ಪ್ರವಾಸದ ಸಲಹೆಗಳು

 

ಪ್ರವಾಸಿಗರು ತಮ್ಮ ಪ್ರವಾಸಗಳನ್ನು ಅತ್ಯಂತ ಸರಳವಾಗಿ ಪೂರೈಸುವುದನ್ನು ಖಚಿತಪಡಿಸಲು ನಮ್ಮ ಎಲ್ಲಾ ಪ್ರವಾಸಿಗರಿಗೆ ಕೆಲವು ಪ್ರವಾಸದ ಸಲಹೆಗಳನ್ನು ನೀಡುತ್ತೇವೆ ಮತ್ತು ಇದರಿಂದ ಅವರು ದೇವರ ಸ್ವಂತ ನಾಡಿನಲ್ಲಿ ಅತ್ಯುತ್ತಮವಾದ ರೀತಿಯಲ್ಲಿ ಸಮಯ ಕಳೆಯಬಹುದು.

ಹಣ

ಪ್ರವಾಸಿಗರು ತರುವ ವಿದೇಶಿ ಹಣದ ಮೊತ್ತಕ್ಕೆ ಯಾವುದೇ ಮಿತಿ ಇರುವುದಿಲ್ಲ.

ಬ್ಯಾಂಕ್‌ಗಳು

ಬ್ಯಾಂಕ್‌ಗಳು ವಾರದ ದಿನಗಳಲ್ಲಿ ಮತ್ತು ಮೊದಲ ಮತ್ತು ಮೂರನೆಯ ಶನಿವಾರಗಳಲ್ಲಿ 10:00 - 15:30 ವರೆಗೆ ವ್ಯವಹಾರಗಳಿಗಾಗಿ ತೆರೆದಿರುತ್ತವೆ. ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ರಜಾದಿನಗಳಾಗಿರುತ್ತವೆ.

ಕ್ರೆಡಿಟ್ ಕಾರ್ಡ್‌ಗಳು

ಪ್ರಮುಖ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಶಾಪಿಂಗ್ ಸೆಂಟರ್‌ಗಳಲ್ಲಿ ಪ್ರಮುಖ ಕ್ರೆಡಿಟ್ ಕಾರ್ಡ್‌ಗಳನ್ನು ಸ್ವೀಕರಿಸಲಾಗುತ್ತದೆ.

ಸಮಯ

(ಗಂಟೆಗಳು ವೇಗ (+), ನಿಧಾನ (-) ಭಾರತೀಯ ಕಾಲಮಾನದಲ್ಲಿ) ಯು.ಎಸ್.ಎ: - 10.30, ಜರ್ಮನಿ: - 4.30, ಕೆನಡಾ: - 10.30, ಫ್ರಾನ್ಸ್: -4.30, ಆಸ್ಟ್ರೇಲಿಯ: + 4.30, ಸ್ಪೈನ್: - 4.30, ಯು.ಎ.ಇ: - 1.30, ಯು.ಕೆ: - 5.30

ಸಂದರ್ಶಿಸಲು ಉತ್ತಮ ಸಮಯ

ಅತ್ಯುತ್ತಮ ಋತು: ಸೆಪ್ಟೆಂಬರ್ – ಮೇ ಮಳೆಗಾಲದ ಮನರಂಜನೀಯ ಕಾರ್ಯಕ್ರಮಗಳು: ಜೂನ್-ಆಗಸ್ಟ್

ಪ್ರವಾಸದ ಕಿಟ್

ಹತ್ತಿಯ ಉಡುಪುಗಳು; ಟೊಪ್ಪಿಗಳು, ಕನ್ನಡಕಗಳು, ಸನ್‌ಸ್ಕ್ರೀನ್ ಲೋಶನ್ ಇತ್ಯಾದಿ.

ಔಷಧಗಳು

ಮಾದಕತೆಯ ಔಷಧಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಭಾರೀ ಪ್ರಮಾಣದ ದಂಡದ ಜೊತೆಗೆ ಜೈಲುವಾಸ ಅನುಭವಿಸಬೇಕಾಗುತ್ತದೆ.

ಆಯುರ್ವೇದ

ಪ್ರವಾಸೋದ್ಯಮ ಇಲಾಖೆಯು ವರ್ಗೀಕರಿಸಿದ/ಅಂಗೀಕರಿಸಿದ ಆಯುರ್ವೇದ ಕೇಂದ್ರಗಳಿಗೆ ಮಾತ್ರ ಹೋಗಿರಿ, ಪಟ್ಟಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿರಿ.

ಆಹಾರ

ಎಲ್ಲಾ ಗುಣಮಟ್ಟದ ರೆಸ್ಟೋರೆಂಟ್‌ಗಳು ಕಾಂಟಿನೆಂಟಲ್, ಚೈನೀಸ್, ಭಾರತೀಯ ಮತ್ತು ಅಪ್ಪಟ ಕೇರಳದ ಆಹಾರಗಳನ್ನು ಒಳಗೊಂಡ ವೈವಿಧ್ಯಮಯ ಆಹಾರ ಪದಾರ್ಥಗಳನ್ನು ಒದಗಿಸುತ್ತದೆ.

ತುರ್ತು ಸಂಖ್ಯೆಗಳು

ಪೋಲಿಸ್ ನಿಯಂತ್ರಣ ಕೊಠಡಿ: 100 ಅಗ್ನಿ ಶಾಮಕ: 101 ಆಂಬುಲೆನ್ಸ್: 102, 108

ಪೋಲಿಸ್ ಸಹಾಯವಾಣಿ

ಹೈವೇಗಳಲ್ಲಿ ಪ್ರಯಾಣ ಮಾಡುವಾಗ (ಹೈವೇ ಅಲರ್ಟ್ ನಂಬರ್): 9846 100 100 ರೈಲುಗಳಲ್ಲಿ ಪ್ರಯಾಣ ಮಾಡುವಾಗ (ಹೈವೇ ಅಲರ್ಟ್ ನಂಬರ್): 9846 200 100 ವೆಬ್‌ಸೈಟ್: www.keralapolice.org

ದೇವಸ್ಥಾನದ ಉಡುಪೊತ್ತಾಯಗಳು

ಕೆಲವು ದೇವಸ್ಥಾನಗಳು ಹಿಂದುಗಳಲ್ಲದವರ ಪ್ರವೇಶದ ಅನುಮತಿಯನ್ನು ನೀಡುವುದಿಲ್ಲ. ಹೆಚ್ಚಿನ ದೇವಸ್ಥಾನಗಳಲ್ಲಿ ಶಿಸ್ತಿನ ಉಡುಪೊತ್ತಾಯಗಳನ್ನು ಪಾಲಿಸಲಾಗುತ್ತದೆ. ದೇವಸ್ಥಾನದ ಒಳಗೆ ಪಾದರಕ್ಷೆಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ.

ನಗ್ನತೆ

ಕೇರಳದ ಯಾವುದೇ ಬೀಚ್‌ನಲ್ಲಿ ನಗ್ನತೆಗೆ ಅವಕಾಶ ಇರುವುದಿಲ್ಲ.

ಧೂಮಪಾನ

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗುತ್ತದೆ.

ಮನೆಗಳಲ್ಲಿ ಪಾದರಕ್ಷೆ

ಹೆಚ್ಚಿನ ಕೇರಳದ ಮನೆಗಳಿಗೆ ಬೇಟಿ ನೀಡುವವರು ಮನೆಯನ್ನು ಪ್ರವೇಶಿಸುವ ಮುನ್ನ ತಮ್ಮ ಪಾದರಕ್ಷೆಗಳನ್ನು ಹೊರಭಾಗದಲ್ಲಿ ಇಡುತ್ತಾರೆ.

ಸಾರ್ವಜನಿಕ ಸ್ಥಳಗಳಲ್ಲಿ ವರ್ತನೆಗಳು

ಆಲಂಗಿಸುವುದು ಅಥವಾ ಚುಂಬಿಸುವುದು ಮುಂತಾದ ಭಾವನಾತ್ಮಕ ವರ್ತನೆ, ನಡವಳಿಕೆಗಳನ್ನು ಕೇರಳದ ಸಂಪ್ರದಾಯಗಳಲ್ಲಿ ಒಪ್ಪುವುದಿಲ್ಲ.

ವನ್ಯಜೀವಿ ಸಂರಕ್ಷಣಾ ಧಾಮಗಳು

ವನ್ಯಜೀವಿ ಸಂರಕ್ಷಣಾ ಧಾಮಗಳಿಗೆ ಭೇಟಿ ನೀಡಲು ಸಂರಕ್ಷಣಾ ಧಾಮಕ್ಕೆ ಸಂಬಂಧಿಸಿದ ಪ್ರಾಧಿಕಾರದಿಂದ ಮುಂಚಿತವಾಗಿಯೇ ಅನುಮತಿಯನ್ನು ಪಡೆಯಬೇಕಾಗುತ್ತದೆ. ವೆಬ್‌ಸೈಟ್: www.forest.kerala.gov.in ಹೆಚ್ಚಿನ ವಿಚಾರಣೆಗಳಿಗೆ ಸಂಪರ್ಕಿಸಿ: ಅರಣ್ಯಗಳ ಮುಖ್ಯ ಸಂರಕ್ಷಣಾಧಿಕಾರಿಗಳು, ತಿರುವನಂತಪುರಮ್ 695 014 ದೂ: +91 471 2322217

ಅಧೀಕೃತ ವೆಬ್‌ಸೈಟ್

ಕೇರಳದ ಬಗ್ಗೆ ಹೆಚ್ಚಿನದನ್ನು ತಿಳಿಯಲು, ಕೇರಳ ಸರ್ಕಾರದ ವೆಬ್‌ಸೈಟ್ www.kerala.gov.in ಅನ್ನು ಸಂದರ್ಶಿಸಿರಿ.

District Tourism Promotion Councils KTDC Thenmala Ecotourism Promotion Society BRDC Sargaalaya SIHMK Responsible Tourism Mission KITTS Adventure Tourism Muziris Heritage

ಟೋಲ್ ಫ್ರೀ ಸಂಖ್ಯೆ: 1-800-425-4747 (ಭಾರತದ ಒಳಗೆ ಮಾತ್ರ)

ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.

×
This wesbite is also available in English language. Visit Close