Trade Media
     

ತೇಕ್ಕಡಿ

ಎತ್ತರ: ಸಮುದ್ರಮಟ್ಟದಿಂದ 900-1800 ಮೀ.

ಮಳೆ: 2500 ಮಿ.ಮೀ

ತೇಕ್ಕಡಿಯೆಂಬ ಶಬ್ದವೇ ಆನೆಗಳು ಮತ್ತು ಸಂಬಾರಗಳ ಸುವಾಸನೆಯನ್ನು ಹೊತ್ತಿರುವ ಕೊನೆಯೇ ಕಾಣದ ಬೆಟ್ಟಗಳ ಸರಮಾಲೆಯ ಚಿತ್ರಗಳನ್ನು ತರುತ್ತದೆ. ತೇಕ್ಕಡಿಯ ಪೆರಿಯಾರ್ ಅರಣ್ಯವು ಭಾರತದಲ್ಲಿನ ಒಂದು ಅತ್ಯುತ್ತಮ ವನ್ಯಜೀವಿಗಳ ರಕ್ಷಿತಾರಣ್ಯವಾಗಿದ್ದು, ಮತ್ತು ಸಂಪೂರ್ಣ ಜಿಲ್ಲೆಯು ಚಿತ್ರಸದೃಶವಾದ ತೋಟಗಳು, ಟ್ರೆಕ್ಕಿಂಗ್ ಮತ್ತು ಬೆಟ್ಟದ ನಡಿಗೆಗಳಿಗೆ ಅವಕಾಶ ಕೊಡುವ ಬೆಟ್ಟಗಳ ಪಟ್ಟಣಗಳಿಂದ ಕೂಡಿದೆ.

ರಸ್ತೆ
ಕುಮಿಲಿಯಿಂದ (4 ಕಿ.ಮೀ ದೂರದಲ್ಲಿದೆ) ವಿವಿಧ ಪ್ರವಾಸಿ ತಾಣಗಳಿಗೆ ಹೇರಳವಾಗಿ ಬಸ್ಸುಗಳಿವೆ.
ತೇಕ್ಕಡಿಯಿಂದ ಕೆಲವು ಪ್ರಮುಖ ಪಟ್ಟಣಗಳಿಗಿರುವ ದೂರ
ಕುಮಿಲಿ 4 ಕಿ.ಮೀ (15 ನಿಮಿಷ) ಶಬರಿಮಲೆಯ ಮೂಲಕ
ಪುಲ್ಲುಮೇಡು: 50 ಕಿ.ಮೀ (2 ಗಂ)
ಇಡುಕ್ಕಿ: 65 ಕಿ.ಮೀ (21/2ಗಂ)
ಮುನ್ನಾರ್:106 ಕಿ.ಮೀ (4ಗಂ)
ಕುಮಾರಕೋಂ: 128 ಕಿ.ಮೀ (4 ಗಂ) ಶಬರಿಮಲೆಯ ಮೂಲಕ.
ಎರುಮೆಲಿ: 134 ಕಿ.ಮೀ (4 ಗಂ)
ಕೊಡೈಕೆನಾಲ್: 149 ಕಿ.ಮೀ (5 ಗಂ)
ಅಲಪ್ಪುಜ: 164 ಕಿ.ಮೀ (5 ಗಂ)
ಕೊಲ್ಲಂ: 220 ಕಿ.ಮೀ (6 ಗಂ)
ಊಟಿ: 390 ಕಿ.ಮೀ (11 ಗಂ)

ಕುಮಿಲಿಯಿಂದ ಹೊರಡುವ ಬಸ್‌ಗಳ ವೇಳಾಪಟ್ಟಿ:
ತೇಕ್ಕಡಿ 0930, 1045, 1130, 1200, 1230, 1330, 1530 ಗಂಟೆ
ಕುಮಾರಕೋಂ: 0700 ಗಂಟೆ
ಮುನ್ನಾರ್: 0600, 0945, 1330 ಗಂಟೆ
ಎರ್ನಾಕುಲಂ: 0700, 1330, 1515, 1630,1715, 1930 ಗಂಟೆ
ತಿರುವನಂತಪುರಂ (ಕುಮಿಲಿಯಿಂದ): 0840, 1530, 1615 ಗಂಟೆ: (ತೇಕ್ಕಡಿಯಿಂದ): 0820, 1515 ಗಂಟೆ
ಕೊಟ್ಟಾಯಂ: ಹೇರಳ ಸಂಖ್ಯೆಯ ಬಸ್ಸುಗಳು
ಅಲಪ್ಪುಜ: 1115 ಗಂಟೆ
ಚೆರ್ತಾಲ: 1415 ಗಂಟೆ
ಇಡುಕ್ಕಿ: ಹೇರಳ ಸಂಖ್ಯೆಯ ಬಸ್ಸುಗಳು
ಚೆನ್ನೈ: 1630, 1900 ಗಂಟೆ
ಪಾಂಡಿಚೆರಿ: 1630 ಗಂಟೆ
ಮಧುರೈ: 0115, 0515, 0525, 0645, 0716, 0720, 0730, 0755, 0835, 0940, 1030, 1045, 1120, 1155, 1300, 1315, 1320, 1420, 1515, 1540, 1550, 1650, 1705, 1800, 1840, 1905, 2045 ಗಂಟೆ
ದಿಂಡಿಗಲ್: ಪದೇಪದೇ ಬಸ್ ಸೌಕರ್ಯ

ಕುಮಿಲಿಯಿಂದ ಕೊಡೈಕೆನಾಲ್‌ಗೆ ನೇರವಾದ ಬಸ್ಸುಗಳಿರುವುದಿಲ್ಲ. ದಿಂಡಿಗಲ್ ಬಸ್ಸು ನಿಮ್ಮನ್ನು ವತಲಕುಂಡುವಿಗೆ ಕರೆದುಕೊಂಡು ಹೋಗುತ್ತದೆ. ಅಲ್ಲಿಂದ ಕೊಡೈಕೆನಾಲಿಗೆ(149 ಕಿ.ಮೀ ) ಹೇರಳವಾದ ಸಂಖ್ಯೆಯ ಬಸ್ಸುಗಳು ಸಿಗುತ್ತವೆ.
1971.ತ್ರಿಚಿ: 0855, 1045, 1925 ಗಂಟೆ ಪಳನಿ: 0930, 1135, 1830, 1850ಗಂಟೆ

ಸಸ್ಯಸಂಪತ್ತು

171 ಹುಲ್ಲಿನ ಪ್ರಬೇಧಗಳು, 143 ಸೀತೆಹೂವಿನ ಪ್ರಬೇಧಗಳು ಮತ್ತು ಕೇವಲ ಒಂದೇ ಒಂದು ಪೋಡೋಕಾರ್ಪಸ್ ವಾಲ್ಲಿಚಿಯಾನಸ್ ಜಾತಿಯ ದಕ್ಷಿಣ ಭಾರತದ ಕೋನಿಫರ್ಗಳನ್ನೂ ಒಳಗೊಂಡಂತೆ 1965 ಹೂವಿನ ಗಿಡಗಳು

ಪ್ರಾಣಿಸಂಕುಲ

ಸಸ್ತನಿಗಳು: ದೋಣಿಯಿಂದ ವೀಕ್ಷಿಸಬಹುದಾದ ಕಾಡಾನೆ, ಕಾಡೆಮ್ಮೆ, ಸ್ಯಾಂಬರ್ ಜಿಂಕೆ ಮತ್ತು ಕಾಡು ಹಂದಿಗಳು ಮತ್ತು ಎತ್ತರದ ಶಿಲಾಪ್ರದೇಶಗಳಲ್ಲಿ ನೀಲಗಿರಿ ಅಜಹರಿಣ ಮತ್ತು ವಿನಾಶದ ಭೀತಿಯನ್ನೆದುರಿಸುತ್ತಿರುವ ನಿತ್ಯಹರಿದ್ವರ್ಣದ ಒಳಭಾಗದಲ್ಲಿಯೇ ವಾಸಿಸುವ ಹುಲಿಬಾಲದ ಮೆಕ್ಯಾಕ್ ಕೋತಿ ಮತ್ತು ಬಾನೆಟ್ ಮೆಕ್ಯಾಕ್, ಮಲಬಾರ್ ದೈತ್ಯ ಅಳಿಲು, ಹುಲಿ, ಕಾಡುಬೆಕ್ಕು, ಸ್ಲಾತ್-ಕರಡಿ ಇತ್ಯಾದಿ.

ಪಕ್ಷಿಗಳು: ವಲಸೆ ಪಕ್ಷಿಗಳೂ ಸೇರಿದಂತೆ 265 ಪ್ರಬೇಧಗಳು. ಹಾರ್ನ್‌ಬಿಲ್, ಕೊಕ್ಕರೆ, ಮರಕುಟಿಕ, ಮೀಂಚುಳ್ಳಿ, ಹಿಂಸ್ರಪಕ್ಷಿ, ನೀರುಕಾಗೆ, ದೊಂಬಕಾಗೆ, ಡಾರ್ಟರ್ ಇತ್ಯಾದಿ.

ಸರೀಸೃಪಗಳು: ಮಂಡಲ, ಕಟ್ಟು ಹಾವು, ಹಲವು ವಿಷರಹಿತ ಹಾವುಗಳು ಮತ್ತು ಮಾನೀಟರ್ ಹಲ್ಲಿ.

ಉಭಯಚರಗಳು: ಟೋಡ್ ಮತ್ತು ಲಿಂಬ್‌ಲೆಸ್ಸ್ ಸಿಸಿಲಿಅನ್ಸ್ ವರ್ಣರಂಜಿತ ಮಲಬಾರ್ ಹಾರುವ ಕಪ್ಪೆಗಳನ್ನೂ ಒಳಗೊಂಡಂತೆ, ಭಾರತೀಯ ಕಾಡುಗಪ್ಪೆ, ಫಂಗಾಯ್ಡ್ ಕಪ್ಪೆ ಮತ್ತುಎರಡು ಬಣ್ಣದ ಕಪ್ಪೆ.

ಮತ್ಸ್ಯವರ್ಗ: ಪೆರಿಯಾರ್ ಸರೋವರ ಮತ್ತು ತೊರೆಗಳಲ್ಲಿ ವಿನಾಶದ ಭೀತಿಯನ್ನೆದುರಿಸುತ್ತಿರುವ ಮಶೀರ್ ಪ್ರಬೇಧದ ಮೀನನ್ನೂ ಒಳಗೊಂಡಂತೆ ಹಲವಾರು ಜಾತಿಯ ಮೀನುಗಳಿವೆ. ಸಸ್ತನಿಯಾದ ನೀರುನಾಯಿಯನ್ನು ದೋಣಿಯಿಂದ ಪದೇಪದೇ ವೀಕ್ಷಿಸಬಹುದು.

ತೋಟಗಳು: ಟೀ, ಏಲಕ್ಕಿ, ಮೆಣಸು ಮತ್ತು ಕಾಫಿ ತೋಟಗಳು ಪೆರಿಯಾರ್ ವನ್ಯಜೀವಿ ಸಂರಕ್ಷಿತಾರಣ್ಯವನ್ನು ಸುತ್ತುಗಟ್ಟಿಕೊಂಡಿವೆ.

ರಕ್ಷಿತಾರಣ್ಯದ ವೀಕ್ಷಣಾ ಗೋಪುರಗಳು: ಪೆರಿಯಾರ್ ಅರಣ್ಯದ ಒಳಭಾಗವನ್ನು ವೀಕ್ಷಿಸುವ ಸಲುವಾಗಿ ಎರಡು ವೀಕ್ಷಣಾ ಗೋಪುರಗಳನ್ನು ನಿರ್ಮಿಸಲಾಗಿದೆ. ತೇಕ್ಕಡಿಯ ಅರಣ್ಯ ಮಾಹಿತಿ ಕೇಂದ್ರದಲ್ಲಿ ಕಾದಿರಿಸಬಹುದು. ದೂರವಾಣಿ: 322028.

ಅನುಮತಿಯನ್ನು ಕೊಡುವ ಅಧಿಕಾರಿ: ವನ್ಯಜೀವಿ ರಕ್ಷಣಾಧಿಕಾರಿ, ಪೆರಿಯಾರ್ ಹುಲಿ ರಕ್ಷಿತಾರಣ್ಯ, ತೇಕ್ಕಡಿ.


 
 
Photos
Photos
information
Souvenirs
 
     
Department of Tourism, Government of Kerala,
Park View, Thiruvananthapuram, Kerala, India - 695 033
Phone: +91-471-2321132 Fax: +91-471-2322279.

Tourist Information toll free No:1-800-425-4747
Tourist Alert Service No:9846300100
Email: info@keralatourism.org, deptour@keralatourism.org

All rights reserved © Kerala Tourism 1998. Copyright Terms of Use
Designed by Stark Communications, Hari & Das Design.
Developed & Maintained by Invis Multimedia