ಕೇರಳದತ್ತ ಒಂದು ನೋಟ

 

ಪಶ್ಚಿಮ ಭಾಗದ ಅರಬ್ಬಿ ಸಮುದ್ರದ ಕರಾವಳಿಯಲ್ಲಿರುವ, ಪೂರ್ವ ಭಾಗದ ಪಶ್ಚಿಮ ಘಟ್ಟಗಳಲ್ಲಿ ನೆಲೆಯಾಗಿರುವ ಮತ್ತು 44 ನದಿಗಳ ಸಂಪರ್ಕವನ್ನು ಒಳಗೊಂಡಿರುವ ಕೇರಳವು ಸಾಲು ಸಾಲು ಭೌಗೋಳಿಕ ಲಕ್ಷಣಗಳಿಂದ ಸಮೃದ್ಧವಾಗಿದೆ ಇದರಿಂದ ಕೇರಳವನ್ನು ಏಷ್ಯಾದ ಅತ್ಯಂತ ಪ್ರಮುಖ ಪ್ರವಾಸಿ ತಾಣವನ್ನಾಗಿ ಮಾಡಿದೆ. ಸುಂದರ ಬೀಚ್‌ಗಳನ್ನು ಒಳಗೊಂಡ ಉದ್ದನೆಯ ಕರಾವಳಿ ತೀರ, ಆಕರ್ಷಕ ಹಿನ್ನೀರಿನ ವ್ಯಾಪಕ ಪ್ರದೇಶ, ಎತ್ತರದ ಬೆಟ್ಟ ಪ್ರದೇಶಗಳು ಮತ್ತು ಅದ್ವಿತೀಯ ವನ್ಯಜೀವಿಗಳು, ಇವೆಲ್ಲವೂ ನೀವು ಈ ಮೂಲಕ ಹಾದು ಹೋದರೆ ಸಿಗಬಹುದಾದ ಕೆಲವೇ ಅದ್ಭುತಗಳಲ್ಲಿ ಒಂದಾಗಿದೆ. ಮತ್ತು ಇನ್ನೇನು ಬೇಕು ಇವೆಲ್ಲವೂ ಕೇವಲ ಎರಡು ಗಂಟೆಗಳ ಪ್ರಯಾಣದಲ್ಲಿ ಪ್ರತಿಯೊಂದು ಸುಂದರ ತಾಣಗಳು ಲಭ್ಯವಾಗುತ್ತದೆ – ಇಂತಹ ಅನುಕೂಲತೆಗಳು ನಿಮಗೆ ಭೂಮಿಯಲ್ಲಿ ಬೇರೆಲ್ಲೂ ಸಿಗಲಾರದು.

ಕೇರಳದ ಗೌರವವು ಕೇವಲ ಹಿಂದಿನ ಸಂಸ್ಕೃತಿಯ ಮೇಲಿರುವ ಗೌರವಾದಾರಗಳಿಗೆ ಮಾತ್ರ ಸೀಮಿತವಾಗಿಲ್ಲ ಆದರೆ ಇದು ಬೆಳವಣಿಗೆ ಮತ್ತು ಅಭ್ಯುದಯದತ್ತ ಸಾಗುವಲ್ಲಿ ಕೂಡ ಮುಂದುವರೆದಿದೆ. ಶೇಕಡಾ ನೂರರಷ್ಟು ಅಕ್ಷರತೆ, ವಿಶ್ವ-ದರ್ಜೆಯ ಆರೋಗ್ಯ ಸಂರಕ್ಷಣೆ ವ್ಯವಸ್ಥೆಗಳು, ಭಾರತದ ಅತೀ ಕಡಿಮೆ ಶಿಶುಮರಣ ಪ್ರಮಾಣವನ್ನು ಹೊಂದಿದೆ ಮತ್ತು ಅತ್ಯಂತ ಸುಧಾರಿತ ಜೀವನ ಮಟ್ಟದ ದರಗಳು ಕೆಲವು ಮೈಲಿಗಲ್ಲುಗಳಾಗಿದ್ದು, ಇದಕ್ಕಾಗಿ ರಾಜ್ಯದ ಜನರು ಬಹಳ ಹೆಮ್ಮೆ ಪಡುತ್ತಾರೆ.

ಭೂಗೋಳ ಶಾಸ್ತ್ರ

ಭೂಗೋಳ ಶಾಸ್ತ್ರ

ಕೇರಳವನ್ನು ಭೌಗೋಳಿಕವಾಗಿ ಮೂರು ಪ್ರದೇಶಗಳನ್ನಾಗಿ ವರ್ಗೀಕರಿಸಲಾಗಿದೆ: ಪ್ರಸ್ಥಭೂಮಿ ಇದು ಪಶ್ಚಿಮ ಘಟ್ಟಗಳಲ್ಲಿ ಇಳಿಜಾರು ಪ್ರದೇಶದಲ್ಲಿ ಗಿರಿ ಶಿಖರಗಳನ್ನು ಮತ್ತು ಕಣಿವೆಗಳನ್ನು ಒಳಗೊಂಡ ಈ ನದುವಿನ ಪ್ರದೇಶವು ತಡೆ ರಹಿತವಾಘಿ ಕರಾವಳಿಯಲ್ಲಿ ಸರೋವರಗಳ ಮತ್ತು ನದಿಗಳ ಸಂಪರ್ಕದಲ್ಲಿ ಇರುವ ಹಲವಾರು ಸುಂದರ ಹಿನ್ನೀರನ್ನು ಒಳಗೊಂಡಂತೆ ಸುಮಾರು 580 ಕಿ.ಮೀ. ಉದ್ದದಷ್ಟಿದೆ. ಅರಣ್ಯ ಪ್ರದೇಶವು ದಟ್ಟವಾದ ಅರಣ್ಯವನ್ನು ಒಳಗೊಂಡಿದೆ, ಆದರೆ ಉಳಿದ ಪ್ರದೇಶ ಟೀ ಮತ್ತು ಕಾಫಿ ಪ್ಲಾಂಟೇಶನ್‌ಗಳು ಅಥವಾ ಇತರೆ ರೂಪದ ಸಾಗುವಳಿಯ ಫಾರ್ಮ್‌ಗಳ ಅಡಿಯಲ್ಲಿ ಬರುತ್ತದೆ. ರಾಜ್ಯದ ಹೆಚ್ಚಿನ ಪ್ರದೇಶವು ಹಸಿರಿನಿಂದ ಕಂಗೊಳಿಸುತ್ತದೆ ಇದು ಎಲ್ಲಾ ಸಮಯದಲ್ಲಿಯೂ ತಂಪಾದ ಅನುಭವವನ್ನು ನೀಡುತ್ತದೆ.

ಋತುಗಳು

ಋತುಗಳು

ಅತ್ಯಂತ ಆಹ್ಲಾದಕರವಾದ ಮತ್ತು ಸಮರೂಪದ ವಾತಾವರಣ ವರ್ಷವೆಲ್ಲಾ ಇಲ್ಲಿ ಕಂಡುಬರುತ್ತದೆ, ಕೇರಳವು ಉಷ್ಣವಲಯದ ಪ್ರದೇಶವಾಗಿದೆ ಇಲ್ಲಿ ಯಾರಾದರೂ ವಿಶ್ರಾಂತಿ ಪಡೆಯಬಹುದು ಮತ್ತು ಆರಾಮವಾಗಿ ಇರಬಹುದು. ಮಳೆಗಾಲ (ಜೂನ್ ನಿಂದ ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಿಂದ ನವೆಂಬರ್) ಮತ್ತು ಬೇಸಿಗೆ ಕಾಲ (ಫೆಬ್ರವರಿ ಯಿಂದ ಮಾರ್ಚ್) ಇರುವ ಇಲ್ಲಿ ಇವೇ ಋತುಮಾನಗಳಾಗಿದ್ದು ಎಲ್ಲವನ್ನು ಇಲ್ಲಿ ಅನುಭವಿಸಬಹುದು, ಆದರೆ ಚಳಿಗಾಲದಲ್ಲಿ ಉಷ್ಣತೆಯು ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಇರುತ್ತದೆ ಇದು ಸುಮಾರು 28-32 ಸೆ. ಸಾಮಾನ್ಯವಾಗಿ ಇರುತ್ತದೆ. ಸಾಮಾನ್ಯವಾಗಿ ಆಹ್ಲಾದಕರವಾದ ವಾತಾವರಣ ಇರುತ್ತದೆ. ಇದನ್ನು ನಮ್ಮ ಅತಿಥಿಗಳು ಬಹಳವಾಗಿ ಇಷ್ಟಪಡುತ್ತಾರೆ.

ಜನರು ಮತ್ತು ಜೀವನ

ಜನರು ಮತ್ತು ಜೀವನ

ಸಮಾಜ ಕಲ್ಯಾಣ ಮತ್ತು ಜೀವನದ ಗುಣಮಟ್ಟದ ವಿಷಯಗಲಲ್ಲಿ ಕೇರಳವು ಭಾರತದ ಅತ್ಯಂತ ಪ್ರಗತಿ ಪರವಾದ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯವು ಭಾರತದ ಅತೀ ಹೆಚ್ಚು ಸಾಕ್ಷರತೆ ಹೊಂದಿರುವ, ಅತ್ಯುತ್ತಮ ಜೀವನ ಮಟ್ಟ ಹೊಂದಿರುವ ಮತ್ತು ಅತೀ ಕಡಿಮೆ ಶಿಶು ಮರಣವನ್ನು ಹೊಂದಿರುವ ರಾಜ್ಯಗಳ ಪೈಕಿ ಒಂದಾಗಿದೆ. ಕೇರಳ ರಾಜ್ಯದಲ್ಲಿನ ಮಹಿಳೆಯರ ಸಾಕ್ಷರತೆಯ ದರವು ಇಡೀ ಏಷ್ಯಾ ಖಂಡದಲ್ಲಿಯೇ ಅತೀ ಹೆಚ್ಚು ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಈ ವಿಶ್ವದ ಇತರೆಡೆಯ ಜೀವನದ ದೃಷ್ಟಿಯಲ್ಲಿ ಸಮಾಜದ ಎಲ್ಲಾ ಹಂತಗಳಲ್ಲಿ ಇಲ್ಲಿನ ಜನರು ಸಿಗುವ ಎಲ್ಲಾ ಸೇವೆಗಳನ್ನು ಮತ್ತು ಅವಕಾಶಗಳನ್ನು ಯಥೇಚ್ಚವಾಗಿ ಪಡೆದುಕೊಳ್ಳುತ್ತಿದ್ದಾರೆ – ಇದರೊಂದಿಗೆ ತಮ್ಮ ಆಡಳಿತದಲ್ಲಿ ಶ್ರೇಷ್ಟತೆಯನ್ನು ಪಡೆದುಕೊಂಡಿದ್ದಾರೆ.

ಇತಿಹಾಸ

ಇತಿಹಾಸ

ಕೇರಳದ ಇತಿಹಾಸವು ಅದರ ವ್ಯಾಪಾರದೊಂದಿಗೆ ಅತ್ಯಂತ ಹೆಚ್ಚಿನ ಸಂಬಂಧವನ್ನು ಹೊಂದಿದೆ, ಇದು ಇತ್ತೀಚಿನವರೆಗೂ ತನ್ನ ಮಸಾಲೆಗಳ ವ್ಯಾಪಾರದ ಸುತ್ತಮುತ್ತಲೂ ಸುತ್ತುತ್ತಿದೆ. ಕೇರಳವು ಭಾರತದ ಮಸಾಲೆಗಳ ಕಣಜ ಎಂದು ಹೆಸರಾಗಿದೆ. ಪ್ರಾಚೀನ ಕೇರಳವು ಗ್ರೀಕರು, ರೋಮನ್ನರು, ಅರಬ್ಬಿಯರು, ಚೀನಿಯರು, ಪೋರ್ಚುಗೀಸರು, ಡಚ್ಚರು, ಫ್ರೆಂಚರು ಮತ್ತು ಬ್ರಿಟೀಶರನ್ನುಒಳಗೊಂಡಂತೆ ವಿಶ್ವದಾದ್ಯಂತದ ಪ್ರವಾಸಿಗರಿಗೆ ಮತ್ತು ವರ್ತಕರಿಗೆ ಆಸ್ರಯ ತಾಣವಾಗಿತ್ತು. ಬಹುತೇಕ ಎಲ್ಲರೂ ತಮ್ಮ ಅವಶೇಷಗಳ ಕುರುಹುಗಳನ್ನು ಅಲ್ಲಿ ಇಲ್ಲಿ ಎಂಬಂತೆ ರಾಜ್ಯದಲ್ಲಿ ಬಿಟ್ಟು ಹೋಗಿದ್ದಾರೆ ಮತ್ತು ಇದು ನಾವು ವಿಶ್ವದೊಂದಿಗೆ ನಮ್ಮ ಸ್ವಂತ ರೀತಿಯಲ್ಲಿ ವರ್ತಿಸಲು ಅಚ್ಚು ಮತ್ತು ವಿನ್ಯಾಸಗೊಳಿಸಲು ಸಹಾಯಕವಾಗಿದೆ.

ಸ್ಥಳ

ಕೇರಳವು ದಕ್ಷಿಣ ಏಷ್ಯಾದಲ್ಲಿನ ದೇಶವಾದ ಭಾರತದ ನೈಋತ್ಯ ಭಾಗದಲ್ಲಿ ನೆಲೆಗೊಂಡಿದೆ.

ಜಿಲ್ಲೆಗಳು

Kerala Map

ಪ್ರಮುಖ ನಗರಗಳು

ತಿರುವನಮ್ತಪುರಂ ಕೊಲ್ಲಮ್ ಕೊಚ್ಚಿ ತ್ರಿಶೂರ್ ಕೋಝಿಕೋಡ್

ಏರ್‌ಪೋರ್ಟ್‌ಗಳು

ತಿರುವನಂತಪುರಂ ಅಂತರಾಷ್ಟ್ರೀಯ ಏರ್‌ಪೋರ್ಟ್ ಕೊಚ್ಚಿನ್ ಅಂತರಾಷ್ಟ್ರೀಯ ಏರ್‌ಪೋರ್ಟ್ (ಸಿ.ಐ.ಎ.ಎಲ್), ನೆಡುಂಬಸ್ಸೆರಿ ಕ್ಯಾಲಿಕಟ್ (ಕೋಝಿಕೋಡ್) ಅಂತರಾಷ್ಟ್ರೀಯ ಏರ್‌ಪೋರ್ಟ್, ಕಾರಿಪುರ್

ವೀಸಾ ಅಗತ್ಯತೆಗಳು

ವೀಸಾ ಮಾಹಿತಿಗೆ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ

ಪೋಲಿಸ್ ಸಹಾಯವಾಣಿ

ಹೈ-ವೇಗಳಲ್ಲಿ ಪ್ರಯಾಣಿಸುವಾಗ: +91 9846100100 ರೈಲುಗಳಲ್ಲಿ ಪ್ರಯಾಣಿಸುವಾಗ: +91 9846200100

ಪ್ರಯಾಣಿಕರಿಗೆ ಮತ್ತು ಪ್ರವಾಸ ನಿರ್ವಾಹಕರಿಗೆ ನಿಯಮಾವಳಿಗಳ ಕೋಡ್

ಪ್ರಯಾಣಿಕರಿಗೆ ಮತ್ತು ಪ್ರವಾಸ ನಿರ್ವಾಹಕರಿಗೆ ಮಾರ್ಗದರ್ಶಿಗಳು

ವೆಬ್‌ಸೈಟ್ ಬಗ್ಗೆ

ಇದು ಕೇರಳ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಅಧೀಕೃತ ವೆಬ್‌ಸೈಟ್ ಅಗಿದೆ ಮತ್ತು ಇದು ಭಾರತದಲ್ಲಿನ ಅತ್ಯಂತ ಜನಪ್ರಿಯ ಪ್ರವಾಸದ ವೆಬ್‌ಸೈಟ್‌ಗಳಲ್ಲಿ ಒಂದಾಗಿದೆ. ಈ ಸೈಟ್ ದೇವರ ಸ್ವಂತ ನಾಡು ಎಂದೇ ಜನಪ್ರಿಯವಾಗಿರುವ ರಾಜ್ಯ ಕೇರಳದ ಬಗ್ಗೆ ವಿಫುಲವಾದ ಮಾಹಿತಿಯನ್ನು ಒಳಗೊಂಡಿದೆ. ಈ ವೆಬ್‌ಸೈಟ್ 1998 ರಿಂದ ಆನ್‌ಲೈನ್‌ನಲ್ಲಿ ಇದೆ, ಪ್ರಸ್ತುತ ಇದು 10 ಭಾರತೀಯ ಭಾಷೆಗಳನ್ನು ಒಳಗೊಂಡಂತೆ 21 ಭಾಷೆಗಳಲ್ಲಿ ಲಭ್ಯವಿದೆ. ಸರಾಸರಿಯಾಗಿ ಈ ಸೈಟ್ ಅನ್ನು ಪ್ರತಿ ವರ್ಷ 3 ಮಿಲಿಯನ್‌ಗೂ ಹೆಚ್ಚಿನ ಸಂದರ್ಶಕರು ಭೇಟಿ ನೀಡುತ್ತಾರೆ. ಈ ಸೈಟ್ ಅನ್ನು ಅಗತ್ಯವಿದ್ದಾಗ ಮತ್ತು ನಿರಂತರವಾಗಿ ಅಪ್‌ಡೇಟ್ ಮಾಡಲಾಗುತ್ತದೆ. ಇದು 3000 ವಿಡಿಯೋಗಳು, ಸಾವಿರಾರು ಫೋಟೊಗಳು ಮತ್ತು ನೂರಾರು ಆಡಿಯೋ ಕ್ಲಿಪ್‌ಗಳನ್ನು ಒಳಗೊಂಡಂತೆ ಕೇರಳದ ಮೇಲಿನ ಅತ್ಯಂತ ದೊಡ್ಡ ಡೇಟಾಬೇಸ್ ಹೊಂದಿದೆ. ಈ ವೆಬ್‌ಸೈಟ್ ಎರಡು ರೀತಿಯ ಪ್ರಕ್ರಿಯೆಯ ಮೂಲಕ ವಿಶ್ವದ ಸುತ್ತ ಮುತ್ತಲಿನ ಪ್ರವಾಸಿಗರಿಗೆ ಉಪಯುಕ್ತವಾದ ಮಾಹಿತಿಯನ್ನು ಒದಗಿಸುತ್ತದೆ ಮತ್ತು ಮೆಸೇಜ್ ಬೋರ್ಡ್, ಟೂರ್ ಪ್ಲಾನರ್, ಆನ್‌ಲೈನ್ ಸ್ಪರ್ಧೆಗಳು, ಆನ್‌ಲೈನ್ ಆಡಿಯೋ-ವಿಶುವಲ್ ಗ್ಯಾಲರಿಗಳು, ವಿಡಿಯೋ ರಸಪ್ರಶ್ನೆಗಳು, ಲೈವ್ ವೆಬ್‌ಕಾಸ್ಟ್ಸ್, ಇ-ಬುಕ್ಸ್, ಇ-ನ್ಯೂಸ್ ಲೆಟರ್ ಇತ್ಯಾದಿಗಳಂತಹ್ ಆನ್‌ಲೈನ್ ಬಳಕೆದಾರ ಸ್ನೇಹಿ ಮಾತುಕತೆಯನ್ನು ನಿರಂತರವಾಗಿ ಮಾಡುವ ಮೂಲಕ ಆಧುನಿಕ ಪ್ರವಾಸಿಗರ ಬದಲಾಗುವ ಆಸಕ್ತಿಗಳ ಬಗ್ಗೆ ಗಮನ ಹರಿಸುತ್ತದೆ. ಕೇರಳ ಪ್ರವಾಸೋದ್ಯಮ ವೆಬ್‌ಸೈಟ್ ಸಾಕಷ್ಟು ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದುಕೊಂಡಿದೆ. ಇದು ಅತ್ಯಂತ ಭಾರತ ಸರ್ಕಾರವು ಅತ್ಯುತ್ತಮ ನಿರ್ವಹಣೆ ತೋರಿದ ಇಲಾಖೆಗಳಿಗೆ ನೀಡುವ “ತಂತ್ರಜ್ಞಾನವನ್ನು ಅತ್ಯಂತ ಹೆಚ್ಚು ಪರಿಣಾಮಕಾರಿಯಾಗಿ ಉಪಯೋಗಿಸಿರುವುದು” ಮತ್ತು “ಅತ್ಯುತ್ತಮ ಪ್ರವಾಸೋದ್ಯಮ ವೆಬ್‌ಸೈಟ್ ಪೋರ್ಟಲ್” ಎಂಬ ಅತ್ಯಂತ ಪ್ರತಿಷ್ಠಿತವಾದ ಪ್ರಶಸ್ತಿಯನ್ನು 2000-2001, 2002-2003, 2005-2006, 2008-09, 2010-11, 2012-13, 2013-14 ಮತ್ತು 2014-15 ವರ್ಷಗಳಲ್ಲಿ ತನ್ನದಾಗಿಸಿಕೊಂಡಿದೆ. ಕೇರಳ ಪ್ರವಾಸೋದ್ಯಮ ವೆಬ್‌ಸೈಟ್ ಭಾರತ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ನಿಡುವ 2014ರ ವೆಬ್ ರತ್ನ ಪ್ರಶಸ್ತಿಯ ’ಅತ್ಯದ್ಭುತ ವಿಷಯ’ದಲ್ಲಿ ಗೋಲ್ಡನ್ ಐಕಾನ್ ಪ್ರಶಸ್ತಿಯನ್ನು ಮತ್ತು ಪ್ರವಾಸೋದ್ಯಮದ ವರ್ಗದಲ್ಲಿ ಕೊಡಲಾಗುವ ಅತ್ಯುತ್ತಮ ಭಾರತೀಯ ವೆಬ್‌ಸೈಟ್‌ಗಾಗಿ ಪಿ.ಸಿ. ವರ್ಲ್ಡ್ ಮ್ಯಾಗಝೀನ್‌ನ ನೆಟ್ 4 ಪಿ.ಸಿ. ವರ್ಲ್ಡ್ ವೆಬ್ ಪ್ರಶಸ್ತಿ 2008ನ್ನು ಪಡೆದುಕೊಂಡಿದೆ. ಪೆಸಿಫಿಕ್ ಏಷ್ಯಾ ಪ್ರವಾಸೋದ್ಯಮ ಸಂಸ್ಥೆ (ಪಿ.ಎ.ಟಿ.ಎ) ಗೋಲ್ಡ್ ಅವಾರ್ಡ್ ಅನ್ನು 2005, 2013, 2014 ಮತ್ತು 2016ರಲ್ಲಿ ಅತ್ಯುತ್ತಮ ಇ-ನ್ಯೂಸ್ ಲೆಟರ್‌ಗಾಗಿ ಹಾಗೂ ಅತ್ಯುತ್ತಮ ವೆಬ್‌ಸೈಟ್ ಎಂದು 2010ರಲ್ಲಿ ಪಡೆಯುವ ಮೂಲಕ ಇಲಾಖೆಗಳ ಆನ್‌ಲೈನ್ ಕಾರ್ಯಗಳನ್ನು ಅಂತರಾಷ್ಟ್ರೀಯವಾಗಿ ಗುರುತಿಸಿಕೊಂಡಿದೆ. ಭಾರತದಲ್ಲಿ ಕೇರಳ ಪ್ರವಾಸೋದ್ಯಮವು ಒಂದು ದಶಕಕ್ಕಿಂತ ಹೆಚ್ಚು ಸಮಯ ವೆಬ್ ಟ್ರಾಫಿಕ್‌ನಲ್ಲಿ ಮೊದಲನೆ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ವೆಬ್ ಟ್ರಾಫಿಕ್ ವಿಚಾರದಲ್ಲಿ ಈ ಸೈಟ್ ಏಷ್ಯಾ ಪೆಸಿಫಿಕ್ ಮತ್ತು ಮಧ್ಯ ಪೂರ್ವದಲ್ಲಿ ಇರುವ ಪ್ರವಾಸಿ ವೆಬ್‌ಸೈಟ್‌ಗಳಲ್ಲಿ ಮೊದಲ 10 ಸ್ಥಾನಗಳಲ್ಲಿ ಒಂದಾಗಿರುವುದು ಹೆಮ್ಮೆಯ ವಿಚಾರವಾಗಿದೆ.

District Tourism Promotion Councils KTDC Thenmala Ecotourism Promotion Society BRDC Sargaalaya SIHMK Responsible Tourism Mission KITTS Adventure Tourism Muziris Heritage

ಟೋಲ್ ಫ್ರೀ ಸಂಖ್ಯೆ: 1-800-425-4747 (ಭಾರತದ ಒಳಗೆ ಮಾತ್ರ)

ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.

×
This wesbite is also available in English language. Visit Close