ಸೃಜನಶೀಲತೆಯ ಚಿಮ್ಮುವಿಕೆ  

ದೇವರ ಸ್ವಂತ ನಾಡು ಎಂದು ಶ್ಲಾಘಿಸಲ್ಪಟ್ಟಿರುವ ಕೇರಳವು ತನ್ನ ಅದ್ಭುತವಾದ ಚಿನ್ನದ ಕಡಲತೀರಗಳು, ಹೊಳೆಯುವ ಹಿನ್ನೀರು ಮತ್ತು ಮಂಜಿನ ಗಿರಿಧಾಮಗಳಿಂದಾಗಿ ಭಾರತದ ಅತ್ಯಂತ ಅಪೇಕ್ಷಣೀಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಭೂಮಿಯ ಮೇಲಿನ ಈ ಸ್ವರ್ಗಕ್ಕೆ ಪ್ರವಾಸವನ್ನು ಗೆಲ್ಲುವ ಅವಕಾಶ ಇಲ್ಲಿದೆ. ಕೇರಳ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ಆಯೋಜಿಸುತ್ತಿರುವ ಮಕ್ಕಳ ಅಂತರಾಷ್ಟ್ರೀಯ ಆನ್‍ಲೈನ್ ಚಿತ್ರಕಲಾ (ಪೈಂಟಿಂಗ್) ಸ್ಪರ್ಧೆಯ ಮೂರನೇ ಆವೃತ್ತಿಗೆ ಈಗಲೇ ನೋಂದಾಯಿಸಿ. ಜಗತ್ತಿನಾದ್ಯಂತದ ಮಕ್ಕಳು ತಮ್ಮ ರಚನೆಗಳನ್ನು ಕಳುಹಿಸುವ ಮೂಲಕ ಮೊದಲ ಎರಡು ಸೀಸನ್‌ಗಳು ಅದ್ಭುತವಾದ ಯಶಸ್ಸನ್ನು ಕಂಡಿವೆ.

ಮೂರನೇ ಸೀಸನ್ ಇನ್ನೂ ಹೆಚ್ಚು ಆಸಕ್ತಿಯುತ ಮತ್ತು ಮನರಂಜನಾತ್ಮಕವಾಗಿರಲಿದೆ ಎಂದು ಭರವಸೆ ನೀಡುತ್ತದೆ. ಸ್ಪರ್ಧೆಯ ವಿಷಯ ’ಕೇರಳದ ಗ್ರಾಮೀಣ ಜೀವನ’ ಆಗಿದೆ ಮತ್ತು 4 ರಿಂದ 16 ವರ್ಷದೊಳಗಿರುವ ವಿಶ್ವದ ಯಾವುದೇ ಭಾಗದ ಯಾವುದೇ ಮಕ್ಕಳು ತಮ್ಮ ಪ್ರವೇಶಗಳನ್ನು ಆನ್‍ಲೈನ್ ಮೂಲಕ ಸಲ್ಲಿಸಬಹುದು. ಅದೃಷ್ಠಶಾಲಿ ವಿಜೇತರಿಗೆ ಕೇರಳದ ಪ್ರಮುಖ ಪ್ರವಾಸಿ ತಾಣಗಳ ಐದು ರಾತ್ರಿಗಳುಳ್ಳ ಪ್ರವಾಸವನ್ನು ಪ್ರಾಯೋಜಿಸಲಾಗುತ್ತದೆ.

ಹೆಚ್ಚಿನದನ್ನು ಓದಿ
Hand

ಕೇರಳಕ್ಕೆ ಪ್ರವಾಸವನ್ನು ಗೆಲ್ಲಿರಿ

ನಿಮ್ಮ ಮಕ್ಕಳಿಗೆ ಪೈಂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡುವ ಮೂಲಕ ನಿಮ್ಮ ಅಚ್ಚುಮೆಚ್ಚಿನ ತಾಣ ’ಕೇರಳ, ದೇವರ ಸ್ವಂತ ನಾಡು’ ವೀಕ್ಷಿಸಲು ಐದು ದಿನಗಳ ಪ್ರವಾಸವನ್ನು ಗೆಲ್ಲುವ ಅವಕಾಶ ಇಲ್ಲಿದೆ.

ಮಕ್ಕಳ ಅಂತರಾಷ್ಟ್ರೀಯ ಚಿತ್ರಕಲಾ (ಪೈಂಟಿಂಗ್) ಸ್ಪರ್ಧೆ 2023 ಯು ಎಲ್ಲಾ ವಿಜೇತರಿಗೆ ಅತ್ಯದ್ಭುತ ಬಹುಮಾನಗಳನ್ನು ನೀಡುತ್ತಿದೆ.


ಹೆಚ್ಚಿನದನ್ನು ತಿಳಿಯಿರಿ
Landscape Drawing

ಭಾಗವಹಿಸುವುದು ಹೇಗೆ?

ನಾನು ಈ ಪೈಂಟಿಂಗ್ ಸ್ಪರ್ಧೆಯಲ್ಲಿ ಹೇಗೆ ಭಾಗವಹಿಸಬಹುದು? ಅರ್ಹತೆಯ ಮಾನದಂಡಗಳೇನು? ಈ ಎಲ್ಲಾ ಪ್ರಶ್ನೆಗಳಿಗೆ ಈ ವೀಡಿಯೋದಲ್ಲಿ ಉತ್ತರಗಳನ್ನು ಕಾಣಬಹುದು. ಈ ಟ್ಯುಟೋರಿಯಲ್‍ ವೀಡಿಯೋವನ್ನು ವೀಕ್ಷಿಸಿ ಮತ್ತು ನೀವು ಸುಲಭವಾಗಿ ಭಾಗವಹಿಸಬಹುದು.

ಕೇರಳದ ಗ್ರಾಮೀಣ ಜೀವನ

ಈ ಸೀಸನ್ ನ ಸ್ಪರ್ಧೆಯ ವಿಷಯ ಕೇರಳದ ಗ್ರಾಮೀಣ ಜೀವನ ಆಗಿದೆ. ಕೇರಳದ ಗ್ರಾಮಗಳ ಹಳ್ಳಿಗಾಡಿನ ಹಳ್ಳಿ ಜೀವನವು ವಿಶ್ವಾದ್ಯಂತದಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕೇರಳದ ಗ್ರಾಮೀಣ ಜೀವನದ ಚಿತ್ರಗಳನ್ನು ಇಲ್ಲಿ ನೋಡಬಹುದು.

ಹಿಂದಿನ ಸೊಬಗುಗಳು

#ಕೇರಳದನೆನಪುಗಳು

ನಮ್ಮನ್ನು ಸಂಪರ್ಕಿಸಿ

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಸ್ಪರ್ಧೆಯ ಸಂಯೋಜಕರಿಗೆ ಗೆ ಇಮೇಲ್ ಮಾಡಿರಿcontest@keralatourism.org ಅಥವಾ ಕರೆ ಮಾಡಿ +91 70129 93589.

ದಯವಿಟ್ಟು ಎಲ್ಲಾ ಕೆಲಸದ ದಿನಗಳಲ್ಲಿ 10 am ಮತ್ತು 5 pm (ಭಾರತೀಯ ಪ್ರಮಾಣಿತ ಸಮಯ) ನಡುವೆ ಕರೆ ಮಾಡಿ.

ಸ್ಪರ್ಧೆಯ ಕುರಿತಂತೆ ಎಲ್ಲಾ ಸಂವಹನಗಳನ್ನು ಇಂಗ್ಲಿಷ್‌ ಭಾಷೆಯಲ್ಲಿಯೇ ಮಾಡತಕ್ಕದ್ದು.

Hand Hand