ಸೈಲೆಂಟ್ ವ್ಯಾಲಿ ನ್ಯಾಶನಲ್ ಪಾರ್ಕ್, ಪಾಲಕ್ಕಾಡ್

 

ಸೈಲೆಂಟ್ ವ್ಯಾಲಿ ನ್ಯಾಶನಲ್ ಪಾರ್ಕ್ ಪಾಲಕ್ಕಾಡ್ ಜಿಲ್ಲೆಯ ನೈರಿತ್ಯ ಮೂಲೆಯಲ್ಲಿ ನೆಲೆಯಾಗಿದ್ದು ಇದು 237.52 ಚದರ ಕಿ.ಮೀ. ವಿಸ್ತೀರ್ಣದ ಪ್ರದೇಶವನ್ನು ಹೊಂದಿದೆ. ಇದು ಉತ್ತರದಲ್ಲಿ ನೀಲಗಿರಿ ಪ್ರಸ್ಥಭೂಮಿಗೆ ಪ್ರಾರಂಭವನ್ನು ನೀಡುತ್ತದೆ ಮತ್ತು ದಕ್ಷಿಣದಲ್ಲಿ ಮನ್ನಾರ್‌ಕ್ಕಾಡ್‌ನ ಸ್ಥಳವನ್ನು ಅಣಕಿಸುತ್ತದೆ. ಅತ್ಯಂತ ನಾಜೂಕಾದ ಈ ಹಚ್ಚ ಹಸಿರಿನ ಮಳೆಯ ಅರಣ್ಯಗಳ ಅದ್ವಿತೀಯ ಸಂರಕ್ಷಣೆಯಾಗಿದೆ ಇದು ಹೂವುಗಳ ವೈವಿಧ್ಯಮಯ ನರ್ಸರಿ ಮತ್ತು ಪ್ರಾಣಿ ಸಂಕುಲವಿರುವ ಪ್ರದೇಶವಾಗಿದ್ದು, ಇವುಗಳಲ್ಲಿ ಕೆಲವು ವಿಶ್ವದ ಯಾವುದೇ ಸ್ಥಳದಲ್ಲಿಯೂ ಕಂಡುಬರುವುದಿಲ್ಲ.

ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನವು ನೀಲಗಿರಿ ಜೀವಗೋಳ ರಕ್ಷಿತಾರಣ್ಯದ ಜೀವಾಳವಾಗಿದೆ. ಸೈಲೆಂಟ್ ವ್ಯಾಲಿ ಎಂಬ ಅದರ ಹೆಸರಿನ ಹೊರತಾಗಿಯೂ (ಇಲ್ಲಿ ಸಿಕಾಡ ಕೀಟಗಳ ಗಮನ ಸೆಳೆಯುವಂತೆ ಕೀರಲುದನಿಯ ಕೋಲಾಹಲವು ಇಲ್ಲದಿದ್ದರೂ) ಇದು ಜೈವಿಕ ವೈವಿಧ್ಯತೆಯ ಭಂಡಾರವಾಗಿದೆ. ಇದು ನಿಜವಾಗಿಯೂ ಜೀವ ವಿಜ್ಞಾನದ ವಿದ್ಯಾರ್ಥಿಗಳಿಗೆ, ವೃತ್ತಿಪರ ವಿಜ್ಞಾನಿಗಳಿಗೆ ಮತ್ತು ಬಯಲು ಜೀವ ವಿಜ್ಞಾನಿಗಳ ನೈಜವಾದ ಈಡನ್ನಿನ ತೋಟವಾಗಿದೆ.

ಇಂತಹ ಪಶ್ಚಿಮ ಘಟ್ಟಗಳ ಜೈವಿಕ ವೈವಿಧ್ಯತೆಯ ಪ್ರಾತಿನಿಧಿಕ ಸಂಗ್ರಹವನ್ನು ಬಹುಷಃ ಇನ್ನೆಲ್ಲೂ ಕಾಣಲಾಗುವುದಿಲ್ಲ – 110 ಸೀತಾಳೆ ಹೂವಿನ ಪ್ರಬೇಧಗಳನ್ನು ಒಳಗೊಂಡಂತೆ 1000 ಕ್ಕೂ ಹೆಚ್ಚಿನ ಹೂಬಿಡುವ ಗಿಡಗಳ ಪ್ರಬೇಧಗಳು, 34 ಕ್ಕೂ ಹೆಚ್ಚಿನ ಪ್ರಬೇಧಗಳ ಸಸ್ತನೆಗಳು, 200 ಕ್ಕೂ ಹೆಚ್ಚಿನ ಪ್ರಬೇಧಗಳ ಚಿಟ್ಟೆಗಳು, 400 ಕ್ಕೂ ಹೆಚ್ಚಿನ ಪ್ರಬೇಧಗಳ ಸಣ್ಣ ಹಾರುಕೀಟಗಳ ಪ್ರಬೇಧಗಳು, ವಿಜ್ಞಾನಕ್ಕೆ ಹೊಸತಾದ 10 ಪ್ರಬೇಧಗಳನ್ನೂ ಒಳಗೊಂಡ 128 ಜೀರುಂಡೆಗಳ ಪ್ರಬೇಧಗಳು, 16 ಸ್ಥಳೀಯಪ್ರಬೇಧಗಳನ್ನೂ ಒಳಗೊಂಡಂತೆ  150 ಪಕ್ಷಿಗಳ ಪ್ರಬೇಧಗಳು ಇಲ್ಲಿವೆ.

ಕುಂತಿ ನದಿಯು ಸಮುದ್ರ ಮಟ್ಟದಿಂದ 2000 ಮೀಟರ್ ಎತ್ತರದ ಮಟ್ಟದಿಂದ ನೀಲಗಿರಿ ಬೆಟ್ಟಗಳಿಂದ ಇಳಿಯಲ್ಪಡುತ್ತದೆ ಮತ್ತು ಇದು ಕಣಿವೆಯ ಸಂಪೂರ್ಣ ಉದ್ದವನ್ನು ಕ್ರಮಿಸುತ್ತದೆ ಮತ್ತು ಆಳವಾದ ಕಳಿವೆಗಳ ಮೂಲಕ ರಭಸವಾಗಿ ಹರಿಯುತ್ತದೆ. ಕುಂತಿ ನದಿಯು ಕಂದು ಬಣ್ಣಕ್ಕೆ ತಿರುಗುವುದಿಲ್ಲ ಮತ್ತು ಇದು ಯಾವಾಗಲೂ ಸ್ಪಟಿಕದಂತೆ ಶುದ್ಧವಾಗಿಯೂ, ಸಾರ್ವಕಾಲಿಕವಾಗಿಯೂ ಮತ್ತು ರುದ್ರ ರಮಣಿಯವಾಗಿಯೂ ಇರುತ್ತದೆ.

ಅರಣ್ಯಗಳಿಂದ ಆಗುವ ಆವಿ ಹೊಮ್ಮುವಿಕೆಯು ಇನ್ಯಾವುದೇ ಮೇಲ್ಮೈಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದು ವಾತಾವರಣವನ್ನು ತಂಪಾಗಿರಿಸುತ್ತದೆ, ನೀರಿನ ಆವಿಯ ಸುಲಭವಾದ ಸಾಂಧ್ರತೆಗೆ ಸಹಾಯ ಮಾಡುತ್ತದೆ, ಇದರಿಂದ ಬಯಲು ಪ್ರದೇಶದಲ್ಲಿ ಬೇಸಿಗೆಯಲ್ಲಿ ಮಳೆಯಾಗುತ್ತದೆ.

ಸಂಪರ್ಕ ವಿಳಾಸ

ವೈಲ್ಡ್ ಲೈಫ್ ವಾರ್ಡನ್ ಸೈಲೆಂಟ್ ವ್ಯಾಲಿ ಡಿವಿಶನ್, ಮನ್ನಾರ್‌ಕ್ಕಡ್ ಪೋಸ್ಟ್, ಪಾಲಕ್ಕಾಡ್, ಕೇರಳ, ಭಾರತ – 678582 ಇಮೇಲ್: ww-svnp@forest.kerala.gov.in

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಸಂಪರ್ಕಿಸಿ, ಮಾಹಿತಿ ಕೇಂದ್ರ: 8589895652

ಅಸಿಸ್ಟೆಂಟ್ ವೈಲ್ಡ್ ಲೈಫ್ ವಾರ್ಡನ್, ಸೈಲೆಂಟ್ ವ್ಯಾಲಿ ನ್ಯಾಶನಲ್ ಪಾರ್ಕ್, ಮುಕ್ಕಲಿ, ಪಾಲಕ್ಕಾಡ್ – 678582 ದೂ: +91 4924 253225

ಇಲ್ಲಿಗೆ ತಲುಪುವುದು

ಹತ್ತಿರದ ರೈಲ್ವೇ ನಿಲ್ದಾಣ: ಪಾಲಕ್ಕಾಡ್, ಸುಮಾರು 69 ಕಿ.ಮೀ. ದೂರದಲ್ಲಿದೆ ಹತ್ತಿರದ ಏರ್‌ಪೋರ್ಟ್: ಕೊಯಮತ್ತೂರು ಅಂತರಾಷ್ಟ್ರೀಯ ಏರ್‌ಪೋರ್ಟ್ (ತಮಿಳು ನಾಡು), ಸುಮಾರು 91 ಕಿ.ಮೀ. ದೂರದಲ್ಲಿದೆ

ಸ್ಥಳ

ಅಕ್ಷಾಂಶ : 11.130066, ರೇಖಾಂಶ : 76.42911

ಮ್ಯಾಪ್

District Tourism Promotion Councils KTDC Thenmala Ecotourism Promotion Society BRDC Sargaalaya SIHMK Responsible Tourism Mission KITTS Adventure Tourism Muziris Heritage

ಟೋಲ್ ಫ್ರೀ ಸಂಖ್ಯೆ: 1-800-425-4747 (ಭಾರತದ ಒಳಗೆ ಮಾತ್ರ)

ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.

×
This wesbite is also available in English language. Visit Close