ಆಯುರ್ವೇದ

 
Ayurveda

ಆಯುರ್ವೇದ – ದೇಹ, ಮನಸ್ಸು ಮತ್ತು ಆತ್ಮದ ಸಾಂಗತ್ಯ
ಭಾರತದ ಸನಾತನ ಸಂಸ್ಕೃತಿಯ ನೆಲೆಗಟ್ಟಿನ ಮೂಲವು ಸುಮಾರು 5000 ವರ್ಷಗಳ ಹಿಂದಿನಿಂದ ಬಂದಿದೆ, ಆಯುರ್ವೇದವು ಜೀವನ ಮತ್ತು ದೀರ್ಘಾಯುಷ್ಯದ ವಿಜ್ಞಾನವಾಗಿದೆ, ಇದು ವಿಶ್ವದ ಅತ್ಯಂತ ಪುರಾತನ ಆರೋಗ್ಯ ಸಂರಕ್ಷಣೆಯ ವ್ಯವಸ್ಥೆಯಾಗಿದೆ ಮತ್ತು ಇದು ವೈದ್ಯಕೀಯ ಮತ್ತು ತತ್ವಶಾಸ್ತ್ರದ ಆಲೋಚನೆಗಳನ್ನು ಸಮನ್ವಯಗೊಳಿಸಿ ಸಂಯೋಜಿಸಿದೆ. ಹಿಂದಿನ ಕಾಲದಲ್ಲಿ ಆಯುರ್ವೇದವು ವಿಶ್ವದಾದ್ಯಂತ ಮಾನವನ ದೈಹಿಕ, ಮಾನಸಿಕ ಮತ್ತು ಆತ್ಮಿಕ ಬೆಳವಣಿಗೆಯಲ್ಲಿ ಸಹಕಾರಿಯಾಗುತ್ತಿತ್ತು. ಇಂದು ಇದು ವೈದ್ಯಕೀಯದ ಅದ್ವಿತೀಯ ಮತ್ತು ಅಳಿಸಲಾಗದ ವಿಭಾಗವಾಗಿದೆ, ಇದು ಸಂಪೂರ್ಣ ಪ್ರಕೃತಿ ಚಿಕಿತ್ಸಾ ವಿಧಾನವಾಗಿದ್ದು ಸೂಕ್ತವಾದ ಸಮತೋಲನವನ್ನು ಸಾಧಿಸಲು ಇದು ನಿಮ್ಮ ದೇಹದ ವಾತ, ಪಿತ್ತ ಮತ್ತು ಕಫ ಎನ್ನುವ ಮನೋಭಾವದ ಸರಿಪಡಿಸುವಿಕೆಯನ್ನು ಅವಲಂಬಿಸಿರುತ್ತದೆ.

ಕೇರಳ, ಆಯುರ್ವೇದದ ಭೂಮಿ
ಕೇರಳವು ಆಯುರ್ವೇದದ ಸಂಪ್ರದಾಯವನ್ನು ಮುರಿಯದೇ ಅದನ್ನು ಮುಂದುವರೆಸಿಕೊಂಡು ಬಂದಿದೆ, ಇದು ಹಲವಾರು ಅತಿಕ್ರಮಗಳನ್ನು ಮತ್ತು ವಿದೇಶದ ಮತ್ತು ಸ್ಥಳೀಯ ಒತ್ತಡಗಳನ್ನು ಸೈರಿಸಿಕೊಂಡು ಮುನ್ನಡೆದಿದೆ. ನೂರಾರು ವರ್ಷಗಳ ಹಿಂದೆ ಕೇರಳದಲ್ಲಿ ಪ್ರತಿಯೊಂದು ರೀತಿಯ ರೋಗಗಳಿಂದ ಮುಕ್ತರಾಗಲು ಜನರಿಗಿದ್ದ ಏಕೈಕ ಪರಿಹಾರವಾಗಿದ್ದವರು ಆಯುರ್ವೇದ ವೈದ್ಯರು (ಆಯುರ್ವೇದದ ಸಾಂಪ್ರದಾಯಿಕ ವೈದ್ಯರು) ಮಾತ್ರ. ದಂತಕಥೆಗಳಾಗಿರುವ ಎಂಟು ಕುಟುಂಬದ ವೈದ್ಯರು (ಅಷ್ಟ ವೈದ್ಯರು) ಮತ್ತು ಅವರ ತಲೆಮಾರಿನವರು ಶತಮಾನಗಳಿಂದ ಇಡೀ ರಾಜ್ಯಕ್ಕೆ ತಮ್ಮ ಆರೈಕೆ ಮತ್ತು ಶಶ್ರೂಷೆಯನ್ನು ನೀಡಿದ್ದಾರೆ. ಭಾರತದ ಉಳಿದೆಲ್ಲಾ ರಾಜ್ಯಗಳಲ್ಲಿ ಇರುವಂತೆ ಆಯುರ್ವೇದವು ಬದಲಿ ವ್ಯವಸ್ಥೆಯಾಗಿರದೇ ಇದು ಕೇರಳದಲ್ಲಿ ವೈದ್ಯಕೀಯದ ಪ್ರಮುಖ ಮಾರ್ಗೋಪಾಯವಾಗಿದೆ. ಪ್ರಸ್ತುತ ಭಾರತದಲ್ಲಿ ಈ ವೈದ್ಯಕೀಯ ವ್ಯವಸ್ಥೆಯನ್ನು ಅತ್ಯಂತ ಬದ್ಧತೆಯಿಂದ ಅನುಸರಿಸುತ್ತಿರುವ ಏಕೈಕ ರಾಜ್ಯ ಕೇರಳವಾಗಿದೆ.

ಜನರಿಗೆ ಚಿಕಿತ್ಸೆಯನ್ನು ನೀಡುವ ಏಕೈಕ ಮಾರ್ಗವಾಗಿ ಕೇರಳದ ವೈದ್ಯರು ಆಯುರ್ವೇದದ ಥಿಯರಿಗಳನ್ನು ಅನುಸರಿಸುವ ಸವಾಲನ್ನು ಎದುರಿಸಿದರು ಮತ್ತು ದಿನ ನಿತ್ಯದ ಜೀವನದಲ್ಲಿ ಪರಿಣಾಮಕಾರಿ ಗುಣಪಡಿಸುವ ವ್ಯವಸ್ಥೆಯಲ್ಲಿ ಅವುಗಳನ್ನು ಸಕ್ರಿಯವಾಗಿ ಅಳವಡಿಸಿಕೊಂಡರು. ಹೀಗೆ ಆಯುರ್ವೇದದ ಎಲ್ಲಾ ಪರಿಣಾಮಕಾರಿ ಪದ್ಧತಿಗಳನ್ನು ಮತ್ತು ನಿಯಮಾವಳಿಗಳನ್ನು ಕೇರಳದಲ್ಲಿ ಮತ್ತು ಅದರ ಸುತ್ತಮುತ್ತಲಿನಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ.

ನಿಸರ್ಗದ ವರ
ಕೇರಳದ ಸಮತೋಲಿತ ಹವಾಮಾನ, ಅರಣ್ಯದ ನೈಸರ್ಗಿಕವಾದ ಸಮೃದ್ಧತೆ ಮತ್ತು ತಂಪಾದ ಮಳೆಗಾಲಗಳು ಆಯುರ್ವೇದದ ಪ್ರಕ್ರಿಯೆ ಮತ್ತು ಅದಕ್ಕೆ ಸಂಬಂಧಿಸಿದ ಪ್ಯಾಕೇಜ್‌ಗಳಿಗೆ ಅತ್ಯಂತ ಸೂಕ್ತವಾಗಿ ಹೊಂದಿಕೊಳ್ಳುತ್ತವೆ. ನಿರಂತರವಾಗಿ ಮಳೆ ಬರುವ ಸಮಯದಲ್ಲಿ ಉಷ್ಣತೆಯನ್ನು 24-28ಡಿಗ್ರಿಯ ನಡುವೆ ಹೊಂದಿರುವ ಜಗತ್ತಿನ ಕೆಲವೇ ಪ್ರದೇಶಗಳಲ್ಲಿ ಕೇರಳವೂ ಸಹ ಒಂದಾಗಿದೆ. ಈ ಹಿತಕರವಾದ ಗಾಳಿ ಮತ್ತು ಮುಖದ ಮೇಲ್ಮೈಯಲ್ಲಿನ ತೇವಾಂಶವು ಈ ನೈಸರ್ಗಿಕ ಔಷಧೋಪಚಾರವು ಅತ್ಯಂತ ಪರಿಣಾಮಕಾರಿಯಾಗಿ ಪ್ರಭಾವ ಬೀರುವಂತೆ ಮಾಡುತ್ತದೆ. ಈ ಪ್ರದೇಶವು ಸಮೃದ್ಧ ಔಷಧೀಯ ಗಿಡಗಳಿಂದ ಹರಸಲ್ಪಟ್ಟಿದೆ ಮತ್ತು ಇದು ಪರಿಣಾಮಕಾರಿ ಚಿಕಿತ್ಸಾ ವಿಧಾನಗಳಿಗೆ ಅಗತ್ಯವಿರುವ ನಿರಂತರತೆ ಮತ್ತು ಸ್ಥಿರತೆಯನ್ನು ಒದಗಿಸುತ್ತದೆ. ಅದೇ ಔಷಧೀಯ ಗುಣಗಳುಳ್ಳ ಗಿಡಮೂಲಿಕೆಗಳು ವರ್ಷಾನು ವರ್ಷ ಎಲ್ಲಾ ಋತುಮಾನಗಳಲ್ಲಿ ಲಭ್ಯವಿರುತ್ತದೆ. ಮಣ್ಣಿನಲ್ಲಿ ಇರುವ ಸಮೃದ್ಧ ಅಲ್ಕಾಲೈಡ್ ಗುಣವು ಬೇರೆ ಮಣ್ಣಿಗೆ ಹೋಲಿಕೆ ಮಾಡಿದ್ದಲ್ಲಿ ಹಲವಾರು ಆಯುರ್ವೇದ ಔಷಧಗಳ ಗುಣವನ್ನು ಮತ್ತು ಅದರ ಪ್ರಭಾವವನ್ನು ಹೆಚ್ಚಿಸುತ್ತದೆ.   

ಕೇರಳದಲ್ಲಿನ ಆಯುರ್ವೇದದ ಉಪಯೋಗಗಳು
ಶ್ರೇಷ್ಟ ಋಷಿಮುನಿಗಳಾದ ವಾಗ್ಭಟರು ವಿಶ್ವದಲ್ಲಿಯೇ ಅತ್ಯಂತ ವಿರಳವಾಗಿ ಉಪಯೋಗಿಸುವ ಆಯುರ್ವೇದದ ಬಳಕೆದಾರ ಸ್ನೇಹಿ ಉಪಚಾರವಾಗಿರುವ ಅಷ್ಟಾಂಗಹೃದಯಂ ಎಂಬ ಪ್ರಯೋಗವನ್ನು ಕೇರಳದಲ್ಲಿ ಅತ್ಯಂತ ವ್ಯಾಪಕವಾಗಿ ಮಾಡಿದ್ದಾರೆ. ಕೇರಳದ ವೈದ್ಯರು ಈ ನಿರ್ದಿಷ್ಟ ಚಿಕಿತ್ಸಾ ವಿಧಾನದಲ್ಲಿ ಅತ್ಯಂತ ನುರಿತರು ಮತ್ತು ಅನುಭವಿಗಳೂ ಆಗಿದ್ದಾರೆ ಇವರು ಪುರಾತನ ಚರಕ ಮತ್ತು ಶುಶ್ರುತ ಸಂಹಿತೆಗಳಲ್ಲಿ ಪಾಂಡಿತ್ಯವನ್ನು ಪಡೆದ ಹಲವಾರು ವೃತ್ತಿಪರರೂ ಆಗಿದ್ದಾರೆ. ಕೇರಳದಲ್ಲಿ ನೂರಾರು ಕಷಾಯಗಳನ್ನು ಒಳಗೊಂಡ ಕಶಾಯ ಚಿಕಿತ್ಸೆ (ಮಿಶ್ರಣದ ಚಿಕಿತ್ಸೆ) ಎಂಬ  ಆರೋಗ್ಯ ಚಿಕಿತ್ಸೆಯನ್ನಾಗಿ ಉಪಯೋಗಿಸಲಾಗುತ್ತಿದೆ. ಇದನ್ನು ವೈಜ್ಞಾನಿಕವಾಗಿ ವರ್ಗೀಕರಿಸಲಾಗಿದೆ ಮತ್ತು ಅಗತ್ಯವಿರುವ ಹಲವಾರು ಚಿಕಿತ್ಸೆಗಳಿಗೆ ಅನುಗುಣವಾಗಿ ವ್ಯವಸ್ಥಿತಗೊಳಿಸಲಾಗುತ್ತದೆ. ಕೇರಳದ ವೈದ್ಯರು ಮೊದಲು ಅಭಯಂಗಮ್‌ನ ರೋಗ ಪ್ರತಿರೋಧಕ ಲಕ್ಷಣಗಳ ಮೇಲೆ ಹೆಚ್ಚು ಗಮನವನ್ನು ಹರಿಸುತ್ತಾರೆ. ಇದು ಕಿಝಿಸ್‌ನ ವೃತ್ತಿಗೆ ಕಾರಣವಾಗುತ್ತದೆ. ಜಗತ್ತಿನ ಯಾವುದೇ ಪ್ರದೇಶಗಳಿಗೆ ಹೋಲಿಸಿದಾಗ ಕೇರಳದಲ್ಲಿ ಅತ್ಯಧಿಕ ಸಂಖ್ಯೆಯ ಆಯುರ್ವೇದ ಕಾಲೇಜುಗಳು ಮತ್ತು ಅಗಾಧ ಸಂಖ್ಯೆಯ ಆಯುರ್ವೇದ ವೈದ್ಯರು ಕಾರ್ಯನಿರ್ವಹಿಸುತ್ತಿದ್ದು ಇವರು ವೈಜ್ಞಾನಿಕ ರೀತಿಯಲ್ಲಿ ಆಯುರ್ವೇದ ಸಂಶೋಧನೆಯ ಪರಂಪರೆಯನ್ನು ಅನುಸರಿಸುತ್ತಿದ್ದಾರೆ.

ಆಯುರ್ವೇದ ಜೀವನ ಶೈಲಿಯಾಗಿ
ಕೇರಳದಲ್ಲಿ ಆಯುರ್ವೇದವು ಕೇವಲ ಆರೋಗ್ಯ ಸಂರಕ್ಷಣೆಯ ವ್ಯವಸ್ಥೆ ಮಾತ್ರವಾಗಿರದೇ ಇದು ಕೇರಳದಲ್ಲಿ ಜೀವನದ ಪ್ರತಿಯೊಂದು ವಿಚಾರದ ಭಾಗವಾಗಿದೆ. ಇಲ್ಲಿ ಪಾರ್ಶ್ವವಾಯು ಪೀಡಿತ ಜನರು ನಡೆಯುವ ಮತ್ತು ಗುಣವಾಗದ ಕಾಯಿಲೆಗಳು ಗುಣವಾಗುವ ಪವಾಡ ಇತ್ಯಾದಿಗಳು ನಡೆಯುತ್ತವೆ. ಇದು ಇಂದೂ ಸಹ ಕೇರಳದ ವೈದ್ಯರ ವೃತ್ತಿ ಗೌರವ ಮತ್ತು ಪರಿಶ್ರಮದಿಂದ ಸಾಧ್ಯವಾಗಿದೆ.

District Tourism Promotion Councils KTDC Thenmala Ecotourism Promotion Society BRDC Sargaalaya SIHMK Responsible Tourism Mission KITTS Adventure Tourism Muziris Heritage

ಟೋಲ್ ಫ್ರೀ ಸಂಖ್ಯೆ: 1-800-425-4747 (ಭಾರತದ ಒಳಗೆ ಮಾತ್ರ)

ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.

×
This wesbite is also available in English language. Visit Close