ವರ್ಕಲಾ ಬೀಚ್

 

ಸ್ಥಳ: ತಿರುವನಂತಪುರಂ ಜಿಲ್ಲೆಯ ತಿರುವನಂತಪುರಂ ನಗರದಿಂದ 51 ಕಿ,ಮೀ. ಉತ್ತರಕ್ಕೆ ಮತ್ತು ದಕ್ಷಿಣ ಕೇರಳದ ಕೊಲ್ಲಮ್‌ನಿಂದ 37 ಕಿ.ಮೀ. ದೂರದಲ್ಲಿ ಇದೆ.

ವರ್ಕಲಾವು ಒಂದು ಪ್ರಶಾಂತವಾದ ಮತ್ತು ನಿಶಬ್ದತೆಯಿಂದ ಕೂಡಿರುವ ಸಣ್ಣ ಹಳ್ಳಿಯಾಗಿದ್ದು, ಇದು ತಿರುವನಂತಪುರಂ ಜಿಲ್ಲೆಯ ಹೊರ ವಲಯದಲ್ಲಿ ಇರುವ ಪ್ರದೇಶವಾಗಿದೆ. ಇದು ಹಲವಾರು ಪ್ರವಾಸಿ ಆಕರ್ಷಣೆಗಳನ್ನು ಹೊಂದಿದ್ದು ಅದರಲ್ಲಿ ಸುಂದರವಾದ ಒಂದು ಬೀಚ್, 2000 ವರ್ಷಗಳಷ್ಟು ಹಳೆಯ ವಿಷ್ಣು ದೇವಸ್ಥಾನ ಮತ್ತು ಬೀಚ್‌ನಿಂದ ಸ್ವಲ್ಪವೇ ದೂರದಲ್ಲಿ ಇರುವ ಶಿವಗಿರಿ ಮಠ – ಆಶ್ರಮಮ್ ಸೇರಿವೆ.

ಪಾಪನಾಶಮ್ ಬೀಚ್ (ವರ್ಕಲಾ ಬೀಚ್ ಎಂದು ಕರೆಯಲ್ಪಡುತ್ತದೆ), ಇದು ವರ್ಕಲಾದಿಂದ ಹತ್ತು ಕಿಲೋ ಮೀಟರ್‌ಗಳಷ್ಟು ದೂರದಲ್ಲಿದ್ದು, ನೈಸರ್ಗಿಕ ನೀರಿನ ಚಿಲುಮೆ ಎಂದು ಜನಪ್ರಿಯವಾಗಿದೆ. ಇದನ್ನು ಔಷಧೀಯ ಮತ್ತು ಗುಣಪಡಿಸುವ ಗುಣಗಳನ್ನು ಹೊಂದಿದೆ ಎಂದು ಪರಿಗಣಿಸಲಾಗಿದೆ. ಈ ಬೀಚ್‌ನ ಪವಿತ್ರವಾದ ನೀರಿನಲ್ಲಿ ಒಮ್ಮೆ ಮುಳುಗು ಹಾಕಿದರೆ ದೇಹದಲ್ಲಿನ ಎಲ್ಲಾ ಅಶುದ್ಧತೆಗಳನ್ನು ಮತ್ತು ಎಲ್ಲಾ ಪಾಪಗಳ ಆತ್ಮವನ್ನು ಶುದ್ಧಗೊಳಿಸುತ್ತದೆ ಎಂದು ನಂಬಲಾಗುತ್ತದೆ; ಇದರಿಂದ ಇದಕ್ಕೆ ’ಪಾಪನಾಸನಮ್ ಬೀಚ್’ ಎಂದು ಕರೆಯಲಾಗುತ್ತದೆ.

ಎರಡು ಸಾವಿರ ವರ್ಷಗಳಷ್ಟು ಹಳೆಯ ಪವಿತ್ರ ಕೇಂದ್ರವಾಗಿರುವ ಜನಾರ್ಧನಸ್ವಾಮಿ ದೇವಸ್ಥಾನವು ಬೀಚ್ ಅನ್ನು ಮೀರಿಸುವ ಕಮರಿಗಳ ಮೇಲೆ ನಿಂತಿದ್ದು, ಸ್ವಲ್ಪ ದೂರದಲ್ಲಿಯೇ ಇದೆ. ಶ್ರೇಷ್ಠ ಧಾರ್ಮಿಕ ಸುಧಾರಕರು ಮತ್ತು ತತ್ವಜ್ಞಾನಿಗಳೂ ಆಗಿರುವ ಶ್ರೀ ನಾರಾಯಣ ಗುರು (1856-1928) ಗಳಿಂದ ಸ್ಥಾಪಿತವಾದ ಶಿವಗಿರಿ ಮಠವಿದೆ.   ಇಲ್ಲಿರುವ ಗುರುವಿನ ಸಮಾಧಿಗೆ ಸಾವಿರಾರು ಭಕ್ತರು ಡಿಸಂಬರ್ 30 ರಿಂದ ಜನವರಿ 1 ರವರೆ ನಡೆಯುವ ಶಿವಗಿರಿ ಯಾತ್ರೆಗೆ ಬಂದು ಸೇರುತ್ತಾರೆ. ಶ್ರೀ ನಾರಾಯಣ ಗುರು ಜಾತಿ ಮತಗಳ ವ್ಯವಸ್ಥೆಯ ನಿರ್ಭಂರ್ಬಂಧಗಳಿಂದ ಛಿದ್ರವಾಗಿದ್ದ ಸಮಾಜದಲ್ಲಿ “ಒಂದು ಜಾತಿ, ಒಂದು ಧರ್ಮ ಮತ್ತು ಒಬ್ಬ ದೇವರು” ಎಂಬ ತತ್ವವನ್ನು ಪ್ರತಿಪಾದಿಸಿದರು.

ವರ್ಕಾಲವು ಪ್ರವಾಸಿಗರಿಗೆ ಅತ್ಯುತ್ತಮ ವಸತಿ ಸೌಕರ್ಯಗಳನ್ನುಒದಗಿಸುತ್ತಿದೆ ಮತ್ತು ಹಲವಾರು ಆಯುರ್ವೇದ ಮಸಾಜು ಕೇಂದ್ರಗಳಿಂದ ಜನಪ್ರಿಯ ಆರೋಗ್ಯಧಾಮವಾಗುತ್ತಿದೆ.

ಆಕರ್ಷಣೆಗಳು: ಕಡಲತಡಿ, ಖನಿಜನೀರಿನ ಬುಗ್ಗೆ, ಶಿವಗಿರಿ ಮಠ ಮತ್ತು 2000 ವರ್ಷ ಪುರಾತನವಾದ ವಿಷ್ಣುವಿನ ದೇವಸ್ಥಾನ.

ವರ್ಕಲಾ ಬಗ್ಗೆ ಹೆಚ್ಚಿನದನ್ನು ಓದಿರಿ

ಇಲ್ಲಿಗೆ ತಲುಪುವುದು

ಸಮೀಪದ ರೈಲು ನಿಲ್ದಾಣ: ವರ್ಕಲಾ, ಸುಮಾರು 3 ಕಿ.ಮೀ ದೂರದಲ್ಲಿದೆ ಹತ್ತಿರದ ಏರ್‌ಪೋರ್ಟ್: ತಿರುವನಂತಪುರಮ್ ಅಂತರಾಷ್ಟ್ರೀಯ ಏರ್‌ಪೋರ್ಟ್, ಸುಮಾರು 57 ಕಿ.ಮೀ. ದೂರದಲ್ಲಿದೆ

ಸ್ಥಳ

ಅಕ್ಷಾಂಶ : 8.740543, ರೇಖಾಂಶ : 76.716785

ಮ್ಯಾಪ್

District Tourism Promotion Councils KTDC Thenmala Ecotourism Promotion Society BRDC Sargaalaya SIHMK Responsible Tourism Mission KITTS Adventure Tourism Muziris Heritage

ಟೋಲ್ ಫ್ರೀ ಸಂಖ್ಯೆ: 1-800-425-4747 (ಭಾರತದ ಒಳಗೆ ಮಾತ್ರ)

ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.

×
This wesbite is also available in English language. Visit Close