ವಾಯನಾಡ್

 

ವಯಾನಾಡ್‌ನ ಉತ್ತರ ಜಿಲ್ಲೆಯಲ್ಲಿ ಇರುವ ನಾಲ್ಕು ಶಿಖರಗಳ ಪೈಕಿ ಮೊದಲನೆಯದು ಇಲ್ಲಿದೆಇದನ್ನು ವಯಾನಾಡ್ ಪ್ರವಾಸೋದ್ಯಮ ಸಂಸ್ಥೆ (ಡಬ್ಲ್ಯೂ.ಟಿ.ಒ) ಸಂರಕ್ಷಿಸಿದೆ ಮತ್ತು ಅಭಿವೃದ್ಧಿ ಪಡಿಸಿದ್ದು, ಈ ಸಂಸ್ಥೆಯು ವಯಾನಾಡ್‌ನಲ್ಲಿ ’ಜವಾಬ್ದಾರಿಯುತ ಮತ್ತು ಸಮರ್ಥನೀಯ ಪ್ರವಾಸೋದ್ಯಮ’ದ ಸಂಸ್ಕೃತಿಯನ್ನು ಉಳಿಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿದೆ.

ನಾಲ್ಕು ಶಿಖರಗಳಲ್ಲಿ ನಾವು ಮೊದಲನೆಯ ’ಹೊರಾಂಗಣ ಶಿಖರ’ವನ್ನು ನಿಮಗೆ ಪರಿಚಯಿಸಲು ಇಷ್ಟಪಡುತ್ತೇವೆ, ಇದು ವಯಾನಾಡ್ ಜಿಲ್ಲೆಯಲ್ಲಿ ಇರುವ ಈ ಕೆಳಕಂಡ ಪ್ರವಾಸಿ ತಾಣಗಳನ್ನು ಒಳಗೊಂಡಿರುತ್ತದೆ.

ಚೆಂಬ್ರ ಶಿಖರ

2100 ಮೀಟರ್ ಎತ್ತರದಲ್ಲಿರುವ ಉನ್ನತವಾದ ಈ ಶಿಖರವು ವಯನಾಡಿನ ದಕ್ಷಿಣ ಭಾಗದಲ್ಲಿರುವ ಮೆಪ್ಪಾಡಿಯಲ್ಲಿದೆ. ಇದು ಈ ಪ್ರದೇಶದಲ್ಲಿರುವ ಅತ್ಯಂತ ಎತ್ತರವಾದ ಶಿಖರವಾಗಿದ್ದು ಇದನ್ನು ಹತ್ತುವುದು ನಿಮ್ಮ ದೈಹಿಕ ಶಕ್ತಿಗೆ ಸವಾಲಾಗಿರುತ್ತದೆ. ಚೆಂಬ್ರ ಶಿಖರವನ್ನು ಹತ್ತುವುದು ಒಂದು ಅಹ್ಲಾದಕರವಾದ ಅನುಭವವಾಗಿದ್ದು, ಶಿಖರದ ಕಡೆಗೆ ಮೇಲೇರಿದಂತೆಲ್ಲಾ ಪ್ರತಿಯೊಂದು ಹಂತದ ಆರೋಹಣವೂ ವಯನಾಡಿನ ಭಿನ್ನವಾದ ವಿಹಂಗಮ ನೋಟವನ್ನು ತೆರೆದಿಡುತ್ತದೆ. ಹತ್ತಿ ಇಳಿಯುವುದಕ್ಕೆ ಒಂದು ದಿನ ಪೂರ್ತಿಯಾಗಿ ಬೇಕಾಗುತ್ತದೆ. ಶಿಖರದಲ್ಲಿ ವಾಸ ಮಾಡಲು ಇಷ್ಟವಿರುವವರಿಗೆ ಮರೆಯಲಾಗದ ಅನುಭವವಾಗುತ್ತದೆ. ಬಿಡಾರಿ ಹೂಡುವ ಸರಂಜಾಮುಗಳಿಗೆ ವಯನಾಡಿನ ಕಲ್ಪೆಟ್ಟದಲ್ಲಿರುವ ಜಿಲ್ಲಾ ಟೂರಿಸಂ ಪ್ರಮೋಶನ್ ಕೌನ್ಸಿಲನ್ನು ಸಂಪರ್ಕಿಸಬಹುದು.

ನೀಲಿಮಲ

ವಯನಾಡಿನ ನೈರುತ್ಯಭಾಗದಲ್ಲಿರುವ ಇದನ್ನು ಕಲ್ಪೆಟ್ಟ, ಸುಲ್ತಾನ್ ಬತೇರಿಯ ಮೂಲಕವೂ ತಲುಪಬಹುದಾಗಿದ್ದು, ಹಲವು ಟ್ರೆಕ್ಕಿಂಗ್ ಮಾರ್ಗಗಳ ಆಯ್ಕೆಗಳಿರುವ ನೀಲಿಮಲ ಟ್ರೆಕ್ಕಿಗರ ಆನಂದವಾಗಿರುತ್ತದೆ. ನೀಲಿಮಲದ ತುದಿಯಲ್ಲಿನ ನೋಟವು ಹತ್ತಿರದಲ್ಲಿಯೇ ಇರುವ ಮೀನುಮುಟ್ಟಿ ಜಲಪಾತ ಮತ್ತು ಮುಂಭಾಗದಲ್ಲಿರುವ ಕಣಿವೆಗಳ ಮನಮೋಹಕ ದೃಶ್ಯಗಳನ್ನೊಳಗೊಂಡಿರುತ್ತದೆ.

ಮೀನ್‌ಮುಟ್ಟಿ ಜಲಪಾತ

ಇದು ನೀಲಿಮಾಲಕ್ಕೆ ಸಮೀಪದಲ್ಲಿ ನೆಲೆಯಾಗಿದೆ, ಈ ಅತ್ಯಾಕರ್ಷಕವಾದ ಮೀನ್‌ಮುಟ್ಟಿ ಜಲಪಾತವನ್ನು ಊಟಿ ಮತ್ತು ವಯಾನಾಡ್ ಸಂಪರ್ಕಿಸುವ ಮುಖ್ಯ ರಸ್ತೆಯಿಂದ 2 ಕಿ.ಮೀ. ಟ್ರಕ್ಕಿಂಗ್ ಮಾಡುವ ಮೂಲಕ ತಲುಪಬಹುದು. ಇದು ವಯಾನಾಡ್ ಜಿಲ್ಲೆಯಲ್ಲಿ ಇರುವ ಅತೀ ದೊಡ್ಡ ಜಲಪಾತವಾಗಿದ್ದು, ಇದರಲ್ಲಿ ಸುಮಾರು 300 ಮೀಟರ್ ಎತ್ತರದಿಂದ ನೀರು ಮೂರು ಹಂತಗಳಲ್ಲಿ ಧುಮುಕುತ್ತದೆ.

ಚೇತಾಲಯಮ್

ವಯಾನಾಡ್‌ಗೆ ಭೇಟಿ ಮಾಡುವ ಪ್ರವಾಸಿಗರನ್ನು ಆಕರ್ಷಿಸುವ ಮತ್ತೊಂದು ಜಲಪಾತವೇ ಚೇತಾಲಯಮ್ ಜಲಪಾತ, ಇದು ವಯಾನಾಡ್‌ನ ಉತ್ತರ ಭಾಗದಲ್ಲಿ ಇರುವ ಸುಲ್ತಾನ್ ಬತೇರಿಗೆ ಸಮೀಪದಲ್ಲಿದೆ, ಈ ಜಲಪಾತವು ಮೀನ್‌ಮುಟ್ಟಿ ಜಲಪಾತಕ್ಕೆ ಹೋಲಿಕೆ ಮಾಡಿದರೆ ಗಾತ್ರದಲ್ಲಿ ಚಿಕ್ಕದಾಗಿದೆ. ಈ ಜಲಪಾತ ಮತ್ತು ಇದರ ಸುತ್ತಮುತ್ತಲಿನ ಪ್ರದೇಶವು ಟ್ರಕ್ಕಿಂಗ್ ಮಾಡಲು ಅತ್ಯಂತ ಉತ್ತಮವಾದ ಪ್ರದೇಶಗಳಿವೆ ಮತ್ತು ಇದು ಪಕ್ಷಿ ಪ್ರಿಯರಿಗೆ ಅತ್ಯಂತ ಮೆಚ್ಚಿನ ತಾಣವಾಗಿದೆ.

ಪಕ್ಷಿಪಾತಾಳಮ್

ಪಕ್ಷಿಪಾತಾಳಮ್1700 ಮೀಟರುಗಳಿಗಿಂತಲೂ ಹೆಚ್ಚು ಎತ್ತರವಿರುವ ಬ್ರಹಮಗಿರಿ ಬೆಟ್ಟಗಳ ಆರಣ್ಯದ ಬಹಳ ಒಳಗಿರುತ್ತದೆ. ಈ ಪ್ರದೇಶವು ಪ್ರಧಾನವಾಗಿ ಬೃಹದಾಕಾರದ ಬಂಡೆಗಳಿಂದ ಕೂಡಿರುತ್ತದೆ. ಇಲ್ಲಿ ಕಂಡುಬರುವ ಆಳ್ವಾದ ಗುಹೆಗಳು ಹಲವು ಬಗೆಯ ಪಕ್ಷಿ, ಪ್ರಾಣಿ ಮತ್ತು ವಿಶಿಷ್ಟ ಪ್ರಬೇಧದ ಸಸ್ಯಗಳಿಗೆ ಆವಾಸಸ್ಥಾನವಾಗಿದೆ.ಪಕ್ಷಿಪಾತಾಳಮ್ ಮನಂತವಾಡಿ ಸಮೀಪದಲ್ಲಿ ನೆಲೆಯಾಗಿದೆ ಮತ್ತು ಈ ಪ್ರದೇಶವನ್ನು ತಲುಪಲು ತಿರುನೆಲ್ಲಿ ಯಿಂದ ಪ್ರಾರಂಭಿಸಿ ಅರಣ್ಯದ ಮೂಲಕ 7 ಕಿ.ಮೀ. ಟಕ್ಕಿಂಗ್ ಮಾಡುವ ಅಗತ್ಯವಿದೆ. ಪಕ್ಷಿಪಾತಾಳಮ್‌ಗೆ ಭೇಟಿ ನೀಡುವ ಪ್ರವಾಸಿಗರು ಉತ್ತರ ವಯಾನಾಡ್‌ನ ಡಿ.ಎಫ್.ಒ ಅವರಿಂದ ಪೂರ್ವಾನುಮತಿಯನು ಪಡೆಯಬೇಕಾಗುತ್ತದೆ.

ಬಾಣಾಸುರಸಾಗರ ಅಣೆಕಟ್ಟು

ಬಾಣಾಸುರಸಾಗರ ಅಣೆಕಟ್ಟನ್ನು ಭಾರತದಲ್ಲಿಯೇ ಅತಿದೊಡ್ಡ ಮಣ್ಣಿನ ಅಣೆಕಟ್ಟೆಂದು ಪರಿಗಣಿಸಲಾಗಿದೆ. ಈ ಅಣೆಕಟ್ಟು ವಯನಾಡಿನ ನೈರುತ್ಯಭಾಗದಲ್ಲಿದ್ದು ಕರಲಾಡ್ ಸರೋವರಕ್ಕೆ ಸಮೀಪವಿದೆ. ಬಾಣಾಸುರಸಾಗರದ ಯೋಜನಾಪ್ರದೇಶವು ಬಾಣಾಸು ಶಿಖರದ ಟ್ರೆಕ್ಕಿಂಗ್‌ಗಳ ಪ್ರಾರಂಭಿಕ ತಾಣವೂ ಆಗಿರುತ್ತದೆ. ಸುತ್ತಮುತ್ತಲಿನ ಪ್ರದೇಶಗಳನ್ನು ಜಲಾಶಯವು ಮುಳುಗಡೆ ಮಾಡಿದ ನಂತರ ಉಂಟಾದ ಹಲವು ದ್ವೀಪಗಳು ಇಲ್ಲಿನ ವೈಶಿಷ್ಟ್ಯ. ವಯಾನಾಡ್‌ನ ಆಕರ್ಷಣೀಯ ಪ್ರದೇಶಗಳು, ಶಬ್ದಗಳು ಮತ್ತು ಸುಮಧುರ ಪರಿಮಳವನ್ನು ನೀವು ಆಸ್ವಾಧಿಸುವುದರ ಜೊತೆಗೆ ನೀವು ಇಲ್ಲಿ ಮಸಾಲೆಗಳು, ಕಾಫಿ, ಟೀ, ಬಿದಿರಿನ ಉತ್ಪನ್ನಗಳು, ಜೇನುತುಪ್ಪ ಮತ್ತು ಗಿಡಮೂಲಿಕೆ ಸಸ್ಯಗಳ ಕೆಲವು ಅತೀ ವಿರಳ ವಿಶೇಷತೆಗಳನ್ನು ಕೂಡ ಶಾಪಿಂಗ್ ಮಾಡಬಹುದಾಗಿದೆ.

ವಯಾನಾಡ್‌ನಲ್ಲಿನ ’ಹೊರಂಗಾಣ ಶಿಖರ’ದ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ವಯಾನಾಡ್ ಪ್ರವಾಸೋದ್ಯಮ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿರಿ.

ಸಂಪರ್ಕ ವಿವರಗಳು

ವಯಾನಾಡ್ ಪ್ರವಾಸೋದ್ಯಮ ಸಂಸ್ಥೆ ವಾಸುದೇವ ಇಡೋಮ್, ಪೊಝುತಾನಾ ಅಂಚೆ, ವಯಾನಾಡ್, ಕೇರಳ, ಭಾರತ. ಪಿನ್ – 673575 ದೂ: +91-4936-255308, ಫ್ಯಾಕ್ಸ್: +91-4936-227341 ಇಮೇಲ್: mail@wayanad.org

ಇಲ್ಲಿಗೆ ತಲುಪುವುದು

ಸಮೀಪದ ರೈಲ್ವೇ ನಿಲ್ದಾಣ: ಕ್ಯಾಲಿಕಟ್ ರೈಲ್ವೇ ನಿಲ್ದಾಣವು 62 ಕಿ.ಮೀ ದೂರದಲ್ಲಿದೆ ಸಮೀಪದ ಏರ್‌ಪೋರ್ಟ್: ಕ್ಯಾಲಿಕಟ್ ಅಂತರಾಷ್ಟ್ರೀಯ ಏರ್‌ಪೋರ್ಟ್ ಸುಮಾರು 65 ಕಿ.ಮೀ ದೂರದಲ್ಲಿದೆ

ಸ್ಥಳ

ಅಕ್ಷಾಂಶ : 11.75847, ರೇಖಾಂಶ : 76.093826

ಮ್ಯಾಪ್

District Tourism Promotion Councils KTDC Thenmala Ecotourism Promotion Society BRDC Sargaalaya SIHMK Responsible Tourism Mission KITTS Adventure Tourism Muziris Heritage

ಟೋಲ್ ಫ್ರೀ ಸಂಖ್ಯೆ: 1-800-425-4747 (ಭಾರತದ ಒಳಗೆ ಮಾತ್ರ)

ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.

×
This wesbite is also available in English language. Visit Close