನುಭವಕ್ಕೂ ಮಾರ್ಗದರ್ಶನ ನೀಡುವ ತರಬೇತಿ ಪಡೆದ ಇನ್‌ಸ್ಟ್ರಕ್ಟರ್‌ಗಳೊಂದಿಗೆ ಡೈವ್‌ಗಳನ್ನು ನಡೆಸುತ್ತಾರೆ.


ತ್ವರಿತ ಮಾಹಿತಿ

ಸ್ಥಳ ಮತ್ತು ಪ್ರವೇಶ

ಸ್ಕೂಬಾ ಡೈವಿಂಗ್ ಅನ್ನು ತಿರುವನಂತಪುರಂ ಜಿಲ್ಲೆಯ ಈವ್ಸ್ ಬೀಚ್ ಮತ್ತು ಲೈಟ್‌ಹೌಸ್ ಬೀಚ್ ಸೇರಿದಂತೆ ಕೋವಳಂ ಬೀಚ್‌ನಲ್ಲಿ ನಡೆಸಲಾಗುತ್ತದೆ.

ದೂರಗಳು

ಕೋವಳಂ ಟೌನ್:0-2ಕಿಮೀ

ತಿರುವನಂತಪುರಂ ನಗರ:13ಕಿಮೀ

ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣ:14-15ಕಿಮೀ

ತಿರುವನಂತಪುರಂ ಸೆಂಟ್ರಲ್ ರೈಲ್ವೆ ನಿಲ್ದಾಣ:13 ಕಿಮೀ

ಸ್ಥಳಕ್ಕೆ ಹೋಗಿ ಬರಲು ಬಸ್, ಟ್ಯಾಕ್ಸಿ ಮತ್ತು ಆಟೋ ಸೇವೆಗಳು ಲಭ್ಯವಿವೆ.

ಕೆಲಸದ ಸಮಯ

ಬೆಳಗ್ಗೆ 8:00-ಸಂಜೆ 3:00 (ಸಮುದ್ರದ ಪರಿಸ್ಥಿತಿಗಳನ್ನು ಅವಲಂಬಿಸಿ)

ಒಟ್ಟು ಅವಧಿ

ಬ್ರೀಫಿಂಗ್ ಒಳಗೊಂಡಂತೆ 30-40ನಿಮಿಷಗಳು

ನೀರಿನೊಳಗಿನ ಸಮಯ

15-25ನಿಮಿಷಗಳು

ಮುಂಗಡ ಕಾಯ್ದಿರಿಸುವಿಕೆ

ನಿಮ್ಮ ಸ್ಥಳವನ್ನು ಖಾತ್ರಿಪಡಿಸಿಕೊಳ್ಳಲು ಮುಂಚಿತವಾಗಿ ಬುಕ್ ಮಾಡುವುದುಪ್ರಶಸ್ತವಾಗಿರುತ್ತದೆ.ವಾರಾಂತ್ಯಗಳಲ್ಲಿ ಮತ್ತು ಗರಿಷ್ಠ ಪ್ರವಾಸಿ ಕಾಲ ಸಂದರ್ಭಗಳಲ್ಲಿ, ನಿಮ್ಮ ಸ್ಲಾಟ್ ಅನ್ನು ಮುಂಚಿತವಾಗಿ ಬ್ಲಾಕ್ ಮಾಡುವುದು ಬಹಳ ಸೂಕ್ತವಾಗಿದೆ.

ವಯಸ್ಸಿನ ಮಿತಿಗಳು

10-12 ವರ್ಷಗಳಿಗಿಂತ ಮೇಲ್ಪಟ್ಟು

ಕಠಿಣತೆಯ ಮಟ್ಟ

ಮಧ್ಯಮ

ಋತು

ಜೂನ್‌ನಿಂದ ಸೆಪ್ಟೆಂಬರ್ ತಿಂಗಳ ತನಕದ ಮಾನ್ಸೂನ್ ತಿಂಗಳುಗಳ ಸಮಯದಲ್ಲಿ ಸಮುದ್ರದ ಅಲೆಗಳು ಅನಿರೀಕ್ಷಿತವಾಗಿರುತ್ತವೆ ಮತ್ತು ಭಾರೀ ಒಳಪ್ರವಾಹಗಳು ಅದನ್ನು ಅಪಾಯಕಾರಿಯನ್ನಾಗಿ ಮಾಡುತ್ತವೆ.ಅಕ್ಟೋಬರ್‌ನಿಂದ ಏಪ್ರಿಲ್ ತಿಂಗಳ ತನಕದ ಸಮಯದಲ್ಲಿ ಸಮುದ್ರಗಳು ಹೆಚ್ಚು ಶಾಂತವಾಗಿದ್ದು, ನೀರೊಳಗಿನ ಅದ್ಭುತ ಪ್ರಪಂಚವನ್ನು ಅನ್ವೇಷಿಸಲು ಸೂಕ್ತವಾಗಿಸುತ್ತದೆ.

ಅಂದಾಜು ವೆಚ್ಚ

ಡೈವ್ ಪ್ರಕಾರವನ್ನು (ಟ್ರೈ ಡೈವ್/ಗೈಡೆಡ್ ಡೈವ್/ಡೆಪ್ತ್) ಅವಲಂಬಿಸಿ ಪ್ರತಿ ವ್ಯಕ್ತಿಗೆ ರೂ.2,000-ರೂ.4,500

ಅನುಮತಿ ಇಲ್ಲ

ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಪ್ಲಾಸ್ಟಿಕ್ ಬಾಟಲಿಗಳು ಮತ್ತು ಸಡಿಲವಾದ ಆಭರಣಗಳನ್ನು ದೂರವಿರಿಸಿ.ಮದ್ಯ ಸೇವಿಸಿದ ನಂತರ ಅಥವಾ ನೀವು ವೈದ್ಯಕೀಯ ಸ್ಥಿತಿಯನ್ನು ಹೊಂದಿದ್ದರೆ ಡೈವಿಂಗ್ ಕೈಗೊಳ್ಳದಂತೆಸಲಹೆ ನೀಡಲಾಗಿದೆ.

ನಿರ್ಬಂಧಗಳು

ಲೈಟ್‌ಹೌಸ್ ಬೀಚ್ ಪ್ರದೇಶವು ಕರಾವಳಿ ನಿಯಂತ್ರಿತ ವಲಯವಾಗಿರುವುದರಿಂದ ಅದರ ಸುತ್ತಲೂ ಡ್ರೋನ್ ಬಳಕೆಯನ್ನು ನಿರ್ಬಂಧಿಸಲಾಗಿದೆ.

ಛಾಯಾಗ್ರಹಣ ಮತ್ತು ಮಾಧ್ಯಮ

ಸ್ಕೂಬಾ ಡೈವಿಂಗ್ ಕೇಂದ್ರಗಳನ್ನು ನಡೆಸುವ ಬಹುತೇಕ ಎಲ್ಲಾ ಆಪರೇಟರ್‌ಗಳು ವೃತ್ತಿಪರ ಅಂಡರ್‌ವಾಟರ್ ಫೋಟೋಗ್ರಾಫರ್‌ಗಳನ್ನು ಹೊಂದಿದ್ದಾರೆ.ಅವರು ನಿಮಗೆ ಅತ್ಯುತ್ತಮ ಗುಣಮಟ್ಟದ ಫೋಟೋಗಳು ಮತ್ತು ವೀಡಿಯೊಗಳನ್ನು ಒದಗಿಸುತ್ತಾರೆ.

ನೀವು ಹೆಚ್ಚುವರಿ ಶುಲ್ಕವನ್ನು (ಅಂದಾಜು ರೂ.500-ರೂ.1,000) ಪಾವತಿಸಿದರೆ ಗೋಪ್ರೊ ವೀಡಿಯೊಗಳು ಮತ್ತು ಫೋಟೋಗಳನ್ನು ತೆಗೆದುಕೊಳ್ಳಬಹುದು

ವಿಶೇಷ ಅನುಮತಿ ಪಡೆಯದ ಹೊರತು ಲೈಟ್‌ಹೌಸ್ ಬೀಚ್‌ನ ಸುತ್ತಮುತ್ತ ಡ್ರೋನ್ ಬಳಕೆಯನ್ನು ನಿರ್ಬಂಧಿಸಲಾಗಿದೆ.

ಏನೆಲ್ಲಾ ಸೇರಿದೆ

ಕ್ಯೂಬಾ ಗೇರ್ (ಮಾಸ್ಕ್, ಫಿನ್ಸ್, BCD, ರೆಗ್ಯುಲೈಟರ್, ಆಕ್ಸಿಜನ್ ಟ್ಯಾಂಕ್), ವೆಟ್‌ಸ್ಯೂಟ್, ಸರ್ಟಿಫೈಯ್ಡ್ ಇನ್‌ಸ್ಟ್ರಕ್ಟರ್ ಮತ್ತು ಅಂಡರ್‌ವಾಟರ್ ಟ್ರೈನಿಂಗ್ ಸೆಷನ್.