ಅಲಾಪ್ಪುಝಾ

 

ಪೂರ್ವದ ವೆನೀಸ್ ಎಂದು ಕರೆಯಲ್ಪಡುವ ಅಲಾಪ್ಪುಝಾ ಕೇರಳ ಇತಿಹಾಸದ ಅತ್ಯಂತ ಪ್ರಮುಖ ತಾಣ ಎಂದು ಯಾವಾಗಲೂ ತನ್ನ ಹೆಗ್ಗಳಿಕೆಯನ್ನು ಪಡೆದಿದೆ. ಇಂದು ಇದು ತನ್ನ ಬೋಟ್ ರೇಸ್‌ಗಳು, ಹಿನ್ನೀರಿನ ರಜಾದಿನಗಳು, ಬೀಚ್‌ಗಳು, ಹಡಗು ನಿರ್ಮಾಣ ಉತ್ಪನ್ನಗಳು ಮತ್ತು ತೆಂಗಿನ ನಾರಿನ ಉದ್ಯಮಗಳಿಗೆ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಅಲಾಪ್ಪುಝಾ ಬೀಚ್ ಒಂದು ಜನಪ್ರಿಯವಾದ ಪಿಕ್‌ನಿಕ್ ಪ್ರದೇಶವಾಗಿದೆ. ಇದು ಒಂದು ಸಮುದ್ರದ ತೀರದ ಹಡಗುಕಟ್ಟೆಯಾಗಿದ್ದು 137 ವರ್ಷ ಹಳೆಯದ್ದಾಗಿದೆ. ವಿಜಯ ಬೀಚ್ ಪಾರ್ಕ್‌ನಲ್ಲಿನ ಮನರಂಜನೆಯ ಸೌಕರ್ಯಗಳು ಈ ಬೀಚ್‌ನ ಆಕರ್ಷಣೆಯನ್ನು ಹೆಚ್ಚಿಸಿದೆ. ಇಲ್ಲಿಯೇ ಹತ್ತಿರದಲ್ಲಿ ಎಲ್ಲಾ ಪ್ರವಾಸಿಗರನ್ನು ಸೆಳೆಯುವ ಹಳೆಯ ಲೈಟ್‌ಹೌಸ್ ಇದೆ.

ಅಲಾಪ್ಪುಝಾದ ಮತ್ತೊಂದು ಮನರಂಜನೀಯ ಅನುಭವ ಎಂದರೆ ಹೌಸ್‌ಬೋಟ್ ನೌಕಾಯಾನವಾಗಿದೆ. ಈ ಹೌ‌ಸ್‌ಬೋಟ್‌ಗಳು ಹಿಂದಿನ ಕಾಲದ ಕೆತ್ತುವಲ್ಲಮ್ ನ ಪುನರ್ ನಿರ್ಮಾಣಗೊಂಡ ಅಲಾಪ್ಪುಝಾದ ಹಿನ್ನೀರಿನಲ್ಲಿ ಕಂಡುಬರುತ್ತವೆ. ಕೆತ್ತುವಲ್ಲಮ್ ಎಂಬುದು ಮಲೆಯಾಳಂ ಪದವಾಗಿದ್ದು ’ಕೆತ್ತು’ ಎಂದರೆ ನಿವಾಸಿ ಕಟ್ಟಡ ಮತ್ತು ’ವಲ್ಲಮ್’ ಎಂದರೆ ಬೋಟ್ ಎಂದರ್ಥ. ಹಿಂದಿನ ಕಾಲದಲ್ಲಿ ಈ ಕೆತ್ತುವಲ್ಲಮ್ ಅಥವಾ ಮರದ ದಿಮ್ಮಿಗಳನ್ನು ಉಪಯೋಗಿಸಲಾದ ಮೇಲ್ಚಾವಣಿಯಿರುವ ಬೋಟ್ ಮೂಲಕ ಅಕ್ಕಿ ಮತ್ತು ಮಸಾಲೆ ಪದಾರ್ಥಗಳನ್ನು ಟನ್‌ಗಳಲ್ಲಿ ಒಯ್ಯಲಾಗುತ್ತಿತ್ತು.

ಆನಂತರದಲ್ಲಿ ಈ ಹೌಸ್‌ಬೋಟ್‌ಗಳು ಸುಸಜ್ಜಿತ ಬೆಡ್‌ರೂಮ್‌ಗಳು, ಆಧಿನಿಕ ಶೌಚಾಲಯಗಳು, ಲಿವ್ಂಗ್ ರೂಮ್‌ಗಳು, ಅಡುಗೆಮನೆ ಮತ್ತು ವಿಶಾಲ ನೋಟಕ್ಕೆ ಬಾಲ್ಕನಿಯನ್ನು ಒಳಗೊಂಡಂತೆ ಉತ್ತಮ ಹೋಟೆಲ್ ಕೋಣೆಗಳ ಎಲ್ಲಾ ಸೌಕರ್ಯಗಳನ್ನು ಹೊಂದಿವೆ. ಹೌಸ್‌ಬೋಟ್‌ನಲ್ಲಿ ಇರುವ ಮೂಲಕ ಹಿನ್ನೀರಿನಲ್ಲಿ ಜೀವನದ ನೋಟವನ್ನು ಹೊಂದಿದೆ.

ಹೌಸ್‌ಬೋಟ್‌ಗಳು

ಹೌಸ್‌ಬೋಟ್‌ಗಳು ತಿರುವನಮ್ತಪುರಂ, ಕೊಲ್ಲಮ್, ಕೊಟ್ಟಾಯಮ್, ಅಲ್ಲಾಪ್ಪುಝಾ, ಎರ್ನಾಕುಲಮ್, ತ್ರಿಶೂರ್ ಮತ್ತು ಕಾಸರಗೋಡುಗಳಲ್ಲಿ ಲಭ್ಯವಿರುತ್ತವೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಡಿ.ಟಿ.ಪಿ.ಸಿಗಳನ್ನು ಸಂಪರ್ಕಿಸಿ. ಡಿ.ಟಿ.ಪಿ.ಸಿ ಹೌಸ್‌ಬೋಟ್ ಪ್ರೀ-ಪೈಡ್ ಕೌಂಟರ್, ಅಲಾಪ್ಪುಝಾ ಹೌಸ್‌ಬೋಟ್‌ಗಳನ್ನು ಬುಕಿಂಗ್ ಮಾಡಲು, ಪ್ರವಾಸಿಗರು ಜಿಲ್ಲಾ ಪ್ರವಾಸೋದ್ಯಮ ಅಭಿವವೃದ್ಧಿ ನಿಗಮ(ಡಿ.ಟಿ.ಪಿ.ಸಿ) ದಿಂದ ನಿರ್ವಹಿಸಲ್ಪಡುವ ’ನಂಬಿಕಾರ್ಹ ಸೇವೆ, ನಂಬಿಕಾರ್ಹ ದರಗಳು’ ಇರುವ ಹೌಸ್ ಬೋಟ್ ಪ್ರೀ-ಪೈಡ್ ಕೌಂಟರ್‌ ಅನ್ನು ಉಪಯೋಗಿಸಿಕೊಳ್ಳಬಹುದು.

ಸಂಪರ್ಕ ವಿವರಗಳು

ಅಲಾಪ್ಪುಝಾ – ಹೌ‌ಸ್‌ಬೋಟ್ ಪ್ರೀ-ಪೈಡ್ ಕೌಂಟರ್ ಮೊಬೈಲ್: 09400051796, 09447483308, +91 477 2251796, +91 477 2253308

ಇಲ್ಲಿಗೆ ತಲುಪುವುದು

ಹತ್ತಿರದ ರೈಲ್ವೇ ನಿಲ್ದಾಣ : ಅಲಪ್ಪುಝಾ ಹತ್ತಿರದ ವಿಮಾನ ನಿಲ್ದಾಣ: ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಇದು ಅಲಪ್ಪುಝಾ ಪಟ್ಟಣದಿಂದ 85 ಕಿ.ಮೀ. ದೂರದಲ್ಲಿದೆ

ಸ್ಥಳ

ಅಕ್ಷಾಂಶ: 9.492853, ರೇಖಾಂಶ: 76.317726

ಮ್ಯಾಪ್

District Tourism Promotion Councils KTDC Thenmala Ecotourism Promotion Society BRDC Sargaalaya SIHMK Responsible Tourism Mission KITTS Adventure Tourism Muziris Heritage

ಟೋಲ್ ಫ್ರೀ ಸಂಖ್ಯೆ: 1-800-425-4747 (ಭಾರತದ ಒಳಗೆ ಮಾತ್ರ)

ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.

×
This wesbite is also available in English language. Visit Close