ಕೋವಲಮ್

 

ಕೋವಲಮ್ ಅಂತರಾಷ್ಟ್ರೀಯವಾಗಿ ಜನಪ್ರಿಯವಾದ ಬೀಚ್ ಆಗಿದ್ದು, ಇದು ಮೂರು ಅರ್ಧ ಚಾಂದ್ರಾಕೃತಿಯ ಬೀಚ್‌ಗಳ ಸಮಾಗಮವನ್ನು ಹೊಂದಿದೆ. ಇದು 1930ರ ನಂತರ ಪ್ರವಾಸಿಗರ ಅತ್ಯಂತ ನೆಚ್ಚಿನ ತಾಣವಾಗಿದೆ. ಬೀಚ್ ಮೇಲೆ ಅತ್ಯಂತ ಸುಂದರವಾಗಿ ನಿರ್ಮಾಣಗೊಂಡಿರುವ ವಿಶಾಲವಾದ ಕಲ್ಲಿನ ಭೂಶಿರವು ಸಮುದ್ರ ಸ್ನಾನಕ್ಕೆ ಅನುಕೂಲಕರವಾಗುವಂತೆ ತಣ್ಣೀರಿನ ಸುಂದರ ಕೊಲ್ಲಿಯೊಂದನ್ನು ಉಂಟುಮಾಡಿದೆ.

ಈ ಕಡಲತಡಿಯ ವಿರಾಮದ ಆಯ್ಕೆಗಳು ಸಮೃದ್ಧಿಯಾಗಿದ್ದು ವೈವಿಧ್ಯತೆಯಿಂದ ಕೂಡಿವೆ. ಸೂರ್ಯಸ್ನಾನ, ಈಜು, ಶರೀರದ ಧಾರ್ಡ್ಯವನ್ನುಹೆಚ್ಚಿಸುವ ಮೂಲಿಕಾ ಮಾಲೀಸುಗಳು, ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಟಮಾರನ್ ವಿಹಾರಯಾನಗಳು ಅವುಗಳಲ್ಲಿ ಕೆಲವು. ಉಷ್ಣವಲಯದ ಸೂರ್ಯನು ಕೆಲವೇ ನಿಮಿಷಗಳಲ್ಲಿ ಚರ್ಮವನ್ನು ತಾಮ್ರವರ್ಣಕ್ಕೆ ತಿರುಗಿಸುವುದನ್ನು ನೋಡಬಹುದು. ಕಡಲತಡಿಯ ಜೀವನವು ಹಗಲಿನಲ್ಲಿ ತಡವಾಗಿ ಪ್ರಾರಂಭವಾಗಿ ಸರಿರಾತ್ರಿಯವರೆಗೂ ವಿಸ್ತರಿಸುತ್ತದೆ. ಕಡಲತಡಿಯ ಸಂಕೀರ್ಣವು ಅಗ್ಗದ ಕುಟೀರಗಳ ಸರಣಿ, ಆಯುರ್ವೇದದ ಆರೋಗ್ಯಧಾಮಗಳು, ಸಮಾರಂಭದ ಸೌಲಭ್ಯಗಳು, ವ್ಯಾಪಾರ ವಿಹಾರದ ವಲಯಗಳು, ಈಜುಕೊಳಗಳು, ಯೋಗ ಮತ್ತು ಮಸಾಜು ಕೇಂದ್ರಗಳನ್ನು ಒಳಗೊಂಡಿರುತ್ತದೆ.

ಪ್ರವಾಸಿಗರಿಗೆ ವಾಸ್ತವ್ಯದ ವ್ಯವಸ್ಥೆಯಾಗಿ ಕೋವಲಮ್‌ನಲ್ಲಿ ಪಂಚ ತಾರ ಹೋಟೆಲ್‌ಗಳಿಂದ ಹಿಡಿದು ಬಜೆಟ್ ಹೋಟೆಲ್ ವರೆಗಿನ ಸೌಲಭ್ಯವನ್ನು ಒದಗಿಸಿದೆ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮತ್ತು ಕೆಫೆಟೇರಿಯಗಳಲ್ಲಿ ದೇಶ-ವಿದೇಶಗಳ ವೈವಿಧ್ಯಗಳಿಂದ ಹಿಡಿದು ದಕ್ಷಿಣ ಭಾರತದ ಅಡುಗೆಗಳ ವೈವಿಧ್ಯವನ್ನು ಇಲ್ಲಿ ಒದಗಿಸಲಾಗುತ್ತದೆ.

ಕೇರಳದ ರಾಜಧಾನಿಯಾದ ತಿರುವನಂತಪುರವು ಕೋವಲಂನಿಂದ ಕೇವಲ 16 ಕಿಲೋಮೀಟರುಗಳಷ್ಟು ದೂರವಿದ್ದು ಅದನ್ನು ತಲಪುವುದಕ್ಕೆ ಯಾವ ವಿಧದ ಕಷ್ಟವೂ ಇರುವುದಿಲ್ಲ. ಆದರೆ ನೀವು ರಜೆಯ ಪ್ರವಾಸಕ್ಕೆ ಬಂದಿದ್ದರೆ ಕೋವಲಂನಲ್ಲಿಯೇ ಉಳಿದುಕೊಂಡು ನಗರಕ್ಕೆ ಭೇಟಿ ಕೊಡುವುದು ಒಳ್ಳೆಯದು.

ತಿರುವನಂತಪುರಮ್ ನಗರವು ಹಲವಾರು ಆಸಕ್ತಿದಾಯಕ ಪ್ರದೇಶಗಳನ್ನು ಹೊಂದಿದ್ದು ಅವುಗಳಲ್ಲಿ ನೇಪಿಯರ್ ಮ್ಯೂಸಿಯಂ, ಶ್ರೀ ಚಿತ್ರ ಆರ್ಟ್ ಗ್ಯಾಲರಿ ಮತ್ತು ಪದ್ಮನಾಭಸ್ವಾಮಿ ದೇವಸ್ಥಾನದಂತಹ ಸ್ಥಳಗಳು ಸೇರಿವೆ. ರಾಜ್ಯದ ಸ್ವಂತ ಕರಕುಶಲ ವಸ್ತುಗಳ ಎಂಪೋರಿಯಮ್‌ನಲ್ಲಿ ಇರುವ ಎಸ್.ಎಂ.ಎಸ್.ಎಂ  ಇನ್‌ಸ್ಟಿಟ್ಯೂಟ್‌ನಲ್ಲಿ ನೀವು ಸಂಸ್ಕೃತಿಯ ವಸ್ತುಗಳನ್ನು ಮತ್ತು ಇತರೆ ವಸ್ತುಗಳನ್ನು ಖರೀದಿಸಲು ಅತ್ಯಂತ ಸೂಕ್ತವಾದ ಸ್ಥಳವಾಗಿದೆ.

ಇಲ್ಲಿಗೆ ತಲುಪುವುದು

ಸಮೀಪದ ರೈಲು ನಿಲ್ದಾಣ: ವರ್ಕಲಾ, ತಿರುವನಂತಪುರಮ್ ಸೆಂಟ್ರಲ್ 16 ಕಿ.ಮೀ ದೂರದಲ್ಲಿದೆ
ಹತ್ತಿರದ ಏರ್‌ಪೋರ್ಟ್: ತಿರುವನಂತಪುರಮ್ ಅಂತರಾಷ್ಟ್ರೀಯ ಏರ್‌ಪೋರ್ಟ್, ಸುಮಾರು 10 ಕಿ.ಮೀ. ದೂರದಲ್ಲಿದೆ

ಸ್ಥಳ

ಅಕ್ಷಾಂಶ: 8.402074, ರೇಖಾಂಶ: 76.978426

ಭೌಗೋಳಿಕ ಮಾಹಿತಿ

ಭೇಟಿ ನೀಡಲು ಸೂಕ್ತವಾದ ಸಮಯ: ಸೆಪ್ಟೆಂಬರ್ ನಿಂದ ಮಾರ್ಚ್
ಎತ್ತರ : ಸಮುದ್ರ ಮಟ್ಟ

ಮ್ಯಾಪ್

District Tourism Promotion Councils KTDC Thenmala Ecotourism Promotion Society BRDC Sargaalaya SIHMK Responsible Tourism Tourfed KITTS Adventure Tourism Muziris Heritage KTIL

ಟೋಲ್ ಫ್ರೀ ಸಂಖ್ಯೆ: 1-800-425-4747 (ಭಾರತದ ಒಳಗೆ ಮಾತ್ರ)

ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © Kerala Tourism 2017. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು. ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ..