ಕೋಯಿಕ್ಕೋಡ್ (ಫರೋಕ್) ಇದೀಗ ಕೇರಳದ ಹೊಸ ಸರ್ಫಿಂಗ್ ತಾಣವಾಗಿದೆ.ಈ ಪ್ರದೇಶವು ಉದ್ದವಾದ ಮರಳಿನಿಂದ ಕೂಡಿದ ಕಡಲತೀರಗಳು, ಸ್ಥಿರವಾದ ಅಲೆಗಳು ಮತ್ತು ಬೇರೆ ಪ್ರದೇಶಗಳಿಗೆ ಹೋಲಿಸಿದರೆ ಶಾಂತವಾದ ತೀರ ಪ್ರದೇಶಕ್ಕೆ ಹೆಸರಾಗಿದೆ.ಆರಂಭಿಕರಿಗಾಗಿ ಸುರಕ್ಷಿತ ಪರಿಸರದಲ್ಲಿ ಸರ್ಫಿಂಗ್ ಕಲಿಯಲು ಇಲ್ಲಿನ ಕಡಲತೀರವು ಸೂಕ್ತವಾದ ಸ್ಥಳವಾಗಿದೆ, ಆದರೆ ಪೀಕ್ ಸೀಸನ್‌ನಲ್ಲಿ ಮಧ್ಯಂತರ ಸರ್ಫರ್‌ಗಳು ಸಾಮಾನ್ಯ ಪ್ರಮಾಣದ ಏರಿಳಿತಗಳನ್ನು ಅನುಭವಿಸಬಹುದು.ಇತರ ಜನಪ್ರಿಯ ಕಡಲತೀರಗಳಿಗೆ ಹೋಲಿಸಿದರೆ ಇಲ್ಲಿ ಕಡಿಮೆ ಜನರನ್ನು ಕಾಣಬಹುದಾದ್ದರಿಂದ, ಪ್ರಕೃತಿಗೆ ಬಹಳ ಹತ್ತಿರವಿರುವ ಶಾಂತಿಯುತ ಮತ್ತು ಕೇಂದ್ರೀಕೃತ ಸರ್ಫಿಂಗ್ ಅನುಭವವನ್ನು ಫರೋಕ್ನೀಡುತ್ತದೆ.


ಇಲ್ಲಿನ ತೀರ ಪ್ರದೇಶವು ನದಿಯ ಮುಖದ ಪ್ರವಾಹಗಳು ಮತ್ತು ತೆರೆದ ಸಮುದ್ರದ ಅಲೆಗಳಿಂದ ಕೂಡಿರುತ್ತದೆ, ಇದು ಸಣ್ಣ ಅಲೆಗಳ ಸರ್ಫಿಂಗ್ ತಾಣಗಳಿಗೆ ಕಾರಣವಾಗುತ್ತದೆ, ಇದು ತರಬೇತಿ ಸೆಷನ್‌ಗಳಿಗೆ ಮತ್ತು ಮನರಂಜನೆಯಿಂದ ಕೂಡಿದ ಸರ್ಫಿಂಗ್‌ಗೆ ಪರಿಪೂರ್ಣವಾಗಿದೆ. ಈ ಕಾರಣದಿಂದಲೇ ಉತ್ತರ ಕೇರಳದಲ್ಲಿ ಸ್ಥಳೀಯ ಸರ್ಫ್ ಸಮುದಾಯ ಮತ್ತು ಯುವ ಜನರಿಗೆ ಫರೋಕ್ ಪ್ರದೇಶವು ಸರ್ಫ್ ಕೇಂದ್ರಭಾಗವಾಗಿ ಹೊರಹೊಮ್ಮುತ್ತಿದೆ.


ತ್ವರಿತ ಮಾಹಿತಿ

ಸ್ಥಳ ಮತ್ತು ಪ್ರವೇಶ

ಚಾಲಿಯಾರ್ ನದಿಯ ಮುಖದ ಹತ್ತಿರವಿರುವ ಕೋಯಿಕ್ಕೋಡ್ ಜಿಲ್ಲೆಯ ಫರೋಕ್ ಕಡಲತೀರದಾದ್ಯಂತ ಸರ್ಫಿಂಗ್ ಚಟುವಟಿಕೆಗಳನ್ನು ನಡೆಸಲಾಗುತ್ತದೆ.

ದೂರಗಳು

ಫರೋಕ್ ಪಟ್ಟಣ:23 ಕಿಮೀ

ಕೋಯಿಕ್ಕೋಡ್ ನಗರ:11-13 ಕಿಮೀ

ಕ್ಯಾಲಿಕಟ್ (ಕೋಯಿಕ್ಕೋಡ್) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕರಿಪುರ್):25-28 ಕಿಮೀ

ಕೋಯಿಕ್ಕೋಡ್ ರೈಲು ನಿಲ್ದಾಣ:12-14 ಕಿಮೀ

ಕೋಯಿಕ್ಕೋಡ್ ನಗರದಿಂದ ಫೆರೋಕ್‌‌ಗೆ ಹೋಗಲು ಸಾಮಾನ್ಯ ಬಸ್ ಸೇವೆಗಳು, ಟ್ಯಾಕ್ಸಿಗಳು ಮತ್ತು ಆಟೋ ರಿಕ್ಷಾಗಳು ಆರಾಮವಾಗಿ ಲಭ್ಯವಿವೆ.

ಕೆಲಸದ ಸಮಯ

ಸಾಮಾನ್ಯ ಅವಧಿಗಳು: ಬೆಳಗ್ಗೆ 6:00-10:00 ಮತ್ತು ಮಧ್ಯಾಹ್ನ 3:30 – ಸಂಜೆ 6:30 (ಸಮುದ್ರ ಮತ್ತು ಉಬ್ಬರವಿಳಿತದ ಪರಿಸ್ಥಿತಿಗಳನ್ನು ಅವಲಂಬಿಸಿರುತ್ತದೆ)

ಒಟ್ಟು ಅವಧಿ

ಬ್ರೀಫಿಂಗ್ ಒಳಗೊಂಡಂತೆ 60-90 ನಿಮಿಷಗಳು ಸರ್ಫಿಂಗ್ ಸಮಯ: ಪ್ರತಿ ಸೆಷನ್‌ಗೆ 30-45 ನಿಮಿಷಗಳು

ಮುಂಗಡ ಕಾಯ್ದಿರಿಸುವಿಕೆ

ವಾರಾಂತ್ಯಗಳಲ್ಲಿ ಮತ್ತು ಪೀಕ್ ಸೀಸನ್ ದಿನಗಳಲ್ಲಿ ಜನದಟ್ಟಣೆ ಹೆಚ್ಚಾಗಿರುವ ಕಾರಣದಿಂದ ನಿಮ್ಮ ಸ್ಲಾಟ್ ಅನ್ನು ಮುಂಚಿತವಾಗಿ ಬುಕ್ ಮಾಡಿಟ್ಟುಕೊಳ್ಳುವುದುಒಳಿತು.

ವಯಸ್ಸಿನ ಮಿತಿಗಳು

ಹೆಚ್ಚಿನ ಸಂದರ್ಭಗಳಲ್ಲಿ 10 ವರ್ಷಗಳು ಮತ್ತು ಅದಕ್ಕಿಂತ ಹೆಚ್ಚು

ಕಠಿಣತೆಯ ಮಟ್ಟ

ಆರಂಭಿಕರಿಂದ ಮಧ್ಯಂತರ

ಋತು

ಅಕ್ಟೋಬರ್‌ನಿಂದ ಏಪ್ರಿಲ್ ತಿಂಗಳ ತನಕ.ಸಮುದ್ರ ಒರಟಾಗಿರುವಕಾರಣದಿಂದಾಗಿ ಮಾನ್ಸೂನ್ ತಿಂಗಳುಗಳು (ಜೂನ್-ಸೆಪ್ಟೆಂಬರ್) ಸೂಕ್ತವಲ್ಲ.

ಅಂದಾಜು ವೆಚ್ಚ

ತರಬೇತಿ ಮಟ್ಟ ಮತ್ತು ಸಲಕರಣೆಗಳನ್ನು ಅವಲಂಬಿಸಿ, ಪ್ರತಿ ಸೆಷನ್‌ಗೆರೂ. 1,500 ಮತ್ತು ರೂ. 3,000 ನಡುವೆ.

ಅನುಮತಿ ಇಲ್ಲ

ಮದ್ಯಪಾನ, ಅಮಲು ಪದಾರ್ಥದ ಸೇವನೆ, ಕಸ ಎಸೆಯುವುದು ಮತ್ತು ಚೂಪಾದ ವಸ್ತುಗಳನ್ನು ಒಯ್ಯುವುದು.

ನಿರ್ಬಂಧಗಳು

ಹೆಚ್ಚಿನ ಅಲೆಗಳ ಸಮಯದಲ್ಲಿ ಮತ್ತು ಸ್ಥಳೀಯ ಅಧಿಕಾರಿಗಳು ಸಮುದ್ರ ಅಲೆಗಳು ಅಪಾಯಕಾರಿಯಾಗಿದೆ ಎಂಬ ಎಚ್ಚರಿಕೆಯನ್ನು ನೀಡಿದಾಗ ಸರ್ಫಿಂಗ್ ಸೀಮಿತವಾಗಿರುತ್ತದೆ.

ಛಾಯಾಗ್ರಹಣ ಮತ್ತು ಮಾಧ್ಯಮ

ಸಾಮಾನ್ಯವಾಗಿ, ತೀರ ಪ್ರದೇಶದಿಂದ ಛಾಯಾಗ್ರಹಣಕ್ಕೆ ಅನುಮತಿಸಲಾಗುತ್ತದೆ.

ಅಗತ್ಯವಿದ್ದರೆ, ಇನ್‌ಸ್ಟ್ರಕ್ಟರ್‌ಗಳು ಅಥವಾ ಸಹಾಯಕ ಸಿಬ್ಬಂದಿಯು ಭಾಗವಹಿಸುವವರ ಆಕ್ಷನ್ ಫೋಟೋಗಳು ಮತ್ತು ಕಿರು ವೀಡಿಯೊಗಳನ್ನು ತೆಗೆದುಕೊಳ್ಳಬಹುದು.

ತೀರ ಪ್ರದೇಶದಾದ್ಯಂತ ಡ್ರೋನ್‌ಗಳ ಬಳಕೆ ಸೀಮಿತವಾಗಿದೆ ಮತ್ತು ಸ್ಥಳೀಯ ಅಧಿಕಾರಿಗಳಿಂದ ಅನುಮತಿ ಅಗತ್ಯವಾಗಿರುತ್ತದೆ.

ಏನೆಲ್ಲಾ ಸೇರಿದೆ

ಸರ್ಫ್‌ಬೋರ್ಡ್ ಮತ್ತು ಲೀಶ್

ಮೂಲಭೂತ ಸುರಕ್ಷತಾ ವಿವರಣೆ ಮತ್ತು ಸರ್ಫ್ ಸೂಚನೆಗಳು

ಸೆಷನ್ ಸಮಯದಲ್ಲಿ ಇನ್‌ಸ್ಟ್ರಕ್ಟರ್‌ಗಳಿಂದ ಬೆಂಬಲ

ಲೈಫ್ ಜಾಕೆಟ್ (ಆರಂಭಿಕರಿಗಾಗಿ, ಅಗತ್ಯವಿದ್ದರೆ)