ಅಲಪ್ಪುಝಾ – ಕೊಚ್ಚಿ ವಿಹಾರ ನೌಕಾಯಾನ

 

ನೀವು ಇದುವರೆಗೂ ದೇವರ ಸ್ವಂತ ನಾಡಿನ ಮೇಲೆ ಕಾಲ್ನಡಿಗೆಯಲ್ಲಿ ಅನ್ವೇಷಣೆ ಮಾಡಿರುವಿರಾ? ಸುಸಜ್ಜಿತವಾದ ಹಿನ್ನೀರಿನ ವಿಹಾರಿ ನೌಕಾಯಾನದ ಆರಾಮದಾಯಕತೆಯನ್ನು ಆನಂದಿಸಿರುವಿರಾ? ನೀವು ’ಪೂರ್ವದ ವೆನೀಸ್’ ಎಂದು ಹೆಸರಾಗಿರುವ ಅಲಪ್ಪುಝಾದಲ್ಲಿ ಒಂದು ಹೌಸ್‌ಬೋಟ್ ಅನ್ನು ಬಾಡಿಗೆಗೆ ಪಡೆಯಬಹುದು. ಕೇರಳದ ಭತ್ತದ ಕಣಜ, ತಾಳೆ ತೋಟಗಳು ಮತ್ತು ಭತ್ತದ ಗದ್ದೆಗಳಿಂದ ಸಮೃದ್ಧವಾಗಿರುವ ಕುಟ್ಟನಾಡ್‌ನಲ್ಲಿ ಇರುವ ಕಾಲುವೆಗಳ ಮೂಲಕ ಸುಂದರವಾದ ನೌಕಾಯಾನದ ವಿಹಾರವನ್ನು ಮಾಡಬಹುದಾಗಿದೆ.

ನಂತರ, ಕೇರಳದ ಅತ್ಯತ ಆಕರ್ಷಣೀಯ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿರುವ ಕುಮಾರಕಮ್‌ನತ್ತ ಚಲಿಸಿರಿ. ಕುಮಾರಕಮ್ ಅನ್ನು ತಲುಪುತ್ತಲೇ ನೀವು ಅತ್ಯಂತ ಅದ್ಭುತಗಳ ವಿಶ್ವಕ್ಕೆ ಪ್ರವೇಶಿಸುವಿರಿ. ಈ ಚಿಕ್ಕ ಹಿನ್ನೀರಿನ ಗ್ರಾಮವು ದ್ವೀಪಗಳ ಸಮೂಹವಾಗಿದೆ, ತನ್ನದೇ ಜೀವನ ಶೈಲಿಯನ್ನು ಹೊಂದಿರುವ, ತನ್ನದೇ ಗತಿಯನ್ನು ಮತ್ತು ಪರಂಪರೆಯನ್ನು ಇದು ಹೊಂದಿದೆ.ಇಲ್ಲಿನ ನೋಟಗಳು, ಶಬ್ದಗಳು ಮತ್ತು ಪರಿಮಳಗಳು ನಿಮಗೆ ಆಪ್ತವೆನಿಸುತ್ತವೆ ಮತ್ತು ನ್ಮ್ಮನ್ನು ಆಕರ್ಷಿಸುತ್ತವೆ. ಕುಮಾರಕಮ್‌ನಲ್ಲಿ ಸ್ವಲ್ಪ ಸಮಯ ವಿಹರಿಸಿ ಮತ್ತು ಆರಾಮ ಪಡೆಯಿರಿ, ನಂತರ ನೀವು ವೈಕಮ್‌ಗೆ ಮುನ್ನಡೆಯಬಹುದು.

ವೈಕಮ್‌ಗೆ ಹೋಗುವ ದಾರಿಯಲ್ಲಿ ವೆಂಬನಾಡ್ ಸರೋವರವಿದ್ದು ಇದು ನಿಮಗೆ ಗ್ರಾಮ್ಯ ಹೀನ್ನೀರಿನ ಗ್ರಾಮೀಣ ಸೊಗಡಿನ ಜನ ಜೀವನದ ದೃಷ್ಯವನ್ನು ನಿಮಗೆ ನೀಡುತ್ತದೆ. ಕೇರಳದಲ್ಲಿ ಇರುವ ಅತ್ಯಂತ ದೊಡ್ಡ ಹಿನ್ನೀರಿನ ಪ್ರದೇಶದ ನೋಟವನ್ನು ವೀಕ್ಷಿಸುವ ಮೂಲಕ ಆರಾಮ ಪಡೆಯಿರಿ. ಎರಡೂ ಬದಿಗಳಲ್ಲಿ ನಿಮಗೆ ಕಾಣ ಸಿಗುವ ಹಚ್ಚ ಹಸಿರಿನ, ಉತ್ಸಾಹ ತುಂಬಿಸಿ ಸಂತೋಷ ಕೊಡುವ ದೃಷ್ಯಗಳನ್ನು ಮತ್ತು ಅತ್ಯಂತ ನೈಸರ್ಗಿಕವಾದ ಸೌಂದರ್ಯವನ್ನು ನೋಡುವಾಗ ನಿಮ್ಮ ಕಣ್ಣುಗಳು ದಣಿಯುವುದಿಲ್ಲ. ಎರಡೂ ಬದಿಗಳಲ್ಲಿ ಇರುವ ತಾಳೆ ಮರಗಳ ಮೃದುವಾದ ಸೂರ್ಯನ ಬೆಳಕಿನಿಂದ ಬೆಳಗುವ ನೀರು ನಿಮ್ಮನ್ನು ಪುಳಕಿತಗೊಳಿಸುತ್ತದೆ ಇದರೊಂದಿಗೆ ಗಾಳಿಯಲ್ಲಿ ಪಿಸುಗುಡುವ ಧ್ವನಿಯು ನಿಮ್ಮನ್ನು ಚಕಿತಗೊಳಿಸುತ್ತದೆ. ಇಂತಹ ಅಮೋಘ ದೃಷ್ಯವು ನಿಮ್ಮ ಉಳಿದ ಜೀವಮಾನ ಕಾಲದಲ್ಲಿ ನಿಮ್ಮ ಆತ್ಮದೊಂದಿಗೆ ಅಚ್ಚಳಿಯದೆ ಉಳಿಯುತ್ತದೆ.

ಮುಂದಿನ ನೌಕಾಯಾನದಲ್ಲಿ ನೀವು ಪಥಿರಮನಲ್ ಎಂಬ ಚಿಕ್ಕ ದ್ವೀಪವೊಂದನ್ನು ಕಾಣುವಿರಿ, ನೀವೀಗ ಹಿನ್ನೀರಿನ ಮಧ್ಯಭಾಗದಲ್ಲಿ ತೇಲುತ್ತಿದ್ದೀರಿ. ಅಲ್ಲಿ ಒಂದು ಚಿಕ್ಕ ವಿರಾಮವನ್ನು ಪಡೆಯಿರಿ ಮತ್ತು ನಿಮ್ಮ ಮಾರ್ಗದರ್ಶಕರು ನಿಮಗೆ ಈ ಪ್ರದೇಶಕ್ಕೆ ಸಂಬಂಧಿಸಿರುವ ಹಲವಾರು ಆಸಕ್ತಿದಾಯಕವಾದ ಪುರಾಣ ಪುಣ್ಯ ಕಥೆಗಳನ್ನು ನಿಮಗೆ ಹೇಳುತ್ತಾರೆ. ಪ್ರವಾಸವನ್ನು ಮುಂದುವರೆಸುತ್ತಾ, ಉಪ್ಪು ನೀರಿನ ಗದ್ದೆಗಳಿಗೆ ಪ್ರಸಿದ್ಧಿಯಾಗಿರುವ ಥನ್ನೀರ್‌ಮುಕ್ಕೊಮ್ ಎಂಬ ಬಂದರು ಪ್ರದೇಶವಿರುವ ಥನ್ನೀರ್‌ಮುಕ್ಕೊಮ್ ಎಂಬ ಗ್ರಾಮವನ್ನು ಪ್ರವೇಶಿಸುತ್ತೀರಿ. ಈ ಪ್ರದೇಶಗಳ ಮೂಲಕ ಪ್ರಯಾಣಿಸುವುದು ಮತ್ತು ಕೇರಳದ ರುಚಿಕರವಾದ ತಿಂಡಿಗಳನ್ನು ಸೇವಿಸುವುದು ಅತ್ಯದ್ಭುತವಾದ ಅನುಭವಾಗಿರುತ್ತದೆ.

ಮುಂದಿನ ಹಿನ್ನೀರಿನ ಪ್ರದೇಶ – ವೈಕಮ್, ಇದು ನಿಮಗೆ ಆಸಕ್ತಿಯುತವಾದ ಸುಂದರ ದೃಷ್ಯಗಳನ್ನು ಮತ್ತು ಅನುಭವಗಳನ್ನು ಒದಗಿಸುತ್ತದೆ. ಇಲ್ಲಿ ನೀವು ಕೇರಳದ ಶ್ರೀಮಂತ ಪುರಾತನ ಸಂಸ್ಕೃತಿಯನ್ನು ನೆನಪಿಸುತ್ತದೆ. ಪರಮ ಶಿವನಿಗೆ ಅರ್ಪಿಸಲಾಗಿರುವ ದೇವಸ್ಥಾನವೊಂದು ಈ ನಗರದ ಪ್ರಮುಖ ಆಕರ್ಷಣೆಯಾಗಿದೆ. ಇಲ್ಲಿನ ಚೈತನ್ಯದಾಯಕ ಹಸಿರಿನ ವಾತಾವರಣವು ನಿಮಗೆ ಅನುಪಮವಾದ ಅನುಭವವನ್ನು ನೀಡುತ್ತದೆ.

ಕೇರಳದ ರುಚಿಕರವಾದ ಊಟವನ್ನು ಸವಿದ ನಂತರ, ವೈಕಮ್‌ನಿಂದ ನೀವು ಕುಂಬಲಾಂಗಿಗೆ ತೆರಳಬಹುದು. ನೀವು ಹಿನ್ನೀರಿನ ಜೀವನಶೈಲಿಯ ಮಜಲುಗಳನ್ನು ಪ್ರಕಟಿಸುವ ತೆಂಗಿನ ತೋಟಗಳು ಮತ್ತು ಭತ್ತದ ಗದ್ದೆಗಳಿಂದ ಸುತ್ತುವರೆದಿರುವ ಒಂದು ಚಿಕ್ಕ ಗ್ರಾಮ ಥೈಕ್ಕಟ್ಟುಸೆರಿಯ ಮೂಲಕ ಪ್ರಯಾಣ ಮಾಡುವಿರಿ. ಈ ಕುಂಬಲಾಂಗಿಯಲ್ಲಿ ನಿಮಗೆ ಕಾಣ ಸಿಗುವ ಮೊಟ್ಟ ಮೊದಲ ದೃಷ್ಯವೇ ಚೈನಾದ ಮೀನು ಬಲೆಗಳನ್ನು ಹಿನ್ನೀರಿನ ದಡದಲ್ಲಿ ಹರಡಿರುವ ನೋಟವಾಗಿರುತ್ತದೆ. ಪೊಕ್ಕಾಲಿ ಕೊಯ್ಲು, ಇದು ಒಂದು ಕೊಯ್ಲಿನ ಸಾಂಪ್ರದಾಯಿಕವಾದ ದೇಶಿಯ ಸಂಪ್ರದಾಯವಾಗಿದ್ದು, ಇದರಲ್ಲಿ ಭತ್ತದ ಕೊಯ್ಲು ಆದ ನಂತರ ಸೀಗಡಿಯ ಶೋಧಿಸುವಿಕೆಯ ಪದ್ಧತಿಯನ್ನು ಅನುಸರಿಸಲಾಗುತ್ತದೆ, ಇದು ಕುಂಬಲಾಂಗಿಯಲ್ಲಿ ಅನುಸರಿಸಲಾಗುವ ಅದ್ವಿತೀಯ ಕೃಷಿ ಪದ್ಧತಿಯಾಗಿದೆ.

ಕುಂಬಲಾಂಗಿಯ ಶೀತಯುಕ್ತ ಹಿನ್ನೀರಿನ ಪ್ರದೇಶಗಳ ಮೂಲಕ ಪ್ರಯಾಣಿಸಿದ ನಂತರ, ಚೈನಾದ ಮೀನಿನ ಬಲೆಗಳಿಗೆ ಮತ್ತು ಅಸಂಖ್ಯಾತ ಐತಿಹಾಸಿಕ ಸ್ಥಳಗಳಿಗೆ ಹೆಸರಾಗಿರುವ ಫೋರ್ಟ್ ಕೊಚ್ಚಿಯತ್ತ ನಾವು ಮುನ್ನಡೆಯುತ್ತೇವೆ. ಕಾಲ್ನಡಿಗೆಯನ್ನು ಇಷ್ಟಪಡುವವರಿಗೆ ಈ ಪ್ರದೇಶವು ಕಾಲ್ನಡಿಯ ಮೂಲಕ ನೋಡಬೇಕಾದ ಸುಂದರ ಸ್ಥಳವಾಗಿದೆ. ಆದಾಗ್ಯೂ, ಇದನ್ನು ಹೌಸ್‌ಬೋಟ್‌ನಲ್ಲಿ ಕುಳಿತುಕೊಳ್ಳುವ ಮೂಲಕ ಕೂಡ ವೀಕ್ಷಿಸಬಹುದು  ಇದು ಕೂಡ ರಮ್ಯವಾಗಿರುತ್ತದೆ. ಫೋರ್ಟ್ ಕೊಚ್ಚಿಯ ಸೌಂದರ್ಯವನ್ನು ವೀಕ್ಷಿಸಿದ ನಂತರ ನಾವು ಈಗ ನಮ್ಮ ಕೊನೆಯ ವಿಹಾರ ಪ್ರದೇಶವಾದ ಬೋಲ್ಘಾಟ್ಟಿ ದ್ವೀಪದತ್ತ ಮುಂದುವರೆಯುತ್ತೇವೆ.

ಬೋಲ್ಘಾಟ್ಟಿ ದ್ವೀಪಕ್ಕೆ ಹೋಗುವ ಮಧ್ಯದಲ್ಲಿ ನೀವು ಎರ್ನಾಕುಲಮ್ ನಗರದ ಪ್ರಮುಖ ಪ್ರದೇಶದ ಅತ್ಯದ್ಭುತವಾದ ನೋಟವನ್ನು ಆನಂದಿಸುವಿರಿ, ಇದು ಪಶ್ಚಿಮ ಭಾಗಕ್ಕೆ ಸ್ಕೈಲೈನ್ ಮತ್ತು ಶಿಪ್‌ಯಾರ್ಡ್ ಆಗಿರುತ್ತದೆ. ಬೋಲ್ಘಾಟ್ಟಿ ತಲುಪಿದಾಗ ಅದು ನಮಗೆ ವಿಶ್ರಾಂತಿ ಪಡೆಯುವ ಸಮಯವಾಗುತ್ತದೆ. ನೀವು ಇಲ್ಲಿ ಮೈನವಿರೇಳಿಸುವ ತಂಗಾಳಿ ಮತ್ತು ಸೂರ್ಯನ ಬೆಳಕಿನ ಸ್ಪರ್ಷ ಸುಖದಲ್ಲಿ ಮೈಮರೆಯುತ್ತೀರಿ. ಈ ವಿಹಾರ ಸ್ಥಳದ ನೆನಪು ನಿಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಕೊಳ್ಳುತ್ತದೆ ಮತ್ತು ಇದು ಖಚಿತವಾಗಿ ನಿಮ್ಮ ಹೃದಯ ತುಂಬಿ ಬರುವ ಭಾವನೆಯನ್ನು ಉಂಟುಮಾಡುತ್ತದೆ ಮತ್ತು ಮುಂಬರುವ ಎಲ್ಲಾ ವರ್ಷಗಳಲ್ಲಿ ನಿಮ್ಮ ಆತ್ಮವು ಇದನ್ನು ಮೆಲುಕು ಹಾಕುತ್ತಿರುತ್ತದೆ.

ಅಲಪ್ಪುಝಾದಲ್ಲಿ ಪ್ರವಾಸಗಳನ್ನು ಮತ್ತು ಹಿನ್ನೀರಿನ ವಿಹಾರ ನೌಕಾಯಾನಗಳನ್ನು ನಡೆಸಲು, ಯನ್ನು ಸಂಪರ್ಕಿಸಿ

ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (DTPC) ದೂರವಾಣಿ: +91477 2253308, 2251796 ಇಮೇಲ್: info@dtpcalappuzha.com

ಇಲ್ಲಿಗೆ ತಲುಪುವುದು

ಹತ್ತಿರದ ರೈಲ್ವೇ ನಿಲ್ದಾಣ : ಅಲಪ್ಪುಝಾ ಹತ್ತಿರದ ವಿಮಾನ ನಿಲ್ದಾಣ: ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಇದು ಅಲಪ್ಪುಝಾ ಪಟ್ಟಣದಿಂದ 85 ಕಿ.ಮೀ. ದೂರದಲ್ಲಿದೆ

ಭೌಗೋಳಿಕ ಮಾಹಿತಿ

ಎತ್ತರ : ಸಮುದ್ರ ಮಟ್ಟ

ಮ್ಯಾಪ್

District Tourism Promotion Councils KTDC Thenmala Ecotourism Promotion Society BRDC Sargaalaya SIHMK Responsible Tourism Mission KITTS Adventure Tourism Muziris Heritage

ಟೋಲ್ ಫ್ರೀ ಸಂಖ್ಯೆ: 1-800-425-4747 (ಭಾರತದ ಒಳಗೆ ಮಾತ್ರ)

ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.

×
This wesbite is also available in English language. Visit Close