ಸ್ಮರಣಿಕೆಗಳು

 

ಕೇರಳದ ಸ್ಮರಣಿಕೆಗಳು

ಸ್ಮರಣಿಕೆಗಳು ಎಂದರೆ ವ್ಯಕ್ತಿಯ ಜೀವನದಲ್ಲಿನ ವೈವಿಧ್ಯಮಯ ಅನುಭವಗಳ ಮಧುರವಾದ ನೆನಪುಗಳು ಎಂದರ್ಥ. ಪ್ರಯಾಣದ ವಿಚಾರಕ್ಕೆ ಬಂದರೆ ಸ್ಮರಣಿಕೆಗಳ ಮೌಲ್ಯ ಅಗಾಧವಾದುದಾಗಿದೆ, ಅದರಲ್ಲಿಯೂ ಕೇರಳದಂತಹ ನಿಜವಾಗಿಯೂ ಆಕರ್ಷಣಿಯವಾದ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಇದು ಅತ್ಯಂತ ವಿಶೇಷವಾದುದಾಗಿದೆ.

ಕೇರಳದಲ್ಲಿ ಪ್ರವಾಸಿಗರು ಸಂಸ್ಕೃತಿ, ಇತಿಹಾಸ, ಕಲೆ ಮತ್ತು ಸಾಮಾಜಿಕ-ಧಾರ್ಮಿಕ ವಿಚಾರಗಳನ್ನು ಪ್ರತಿಬಿಂಬಿಸುವ ವೈವಿಧ್ಯಮಯ ಸ್ಮರಣೀಯ ವಸ್ತುಗಳನ್ನು ಕಾಣುತ್ತಾರೆ. ಕೇರಳದ ಸ್ಮರಣಿಕೆಗಳು ತಮ್ಮ ಪರಂಪರೆ ಮತ್ತು ಸಂಸ್ಕೃತಿಗೆ ಹೆಸರುವಾಸಿಯಾಗಿವೆ. ರಾಜ್ಯವು ಹ್ಯಾಂಡ್‌ಲೂಮ್ಸ್, ಚಿನ್ನದ ಆಭರಣಗಳು, ಮಸಾಲೆಗಳಿಗೆ ಪ್ರಖ್ಯಾತವಾಗಿದೆ. ಕೇರಳದ ಕರಕುಶಲ ಕಲೆಗಳು ಅವುಗಳ ಶೈಲಿ, ನಮೂನೆಯ ನಿಖರತೆ ಮತ್ತು ವಿನ್ಯಾಸದ ಶ್ರೇಷ್ಠತೆಗೆ ಹೆಸರುವಾಸಿಯಾಗಿವೆ.

ಕೇರಳ ಸ್ಮರಣಿಕೆಗಳು ಆಕರ್ಷಕ ಮತ್ತು ವಿಶಿಷ್ಟ ಕರಕುಶಲ ವಸ್ತುಗಳ ವಿಶಾಲ ಶ್ರೇಣಿಯನ್ನು  ಹೊಂದಿದೆ. ಅವುಗಳಲ್ಲಿ ಜನಪ್ರಿಯವಾದುದೆಂದರೆ ಅರಣ್ಮುಲ ಕನ್ನಡಿ (ಲೋಹದ ಕನ್ನಡಿ); ಕರಕುಶಲ ವಸ್ತುಗಳನ್ನು ತೆಂಗಿನಚಿಪ್ಪು, ಮರ, ಮಣ್ಣು ಮತ್ತು ಬೆತ್ತಗಳಿಂದ ತಯಾರಿಸುತ್ತಾರೆ; ಭಿತ್ತಿ ಚಿತ್ರಗಳು ಮತ್ತು ಹ್ಯಾಂಡ್ ಲೂಂ ಉತ್ಪನ್ನಗಳಾದ ಕಸವು ಸೀರೆ (ಚಿನ್ನದ ಬ್ರೊಕೇಡ್ ಇರುವ ಸೀರೆ) ಪ್ರಸಿದ್ಧವಾಗಿದೆ.

ಕೇರಳದಲ್ಲಿ, ಪ್ರವಾಸಿಗರು ಕೇರಳ ಸರ್ಕಾರದಿಂದ ಕೇರಳ ಸ್ಮರಣಿಕೆಗಳನ್ನು ಅಭಿವೃದ್ಧಿಪಡಿಸಲು ಅಧಿಕೃತ ಏಜೆನ್ಸಿಯ ಕಲ್ಚರ್ ಶಾಪಿಯಿಂದ ಪಕ್ಕಾ ಕೇರಳ ಸ್ಮರಣಿಕೆಗಳನ್ನು ಕೊಳ್ಳುತ್ತಾರೆ. ಕಲ್ಚರ್ ಶಾಪಿಯಲ್ಲಿ, ಪ್ರವಾಸಿಗರು ಉರುಲಿ (ವೊಕ್), ಪರ (ಸಾಂಪ್ರದಾಯಿಕ ಅಳತೆಯ ಪಾತ್ರೆಯಾದ ಕಂಚಿನ ಸಣ್ಣ ಮಾದರಿ), ಕೆಟ್ಟುವಲ್ಲಮ್ (ಅಕ್ಕಿಯ ಜರಡಿ), ಅರಣ್ಮುಲ ಕನ್ನಡಿ (ಲೋಹದ ಕನ್ನಡಿ), ನೆಟ್ಟಿಪಟ್ಟಮ್ (ಆನೆಗಳ ಹೊದಿಕೆ), ನೆಟ್ಟೂರ್ ಪೆಟ್ಟಿ (ಸಾಂಪ್ರದಾಯಿಕ ಒಡವೆ ಪೆಟ್ಟಿಗೆ) ಇತ್ಯಾದಿಗಳನ್ನು ಹೆಚ್ಚಾಗಿ ಕೊಳ್ಳುತ್ತಾರೆ.

ಹೆಚ್ಚಿನ ವಿಡಿಯೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ.

District Tourism Promotion Councils KTDC Thenmala Ecotourism Promotion Society BRDC Sargaalaya SIHMK Responsible Tourism Mission KITTS Adventure Tourism Muziris Heritage

ಟೋಲ್ ಫ್ರೀ ಸಂಖ್ಯೆ: 1-800-425-4747 (ಭಾರತದ ಒಳಗೆ ಮಾತ್ರ)

ಪ್ರವಾಸೋದ್ಯಮ ಇಲಾಖೆ, ಕೇರಳ ಸರ್ಕಾರ, ಪಾರ್ಕ್ ವ್ಯೂ, ತಿರುವನಂತಪುರಂ, ಕೇರಳ, ಭಾರತ – 695033
ದೂರವಾಣಿ: +91 471 2321132, ಫ್ಯಾಕ್ಸ್: +91 471 2322279 ಇ-ಮೇಲ್: info@keralatourism.org.
ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ © ಕೇರಳ ಪ್ರವಾಸೋದ್ಯಮ 2020. ಹಕ್ಕುಸ್ವಾಮ್ಯ | ಬಳಕೆಯ ನಿಬಂಧನೆಗಳು | ಕುಕಿ ನೀತಿ | ನಮ್ಮನ್ನು ಸಂಪರ್ಕಿಸಿ.
ಅಭಿವೃದ್ಧಿಪಡಿಸಿದವರು ಮತ್ತು ನಿರ್ವಹಿಸುವವರು ಇನ್ವಿಸ್ ಮಲ್ಟಿಮೀಡಿಯ.

×
This wesbite is also available in English language. Visit Close