Trade Media
     

ಬೇಕಲ್


ಸ್ಥಳ: ಬೇಕಲ್ ಕೋಟೆಯಿಂದ ಸುಮಾರು ಒಂದು ಕಿ.ಮೀ, ರಾಷ್ಟ್ರೀಯ ಎದ್ದಾರಿಯಲ್ಲಿ ಕಾಸರಗೋಡಿ ನ ದಕ್ಷಿಣದಿಂದ ಸುಮಾರು 16 ಕಿ.ಮೀ, ಕಾಸರಗೋಡು ಜಿಲ್ಲೆ, ಉತ್ತರ ಕೇರಳ.

ಕೇರಳ ರಾಜ್ಯದ ಉತ್ತರದ ದಿಕ್ಕಿನ ತುದಿಯಲ್ಲಿರುವ ಕಾಸರಗೋಡು ದೈವಗಳು, ಕೋಟೆಗಳು, ನದಿಗಳು, ಬೆಟ್ಟಗಳು ಮತ್ತು ಸುಂದರ ಸಮುದ್ರತೀರಗಳಿಗೆ ಹೆಸರುವಾಸಿಯಾಗಿದೆ. ಬೇಕಲ್‌ನಲ್ಲಿರುವ ಭವ್ಯವಾದ ಕೋಟೆಯು ಕೇರಳದ ಅತಿದೊಡ್ಡ ಮತ್ತು ಅತ್ಯಂತ ಸಮರ್ಪಕವಾಗಿ ರಕ್ಷಿಸಲ್ಪಟ್ಟ ಕೋಟೆಯಾಗಿದೆ. ಬೇಕಲ್‌ನಬಳಿಯಿರುವ ಹೆಚ್ಚು ಆಳವಿಲ್ಲದ ಸುಂದರ ಕಡಲತಡಿಯು ಬೇಕಲ್ ಧಾಮಗಳ ಅಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಲ್ಪಟ್ಟಿದೆ (BRDC).

ಸೌಂದರ್ಯ ವರ್ಧನೆ: ಈ ತಾಣದ ಸೌಂದರ್ಯವರ್ಧನೆಯು ಸಮುದ್ರತೀರದಲ್ಲಿ ಎರಡು ಜಂಬಿಟ್ಟಿಗೆಗಳನ್ನುಪಯೋಗಿಸಿ ನಿರ್ಮಿಸಿರುವ ತೆಯ್ಯಂಗಳ ಶಿಲ್ಪ ಮತ್ತು ನಿಲಂಬೂರಿನ ಕಲಾಕಾರರು ರಚಿಸಿರುವ ಭಿತ್ತಿಚಿತ್ರಗಳಿಂದ ಕೂಡಿದ ಗೋಡೆಯಿಂದಾದ ಕಟ್ಟಡಗಳನ್ನು ಒಳಗೊಂಡಿದೆ. ಇದಿಷ್ಟೇ ಅಲ್ಲದೇ ನಿಲುಗಡೆಯ ತಾಣದಲ್ಲಿ ಜಂಬಿಟ್ಟಿಗೆಯ ಬಂಡೆಗಳನ್ನುಪಯೋಗಿಸಿ ಶಿಲಾಉದ್ಯಾನವನ್ನೂ ನಿರ್ಮಿಸಲಾಗಿದೆ. ಸಾಮಾಜಿಕ ಅರಣ್ಯ ಯೋಜನೆಯಡಿಯಲ್ಲಿ ಸಮುದ್ರ ತೀರ ಪ್ರದೇಶದಲ್ಲಿ ಮರಗಳನ್ನು ನೆಡಲಾಗಿದೆ.

ವಾಹನ ನಿಲುಗಡೆಯ ಸೌಲಭ್ಯಗಳು: BRDCಯು ಸುಮಾರು 7000 ಚದರ ಮೀಟರುಗಳಷ್ಟು ಜಾಗವನ್ನುವಿವಿಧ ಬಗೆಯ ವಾಹನಗಳ ನಿಲುಗಡೆಗಾಗಿ ಅಭಿವೃದ್ಧಿಗೊಳಿಸಿದೆ.

ನಡೆದಾರಿ: ಪ್ರವಾಸಿಗರಿಗೆ ಸೊಗಸಾದ ಕಡಲಕರೆಯ ಸೌಂದರ್ಯ ಮತ್ತು ಬೇಕಲ್ ಕೋಟೆಯ ಚಿತ್ರಾವಳಿಯಂತಹ ದೃಶ್ಯವನ್ನು ಆನಂದಿಸಲಾಗುವಂತೆ ಒಂದು ಸುಂದರವಾದ ನಡೆದಾರಿಯನ್ನು ಮಾಡಲಾಗಿದೆ.

ದೀಪಾಲಂಕೃತ ಕಡಲತಡಿ: ಸಂಜೆಯ ಸಮಯದಲ್ಲಿ ಕಡಲತಡಿಯು ದೀಪಾಲಂಕೃತಗೊಂಡು ಪ್ರವಾಸಿಗರು ಸೂರ್ಯಾಸ್ತದ ನಂತರವೂ ಕಡಲತಡಿಯಲ್ಲಿಹೆಚ್ಚು ಸಮಯ ಕಳೆಯಲಾಗುವಂತೆ ಮಾಡುತ್ತದೆ.

ವಿಶ್ರಾಂತಿಯ ಸೌಲಭ್ಯಗಳು: ಮಲ್ಟಿಶೆಡ್ ಮತ್ತು ಏರುಮಡಂಗಳು ಪ್ರವಾಸಿಗರಿಗೆ ವಿಶ್ರಾಂತಿಯನ್ನು ಪಡೆದುಕೊಂಡು ಸಮುದ್ರದ ಮೆಲುಗಾಳಿಯನ್ನು ಆನಂದಿಸಲಾಗುವಂತೆ ಮಾಡುತ್ತವೆ. ಕಡಲತಡಿಯಲ್ಲಿ ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳನ್ನೇ ಉಪಯೋಗಿಸಿಕೊಂಡು ಆಸನ ವ್ಯವಸ್ಥೆಯನ್ನು ಮಾಡಲಾಗಿದೆ.

ಶೌಚಾಲಯಗಳು: ಪ್ರವಾಸಿಗರ ಉಪಯೋಗಕ್ಕಾಗಿ ಶೌಚಾಲಯಗಳನ್ನು ಒದಗಿಸಲಾಗಿದೆ ಮತ್ತು ಈ ಪ್ರದೇಶವನ್ನು ಸ್ವಚ್ಛವಾಗಿಡಲು ಕಡಲತಡಿಯುದ್ದಕ್ಕೂ ಪರಿಸರಸ್ನೇಹಿ ಬೊಂಬಿನ ಕಸದ ತೊಟ್ಟಿಗಳನ್ನು ಒದಗಿಸಲಾಗಿದೆ.

ಮಕ್ಕಳ ಉದ್ಯಾನವನ: 14 ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳಿಗಾಗಿ ಒಂದು ಉದ್ಯಾನವನವನ್ನು ನಿರ್ಮಿಸಲಾಗಿದೆ.

ಈ ರಿತಿ ಅಭಿವೃದ್ಧಿಗೊಳಿಸಿದ ತಾಣವನ್ನು ನಿರ್ವಹಿಸುವ ಸಲುವಾಗಿ ಪ್ರತಿಯೊಬ್ಬ ಪ್ರವಾಸಿಯಿಂದ ಒಂದು ರುಪಾಯಿಯ ಅತ್ಯಲ್ಪ ಮೊತ್ತವನ್ನು ಪ್ರವೇಶ ಶುಲ್ಕವಾಗಿ ಪಡೆಯಲಾಗುತ್ತದೆ. ಇದೇ ರೀತಿಯ ಅತ್ಯಲ್ಪ ಮೊತ್ತದ ವಾಹನ ನಿಲ್ದಾಣದ ಶುಲ್ಕವನ್ನು ಪಡೆಯಲಾಗುತ್ತದೆ. BRDC ಯು ಭವಿಷ್ಯದಲ್ಲಿ ಕಡಲತಡಿಯ ಇನ್ನೂ 11 ಎಕರೆ ಭೂಮಿಯಲ್ಲಿ ಜಲ ಉದ್ಯಾನವನ್ ಮತ್ತು ವಿಷಯೋದ್ಯಾನವನಗಳನ್ನು ನಿರ್ಮಿಸುವ ಗುರಿಯನ್ನಿಟ್ಟುಕೊಂಡಿದೆ.

ಕೇರಳ ಸರ್ಕಾರವು ಬೇಕಲನ್ನು  ಒಂದು ಪರಿಸರಸ್ನೇಹೀ ತಾಣವನ್ನಾಗಿ ಅಭಿವೃದ್ಧಿಗೊಳಿಸಲು BRDC ಯನ್ನು ಸ್ಥಾಪಿಸಿತು. BRDCಯು ಬೇಕಲ್ ಕೋಟೆಯ ಕಡಲತಡಿಯನ್ನು ಅಭಿವೃದ್ಧಿಪಡಿಸಲು 19 ಎಕರೆ ಭೂಮಿಯನ್ನು ಉಪಯೋಗಿಸಿಕೊಂಡಿದೆ ಮತ್ತು ಇದಕ್ಕಾಗಿ ಭೂಮಿಯ ಬೆಲೆಯೂ ಸೇರಿದಂತೆ ಅಂದಾಜು 25 ದಶಲಕ್ಷ ರುಪಾಯಿಗಳನ್ನು ಖರ್ಚು ಮಾಡಲಾಗಿದೆ.

ಅಲ್ಲಿಗೆ ತಲಪುವ ರೀತಿ:
  • ಸಮೀಪದ ರೈಲು ನಿಲ್ದಾಣ: ಕೋಯಿಕ್ಕೋಡ್-ಮಂಗಳೂರು-ಮುಂಬೈ ಮಾಗದಲ್ಲಿರುವ ಕಾಸರಗೋಡು.
  • ಸಮೀಪದ ವಿಮಾನ ನಿಲ್ದಾಣ: ಕಾಸರಗೋಡು ಪಟ್ಟಣದಿಂದ ಸುಮಾರು 50 ಕಿ.ಮೀ ದೂರವಿರುವ ಮಂಗಳೂರು; ಕಾಸರಗೋಡು ಪಟ್ಟಣದಿಂದ ಸುಮಾರು 200 ಕಿ.ಮೀ ದೂರವಿರುವ ಕರೀಪುರ ಅಂತ್‌ರಾಷ್ಟ್ರೀಯ ವಿಮಾನ ನಿಲ್ದಾಣ.


 
 
Photos
Photos
information
Souvenirs
 
     
Department of Tourism, Government of Kerala,
Park View, Thiruvananthapuram, Kerala, India - 695 033
Phone: +91-471-2321132 Fax: +91-471-2322279.

Tourist Information toll free No:1-800-425-4747
Tourist Alert Service No:9846300100
Email: info@keralatourism.org, deptour@keralatourism.org

All rights reserved © Kerala Tourism 1998. Copyright Terms of Use
Designed by Stark Communications, Hari & Das Design.
Developed & Maintained by Invis Multimedia