ಈ ಕುರಿತು

ಎರಡು ಸೀಸನ್‌ಗಳ ಮೋಜು ಮತ್ತು ರೋಮಾಂಚಕತೆಯ ನಂತರ, ಅಂತರಾಷ್ಟ್ರೀಯ ಮಕ್ಕಳ ಆನ್‍ಲೈನ್ ಪೈಂಟಿಂಗ್ ಸ್ಪರ್ಧೆ ಹೆಚ್ಚು ಬಹುಮಾನಗಳು ಮತ್ತು ಸವಾಲುಗಳೊಂದಿಗೆ ಮರಳಿ ಬಂದಿದೆ.

ಜಗತ್ತಿನಾದ್ಯಂತದ ಮಕ್ಕಳು ತಮ್ಮ ರಚನೆಗಳನ್ನು ಕಳುಹಿಸುವ ಮೂಲಕ ಮೊದಲ ಎರಡು ಸೀಸನ್‌ಗಳು ಅದ್ಭುತವಾದ ಯಶಸ್ಸನ್ನು ಕಂಡಿವೆ. ಮೂರನೇ ಸೀಸನ್ ಇನ್ನೂ ಹೆಚ್ಚು ಆಸಕ್ತಿಯುತ ಮತ್ತು ಮನರಂಜನಾತ್ಮಕವಾಗಿರಲಿದೆ ಎಂದು ಭರವಸೆ ನೀಡುತ್ತದೆ. ಸೀಸನ್ 3 ರ ವಿಷಯ ’ಕೇರಳದ ಗ್ರಾಮೀಣ ಜೀವನ’ ಆಗಿದೆ ಮತ್ತು ನಿಮ್ಮ ಉಲ್ಲೇಖಕ್ಕಾಗಿ ನಾವು ಫೋಟೋಗಳನ್ನು ಮತ್ತು ವೀಡಿಯೋಗಳನ್ನು ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಿದ್ದೇವೆ.

4 ಮತ್ತು 16 ವರ್ಷ ವಯಸ್ಸಿನ ನಡುವೆ ವಿಶ್ವದ ಯಾವುದೇ ಭಾಗದಿಂದ ಯಾವುದೇ ಮಗುವು ತಮ್ಮ ಪ್ರವೇಶವನ್ನು ಆನ್‍ಲೈನ್‍ನಲ್ಲಿ ಸಲ್ಲಿಸಬಹುದು. ಪೋಷಕರು ಅಥವಾ ಪಾಲಕರು ತಮ್ಮ ಮಕ್ಕಳ ಪರವಾಗಿ ನೋಂದಣಿ ಮಾಡಬಹುದು ಮತ್ತು ಪ್ರತಿಯೊಬ್ಬ ಅಭ್ಯರ್ಥಿ ಗರಿಷ್ಠ ಐದು ಪ್ರವೇಶಗಳನ್ನು ಸಲ್ಲಿಸಬಹುದು. ಅದೃಷ್ಠಶಾಲಿ ವಿಜೇತರು ಮತ್ತು ಪ್ರಚಾರಕರಿಗೆ ಕೇರಳದ ಪ್ರಮುಖ ಪ್ರವಾಸಿ ತಾಣಗಳಿಗೆ ಐದು ದಿನಗಳ ಪ್ರವಾಸವನ್ನು ಪ್ರಾಯೋಜಿಸಲಾಗುತ್ತದೆ. ಇದಿಷ್ಟೇ ಅಲ್ಲ, ಎಲ್ಲಾ ವರ್ಗಗಳ ಅತ್ಯುತ್ತಮ ಪ್ರವೇಶಗಳಿಗೆ ಆಕರ್ಷಕ ಉಡುಗೊರೆಗಳ ಸಂಗ್ರಹವೂ ಇದೆ. ಈಗಲೇ ನೋಂದಾಯಿಸಿ ಮತ್ತು ದೇವರ ಸ್ವಂತ ನಾಡಿನ ಪ್ರಮುಖ ತಾಣಗಳಿಗೆ ಭೇಟಿ ನೀಡುವ ಅವಕಾಶವನ್ನು ಪಡೆಯಿರಿ!

Landscape Drawing