Trade Media
     

ದೋಣಿ ಮನೆ


ಕೇರಳದಲ್ಲಿ ದೋಣಿಮನೆಯಲ್ಲಿ ಕುಳಿತು ತೇಲುವುದು!

ನೀವು ಎಂದಾದರೂ ಕೇರಳದ ಹಿನ್ನೀರಿನಲ್ಲಿ ದೋಣಿಮನೆಯಲ್ಲಿ ಕುಳಿತು ನೌಕಾಯಾನ ಮಾಡಿದ್ದೀರಾ? ಇಲ್ಲದಿದ್ದಲ್ಲಿ, ಮಾಡಲೇಬೇಕು. ಇದು ನಿಜವಾಗಿಯೂ ಒಂದು ಅದ್ಭುತ ಹಾಗೂ ಮರೆಯಲಾಗದ ಅನುಭವವಾಗಿದೆ.

ಪ್ರಸ್ತುತ ದಿನದ ದೋಣಿಮನೆಯು ದೊಡ್ಡದಾಗಿದ್ದು, ಬಿಡುವಿನ ಪ್ರಯಾಣಕ್ಕಾಗಿ ನಿಧಾನವಾಗಿ ಚಲಿಸುವ ಹಾಯಿಗಳನ್ನು ಬಳಸಲಾಗುತ್ತದೆ ಮತ್ತು ಇದು ಹಳೆಯ ಕಾಲದ ಕೆಟ್ಟುವಲ್ಲಂ ನ ನವೀಕೃತ ಆವೃತ್ತಿಯಾಗಿದೆ. ಮೂಲ ಕೆಟ್ಟುವಲ್ಲಂಗಳನ್ನು ಟನ್ ಗಟ್ಟಲೆ ಅಕ್ಕಿ ಮತ್ತು ಮಸಾಲೆಗಳನ್ನು ತರಲು ಬಳಸಲಾಗುತ್ತಿತ್ತು. ಒಂದು ಉತ್ತಮ ದರ್ಜೆಯ ಕೆಟ್ಟುವಲ್ಲಮ್ ಕುಟ್ಟನಾಡಿನಿಂದ ಕೊಚ್ಚಿ ಬಂದರಿಗೆ ಸುಮಾರು 30 ಟನ್ ಸರಕನ್ನು ತರುತ್ತಿತ್ತು.

ಕೆಟ್ಟುವಲ್ಲಮ್ ಅನ್ನು ನಾರಿನ ಗಂಟುಗಳಿಂದ ಬಂಧಿಸಲಾಗಿರುತ್ತದೆ. ಒಂದೇ ಒಂದು ಮೊಳೆಯನ್ನೂ ದೋಣಿಯ ನಿರ್ಮಾಣಕ್ಕೆ ಬಳಸುವುದಿಲ್ಲ. ದೋಣಿಯನ್ನು ಹಲಸಿನ ಮರದ ಹಲಗೆಗಳನ್ನು ನಾರಿನಿಂದ ಒಟ್ಟಾಗಿ ಸೇರಿಸಿ ತಯಾರಿಸಲಾಗುತ್ತದೆ. ನಂತರ ಇದನ್ನು ಬೇಯಿಸಿದ ಗೋಡಂಬಿ ತಿರುಳಿನಿಂದ ತಯಾರಿಸಿದ ಕಪ್ಪು ರೇಸಿನ್ ನಿಂದ ಬಣ್ಣ ಹಾಕಲಾಗುತ್ತದೆ. ಎಚ್ಚರಿಕೆಯಿಂದ ನಿರ್ವಹಣೆ ಮಾಡಿದಲ್ಲಿ, ಇದನ್ನು ತಲೆಮಾರುಗಳ ಕಾಲ ಬಳಸಬಹುದು.

ಕೆಟ್ಟುವಲ್ಲಂ ನ ಒಂದು ಭಾಗವನ್ನು ಬಿದಿರು ಹಾಗೂ ನಾರಿನಿಂದ ಹೊದಿಸಲಾಗಿರುತ್ತದೆ, ಇದನ್ನು ಪ್ರಯಾಣಿಕರಿಗೆ ಶೌಚಾಲಯ ಹಾಗೂ ಅಡಿಗೆಮನೆಯಾಗಿ ಬಳಸಬಹುದಾಗಿದೆ. ಅಡಿಗೆಯನ್ನು ದೋಣಿಯಲ್ಲಿಯೇ ತಯಾರಿಸಿ, ಹಿನ್ನೀರಿನಿಂದ ತಯಾರಿಸಿದ ತಾಜಾ ಮೀನನ್ನು ನೀಡಲಾಗುತ್ತದೆ.

ಆಧುನಿಕ ಟ್ರಕ್ ಗಳು ಈ ಪುರಾತನ ಸಾರಿಗೆ ವ್ಯವಸ್ಥೆಯನ್ನು ಸ್ಥಾನಪಲ್ಲಟ ಮಾಡಿದ ನಂತರ, ಕೆಲವರು ಈ ದೋಣಿಯಿಂದ ಹೊಸದನ್ನು ಮಾಡುವ ಯೋಜನೆಯಿಂದ, ಸುಮಾರು 100 ವರ್ಷಗಳ ಹಿಂದೆ ಮಾರುಕಟ್ಟೆಯಲ್ಲಿ ಇಡಲಾಗಿತ್ತು. ಪ್ರಯಾಣಿಕರಿಗೆ ಇರಲು ಅನುಕೂಲವಾಗುವಂತೆ ವಿಶೇಷ ಕೊಠಡಿಗಳನ್ನು ನಿರ್ಮಿಸಿ, ಈ ದೋಣಿಗಳು ನಿಕಟ-ವಿನಾಶದ ಅಂಚಿನಿಂದ ಮತ್ತೆ ಇಂದಿನ ಬಹು ದೊಡ್ಡ ಜನಪ್ರಿಯತೆಯನ್ನು ಪಡೆದಿವೆ.

ಈಗ ದೋಣಿಮನೆಗಳು ಹಿನ್ನೀರಿನಲ್ಲಿ ಪರಿಚಿತ ದೃಶ್ಯವಾಗಿದ್ದು ಅಲಪ್ಪುಳ ಒಂದರಲ್ಲೇ ಸುಮಾರು 500 ದೋಣಿಮನೆಗಳು ಕಂಡುಬರುತ್ತವೆ.

ಕೆಟ್ಟುವಲ್ಲಂಗಳನ್ನು ದೋಣಿಮನೆಯಾಗಿ ಪರಿವರ್ತಿಸುವಾಗ, ಕೇವಲ ಪ್ರಾಕೃತಿಕ ಉತ್ಪನ್ನಗಳನ್ನೇ ಬಳಸುವಂತೆ ಎಚ್ಚರಿಕೆ ತೆಗೆದುಕೊಳ್ಳಲಾಗುತ್ತದೆ. ಬಿದಿರಿನ ಚಾಪೆಗಳು, ಕಡ್ಡಿಗಳು ಮತ್ತು ಅಡಿಕೆ ಮರದ ಕಾಂಡಗಳನ್ನು ಮೇಲ್ಛಾವಣಿಗೆ ಬಳಸಿದರೆ, ನಾರಿನ ಚಾಪೆ, ಮತ್ತು ಮರದ ಹಲಗೆಗಳನ್ನು ನೆಲಹಾಸಿಗೆ ಬಳಸಲಾಗುತ್ತದೆ ಹಾಗೂ ತೆಂಗಿನಮರದ ಕಾಂಡ ಮತ್ತು ನಾರನ್ನು ಹಾಸಿಗೆಗಾಗಿ ಬಳಸಲಾಗುತ್ತದೆ. ದೀಪಕ್ಕಾಗಿ, ಸೌರ ಫಲಕಗಳನ್ನು ಬಳಸುತ್ತಾರೆ.

ಇಂದು, ದೋಣಿಮನೆಯು ಅತ್ಯುತ್ತಮವಾದ ಶಯನಗೃಹಗಳು, ಆಧುನಿಕ ಶೌಚಾಲಯ, ಆಕರ್ಷಕ ಲಿವಿಂಗ್ ರೂಂ, ಅಡಿಗೆಮನೆ ಮತ್ತು ದೃಶ್ಯವನ್ನು ನೋಡಲು ಬಾಲ್ಕನಿಗಳನ್ನು ಹೊಂದಿದ್ದು, ಇದು ಆಧುನಿಕ ಸೌಲಭ್ಯಗಳ ಎಲ್ಲಾ ಅನುಕೂಲಗಳನ್ನೂ ಹೊಂದಿದೆ. ಕಾಂಡ ಅಥವಾ ಅರೆ ಕತ್ತರಿಸಿದ ತಾಳೆಯ ಮೇಲ್ಛಾವಣಿಯು ನೆರಳನ್ನು ನೀಡುತ್ತದೆ ಮತ್ತು ತಡೆರಹಿತ ನೋಟವನ್ನು ಸವಿಯಲು ನೆರವಾಗುತ್ತದೆ. ಹೆಚ್ಚಿನ ದೋಣಿಗಳು 40 ಹೆಚ್ ಪಿ ಎಂಜಿನ್ ನ ಪವರ್ ಅನ್ನು ಹೊಂದಿವೆ. ಎರಡು ಅಥವಾ ಹೆಚ್ಚು ದೋಣಿಮನೆಗಳನ್ನು ಸೇರಿಸಿ ಮಾಡಿದ ದೋಣಿ ಟ್ರೈನ್ ಗಳನ್ನು ಸಹ ವೀಕ್ಷಕರು ದೊಡ್ಡ ಗುಂಪುಗಳಲ್ಲಿ ಬಳಸುತ್ತಾರೆ.

ದೋಣಿಮನೆಯ ನಿಜವಾದ ಆಕರ್ಷಣೆಯೆಂದರೆ ಸ್ಪರ್ಶಿಸಲಾರದ ಮತ್ತು ಪ್ರವೇಶಿಸಲು ನಿರ್ಬಂಧವಾದ ಗ್ರಾಮೀಣ ಕೇರಳದ  ಉಸಿರು ನಿಲ್ಲಿಸುವಂತಹ ಆಕರ್ಷಕ ನೋಟವನ್ನು ನೀವು ತೇಲುತ್ತಲೇ ನೋಡಬಹುದು! ಈಗ, ಇದು ನಿಜವಾಗಿಯೂ ಆಕರ್ಷಣೀಯವಲ್ಲವೇ?

ಕೇರಳ ಪ್ರವಾಸೋದ್ಯಮದಿಂದ ವರ್ಗೀಕೃತ ದೋಣಿಮನೆಯಿಂದ ದೋಣಿಮನೆಯ ನಿರ್ವಾಹಕನನ್ನು ಆಯ್ಕೆ ಮಾಡಲು, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.


 

Photos
Photos
information
Souvenirs
 
     
Department of Tourism, Government of Kerala,
Park View, Thiruvananthapuram, Kerala, India - 695 033
Phone: +91-471-2321132 Fax: +91-471-2322279.

Tourist Information toll free No:1-800-425-4747
Tourist Alert Service No:9846300100
Email: info@keralatourism.org, deptour@keralatourism.org

All rights reserved © Kerala Tourism 1998. Copyright Terms of Use
Designed by Stark Communications, Hari & Das Design.
Developed & Maintained by Invis Multimedia