ಗವಿ

 

ಕೇರಳ ಅರಣ್ಯ ಅಭಿವೃದ್ಧಿ ನಿಗಮದ ಯೋಜನೆಯಾಗಿರುವ ಗವಿ ಈಕೊ-ಟೂರಿಸಮ್ ಈಗ ಪ್ರವಾಸಿಗರ ಗಮನವನ್ನು ಬಹಳವಾಗಿ ಸೆಳೆಯುತ್ತಿದೆ. ಈ ಯೋಜನೆಯು ಅನೇಕ ವಿಚಾರಗಳಲ್ಲಿ ಅದ್ವಿತೀಯವಾಘಿದೆ ಮತ್ತು ಇದನ್ನು ವೀಕ್ಷಿಸುವವರಲ್ಲಿ ಹೆಚ್ಚಿನವರು ನಿಸರ್ಗ ಪ್ರಿಯರು ಮತ್ತು ಸಾಹಸಿ ಪ್ರವಾಸಿಗರಾಗಿರುತ್ತಾರೆ. ಅಲ್ಪಾವಧಿಯಲ್ಲಿಯೇ ಗವಿಯನ್ನು ಭೇಟಿ ಮಾಡುವವರ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಲೇ ಸಾಗಿದೆ, ಅದರಲ್ಲಿಯೂ ’ಅಲಿಸ್ಟೈರ್ ಇಂಟರ್‌ನ್ಯಾಶನಲ್’ ನಂತರ ಇದನ್ನು ವಿಶ್ವದ ಪ್ರಮುಖ ಪ್ರವಾಸ ಸ್ಥಳದ ಪಟ್ಟಿಯಲ್ಲಿ ಕಾಣಿಕೊಂಡೀದೆ ಇದು ಭಾರತದ ಪ್ರಮುಖ ಈಕೋ-ಟೂರಿಸಮ್ ಪ್ರದೇಶ ಮತ್ತು ನೋಡಲೇಬೇಕಾದ ಪ್ರದೇಶಗಳಲ್ಲಿ ಒಂದಾಗಿದೆ.

ಗವಿ ಈಕೋ-ಯೋಜನೆಯ ಮುಖ್ಯಾಂಶ ಏನೆಂದರೆ ಸ್ಥಳೀಯ ಜನರನ್ನೇ ಮಾರ್ಗದರ್ಶಿಗಳಾಗಿ, ತೋಟದ ಮಾಲಿಗಳನ್ನಾಗಿ ಮತ್ತು ಅಡುಗೆಯವರನ್ನಾಗಿ ನೇಮಕ ಮಾಡಿರುವುದಾಗಿದೆ. ಇದು ಸ್ಥಳೀಯರಿಗೆ ಜೀವನೋಪಾಯವನ್ನು ಕಲ್ಪಿಸಿಕೊಟ್ಟಿದೆ ಮತ್ತು ಅವರಲ್ಲಿ ನಿಸರ್ಗವನ್ನು ಸಂರಕ್ಷಿಸುವ ಅರಿವನ್ನು ಉಂಟುಮಾಡುವಲ್ಲಿ ಸಹಕರಿಸುತ್ತದೆ. ಪಥಾನಮ್‌ಥಿಟ್ಟ ಜಿಲ್ಲೆಯಲ್ಲಿ ನೆಲೆಯಾಗಿರುವ ಗವಿಯು ತನ್ನ ಪ್ರವಾಸಿಗರಿಗೆ ಟಕ್ಕಿಂಗ್, ವನ್ಯ ಜೀವಿಗಳನ್ನು ವೀಕ್ಷಿಸುವುದು, ವಿಶೇಷವಾಗಿ ನಿರ್ಮಿಸಿದ ಟೆಂಟ್‌ಗಳಲ್ಲಿ ಹೊರಾಂಗಣ ಕ್ಯಾಂಪಿಂಗ್ ಮತ್ತು ರಾತ್ರಿ ಬೇಟೆಯ ಪ್ರಯಾಣದ ಸೌಲಭ್ಯಗಳನ್ನು ಒದಗಿಸುತ್ತದೆ.

ಗವಿಗೆ ಹೋಗುವ ರಸ್ತೆಯು ಟೀ ಪ್ಲಾಂಟೇಶನ್‌ಗಳಿಂದ ಸುತ್ತುವರೆದಿದೆ, ಇದು ಒಂದು ತಾಜಾತನವನ್ನು ಕೊಡೂವಂತಹ ಅನುಭವವನ್ನು ನೀಡುತ್ತದೆ. ಗವಿಗೆ ದಾರಿಯು ಬೇರ್ಪಡುವಲ್ಲಿ ಮುಂಡಕಯ್ಯಮ್, ಕುಟ್ಟಿಕನಮ್, ಪೀರ್‌ಮೆಡು ಮತ್ತು ವಂಡಿಪೆರಿಯಾರ್‌ನಂತಹ ಆಸಕ್ತಿಕರವಾದ ಸ್ಥಳಗಳಿಂದ ತುಂಬಿಕೊಂಡಿದೆ.

ಒಮ್ಮೆ ನೀವು ಗವಿಯನ್ನು ತಲುಪಿದ ನಂತರ ಈಕೋ-ಲಾಡ್ಜ್ ಆಗಿರುವ ’ಹಸಿರು ಮನೆ’ ನಿಮ್ಮನ್ನು ಕೈ ಬೀಸಿ ತಾಯಿಯಂತೆ ಕರೆದು ನಿಮ್ಮನ್ನು ಸಂರಕ್ಷಣೆಯಲ್ಲಿ ಇಟ್ಟುಕೊಳ್ಳುತ್ತದೆ. ’ಹಸಿರು ಮನೆ’ ಯಿಂದ ಯಾರಾದರೂ ಗವಿ ಸರೋವರ ಮತ್ತು ದಟ್ಟವಾದ ಅರಣ್ಯದ ಅದ್ಭುತ ದೃಷ್ಯವನ್ನು ನೀಡುತ್ತದೆ. ’ಹಸಿರು ಮನೆ’ಯಲ್ಲಿ ಒದಗಿಸಲಾಗುವ ವಾಸ್ತವ್ಯದ ಎರಡೂ ಬದಿಗಳಲ್ಲಿ ವನ್ಯ ಜೀವಿಗಳಿರುವಲ್ಲಿ ಪ್ರವಾಸಿಗರು ಮರದ ಮನೆಗಳನ್ನು ಮತ್ತು ಪಿಚ್ ಟೆಂಟ್‌ಗಳನ್ನು ಕೂಡ ನಿರ್ಮಿಸಿಕೊಳ್ಳಬಹುದು. ಇಲ್ಲಿ ಪ್ರತಿಯೊಬ್ಬರೂ ಅತ್ಯದ್ಭುತವಾದ ಟ್ರಕ್ಕಿಂಗ್ ಅನುಭವವನ್ನು ಪಡೆದುಕೊಳ್ಳಬಹುದು, ಇದನ್ನು ತರಬೇತಿ ಪಡೆದ ಸ್ಥಳೀಯರಿಂದ ಮೇಲ್ವಿಚಾರಣೆ ಮಾಡಲಾಗುತ್ತದೆ. ಗವಿ ಪರಿಸರದಲ್ಲಿ ಏಕಾಂಗಿಯಾಗಿ ಇರಲು ಬಯಸುವವರು ಅಲ್ಲಿಯೇ ಇರಬಹುದು ಅಥವಾ ಸರೋವರದ ನೀರಿನಲ್ಲಿ ದೋಣಿಯನ್ನು ನಡೆಸಲು ಸಹ ಹೋಗಬಹುದು ಅಥವಾ ಆಕರ್ಷಣೀಯ ಸೂರ್ಯಾಸ್ತವನ್ನು ಆನಂದಿಸಬಹುದು. ಪ್ರವಾಸಿಗರಿಗೆ ಸಾಮಾನ್ಯವಾಗಿ ಸಸ್ಯಾಹಾರ ಮತ್ತು ಸ್ನ್ಯಾಕ್ಸ್ ನೀಡಲಾಗುತ್ತದೆ, ಇದು ಈ ಸ್ಥಳದಲ್ಲಿ ಪರಿಸರ ಸ್ನೇಹಿಯಾಗಿರಲು ಹೆಚ್ಚಿನ ಸಹಾಯವನ್ನು ಮಾಡುತ್ತದೆ.  

ಈ ಪ್ರದೇಶವು ಸಮೃದ್ಧ ಹೂವುಗಳು ಮತ್ತು ಪ್ರಾಣಿ ಸಮೂಹದಿಂದ ಕೂಡಿದೆ. ಇಲ್ಲಿ ಬೆಟ್ಟಗಳು ಮತ್ತು ಕಣಿವೆಗಳು, ದಟ್ಟವಾದ ಅರಣ್ಯ, ಸಮೃದ್ಧ ಹುಲ್ಲುಗಾವಲುಗಳು, ಪೊದೆಗಳು, ಧುಮ್ಮಿಕ್ಕುವ ಜಲಪಾತಗಳು ಮತ್ತು ಏಲಕ್ಕಿ ಪ್ಲಾಂಟೇಶನ್‌ಗಳು ಸಹ ಇಲ್ಲಿವೆ. ಅತ್ಯಂತ ವಿರಳವಾಗಿರುವ ವಂಶಗಳಾದ ನೀಲಗಿರಿ ಕಾಡು ಜಿಂಕೆ, ಸಿಂಹದ ಬಾಲವುಳ್ಳ ಕೋತಿಗಳು ಗವಿಯ ಹೊರವಲಯದಲ್ಲಿ ಸಾಮಾನ್ಯವಾಗಿ ಕಂಡುಬರುವ ದೃಷ್ಯವಾಗಿದೆ. ಗ್ರೇಟ್ ಪೀಡ್ ಹಾರ್ನ್‌ಬಿಲ್, ಮರಕುಟಿಗ ಮತ್ತು ಮಿಂಚುಳ್ಳಿಗಳನ್ನು ಒಳಗೊಂಡಂತೆ 260ಕ್ಕೂ ಹೆಚ್ಚಿನ ಜಾತಿಯ ಪಕ್ಷಿಗಳು ಇಲ್ಲಿವೆ, ಗವಿಯು ಪಕ್ಷಿ ಪ್ರಿಯರ ಪಾಲಿನ ಸ್ವರ್ಗವೇ ಆಗಿದೆ.

ಗವಿಯಲ್ಲಿ  ಕೊರಕಲು ಹಾದಿಯ ನಡುವೆ ಕಣಿವೆಯನ್ನು ವೀಕ್ಷಿಸುವುದು ಅದರ ಕೆಳಭಾಗದಲ್ಲಿ ಅರಣ್ಯವನ್ನು ವೀಕ್ಷಿಸುವುದು ಅತ್ಯದ್ಭುತವಾದ ನೋಟವನ್ನು ನೀಡುತ್ತದೆ. ಕೊಚು ಪಂಪಾದಿಂದ ಹತ್ತಿರದಲ್ಲಿ ಇರುವ ಹಸಿರು ಮನೆ ಈಕೋ-ಲಾಡ್ಜ್ ಮೂಲಕ ನೆಗೆದಾಡುವ ನೀಲಗಿರಿ ಕಾಡು ಜಿಂಕೆಯನ್ನು ವೀಕ್ಷಿಸಬಹುದು.

ಅತ್ಯಂತ ಜನಪ್ರಿಯ ಧಾರ್ಮಿಕ ಕ್ಷೇತ್ರವಾಗಿರುವ ಶಬರಿ ಮಲೈ ಗವಿಯಿಂದ ಕೂಗಳತೆಯಲ್ಲಿಯೇ ಇದೆ. ಆಸಕ್ತರು ಅತ್ಯಂತ ಮನಮೋಹಕವಾದ ವನ್ಯಜೀವಿಗಳನ್ನು ನೋಡಬಹುದು, ಕುಲ್ಲೂರ್‌, ಗವಿ ಪುಲ್ಲುಮೇಡು, ಕೊಚು ಪಂಪಾ ಮತ್ತು ಪಚಾಕನಮ್‌ಗೆ ಬೇಟೆ ವಿಹಾರಕ್ಕೆ ಹೋಗಬಹುದು, ಹೀಗೆ ಇದು ವನ್ಯ ಜೀವಿಗಳನ್ನು ನೋಡುವ ಅವಕಾಶಗಳನ್ನು ಕಲ್ಪಿಸುತ್ತದೆ.

ಗವಿಯ ಇನ್ನೊಂದು ಅದ್ವಿತೀಯ ಲಕ್ಷಣ ಏನೆಂದರೆ ಅರಣ್ಯಗಳಲ್ಲಿ ಕ್ಯಾಂಪ್ ಹಾಕುವುದಾಗಿದೆ. ಯಾರಾದರೂ ಕ್ಯಾಂಪಿನ ಪ್ರದೇಶದಲ್ಲಿ ಟೆಂಟ್ ಹಾಕಬಹುದು, ಇದು ಭಾರತೀಯ ಅರಣ್ಯಗಳಲ್ಲಿ ಅತ್ಯಂತ ವಿರಳವಾದ ಸೌಕರ್ಯವಾಗಿದೆ. ರಾತ್ರಿಯ ಕಾರ್ಗತ್ತಲಿನಲ್ಲಿ ನಿಶಬ್ದವು ತುಂಬಿರಲು ಅರಣ್ಯದಲ್ಲಿ ವನ್ಯ ಜೀವಿಗಳ ಇರುವಿಕೆಯ ಅನುಭವವನ್ನು ಪಡೆಯಬಹುದು,ಈ  ಅನುಭವವನ್ನು ಮಾತಿನಲ್ಲಿ ವರ್ಣಿಸುವುದು ಅಸಾಧ್ಯವಾಗಿದೆ. ಇಲ್ಲಿ ಮರದ ಮನೆಗಳೂ ಇದ್ದು ಯಾರು ಬೇಕಾದರೂ ಸಂಪೂರ್ಣ ಜೀವನದ ಆನಂದವನ್ನು ಇಲ್ಲಿ ಸವಿಯಬಹುದು.

ಗವಿಯಲ್ಲಿ ಬುಡಕಟ್ಟಿನವರು ಸಕ್ರಿಯವಾಗಿ ಭಾಗವಹಿಸುವ ಮೂಲಕ ಇದನ್ನು ದೇಶದಲ್ಲಿ ಅತ್ಯಂತ ಅದ್ವಿತೀಯವಾದ ಪ್ರದೇಶವನ್ನಾಗಿಸಲಾಗಿದೆ. ಅರಣ್ಯದ ಸಾಂಪ್ರದಾಯಿಕ ಜ್ಞಾನ ಮತ್ತು ಅದರ ಜೀವನ ವಿಧಾನವು ಗವಿಯ ಸುತ್ತ ಮುತ್ತಲಿನ ಪ್ರದೇಶವನ್ನು ಮೂಲ ರೂಪದಲ್ಲಿ ಉಳಿಯಲು ಸಹ್ಕಾರಿಯಾಗಿದೆ.

ಗವಿಯು ಪ್ರತಿಯೊಬ್ಬ ಪ್ರವಾಸಿಗರಿಗೂ ಅತ್ಯದ್ಭುತವಾದ ಅನುಭವದೊಂದಿಗೆ ಗಾಢವಾದ ಸಂಬಂಧವನ್ನು ಹೊಂದಿರುತ್ತದೆ ಇದನ್ನು ಜೀವಮಾನ ಕಾಲದಲ್ಲಿ ಯಾರೂ ತಪ್ಪಿಸಿಕೊಳ್ಳಬಾರದು. ಗವಿಯು ಪರಿಶುದ್ಧವಾಗಿದೆ ಮತ್ತು ಇದು ಅರಣ್ಯಕ್ಕೆ ಸಂಬಂಧಿಸಿದ್ದಾಗಿದೆ, ಇದು ಪ್ರವಾಸಿಗರಿಗೆ ಗವಿಯ ಪ್ರದೇಶವನ್ನು ನೋಡಿಕೊಳ್ಳುವ ಜವಾಬ್ದಾರಿಗೆ ತಮ್ಮ ಆಸಕ್ತಿ ಮತ್ತು ಕ್ರಿಯೆಗಳನ್ನು ಮುಂಬರುವ ದೀರ್ಘಕಾಲದ ವರೆಗೆ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಮಾಡುತ್ತದೆ.

DTPC (ಡಿ.ಟಿ.ಪಿ.ಸಿ) ಪಥನಂಥಿಟ್ಟವು ಗವಿ ಪ್ಯಾಕೇಜ್ ಅನ್ನು ಒದಗಿಸುತ್ತದೆ

ಇಲ್ಲಿ ತಲುಪಿರಿ

ಹತ್ತಿರದ ರೈಲ್ವೇ ನಿಲ್ದಾಣ: ಕೊಟ್ಟಾಯಮ್‌ನಿಂದ ಸುಮಾರು 114 ಕಿ.ಮೀ. ಹತ್ತಿರದ ಏರ್‌ಪೋರ್ಟ್ : ಮಧುರೈ ಏರ್‌ಪೋರ್ಟ್ (ತಮಿಳು ನಾಡು) ಇದು 140 ಕಿ.ಮೀ. ದೂರದಲ್ಲಿದೆ ಮತ್ತು ಕೊಚ್ಚಿನ್ ಅಂತರಾಶ್ಟ್ರೀಯ ಏರ್‌ಪೋರ್ಟ್ ಇದು 190 ಕಿ.ಮೀ. ದೂರದಲ್ಲಿದೆ.

ಸ್ಥಳ

ಅಕ್ಷಾಂಶ: 9.437208, ರೇಖಾಂಶ: 77.166066

ಮ್ಯಾಪ್

District Tourism Promotion Councils KTDC Thenmala Ecotourism Promotion Society BRDC Sargaalaya SIHMK Responsible Tourism Mission KITTS Adventure Tourism Muziris Heritage

ಟೋಲ್ ಫ್ರೀ ಸಂಖ್ಯೆ: 1-800-425-4747 (ಭಾರತದ ಒಳಗೆ ಮಾತ್ರ)

ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.

×
This wesbite is also available in English language. Visit Close