ನೆಲ್ಲಿಯಂಪಥಿ ಬೆಟ್ಟಗಳು, ಪಾಲಕ್ಕಾಡ್

 

ಪಾಲಕ್ಕಾಡ್ ಜಿಲ್ಲೆಯಲ್ಲಿರುವ ನೆನ್ಮರಾದ ಪಟ್ಟಣದಿಂದ ಮೋಡಗಳು ಮುತ್ತನ್ನು ನೀಡುವಂತೆ ಕಾಣುವ ನೆಲ್ಲಿಯಪಥಿ ಪರ್ವತ ಶ್ರೇಣಿಗಳು ಆರಂಭವಾಗುತ್ತವೆ ಇದು ನಯನ ಮನೋಹರವಾಗಿದೆ. ಈ ಪರ್ವತ ಶ್ರೇಣಿಯ ಎತ್ತರ ಸುಮಾರು 467 ಮೀ. ಯಿಂದ 1572 ಮೀ. ವರೆಗೆ ಇದೆ ಮತ್ತು ಅದನ್ನು ವೀಕ್ಷಿಸುವ ಸರ್ವರಿಗೂ ಇದು ಅತ್ಯಂತ ತಣ್ಣಗಿನ ಅನುಭವವನ್ನು ಕೊಡುತ್ತದೆ. ನೆಲ್ಲಿಯಂಪಥಿಯನ್ನು ತಲಪಲು ನೆನ್ಮಾರದಿಂದ ಆರಂಭವಾಗುವ ರಸ್ತೆಯ ಮೂಲಕ ಪೋಥುಂಡಿ ಅಣೆಕಟ್ಟಿನ ಕಡೆಗೆ ಹೋಗುವ ರಸ್ತೆಯಲ್ಲಿ ಪ್ರಯಾಣ ಮಾಡಬೇಕಾಗುತ್ತದೆ. ಈ ರಸ್ತೆಯಲ್ಲಿ 10 ಹೇರ್ಪಿನ್ ತಿರುವುಗಳಿದ್ದು ನೆಲ್ಲಿಯಂಪಥಿಯನ್ನು ತಲಪಲು ಇವುಗಳನ್ನು ದಾಟಬೇಕಾಗುತ್ತದೆ.

ಪೋಥುಂಡಿ ಅಣೇಕಟ್ಟೆಯು ಅತ್ಯಂತ ಸುಂದರವಾಗಿದ್ದು, ಇದು ಬೋಟಿಂಗ್‌ ಸೌಲಭ್ಯವನ್ನು ಮಾಡಿಕೊಡುತ್ತದೆ ಮತ್ತು ಇದು ಪಿಕ್‌ನಿಕ್‌ಗೆ ಹೋಗಲು ಉತ್ತಮವಾದ ಆಯ್ಕೆಯಾಗಿದೆ. ಘಟ್ಟದ ರಸ್ತೆಯು ಮೇಲ್ಮುಖವಾಗಿ ಸುತ್ತಿಕೊಂಡು ನೆಲ್ಲಿಯಂಪಥಿಗೆ ಹೋಗುವಾಗ, ಕೆಲವು ಜಾಗಗಳಲ್ಲಿ ಪಾಲಕ್ಕಾಡಿನ ಬತ್ತದ ಗದ್ದೆಗಳ ಹಚ್ಚಹಸುರಿನ ರತ್ನಗಂಬಳಿಯ ವಿಹಂಗಮ ನೋಟವು ಕಾಣುತ್ತದೆ. ಅದು ಈ ಪ್ರದೇಶದ ಪಶ್ಚಿಮಘಟ್ಟಗಳ ಭೌಗೋಲಿಕ ವಿದ್ಯಮಾನವಾದ ಪಾಲಕ್ಕಾಡ್ ಕಣಿವೆಯ ಅದ್ಭುತ ನೋಟ ಮತ್ತು ನೆರೆರಾಜ್ಯವಾದ ತಮಿಳುನಾಡಿನ ಕೆಲ ಭಾಗಗಳ ನೋಟವನ್ನು ಕೊಡುತ್ತದೆ.

ಬೆಟ್ಟದ ಮೇಲೆ ಹೋಗುವಾಗ ಜೈವಿಕ ವ್ಯವಸಾಯದಲ್ಲಿ ಆಸಕ್ತಿಯುಳ್ಳವರು ವಿವಿಧ ಕಂಪನಿಗಳು ಖಾಸಗಿಯಾಗಿ ನಿರ್ವಹಿಸುತ್ತಿರುವ ವಿಶಾಲ ಟಿ ಎಸ್ಟೇಟುಗಳನ್ನು ನೋಡಬಹುದು. ನೆಲ್ಲಿಯಂಪತಿಯ ಬೆಟ್ಟಗಳು ತಮ್ಮ ಕಿತ್ತಳೆ ತೋಟಗಳಿಗೂ ಹೆಸರುವಾಸಿಯಾಗಿವೆ.

ನೆಲ್ಲಿಯಂಪಥಿ ಪರ್ವತ ಶ್ರೇಣಿಯನ್ನು ನೋಡಲು ಬಂದವರಿಗೆ ಖಾಸಗಿ ಒಡೆತನದ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು ವಿವಿಧ ಸ್ಥಳಗಳಲ್ಲಿ ಇದೆ. ಇಲ್ಲಿ ಪ್ರಮುಖ ಸ್ಥಳಗಳಲ್ಲಿ ಇರುವ ಬಯೋ-ಫಾರ್ಮ್‌ಗಳು ಮೈಲಿಗಲ್ಲುಗಳು ಆಗಿರುವ ಇವುಗಳನ್ನು ಪಲಗಪಾಂಡಿ ಎಸ್ಟೇಟ್‌ನಲ್ಲಿನ ಅತ್ಯಂತ ಶೃಂಗಕ್ಕೆ ತಲುಪುವ ಮುನ್ನ ಪ್ರತಿಯೊಬ್ಬರೂ ದಾಟಿ ಹೋಗಬೇಕಾಗುತ್ತದೆ. ಎಸ್ಟೇಟ್‌ನಲ್ಲಿ ಭಾರತದಲ್ಲಿ ಬ್ರಿಟೀಶರ ಆಳ್ವಿಕೆಯಲ್ಲಿ ಕಟ್ಟಲಾಗಿರುವ ಸುಂದರವಾದ ಒಂದು ಬಂಗಲೆ ಇದೆ ಮತ್ತು ಅದನ್ನು ಈಗ ಖಾಸಗಿ ಒಡೆತನದ ರೆಸಾರ್ಟ್ ಆಗಿ ಪರಿವರ್ತಿಸಲಾಗಿದೆ. ಕೈಕಟ್ಟಿಯಲ್ಲಿ ಸಮುದಾಯ ಭವನ ಲಭ್ಯವಿದೆ, ಇದನ್ನು ಸಾಮಾನ್ಯವಾಗಿ ಟ್ರಕ್ಕಿಂಗ್‌ನಲ್ಲಿ ಆಸಕ್ತಿ ಇರುವವರು ಉಪಯೋಗಿಸಿಕೊಳ್ಳುತ್ತಾರೆ.

ಪಲಾಗಪಂಡಿಯಿಂದ  ಸ್ವಲ್ಪವೇ ದೂರದಲ್ಲಿ ಸೀತಾರ್ಕುಂಡು ಇದೆ, ಇಲ್ಲಿ ಕಣಿವೆಯ ಸುಂದರವಾದ ದೃಷ್ಯವನ್ನು ನೋಡಬಹುದಾಗಿದೆ ಮತ್ತು ಇಲ್ಲಿ 100 ಮೀ. ಎತ್ತರದಿಂದ ಧುಮುಕುವ ಜಲಪಾತವು ಇದರ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದೆ. ಪಲಾಗಪಂಡಿಯಿಂದ ಮಂಪಾರ ಎಂಬ ಸ್ಥಳವು ನಡೆದು ಹೋಗಬಹುದಾದ ಅಥವಾ ಜೀಪ್‌ನಲ್ಲಿ ಹೋಗಬಹುದಾದ ದೂರದಲ್ಲಿದೆ; ಇದು ನೆಲ್ಲಿಯಂಪಥಿಯಲ್ಲಿನ ಮತ್ತೊಂದು ಅತ್ಯಾಕರ್ಷಕ ಅನುಕೂಲ ಸ್ಥಾನವಾಗಿದೆ. ಪಲಾಗಪಂಡಿ ಎಸ್ಟೇಟ್ ಒಳಗೆ ಮತ್ತು ಅದರ ಸುತ್ತಲೂ ಟೀ, ಏಲಕ್ಕಿ ಮತ್ತು ಕಾಫಿ ಪ್ಲಾಂಟೇಶನ್‌ಗಳಿದ್ದು, ಇವು ಸಮೃದ್ಧ ಬೆಟ್ಟಗಳಿಂದ ಕೂಡಿದ್ದು ಭಾರತದ ಕಾಡೆತ್ತು, ಆನೆಗಳು, ಚಿರತೆಗಳು, ದೈತ್ಯ ಅಳಿಲುಗಳು ಇತ್ಯಾದಿಗಳ ರೂಪದಲ್ಲಿ ವನ್ಯ ಜೀವಿಗಾಲ ಜೀವನದ ಎಳೆಗಳನ್ನು ನಿಮಗೆ ಒದಗಿಸುತ್ತದೆ ಮತ್ತು ಇದು ಪಕ್ಷಿ ವೀಕ್ಷಕರ ಸ್ವರ್ಗವಾಗಿದೆ.

ಇಲ್ಲಿಗೆ ತಲುಪಲು

ಹತ್ತಿರದ ರೈಲ್ವೇ ನಿಲ್ದಾಣ: ಪಾಲಕ್ಕಾಡ್, ಸುಮಾರು 56 ಕಿ.ಮೀ. ದೂರದಲ್ಲಿದೆ; ತ್ರಿಶೂರ್ ಮತ್ತು ಶೋರನುರ್, ಇದು 77 ಕಿ.ಮೀ. ದೂರದಲ್ಲಿದೆ ಹತ್ತಿರದ ಏರ್‌ಪೋರ್ಟ್: ಕೊಯಮತ್ತೂರು ಅಂತರಾಷ್ಟ್ರೀಯ ಏರ್‌ಪೋರ್ಟ್ (ತಮಿಳು ನಾಡು), ಇದು ಪಾಲಕ್ಕಾಡ್‌ನಿಂದ 55 ಕಿ.ಮೀ. ದೂರದಲ್ಲಿದೆ.

ಸ್ಥಳ

ಅಕ್ಷಾಂಶ : 10.538952, ರೇಖಾಂಶ : 76.69364

ಮ್ಯಾಪ್

District Tourism Promotion Councils KTDC Thenmala Ecotourism Promotion Society BRDC Sargaalaya SIHMK Responsible Tourism Mission KITTS Adventure Tourism Muziris Heritage

ಟೋಲ್ ಫ್ರೀ ಸಂಖ್ಯೆ: 1-800-425-4747 (ಭಾರತದ ಒಳಗೆ ಮಾತ್ರ)

ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.

×
This wesbite is also available in English language. Visit Close