ಅತ್ಯದ್ಭುತವಾದ ಬಹುಮಾನಗಳು ನಿಮಗಾಗಿ ಕಾಯುತ್ತಿವೆ!

ನಿಮ್ಮ ಚಿಕ್ಕ ಮಕ್ಕಳು ಗೆದ್ದಿರುವ ರಜೆಯ ಪ್ರವಾಸಕ್ಕೆ ಹೋಗುವುದರ ಬಗ್ಗೆ ನಿಮಗೆ ಏನು ಅನ್ನಿಸುತ್ತದೆ?

ಕೇಳಲು ಎಷ್ಟು ಅದ್ಭುತವಾಗಿದೆ! ಹೌದು ತಾನೆ?
ನಿಮ್ಮ ಮಕ್ಕಳಿಗೆ ಪೈಂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡುವ ಮೂಲಕ ನಿಮ್ಮ ಅಚ್ಚುಮೆಚ್ಚಿನ ತಾಣ ’ಕೇರಳ, ದೇವರ ಸ್ವಂತ ನಾಡು’ ವೀಕ್ಷಿಸಲು ಐದು ದಿನಗಳ ಪ್ರವಾಸವನ್ನು ಗೆಲ್ಲುವ ಅವಕಾಶ ಇಲ್ಲಿದೆ.
ಮಕ್ಕಳ ಅಂತರಾಷ್ಟ್ರೀಯ ಚಿತ್ರಕಲಾ (ಪೈಂಟಿಂಗ್) ಸ್ಪರ್ಧೆ 2023 ಯು ಎಲ್ಲಾ ವಿಜೇತರಿಗೆ ಅತ್ಯದ್ಭುತ ಬಹುಮಾನಗಳನ್ನು ನೀಡುತ್ತಿದೆ.

 

ಬಹುಮಾನಗಳನ್ನು ಐದು ವಿಭಾಗಗಳಲ್ಲಿ ವರ್ಗೀಕರಿಸಲಾಗಿದೆ:

ವಿಶ್ವದ ಯಾವುದೇ ಭಾಗದಿಂದ ಕೇರಳಕ್ಕೆ ಪ್ರವಾಸ!

3 ವಿಜೇತರು

ಎಲ್ಲಾ ವರ್ಗಗಳಲ್ಲಿನ ಅಗ್ರಶ್ರೇಣಿಯ ಮೂವರು ವಿಜೇತರು ಸ್ಮರಣಿಕೆ ಮತ್ತು ಪ್ರಮಾಣಪತ್ರದ ಜೊತೆಗೆ ಕೇರಳದಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ಮಾಡಲು ಐದು ದಿನಗಳ ಪ್ರಾಯೋಜಕತ್ವವನ್ನು ಪಡೆಯುತ್ತಾರೆ.

10 ವಿಜೇತರು

ಜಗತ್ತಿನಾದ್ಯಂತ, ಭಾರತದ ಹೊರಗಿನವರಾದ 10 ವಿಜೇತರು ಕೇರಳಕ್ಕೆ ಐದು ದಿನಗಳ ಕುಟುಂಬ ಪ್ರವಾಸವನ್ನು ಗೆಲ್ಲುವ ಅವಕಾಶವನ್ನು ಹೊಂದಿದ್ದಾರೆ. ಪ್ರವಾಸಕ್ಕಾಗಿ ಎರಡು ಸದಸ್ಯರು ಸೇರಿಕೊಳ್ಳಬಹುದು. ಪ್ರಶಾಂತತೆ ಮತ್ತು ಸೌಂದರ್ಯದ ಭೂಮಿಗೆ ಮೋಜುಭರಿತ ಕುಟುಂಬ ಪ್ರವಾಸ ಮಾಡಲು ತಯಾರಾಗಿ!

ಭಾರತದ ಯಾವುದೇ ಭಾಗದಿಂದ ಕೇರಳಕ್ಕೆ ಪ್ರವಾಸ!

5 ವಿಜೇತರು

ಭಾರತದೊಳಗಿನ 5 ವಿಜೇತರು ಕೇರಳಕ್ಕೆ ಐದು ದಿನಗಳ ಕುಟುಂಬ ಪ್ರವಾಸವನ್ನು ಗೆಲ್ಲುವ ಅವಕಾಶ ಹೊಂದಿದ್ದಾರೆ. ಪ್ರವಾಸಕ್ಕಾಗಿ ಎರಡು ಸದಸ್ಯರು ಸೇರಿಕೊಳ್ಳಬಹುದು. ದೇಶದ ಅತ್ಯಂತ ಸುಂದರವಾದ ರಾಜ್ಯಗಳ ಪೈಕಿ ಒಂದಾಗಿರುವ ಇಲ್ಲಿ ಕೆಲವು ದಿನಗಳ ಕಾಲ ನಿಮ್ಮ ಕುಟುಂಬದೊಂದಿಗೆ ಸಮಯ ಕಳೆಯುವುದಕ್ಕಿಂತ ಅತ್ಯಾಕರ್ಷಕ ವಿಷಯ ಯಾವುದೂ ಇರಲು ಸಾಧ್ಯವಿಲ್ಲ!

ನಿಸರ್ಗಕ್ಕೆ ಸಮೀಪದಲ್ಲಿರಿ

3 ವಿಜೇತರು

ಕೇರಳದೊಳಗಿನ ಅಗ್ರಶ್ರೇಣಿಯ ಮೂರು ವಿಜೇತರು ಸ್ಮರಣಿಕೆ ಮತ್ತು ಪ್ರಮಾಣಪತ್ರದೊಂದಿಗೆ 2 ರಾತ್ರಿಗಳ ಕಾಲ ಕೇರಳದ ಪ್ರೀಮಿಯಂ ಪ್ರಾಪರ್ಟಿಯಲ್ಲಿ ಉಳಿಯಲು ಬುಕ್ಕಿಂಗ್ ಕೂಪನ್ ಪಡೆಯುತ್ತಾರೆ.

ಆಕರ್ಷಕ ಉಡುಗೊರೆಗಳು

70 ವಿಜೇತರು

ಭಾರತದ ಹೊರಗಿನ 20 ವಿಜೇತರು, ಭಾರತದೊಳಗಿನ 30 ವಿಜೇತರು ಮತ್ತು ಕೇರಳದೊಳಗಿನ 20 ವಿಜೇತರಿಗೆ ಆಕರ್ಷಕ ಉಡುಗೊರೆಗಳನ್ನು ನೀಡಲಾಗುತ್ತದೆ.

ಭಾರತದ ಹೊರಭಾಗದಿಂದ ಬರುವ ಪ್ರಚಾರಕರು

5 ವಿಜೇತರು

ಸ್ಪರ್ಧೆಗೆ ಗರಿಷ್ಠ ಸಂಖ್ಯೆಯಲ್ಲಿ ಪ್ರವೇಶಾರ್ಥಿಗಳನ್ನು ತಂದ ಭಾರತದಿಂದ ಹೊರಗಿರುವ ಐದು ಪ್ರಚಾರಕರು ಕೇರಳದಲ್ಲಿನ ಪ್ರದೇಶಗಳಿಗೆ ಐದು ದಿನದ ಪ್ರವಾಸದ ಪ್ಯಾಕೇಜ್ ಅನ್ನು ಪಡೆಯುವರು.

ಭಾರತದ (ಕೇರಳದ ಹೊರಭಾಗ) ಪ್ರಚಾರಕರು

5 ವಿಜೇತರು

ಸ್ಪರ್ಧೆಗೆ ಗರಿಷ್ಠ ಸಂಖ್ಯೆಯಲ್ಲಿ ಪ್ರವೇಶಾರ್ಥಿಗಳನ್ನು ತಂದ ಭಾರತದೊಳಗಿನ ಆದರೆ ಕೇರಳದಿಂದ ಹೊರಗಿರುವ ಐದು ಪ್ರಚಾರಕರು ಕೇರಳದಲ್ಲಿನ ಪ್ರದೇಶಗಳಿಗೆ ಸಂದರ್ಶಿಸುವ ಐದು ದಿನದ ಪ್ರವಾಸದ ಪ್ಯಾಕೇಜ್ ಅನ್ನು ಪಡೆಯುವರು.

ಉಳಿದೆಲ್ಲಾ ಅಭ್ಯರ್ಥಿಗಳಿಗೆ ಭಾಗವಹಿಸಿರುವ ಬಗ್ಗೆ ಆನ್‍ಲೈನ್ ಡಿಜಿಟಲ್ ಪ್ರಮಾಣಪತ್ರವನ್ನು ನೀಡಲಾಗುತ್ತದೆ ಇದನ್ನು ಫಲಿತಾಂಶ ಪ್ರಕಟಗೊಂಡ 6 ತಿಂಗಳ ಒಳಗಾಗಿ ಡೌನ್‍ಲೋಡ್ ಮಾಡಿಕೊಳ್ಳತಕ್ಕದ್ದು.
ಇದರಲ್ಲಿ ಬದಲಿಯಾಗಿ ಯಾವುದೇ ನಗದನ್ನು ನೀಡಲಾಗುವುದಿಲ್ಲ ಮತ್ತು ಘೋಷಿಸಿರುವಂತೆಯೇ ಬಹುಮಾನಗಳನ್ನು ನೀಡಲಾಗುತ್ತದೆ.

ಒಟ್ಟು 101 ವಿಜೇತರಿರುತ್ತಾರೆ!!

18 ವಿಜೇತರು ಕೇರಳಕ್ಕೆ ಕುಟುಂಬ ಪ್ರವಾಸಗಳನ್ನು ಗೆಲ್ಲುವ ಅವಕಾಶ ಹೊಂದಿರುತ್ತಾರೆ!

10 ವಿಜೇತರಿಗೆ ಸೋಲೋ ಪ್ರವಾಸಗಳು!

 

Landscape Drawing