ಪ್ರಚಾರಕರು

ಇದು ಕೇವಲ ಮಕ್ಕಳಿಗೆ ಮಾತ್ರವಲ್ಲ! ವಯಸ್ಕರಾದ ನಿಮಗೂ ಅತ್ಯದ್ಭುತ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ!

ಹಾಗದರೆ, ಇನ್ನೇಕೆ ತಡ ಮಾಡುತ್ತಿದ್ದೀರಿ?! ನೀವು ಮಾಡಬೇಕಾಗಿರುದು ಇಷ್ಟೇ – ನಿಮ್ಮ ಬಿಡುವಿಲ್ಲದ ವೇಳಾಪಟ್ಟಿ, ಒತ್ತಡದ ಕೆಲಸ ಅಥವಾ ನೀರಸ ದಿನಚರಿಗಳಿಂದ ವಿರಾಮ ಪಡೆಯಿರಿ. ಹೆಚ್ಚು ಬೇಡಿಕೆಯಿರುವ ಪ್ರವಾಸಿ ತಾಣಕ್ಕೆ ಭೇಟಿ ನೀಡಲು ಏಕಾಂಗಿ ಪ್ರವಾಸಕ್ಕೆ ಸಿದ್ಧರಾಗಿ - ದೇವರ ಸ್ವಂತ ನಾಡು - ಕೇರಳ! ಕೇರಳದ ಚಿಪ್ಸ್‌ ಅನ್ನು ಸವಿಯಿರಿ, ಪೆರಿಯಾರ್‌ನಲ್ಲಿ ಪಾದಯಾತ್ರೆ ಮಾಡಿ, ಸುಂದರವಾದ ಆನೆಗಳ ಫೋಟೋಗಳನ್ನು ಕ್ಲಿಕ್ ಮಾಡಿ, ಜೀವನ ಹೊಸತನವನ್ನು ಪಡೆಯಲು ಸುಂದರವಾದ ಬೀಚ್‌ಗಳ ತಂಗಾಳಿಯನ್ನು ಮತ್ತು ಇನ್ನೂ ಹೆಚ್ಚಿನವುಗಳನ್ನು ಅನುಭವಿಸಿ. ನಿಮಗೆ ಇನ್ನೂ ತಿಳಿಯಲಿಲ್ಲವೇ?!

ನೀವು ಏನು ಮಾಡಬೇಕು?

18 ವರ್ಷವನ್ನು ಮೀರಿದ ಯಾವುದೇ ವ್ಯಕ್ತಿಯು ತನ್ನ ಸ್ವಯಂ ಪ್ರೇರಣೆಯಿಂದ ಈ ಸ್ಪರ್ಧೆಯ ಪ್ರಚಾರಕರಾಗಿ ನೋಂದಾಯಿಸಿಕೊಳ್ಳಬಹುದು. ಪ್ರಚಾರಕರಿಂದ ಈ ಕೆಳಕಂಡವುಗಳನ್ನು ನಿರೀಕ್ಷಿಸಲಾಗುತ್ತದೆ:

  • ಪ್ರಚಾರಕರಾಗಿ ನೋಂದಣಿ ಮಾಡಿಕೊಳ್ಳಿ.
  • ನಿಮ್ಮ ನೋಂದಣಿಯಲ್ಲಿ ಸ್ವೀಕರಿಸಲಾದ ಲಿಂಕ್ ಅನ್ನು ಭಾವೀ ಸ್ಪರ್ಧಿಗಳಿಗೆ ಫಾರ್ವರ್ಡ್ ಮಾಡಿರಿ.
  • ಅಂತಹ ಆಭ್ಯರ್ಥಿಗಳು ನೋಂದಾಯಿಸಿದಾಗ, ಅವರು ನಿಮ್ಮ ನೋಂದಣಿಯ ಅಡಿಯಲ್ಲಿ ಬರುತ್ತಾರೆ.

ಪ್ರಚಾರಕರಾಗಿ ನೋಂದಾಯಿಸಿಕೊಳ್ಳಿ

ಪ್ರಚಾರಕರಿಗೆ ಬಹುಮಾನಗಳು

  • ಸ್ಪರ್ಧೆಗೆ ಗರಿಷ್ಠ ಸಂಖ್ಯೆಯಲ್ಲಿ ಪ್ರವೇಶಾರ್ಥಿಗಳನ್ನು ತಂದ ಭಾರತದಿಂದ ಹೊರಗಿರುವ ಐದು ಪ್ರಚಾರಕರು ಕೇರಳದಲ್ಲಿನ ಪ್ರದೇಶಗಳಿಗೆ ಐದು ದಿನದ ಪ್ರವಾಸದ ಪ್ಯಾಕೇಜ್ ಅನ್ನು ಪಡೆಯುವರು.
  • ಸ್ಪರ್ಧೆಗೆ ಗರಿಷ್ಠ ಸಂಖ್ಯೆಯಲ್ಲಿ ಪ್ರವೇಶಾರ್ಥಿಗಳನ್ನು ತಂದ ಭಾರತದೊಳಗಿನ ಆದರೆ ಕೇರಳದಿಂದ ಹೊರಗಿರುವ ಐದು ಪ್ರಚಾರಕರು ಕೇರಳದಲ್ಲಿನ ಪ್ರದೇಶಗಳಿಗೆ ಸಂದರ್ಶಿಸುವ ಐದು ದಿನದ ಪ್ರವಾಸದ ಪ್ಯಾಕೇಜ್ ಅನ್ನು ಪಡೆಯುವರು.
Landscape Drawing